For Quick Alerts
ALLOW NOTIFICATIONS  
For Daily Alerts

ಯೌವನ ಪ್ರಾಯದಲ್ಲೂ ಕಾಡುತ್ತಿದೆಯೇ ಮೊಡವೆ ಸಮಸ್ಯೆಯೇ? ಇದಕ್ಕೆ ಪರಿಹಾರವೇನು?

|

ಒಂದೂ ಕಲೆಯಿರದ ಮುಖದಲ್ಲಿ ಸಡನ್ನಾಗಿ ಒಂದು ಮೊಡವೆ ಕಾಣಿಸಿಕೊಂಡಾಗ ಅದನ್ನು ತೆಗೆದುಹಾಕಲು ಏನೆಲ್ಲಾ ಮನೆಮದ್ದು ಮಾಡುವವರಿದ್ದಾರೆ. ಮೊಡವೆ ಹೆಣ್ಣಿಗೆ ಒಡವೆ ಎನ್ನುತ್ತಾರೆ. ಆದರೆ ಮೊಡವೆ ಕೆಲವರಿಗೆ ತಲೆನೋವು. ಜಂಕ್‌ಫುಡ್‌, ಆಯಿಲ್‌ಫುಡ್‌ ತಿನ್ನದೇ ಇದ್ದರೂ ಮೊಡವೆ ಯಾಕೆ ಬಂತಪ್ಪಾ ಎಂದು ಪ್ರಶ್ನೆ ಮಾಡುತ್ತಾರೆ.

Hormonal Acne Problem

ಆದರೆ ಮೊಡವೆ ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ. ಅದರಲ್ಲಿ ಹಾರ್ಮೋನ್‌ ಕೂಡಾ ಕಾರಣವಾಗುತ್ತೆ. ಇದನ್ನು ಹಾರ್ಮೋನ್‌ನಿಂದ ಉಂಟಾಗುವ ಮೊಡವೆ ಎಂದು ಕರೆಯುತ್ತಾರೆ. ಇದು ಉಂಟಾಗಲು ಕಾರಣವೇನು,

ಹಾರ್ಮೋನ್‌ ಮೊಡವೆಯನ್ನು ಗುರುತಿಸೋದು ಹೇಗೆ..? ಇದಕ್ಕೆ ಪರಿಹಾರವಿದೆಯಾ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಹಾಮೋನ್‌ ಮೊಡವೆ ಎಂದರೆ

ಹಾಮೋನ್‌ ಮೊಡವೆ ಎಂದರೆ

ಹಾರ್ಮೋನ್ ಮೊಡವೆಗಳು ನಿಮ್ಮ ಹಾರ್ಮೋನುಗಳ ಏರಿಳಿತಗಳಿಂದಾಗಿ ಉಂಟಾಗುತ್ತೆ. ಇದು ಸಾಮಾನ್ಯವಾಗಿ ಪ್ರೌಢಾವಸ್ಥೆಯ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ.2008 ರಲ್ಲಿ ಮಾಡಿದ ಅಧ್ಯಯನದ ಪ್ರಕಾರ, 20 ರಿಂದ 29 ವರ್ಷ ವಯಸ್ಸಿನ ಸುಮಾರು 50 ಪ್ರತಿಶತ ಮಹಿಳೆಯರು ಮತ್ತು 40 ರಿಂದ 49 ವರ್ಷ ವಯಸ್ಸಿನ 25 ಪ್ರತಿಶತದಷ್ಟು ಮಹಿಳೆಯರು ಹಾರ್ಮೋನ್‌ ಮೊಡವೆಯ ಸಮಸ್ಯೆಯನ್ನು ಹೊಂದಿರುತ್ತಾರಂತೆ.

ಹಾರ್ಮೋನ್‌ ಮೊಡವೆಯ ಲಕ್ಷಣಗಳಿವು

*ಕೆನ್ನೆ ಮತ್ತು ದವಡೆಯ ಸುತ್ತ ಮೊಡವೆಗಳು

* ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಅಥವಾ ಗುಳ್ಳೆಗಳು

* ಎಣ್ಣೆಯುಕ್ತ ಚರ್ಮ

* ಉರಿಯೂತ

* ಸೂಕ್ಷ್ಮತೆ

ಹಾರ್ಮೋನ್ ಮೊಡವೆಗೆ ಕಾರಣಗಳು

ಹಾರ್ಮೋನ್ ಮೊಡವೆಗೆ ಕಾರಣಗಳು

ಚರ್ಮದಲ್ಲಿರುವ ಎಣ್ಣೆ ಗ್ರಂಥಿಗಳು ಆಂಡ್ರೊಜೆನ್‌ ಎನ್ನುವ ಹಾರ್ಮೋನ್‌ನ ಕಾರಣದಿಂದಾಗಿ ತುಂಬಾ ಸೂಕ್ಷ್ಮವಾದಾಗ ಮೊಡವೆಯು ಉಂಟಾಗುತ್ತದೆ. ಆಂಡ್ರೋಜೆನ್‌ಗಳು ಎಣ್ಣೆಯ ಗ್ರಂಥಿಗಳ ಹಿಗ್ಗುವಿಕೆಗೆ ಕಾರಣವಾಗುತ್ತದೆ ಮತ್ತು ಚರ್ಮದಲ್ಲಿ ಎಣ್ಣೆಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಎಲ್ಲರಲ್ಲೂ ಆಂಡ್ರೊಜೆನ್‌ ಹಾರ್ಮೊನ್‌ ಇರುತ್ತೆ ಆದರೆ ಪ್ರೌಢಾವಸ್ಥೆಯಲ್ಲಿ ಈ ಹಾರ್ಮೋನ್‌ನಲ್ಲಿ ಹೆಚ್ಚಳವಾಗುತ್ತದೆ.

ಕೆಲವು ಮಹಿಳೆಯರು ಜೀವನದುದ್ದಕ್ಕೂ ಆಂಡ್ರೋಜೆನ್‌ ಹಾರ್ಮೋನ್‌ಗಳಿಂದಾಗಿ ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೆ. ವಯಸ್ಸಾದಂತೆ ಹಾರ್ಮೊನ್‌ ಸೂಕ್ಷ್ಮತೆಯೂ ಕಡಿಮೆಯಾಗುತ್ತದೆ. ಕೆಲವೊಮ್ಮೆ ಜೀವನಶೈಲಿಯ ಬದಲಾವಣೆಗಳು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಅಲ್ಲದೇ ಕೆಲವೊಂದು ತ್ವಚೆಯ ಉತ್ಪನ್ನಗಳ ಬಳಕೆಯು ಚರ್ಮದ ಮೇಲೆ ಪರಿಣಾಮ ಬೀರುವ ಮೂಲಕ ಇದು ಕೆಂಪು ಬಣ್ಣಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಮೊಡವೆಯೂ ಹೆಚ್ಚಾಗಬಹುದು.

ಯಾವುದೇ ವಯಸ್ಸಿನಲ್ಲೂ ಹಾರ್ಮೋನ್‌ ಮೊಡವೆ ಉಂಟಾಗುತ್ತಾ..?

ಯಾವುದೇ ವಯಸ್ಸಿನಲ್ಲೂ ಹಾರ್ಮೋನ್‌ ಮೊಡವೆ ಉಂಟಾಗುತ್ತಾ..?

ಪ್ರತಿಯೊಬ್ಬ ಮಹಿಳೆಯ ದೇಹಪ್ರಕೃತಿ ವಿಭಿನ್ನವಾಗಿರುತ್ತದೆ. ಕೆಲವು ಮಹಿಳೆಯರಲ್ಲಿ ಮೊಡವೆ ಕಂಡುಬರುತ್ತೆ, ಕೆಲವರಿಗೆ ಮೊಡವೆಯ ಸಮಸ್ಯೆಯೇ ಇರುವುದಿಲ್ಲ. ಹಲವು ಮಹಿಳೆಯರಲ್ಲಿ ಮಧ್ಯವಯಸ್ಸಾದಂತೆ ಹಾರ್ಮೋನ್‌ ಅಸಮತೋಲನದಿಂದಾಗಿ ಮೊಡವೆ ಕಾಣಿಸಿಕೊಳ್ಳಬಹುದು. ಹೆಚ್ಚಿನ ಮಹಿಳೆಯರು ಅದರಲ್ಲೂ 20ರಿಂದ 30 ವಯಸ್ಸಿನೊಳಗಿರುವವರದ್ದು ಎಣ್ಣೆಯುಕ್ತ, ಮೊಡವೆ ಪೀಡಿತ ಚರ್ಮವಾಗಿದ್ದಲ್ಲಿ ಮೆನೋಪಾಸ್‌ ಅಂದರೆ ಋತುಬಂಧದ ನಂತರವೂ ಈ ಹಾರ್ಮೊನ್‌ ಮೊಡವೆ ಕಾಣಿಸಿಕೊಳ್ಳಬಹುದು.

ಹಾರ್ಮೋನು ಮೊಡವೆಯುಕ್ತ ಚರ್ಮದ ಆರೈಕೆ

ಹಾರ್ಮೋನು ಮೊಡವೆಯುಕ್ತ ಚರ್ಮದ ಆರೈಕೆ

ಕೆಲವರು ಮುಖದಲ್ಲಿ ಮೊಡವೆಯಾದರೆ ಸಾಕು ಹೇಳಿದ್ದು, ಕೇಳಿದ್ದು ಎಲ್ಲವನ್ನೂ ಟ್ರೈ ಮಾಡಲು ಹೋಗಿ, ಮುಖದ ಅಂದವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಸಿಕ್ಕಿದ್ದೆಲ್ಲವನ್ನೂ ಮುಖಕ್ಕೆ ಹಚ್ಚಿಕೊಳ್ಳಲು ಹೋಗಬೇಡಿ. ಮೊದಲನೆಯದಾಗಿ ಮುಖದ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಮಿತಿಮೀರಿದ ಉತ್ಪನ್ನಗಳ ಬಳಕೆ ಚರ್ಮಕ್ಕೆ ಹಾನಿಯುಂಟು ಮಾಡಬಹುದು. ಅದರ ಬದಲಾಗಿ ತ್ವಚೆಯ ಆರೈಕೆಗೆ ಕ್ಲೆನ್ಸರ್‌, ಮಾಯಿಶ್ಚರೈಸರ್‌ ಮತ್ತು ಸನ್‌ಸ್ಕ್ರೀನ್‌ ಬಳಸಿ ಸಾಕು.

ಒಂದೇ ಸಮಯದಲ್ಲಿ ಒಂದು ಚಿಕಿತ್ಸೆಯನ್ನು ಮಾತ್ರ ಪ್ರಯತ್ನಿಸಿ.ಈಗಿನ ಕಾಲದಲ್ಲಿ ಹಲವಾರು ಪ್ರಾಡಕ್ಟ್‌ಗಳು ನಿಮ್ಮನ್ನು ಸೆಳೆಯಬಹುದು. ಆದರೆ ತಾಳ್ಮೆಯಿಂದ ಒಂದೇ ಚಿಕಿತ್ಸೆಯನ್ನು ಒಂದು ಬಾರಿ ಪ್ರಯತ್ನಿಸಿ. ಕೆಲವೊಂದು ಲೋಷನ್‌ನಲ್ಲಿ 2ಪ್ರತಿಶತದಷ್ಟು ಸ್ಯಾಲಿಸಿಲಿಕ್‌ ಆಮ್ಲವಿರುತ್ತದೆ. ಇದು ಸುಲಭವಾಗಿ ಲಭ್ಯ ಕೂಡಾ. ಇದು ತ್ವಚೆಗೆ ಕಿರಿಕಿರಿಯುಂಟಯ ಮಾಡದು. ಕೆಲವು ವಾರಗಳವರೆಗೆ ಇದನ್ನು ಬಳಸಿ ನೋಡಿ, ನಿಮ್ಮ ಚರ್ಮದಲ್ಲಿ ಏನಾದರೂ ಬದಲಾವಣೆ ಕಂಡುಬಂದಿದೆಯಾ ಎನ್ನುವುದನ್ನು ಗಮನಿಸಿ. ಅಲ್ಲದೇ ಬೆಂಜಾಯ್ಲ್‌ ಪೆರಾಕ್ಟೈಡ್‌, ಅಡಾಪಲೀನ್‌ ಅಥವಾ ಡಿಫರಿನ್ ಜೆಲ್‌, ಅಜೆಲಿಕ್‌ ಆಮ್ಲ, ಬೀಟಾ ಹೈಡ್ರಾಕ್ಸಿ ಆಮ್ಲವನ್ನೂ ಬಳಸಬಹುದು.

ಯಾವಾಗ ವೈದ್ಯರನ್ನು ಕಾಣಬೇಕು..?

ಯಾವಾಗ ವೈದ್ಯರನ್ನು ಕಾಣಬೇಕು..?

ನಿಮ್ಮ ಮುಖದಲ್ಲಿ ಮೊಡವೆಗಳೂ ಏನೇ ಮಾಡಿದರೂ ನಿವಾರಣೆಯಾಗದಿದ್ದಲ್ಲಿ, ನಿಮ್ಮ ಮೊಡವೆಯುಕ್ತ ತ್ವಚೆಯು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ ಚರ್ಮಶಾಸ್ತ್ರಜ್ಞರನ್ನು ಖಂಡಿತವಾಗಿಯೂ ಭೇಟಿ ಮಾಡುವುದು ಉತ್ತಮ. ಮೊಡವೆಗಳಿಗೆ ಉತ್ತಮ ಚಿಕಿತ್ಸೆಯು ಲಭ್ಯವಿದ್ದು, ನಿಮ್ಮ ಸಮಸ್ಯೆಯನ್ನು ನಿವಾರಿಸಬಲ್ಲ ಚಿಕಿತ್ಸಾ ವಿಧಾನವನ್ನು ವೈದ್ಯರು ಸೂಚಿಸಬಹುದು.

ಹಾರ್ಮೋನ್‌ ನಿಯಂತ್ರಣ

ಹಾರ್ಮೋನ್‌ ನಿಯಂತ್ರಣ

ಯಾವುದೇ ಔಷಧಿ, ಚಿಕಿತ್ಸೆಗಳೂ ಮೊಡವೆಗೆ ವರ್ಕ್‌ಔಟ್‌ ಆಗದಿದ್ದಲ್ಲಿ ಹಾರ್ಮೊನ್‌ ಉತ್ಪಾದನೆಯ ನಿಯಂತ್ರಣ ಮಾತ್ರೆಯು ಪರಿಹಾರ ನೀಡಬಹುದು. ಅದು ಆರೋಗ್ಯ ತಜ್ಞರು ಸೂಚಿಸಿದರೆ ಮಾತ್ರವೇ ತೆಗೆದುಕೊಳ್ಳುವುದು ಸುರಕ್ಷಿತ. ಮೊಡವೆಯ ಚಿಕಿತ್ಸೆಗಾಗಿಯೇ ಯಾವುದೇ ಹಾರ್ಮೋನ್‌ ಜನನ ನಿಯಂತ್ರಣ ಔಷಧಿಯಿಲ್ಲ. ಮಾತ್ರೆಯು ಎಲ್ಲರಿಗೂ ಸರಿಹೊಂದದೆಯೇ ಇರಬಹುದು. ಇದರಿಂದ ಅಡ್ಡಪರಿಣಾಮಗಳೂ ಉಂಟಾಗಬಹುದು. ಹಾಗಾಗಿ ಎಲ್ಲ ಚಿಕಿತ್ಸೆ, ಔಷಧಿಗಳಿಗಿಂತ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ.

ಹಾರ್ಮೋನ್‌ ಮೊಡವೆಯುಕ್ತ ಚರ್ಮವನ್ನು ಸ್ವೀಕರಿಸಿ

ಹಾರ್ಮೋನ್‌ ಮೊಡವೆಯುಕ್ತ ಚರ್ಮವನ್ನು ಸ್ವೀಕರಿಸಿ

ಮುಖದ ಸೌಂದರ್ಯವನ್ನು ಹೆಚ್ಚಿಸುವ ಸೌಂದರ್ಯವರ್ಧಕಗಳ ಜಾಹೀರಾತು, ಪ್ರತಿ ಬಾರಿ ಆನ್‌ಲೈನ್‌ನಲ್ಲಿ ಸ್ಕ್ರಾಲ್‌ ಮಾಡುವಾಗ ಕಂಡುಬರುವ ಜಾಹೀರಾತುಗಳನ್ನು ನೋಡಿ ಮರುಳಾಗಬೇಡಿ. ಮೊದಲನೆಯದಾಗಿ ನಿಮ್ಮ ಮೊಡವೆಯುಕ್ತ ಚರ್ಮದ ಬಗ್ಗೆ ಕೀಳರಿಮೆ ಬೇಡ. ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ.ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಲ್ಲೂ ಮೊಡವೆಯ ಕಲೆ ಒಂದಾದರೂ ಇದ್ದೇ ಇರುತ್ತೆ. ಮೊದಲೇ ಹೇಳಿದಂತೆ ಮೊಡವೆ ಹೆಣ್ಣಿಗೆ ಒಡವೆ ಎನ್ನುವಂತೆ ನಿಮ್ಮ ರೂಪವನ್ನು, ಸೌಂದರ್ಯವನ್ನು ನೀವು ಇಷ್ಟಪಡುವುದನ್ನು ಕಲಿಯಿರಿ.

ನಿಮ್ಮ 20ರಿಂದ 30ನೇ ವಯಸ್ಸಿನಲ್ಲಿ ಮತ್ತು ಇದಕ್ಕಿಂತ ವಯಸ್ಸಾದವರಲ್ಲೂ ಹಾರ್ಮೋನ್‌ನಿಂದಾಗುವ ಮೊಡವೆ ನೀವು ಯೋಚಿಸುವುದಕ್ಕಿಂತ ಹೆಚ್ಚು ಸಾಮಾನ್ಯವಾಗಿದೆ. ಒಳ್ಳೆಯ ಸುದ್ದಿ ಎಂದರೆ ಅದನ್ನು ನಿರ್ವಹಿಸುವುದಕ್ಕೆ ಹಲವು ಮಾರ್ಗಗಳಿವೆ. ನೀವು ಚಿಕಿತ್ಸೆಗಳೊಂದಿಗೆ ಹಾರ್ಮೋನ್ ತ್ವಚೆಯನ್ನು ನಿರ್ವಹಿಸಲು ಆಯ್ಕೆ ಮಾಡಿಕೊಳ್ಳಿ ಅಥವಾ ನಾವಿರುವುದೇ ಹೀಗೆ, ಮೊಡವೆ ಇದ್ದರೂ ನಾನು ಇರಬಲ್ಲೆ ಎನ್ನುವ ಆತ್ಮವಿಶ್ವಾಸದ ನಗುವಿನೊಂದಿಗೆ ಮೊಡವೆಯುಕ್ತ ಚರ್ಮವನ್ನು ಸ್ವಾಗತಿಸಿ.

English summary

How to Deal With Hormonal Acne as an Adult in Kannada

ವHormonal Acne Problem: Hormonal Acne Symptoms, How To Deal With Hormonal acne, Read on...
X
Desktop Bottom Promotion