For Quick Alerts
ALLOW NOTIFICATIONS  
For Daily Alerts

ಈ ಹೋಮ್‌ಮೇಡ್‌ ಸೋಪ್ ಮುಖ, ಬೆನ್ನಿನ ಮೊಡವೆಗೆ ಶಮನಕಾರಿ

|

ಮುಖಕ್ಕೆ ಸೋಪ್ ಬಳಸಬಾರದು ಎನ್ನುತ್ತಾರೆ. ಇದಕ್ಕೆ ಕಾರಣ, ಮುಖದ ಚರ್ಮ ತುಂಬಾ ಸೂಕ್ಷ್ಮವಾಗಿದ್ದು, ಸೋಪ್‌ನಲ್ಲಿರುವ ರಾಸಾಯನಿಕಗಳಿಂದ ಆ ತ್ವಚೆಗೆ ಹಾನಿಯಾಗುವುದು. ಆದರೆ, ಮನೆಯಲ್ಲಿಯೇ ತಯಾರಿಸಿದ ಸೋಪ್ ಸಂಪೂರ್ಣ ಸುರಕ್ಷಿತ ಹಾಗೂ ಅಡ್ಡಪರಿಣಾಮಗಳಿಮದ ಮುಕ್ತವಾಗಿರುತ್ತದೆ. ಆದರೆ, ಇದನ್ನು ತಯಾರಿಸುವುದು ಹೇಗೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಅದಕ್ಕಾಗಿ ನಾವಿಂದು ಮುಖ್ಯವಾಗಿ ಈ ಬೇಸಿಗೆ ಕಾಲಕ್ಕೆ ಸಹಕಾರಿಯಾಗಿರುವ ಅಲೋವೆರಾ ಸೋಪ್ ಮನೆಯಲ್ಲಿಯೇ ತಯಾರಿಸುವ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ಬೇಸಿಗೆಯಲ್ಲಿ ಕಾಡುವ ಮೊಡವೆ, ಕೆಂಪುಗುಳ್ಳೆ ಮೊದಲಾದವುಗಳಿಂದ ನಿಮಗೆ ರಕ್ಷಣೆ ನೀಡುವುದು. ಜೊತೆಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಚರ್ಮವನ್ನು ಸುಂದರವಾಗಿಡಲು ಸಹಾಯ ಮಾಡುತ್ತದೆ.

ಹೋಮ್‌ಮೇಡ್ ಸೋಪ್ ತಯಾರಿಸುವುದು ಹೇಗೆ ಹಾಗೂ ಅದರ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸಾಬೂನು ತಯಾರಿಸಲು ಬೇಕಾದ ಪದಾರ್ಥಗಳು:

ಸಾಬೂನು ತಯಾರಿಸಲು ಬೇಕಾದ ಪದಾರ್ಥಗಳು:

ಗ್ಲಿಸರಿನ್ ಸೋಪ್ - ಎರಡು ಕಪ್ಗಳು

ಬೇವಿನ ಸಾರಭೂತ ತೈಲ - 4 ರಿಂದ 5 ಹನಿಗಳು

ಅಲೋವೆರಾ - 2

ಲ್ಯಾವೆಂಡರ್ ಸಾರಭೂತ ತೈಲ - 6 ರಿಂದ 7 ಹನಿಗಳು

ಸೋಪ್ ತಯಾರಿಸುವುದು ಹೇಗೆ?:

ಸೋಪ್ ತಯಾರಿಸುವುದು ಹೇಗೆ?:

ಮೊದಲು ಅಲೋವೆರಾ ಎಲೆಗಳನ್ನು ತೊಳೆದು ಸಿಪ್ಪೆ ತೆಗೆಯಿರಿ. ನಂತರ, ಎಲ್ಲಾ ತಿರುಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪೇಸ್ಟ್ ಮಾಡಲು ಮಿಕ್ಸರ್ನಲ್ಲಿ ಹಾಕಿ.

ಗ್ಲಿಸರಿನ್ ಸೋಪ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ನೀರು ಹಾಕಿ, ಬಿಸಿಯಾಗಲು ಗ್ಯಾಸ್ ಮೇಲಿಡಿ. ಇದಕ್ಕೆ ಗ್ಲಿಸರಿನ್ ಸೋಪ್ ಹಾಕಿ, ಅದು ಚೆನ್ನಾಗಿ ಕರಗುತ್ತದೆ.

ಗ್ಲಿಸರಿನ್ ಸೋಪ್ ಸಂಪೂರ್ಣವಾಗಿ ಕರಗಿದಾಗ, ಅದಕ್ಕೆ ಅಲೋವೆರಾ ಪೇಸ್ಟ್ ಅನ್ನು ಸೇರಿಸಿ. ಎರಡನ್ನೂ ಒಂದು ಚಮಚದ ಸಹಾಯದಿಂದ ಮಿಶ್ರಣ ಮಾಡಿ. ಈಗ ಗ್ಯಾಸ್ ಅನ್ನು ಆಫ್ ಮಾಡಿ, ಅದಕ್ಕೆ ಸಾರಭೂತ ತೈಲವನ್ನು ಮಿಶ್ರಣ ಮಾಡಿ.

ಈಗ ಈ ಮಿಶ್ರಣವನ್ನು ಸೋಪ್ ಮಾಡುವ ಟ್ರೇಗೆ ವರ್ಗಾಯಿಸಿ, ತಣ್ಣಗಾಗಲು ಬಿಡಿ. ಕೆಲವೇ ಗಂಟೆಗಳಲ್ಲಿ ಸೋಪ್ ಸಿದ್ಧವಾಗಲಿದೆ, ನಂತರ ನೀವು ಅದನ್ನು ಬಳಸಬಹುದು.

ಈ ಹೋಮ್‌ಮೇಡ್ ತ್ವಚೆಗೆ ಹೇಗೆ ಸಹಕಾರಿ?:

ಈ ಹೋಮ್‌ಮೇಡ್ ತ್ವಚೆಗೆ ಹೇಗೆ ಸಹಕಾರಿ?:

ಬೇಸಿಗೆಯಲ್ಲಿ ಚರ್ಮದ ಸಮಸ್ಯೆಯನ್ನು ಹೋಗಲಾಡಿಸುವುದು:

ಬೇಸಿಗೆಯಲ್ಲಿ, ಜನರು ತುರಿಕೆ ಅಥವಾ ದದ್ದುಗಳ ಭಯದಿಂದ ಸಾಬೂನು ಬಳಸಲು ಹೆದರುತ್ತಾರೆ. ಆದರೆ, ಈ ಮನೆಯಲ್ಲಿ ತಯಾರಿಸಿದ ಸೋಪನ್ನು ಯಾವುದೇ ಭಯವಿಲ್ಲದೆ ಬಳಸಬಹುದು. ಅಲ್ಲದೆ, ಸೂಕ್ಷ್ಮ ಚರ್ಮ ಹೊಂದಿರುವ ಜನರಿಗೆ ಈ ಮನೆಯಲ್ಲಿ ತಯಾರಿಸಿದ ಸೋಪ್ ಉತ್ತಮ. ವಾಸ್ತವವಾಗಿ, ರಾಸಾಯನಿಕ-ಸಮೃದ್ಧ ವಸ್ತುಗಳ ಕಾರಣದಿಂದಾಗಿ ಸೂಕ್ಷ್ಮ ಚರ್ಮವು ಬೇಗನೆ ಒಣಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸೋಪ್ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಮೊಡವೆ ಸಮಸ್ಯೆಯನ್ನೂ ನಿವಾರಿಸುವುದು:

ಮೊಡವೆ ಸಮಸ್ಯೆಯನ್ನೂ ನಿವಾರಿಸುವುದು:

ಮುಖದ ಮೇಲೆ ಮಾತ್ರವಲ್ಲದೆ ಬೆನ್ನು, ಭುಜಗಳು ಮತ್ತು ದೇಹದ ಇತರ ಭಾಗಗಳಲ್ಲಿ ಮೊಡವೆ ಸಮಸ್ಯೆಗಳು ಬೇಸಿಗೆಯಲ್ಲಿ ಕಾಡಲಾರಂಭಿಸುತ್ತದೆ. ಈ ಸಂದರ್ಭದಲ್ಲಿ, ಅಲೋವೆರಾ ತುಂಬಿದ ಈ ಸೋಪ್ ಮೊಡವೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿರುವ ಬೇವಿನ ಸಾರಭೂತ ತೈಲವು ಹೈಪರ್ಪಿಗ್ಮೆಂಟೇಶನ್ ಸಮಸ್ಯೆಯನ್ನು ಸಹ ತೆಗೆದುಹಾಕುತ್ತದೆ. ಇದರಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಚರ್ಮದ ಅಲರ್ಜಿಯಿಂದ ರಕ್ಷಿಸಲು ಸಹಾಯಕವೆಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ, ಲ್ಯಾವೆಂಡರ್ ಎಣ್ಣೆಯ ಪರಿಮಳವು ನಿಮ್ಮನ್ನು ದಿನವಿಡೀ ತಾಜಾವಾಗಿರಿಸಲು ಸಹಾಯ ಮಾಡುತ್ತದೆ.

English summary

Homemade Soap Recipe: How to Make Soap with Aloe vera in kannada

Here we talking about Homemade Soap Recipe: How to Make Soap with Aloe vera in kannada, read on
X
Desktop Bottom Promotion