For Quick Alerts
ALLOW NOTIFICATIONS  
For Daily Alerts

ಹೊಳೆಯುವ ತ್ವಚೆಗೆ ಮಾವಿನ ಹಣ್ಣಿನ ಮಾಸ್ಕ್‌

|

ಹಣ್ಣುಗಳ ರಾಜ ಎಂದೇ ಪರಿಗಣಿಸಲ್ಪಟ್ಟಿರುವ ಮಾವಿನ ಹಣ್ಣು ಕೇವಲ ಇದರ ರುಚಿಯಿಂದ ಮಾತ್ರ ಈ ಹೆಗ್ಗಳಿಕೆಯನ್ನು ಪಡೆದಿಲ್ಲ. ಇದರ ಸೇವನೆಯಿಂದ ದೊರಕಬಹುದಾದ ಹಲವು ಪ್ರಯೋಜನಗಳಿಂದಾಗಿಯೇ ಈ ಪಟ್ಟ ದೊರಕಿದೆ. ಇದು ಕೇವಲ ನಾಲಿಗೆಗೆ ರುಚಿಕರ ಮಾತ್ರವಲ್ಲ ತ್ವಚೆಯ ಆರೈಕೆಗೂ ಉತ್ತಮವಾಗಿದೆ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ಹೊಳೆಯುವ ತ್ವಚೆಗೆ ಮಾವಿನ ಹಣ್ಣಿನ ಮಾಸ್ಕ್‌

ಮಾವು ಋತು ಆಧಾರಿತವಾದ ಕಾರಣ ವರ್ಷದ ಎಲ್ಲಾ ತಿಂಗಳುಗಳಲ್ಲಿ ದೊರಕುವುದಿಲ್ಲ. ಹಾಗಾಗಿ ಯಥೇಚ್ಛವಾಗಿ ಸಿಗುತ್ತಿರುವಾಗ ಇದರ ಪ್ರಯೋಜನವನ್ನು ಹೆಚ್ಚಾಗಿ ಪಡೆದುಕೊಳ್ಳುವುದೇ ಜಾಣತನದ ಲಕ್ಷಣ. ಈ ಅದ್ಭುತ ಹೊಂಬಣ್ಣದ ಹಣ್ಣಿನ ರಸದ ಗುಣಗಳನ್ನು ಪಡೆದು ನಿಮ್ಮ ತ್ವಚೆಗೂ ಹೊನ್ನಿನ ಆರೈಕೆಯನ್ನು ಪಡೆಯಬಹುದು. ಬನ್ನಿ, ಈ ಅದ್ಭುತ ಹಣ್ಣಿನ ರಸವನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ:

ಮಾವು ಮತ್ತು ಮುಲ್ತಾನಿ ಮಿಟ್ಟಿ

ಮಾವು ಮತ್ತು ಮುಲ್ತಾನಿ ಮಿಟ್ಟಿ

1 ಚೆನ್ನಾಗಿ ಹಣ್ಣಾಗಿರುವ ಮಾವಿನ ಹಣ್ಣು. ನಾರು ಇರಬಾರದು

1 ಚಮಚ ಮೊಸರು

3 ಚಮಚ ಮುಲ್ತಾನಿ ಮಿಟ್ಟಿ

  • ಮಾವಿನ ತಿರುಳನ್ನು ಸಂಗ್ರಹಿಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಚೆನ್ನಾಗಿ ಗೊಟಾಯಿಸಿ
  • ಇದಕ್ಕೆ ಉಳಿದೆರಡು ಸಾಮಾಗ್ರಿಗಳನ್ನು ಬೆರೆಸಿ ಮಿಶ್ರಣ ಮಾಡಿ.
  • ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ ಗೊಳಿಸಿ ದಪ್ಪ ಟವೆಲ್ಲಿನಿಂದ ಒತ್ತಿ ಒಣಗಿಸಿ ಈ ಲೇಪವನ್ನು ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಕಣ್ಣುಗಳನ್ನು ಮುಚ್ಚಿ ಕಣ್ಣು ರೆಪ್ಪೆ ಹಾಗೂ ಕಣ್ಣಿನ ಕೆಳಭಾಗದಲ್ಲಿಯೂ ದಪ್ಪನಾಗಿ ಹಚ್ಚಿ.
  • 20 ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ.
  • ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರಿ.
  • ಮಾವು ಮತ್ತು ಬೆಣ್ಣೆಹಣ್ಣಿನ ಮುಖಲೇಪ

    ಮಾವು ಮತ್ತು ಬೆಣ್ಣೆಹಣ್ಣಿನ ಮುಖಲೇಪ

    1 ಚೆನ್ನಾಗಿ ಹಣ್ಣಾಗಿರುವ ಮಾವಿನ ಹಣ್ಣು. ನಾರು ಇರಬಾರದು

    2 ಚಮಚ ಚೆನ್ನಾಗಿ ಹಣ್ಣಾಗಿರುವ ಬೆಣ್ಣೆಹಣ್ಣಿನ ತಿರುಳು, ಚೆನ್ನಾಗಿ ಕಲಸಿರಬೇಕು.

    2 ಚಮಚ ಜೇನುತುಪ್ಪ

    • ಮಾವಿನ ತಿರುಳನ್ನು ಸಂಗ್ರಹಿಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಚೆನ್ನಾಗಿ ಗೊಟಾಯಿಸಿ
    • ಇದಕ್ಕೆ ಉಳಿದೆರಡು ಸಾಮಾಗ್ರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    • ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ ಗೊಳಿಸಿ ದಪ್ಪ ಟವೆಲ್ಲಿನಿಂದ ಒತ್ತಿ ಒಣಗಿಸಿ ಈ ಲೇಪವನ್ನು ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಹುಬ್ಬುಗಳನ್ನು ಬಿಟ್ಟು (ಕೂದಲಿಗೆ ತಾಕದಂತೆ) ಉಳಿದೆಡೆ ದಪ್ಪನಾಗಿ ಹಚ್ಚಿಕೊಳ್ಳಿ. ಈ ಲೇಪ ಒಣಗಿ ಕೊಂಚ ಬಿರುಕು ಬರುವವರೆಗೂ ಹಾಗೇ ಬಿಡಿ.
    • ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರಿ.
    • ಮಾವು ಮತ್ತು ಓಟ್ಸ್ ರವೆಯ ಮುಖಲೇಪ

      ಮಾವು ಮತ್ತು ಓಟ್ಸ್ ರವೆಯ ಮುಖಲೇಪ

      1 ಚೆನ್ನಾಗಿ ಹಣ್ಣಾಗಿರುವ ಮಾವಿನ ಹಣ್ಣು. ನಾರು ಇರಬಾರದು

      3 ಚಮಚ ಓಟ್ಸ್ ರವೆ

      7-8 ಬಾದಾಮಿಗಳು (ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಸಿಪ್ಪೆ ಸುಲಿಯಬೇಕು)

      2 ಚಮಚ ಹಸಿ ಹಾಲು

      • ಮಾವಿನ ತಿರುಳನ್ನು ಸಂಗ್ರಹಿಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಚೆನ್ನಾಗಿ ಗೊಟಾಯಿಸಿ
      • ಓಟ್ ರವೆಯನ್ನು ಕುಟ್ಟಿ ಆದಷ್ಟೂ ನುಣ್ಣಗಿನ ಪುಡಿ ಮಾಡಿ ಬಾದಾಮಿಗಳನ್ನು ಕಲ್ಲಿನ ಮೇಲೆ ಅರೆದು ಲೇಪವಾಗಿಸಿ ಮಾಡಿ.
      • ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿದ ಬಳಿಕ ಕೊನೆಯಲ್ಲಿ ಹಾಲನ್ನು ಹಾಕಿ ಕಲಸಿ.
      • ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ ಗೊಳಿಸಿ ದಪ್ಪ ಟವೆಲ್ಲಿನಿಂದ ಒತ್ತಿ ಒಣಗಿಸಿ ಈ ಲೇಪವನ್ನು ಮುಖ, ಕುತ್ತಿಗೆಗಳಿಗೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ.
      • ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರಿ.
      • ಮಾವು ಮತ್ತು ಗುಲಾಬಿ ನೀರಿನ ಮುಖಲೇಪ

        ಮಾವು ಮತ್ತು ಗುಲಾಬಿ ನೀರಿನ ಮುಖಲೇಪ

        1 ಚೆನ್ನಾಗಿ ಹಣ್ಣಾಗಿರುವ ಮಾವಿನ ಹಣ್ಣು. ನಾರು ಇರಬಾರದು

        2 ಚಮಚ ಮುಲ್ತಾನಿ ಮಿಟ್ಟಿ

        2 ಚಮಚ ಮೊಸರು

        2 ಚಮಚ ಗುಲಾಬಿ ನೀರು.

        • ಮಾವಿನ ತಿರುಳನ್ನು ಸಂಗ್ರಹಿಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಚೆನ್ನಾಗಿ ಗೊಟಾಯಿಸಿ
        • ಇದಕ್ಕೆ ಮುಲ್ತಾನಿ ಮಿಟ್ಟಿ ಮತ್ತು ಮೊಸರನ್ನು ಹಾಕಿ ಮಿಶ್ರಣ ಮಾಡಿ. ಲೇಪ ಹಚ್ಚಿಕೊಂಡರೆ ನೀರಿನಂತೆ ಇಳಿಯದಷ್ಟೇ ಪ್ರಮಾಣದ ಗುಲಾಬಿ ನೀರನ್ನು ಬೆರೆಸಿ.
        • ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ ಗೊಳಿಸಿ ದಪ್ಪ ಟವೆಲ್ಲಿನಿಂದ ಒತ್ತಿ ಒಣಗಿಸಿ ಈ ಲೇಪವನ್ನು ಮುಖ, ಕುತ್ತಿಗೆಗಳಿಗೆ ಹಚ್ಚಿ 15-20 ನಿಮಿಷ ಒಣಗಲು ಬಿಡಿ.
        • ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರಿ.
        • ಮಾವು ಮತ್ತು ಕಡ್ಲೆಹಿಟ್ಟಿನ ಮುಖಲೇಪ

          ಮಾವು ಮತ್ತು ಕಡ್ಲೆಹಿಟ್ಟಿನ ಮುಖಲೇಪ

          4 ಚಮಚ ಮಾವಿನ ಹಣ್ಣಿನ ತಿರುಳು

          2 ಚಮಚ ಕಡ್ಲೆಹಿಟ್ಟು

          1 ಚಮಚ ಜೇನು

          1 ಚಮಚ ಮೊಸರು

          • ಎಲ್ಲಾ ಸಾಮಾಗ್ರಿಗಳನ್ನು ಒಂದು ಬೋಗುಣಿಯಲ್ಲಿ ಹಾಕಿ ಮಿಶ್ರಣ ಮಾಡಿ
          • ನಿಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿ ಗೊಳಿಸಿ ದಪ್ಪ ಟವೆಲ್ಲಿನಿಂದ ಒತ್ತಿ ಒಣಗಿಸಿ ಈ ಲೇಪವನ್ನು ನಯವಾದ ಮಸಾಜ್ ಮೂಲಕ ಮುಖ, ಕುತ್ತಿಗೆಗಳಿಗೆ ಹಚ್ಚಿ
          • ಈ ಪದರ ಒಣಗುವವರೆಗೂ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರಿ.
English summary

Homemade Mango Face Packs For Shiny Skin

Here we are discussing about Homemade Mango Face Packs For Shiny Skin. Ever wondered why mango is called the ‘King of Fruits?’ It’s because of its multifaceted benefits. It not only pleases your taste buds, but your skin loves it too! Mango is a powerful ingredient that can work wonders for your skin.Read more.
Story first published: Monday, April 13, 2020, 13:13 [IST]
X
Desktop Bottom Promotion