For Quick Alerts
ALLOW NOTIFICATIONS  
For Daily Alerts

ಆಯಿಲ್ ಸ್ಕಿನ್ ಇರುವವರಿಗೆ ಇಲ್ಲಿದೆ ಹೋಮ್ ಮೇಡ್ ಫೇಸ್ ವಾಶ್ಗಳು

|

ಎಣ್ಣೆಯುಕ್ತ ತ್ವಚೆಯುಳ್ಳವರ ಸಮಸ್ಯೆ ಒಂದೆರಡಲ್ಲ. ಜಿಡ್ಡು ಮುಖ, ಮೊಡವೆ ಜೊತೆಗೆ ಡಲ್ ನೆಸ್ ಹೀಗೆ ನಾನಾ ಸಮಸ್ಯೆಗಳಿಂದ ರೋಸಿಹೋಗಿರುತ್ತಾರೆ. ಇದಲ್ಲದೆ, ಆ ರಾಸಾಯನಿಕಯುಕ್ತ ಫೇಸ್ ವಾಶ್‌ಗಳಿಂದ ನಿಮ್ಮ ಮುಖವನ್ನು ತೊಳೆಯುವುದರಿಂದ ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

ಆಯಿಲಿ ಸ್ಕಿನ್ ಇರುವವರು ತಮ್ಮ ಮುಖವನ್ನು ಆಗಾಗ ಸ್ವಚ್ಛಗೊಳಿಸಬೇಕು. ಆದರೆ ಮುಖ ತೊಳೆಯಲು ಯಾವ ಫೇಸ್ ವಾಶ್ ಆಯ್ಕೆ ಮಾಡಬೇಕು? ಎಂಬ ಗೊಂದಲ ಎಲ್ಲರಲ್ಲಿರುತ್ತದೆ. ಮಾರ್ಕೆಟ್ ನಲ್ಲಿ ಸಾಕಷ್ಟು ಫೇಸ್ ವಾಶ್ ಲಭ್ಯವಿದ್ದರೂ,ಅವು ನಿಜವಾಗಿಯೂ ಕೆಲಸ ಮಾಡದಿರಬಹುದು ಅಥವಾ ಕೆಲವು ಅಡ್ಡ ಪರಿಣಾಮಗಳನ್ನು ಸಹ ನೀಡಬಹುದು. ಆದ್ದರಿಂದ ನಿಮಗಾಗಿ ನೈಸರ್ಗಿಕ ಫೇಸ್ ವಾಶ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ನಿಮ್ಮ ಸ್ವಂತ ಫೇಸ್ ವಾಶ್ ಅನ್ನು ನೀವು ಹೇಗೆ ತಯಾರಿಸಬಹುದು ಎಂದು ತಿಳಿಯಲು ಮುಂದೆ ಓದಿ:

1. ರೋಸ್ ವಾಟರ್:

1. ರೋಸ್ ವಾಟರ್:

ರೋಸ್ ವಾಟರ್ ನಮ್ಮ ಸೌಂದರ್ಯದ ಬಹುಮುಖ್ಯ ಉತ್ಪನ್ನ ಎಂದರೆ ತಪ್ಪಾಗಲ್ಲ. ರೋಸ್ ವಾಟರ್ ಸ್ಕಿನ್ ಟೋನಿಂಗ್ ಗುಣಗಳನ್ನು ಹೊಂದಿದ್ದು ಇದು ಎಣ್ಣೆಯುಕ್ತ ತ್ವಚೆಗೆ ಉತ್ತಮವಾಗಿದೆ. ಈ ಪದಾರ್ಥವನ್ನು ಸಾಮಾನ್ಯವಾಗಿ ಅನೇಕ ರೆಡಿಮೇಡ್ ಫೇಸ್ ವಾಶ್‌ಗಳಲ್ಲಿ ಬಳಸಲಾಗುತ್ತದೆ ಏಕೆಂದರೆ ಅದರಲ್ಲಿ ಚರ್ಮವನ್ನು ತಂಪಾಗಿಸುವ ಗುಣಗಳಿವೆ. ರೋಸ್ ವಾಟರ್ ಬಳಸುವುದರಿಂದ ತ್ವಚೆಯು pH ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಬಳಸುವುದು ಹೇಗೆ :

ಕಾಟನ್ ಪ್ಯಾಡ್ ಮೇಲೆ, ಸ್ವಲ್ಪ ರೋಸ್ ವಾಟರ್ ಚಿಮುಕಿಸಿ, ಮುಖವನ್ನು ಉಜ್ಜಿಕೊಳ್ಳಿ, ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ ಅದನ್ನು ನೀರಿನಿಂದ ಕೂಡ ತೊಳೆಯಬಹುದು. ನಿಮ್ಮ ತ್ವಚೆಯು ತಕ್ಷಣ ಸ್ವಚ್ಛ ಮತ್ತು ತಾಜಾತನವನ್ನು ಅನುಭವಿಸುತ್ತದೆ.

2. ನಿಂಬೆ ಮತ್ತು ಜೇನು:

2. ನಿಂಬೆ ಮತ್ತು ಜೇನು:

ನಿಂಬೆ ಮತ್ತು ಜೇನುತುಪ್ಪ ಎರಡೂ ತ್ವಚೆಗೆ ಉತ್ತಮ ಪದಾರ್ಥಗಳು. ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ತುಂಬಿದ್ದರೆ, ಜೇನು ತೇವಾಂಶ ನೀಡುವ ಗುಣ ಹೊಂದಿದೆ. ನಿಂಬೆ ನಿಮ್ಮ ಎಣ್ಣೆಯುಕ್ತ ತ್ವಚೆಗೆ ಉತ್ತಮವಾದ ಕ್ಲೆನ್ಸರ್ ಆಗಿ ಕೆಲಸ ಮಾಡಿದರೆ, ಜೇನುತುಪ್ಪವು ನಿಮ್ಮ ತ್ವಚೆಯನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಅನೇಕ ಫೇಸ್ ವಾಶ್ ಗಳು ನಿಮ್ಮ ಮುಖದ ನೈಸರ್ಗಿಕ ಎಣ್ಣೆಯನ್ನು ತೆಗೆಯುತ್ತದೆ ಆದರೆ ಇದು ನಿಮ್ಮ ಚರ್ಮವನ್ನು ಶುದ್ಧವಾಗಿಸುತ್ತದೆ ಮತ್ತು ಅದೇ ಸಮಯದಲ್ಲಿ ತೇವಾಂಶವನ್ನು ನೀಡುತ್ತದೆ.

ಬಳಸುವುದು ಹೇಗೆ?:

ಒಂದು ಬಟ್ಟಲಿನಲ್ಲಿ, 2 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆ ರಸವನ್ನು ಸೇರಿಸಿ. ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ನಿಮ್ಮ ಮುಖಕ್ಕೆ ಹಚ್ಚಿ. 5 ರಿಂದ 10 ನಿಮಿಷಗಳ ಕಾಲ ಹಾಗೆಯೇ ಇರಿ ಮತ್ತು ನೀರಿನಿಂದ ತೊಳೆಯಿರಿ.

3. ಕಾಫಿ ಫೇಸ್ ವಾಶ್:

3. ಕಾಫಿ ಫೇಸ್ ವಾಶ್:

ಕಾಫಿ ಮತ್ತೊಂದು ನೈಸರ್ಗಿಕ ಪದಾರ್ಥವಾಗಿದ್ದು, ಅದು ನಿಮ್ಮ ತ್ವಚೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮುಖದ ಮೇಲಿನ ಹೆಚ್ಚುವರಿ ತೈಲ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಕಾಫಿಯಲ್ಲಿನ ಗುಣಗಳು ನಿಮ್ಮ ಮುಖದಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಲು ಮತ್ತು ಚರ್ಮದ ಪಿಎಚ್ ಸಮತೋಲನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಬಳಸುವುದು ಹೇಗೆ?:

ಒಂದು ಬಟ್ಟಲಿನಲ್ಲಿ, 1 ಟೀಸ್ಪೂನ್ ಕಾಫಿ ಪುಡಿ, 1 ಟೀಸ್ಪೂನ್ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಸ್ಕ್ರಬ್ ಮಾಡಿ. ಕೆಲವು ನಿಮಿಷಗಳ ಕಾಲ ಹಾಗೆಯೇ ಇಡಿ ನಂತರ ತೊಳೆಯಿರಿ.

4. ಆಪಲ್ ಸೈಡರ್ ವಿನೆಗರ್:

4. ಆಪಲ್ ಸೈಡರ್ ವಿನೆಗರ್:

ನಿಮ್ಮ ಮುಖದ ಮೇಲೆ ಹೆಚ್ಚುವರಿ ಎಣ್ಣೆ ಉತ್ಪತ್ತಿಯಾಗುವುದರಿಂದ ಜಿಡ್ಡು ಜಿಡ್ಡಾಗಿ ಕಾಣುತ್ತದೆ. ಆಪಲ್ ಸೈಡರ್ ವಿನೆಗರ್ ನಂತಹ ಕ್ಲೆನ್ಸರ್ ಬಳಸುವುದರಿಂದ ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮದ ಮೇಲೆ ಸಂಗ್ರಹವಾಗಿರುವ ಡೆಡ್ ಸೆಲ್ ಮತ್ತು ಕಲ್ಮಶಗಳನ್ನು ನಿಧಾನವಾಗಿ ತೆಗೆದುಹಾಕುತ್ತದೆ.

ಬಳಸುವುದು ಹೇಗೆ?:

ಒಂದು ಬಟ್ಟಲಿನಲ್ಲಿ, 1 ಟೀಸ್ಪೂನ್ ಆಪಲ್ ಸೈಡರ್ ವಿನೆಗರ್ ಮತ್ತು 3 ಟೀಸ್ಪೂನ್ ನೀರು ಸೇರಿಸಿ. ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿ. ಕಾಟನ್ ಪ್ಯಾಡ್ ಬಳಸಿ, ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಕೆಲವು ನಿಮಿಷಗಳ ಕಾಲ ಇರಿಸಿ ನಂತರ ನೀರಿನಿಂದ ತೊಳೆಯಿರಿ.

5. ಕಡಲೆಹಿಟ್ಟು ಹಾಗೂ ಅರಿಶಿನ :

5. ಕಡಲೆಹಿಟ್ಟು ಹಾಗೂ ಅರಿಶಿನ :

ಕಡಲೆಹಿಟ್ಟನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳುವುದರಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಅದಕ್ಕಾಗಿಯೇ ಇದು ಎಣ್ಣೆಯುಕ್ತ ತ್ವಚೆ ಹೊಂದಿರುವವರಿಗೆ ಉತ್ತಮ ಪದಾರ್ಥವಾಗಿದೆ. ಇದನ್ನು ಅರಿಶಿನದೊಂದಿಗೆ ಸೇರಿಸಿದರೆ, ಅದ್ಭುತಗಳನ್ನು ಮಾಡಬಹುದು. ಎರಡು ಪದಾರ್ಥಗಳು ಒಟ್ಟಾಗಿ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಲು ಮತ್ತು ಹೊಳಪು ನೀಡಲು ಸಹಾಯ ಮಾಡುತ್ತದೆ.

ಬಳಸುವುದು ಹೇಗೆ?:

ಒಂದು ಬಟ್ಟಲಿನಲ್ಲಿ, 1 ಟೀಸ್ಪೂನ್ ಗ್ರಾಂ ಹಿಟ್ಟು ಅಥವಾ ಬೀಸಾನ್ ಮತ್ತು ಪಿಂಚ್ ಟರ್ಮಿರ್ಕ್ ಸೇರಿಸಿ. ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ, ಕೆಲವು ನಿಮಿಷಗಳ ಕಾಲ ಹಾಗೆಯೇ ಇರಿಸಿ ನಂತರ ತೊಳೆಯಿರಿ.

5 ಪದಾರ್ಥಗಳು ನೈಸರ್ಗಿಕ ಮತ್ತು ಪರಿಣಾಮಕಾರಿಯಾಗಿದ್ದರೂ, ಯಾವುದೇ ಚರ್ಮದ ಅಲರ್ಜಿಗಳನ್ನು ತಡೆಗಟ್ಟಲು ನಿಮ್ಮ ಮುಖದ ಮೇಲೆ ನೇರವಾಗಿ ಹಚ್ಚುವ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡುವುದು ಉತ್ತಮ.

English summary

Homemade Face Washes For Oily Skin Type in Kannada

Here we talking about Homemade Face Washes For Oily Skin Type in Kannada, read on
X
Desktop Bottom Promotion