For Quick Alerts
ALLOW NOTIFICATIONS  
For Daily Alerts

ಹೊಳೆಯುವ ತ್ವಚೆಗೆ ಮನೆಯಲ್ಲೇ ತಯಾರಿಸಿ ಕಡಲೆಹಿಟ್ಟಿನ ಫೇಸ್‌ಮಾಸ್ಕ್‌

|

ತ್ವಚೆಯ ಹೊಳಪಿಗಾಗಿ, ಸಾಕಷ್ಟು ರಾಸಾಯನಿಕ ಮಿಶ್ರಿತ ಪೇಸ್ ಪ್ಯಾಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಈ ಉತ್ಪನ್ನಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದಕ್ಕೆ ಪೂರಕವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಫೇಸ್ ಪ್ಯಾಕ್ ಗಳು ತ್ವಚೆಯ ಆರೋಗ್ಯದ ದೃಷ್ಟಿಯಿಂದಲೂ ಸಹ ಒಳ್ಳೆಯದು. ಅಡುಗೆ ಮನೆಯಲ್ಲಿ ನಿತ್ಯವೂ ಬಳಸುವ ಪದಾರ್ಥಗಳನ್ನೇ ಉಪಯೋಗಿಸಿ ಅತ್ಯುತ್ತಮ ಪೇಸ್ ಪ್ಯಾಕ್ ತಯಾರಿಸಿಕೊಳ್ಳಬಹುದಾಗಿದೆ. ಇಂತಹ ಪದಾರ್ಥಗಳಲ್ಲಿ ಕಡಲೆ ಹಿಟ್ಟು ಸಹ ಒಂದು!

Get Glowing Skin By Using Homemade Besan Face Packs

ಕಡಲೆ ಹಿಟ್ಟು, ಅಥವಾ 'ಬೆಸನ್' ವ್ಯಾಪಕವಾಗಿ ಎಲ್ಲರಿಗೂ ತಿಳಿದಿರುವ ಅಡುಗೆ ಪದಾರ್ಥವಾಗಿದೆ! ಅದರಲ್ಲಿ ಎಷ್ಟು ಪೌಷ್ಟಿಕತೆ ಅಡಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಇದು ನಮ್ಮ ಪೋಷಕರು ಮತ್ತು ಅಜ್ಜಿಯಂದಿರು ಬಳಸುತ್ತಿರುವ ಅತ್ಯಂತ ಹಳೆಯ, ಚರ್ಮದ ರಕ್ಷಣೆಯ ವಸ್ತುಗಳಲ್ಲಿ ಒಂದಾಗಿದೆ. ಕಡಲೆ ಹಿಟ್ಟು, ಶುದ್ಧೀಕರಣ ಗುಣಗಳನ್ನು ಹೊಂದಿದೆ, ಇದು ತ್ವಚೆಯಲ್ಲಿನ ಕೊಳಕು ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಮುಖದ ಮೇಲೆ ಅಗತ್ಯವಾದ ಹೊಳಪನ್ನು ನೀಡಲು ಕಡಲೆ ಹಿಟ್ಟಿನ ಜೊತೆಗಿನ ನೈಸರ್ಗಿಕ ಫೇಸ್ ಪ್ಯಾಕ್ ತುಂಬಾನೇ ಸಹಾಯ ಮಾಡುತ್ತದೆ. ಮೊಡವೆ, ಸೂರ್ಯನ ಶಾಖದ ಕಲೆಗಳು, ಮುಖದಲ್ಲಿನ ಇತರ ಕಲೆಗಳು, ವರ್ಣದ್ರವ್ಯ, ಮಂದ ಮತ್ತು ಶುಷ್ಕ ತ್ವಚೆಯಂಥ ಅನೇಕ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದು ಸಹಾಯ ಮಾಡುತ್ತದೆ. ಇದು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರದ ಮತ್ತು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿರುವ ಒಂದು ವಸ್ತುವಾಗಿದೆ. ಸಾಂಪ್ರದಾಯಿಕ ಕಡಲೆ ಹಿಟ್ಟಿನ ಪ್ಯಾಕ್ಗಳೆಂದರೆ ಕಡಲೆ ಹಿಟ್ಟು ಮತ್ತು ಮೊಸರು ಬೆರೆಸಿದ ಫೇಸ್ ಪ್ಯಾಕ್, ಕಡಲೆ ಹಿಟ್ಟು ಮತ್ತು ಜೇನು ಬೆರೆಸಿದ ಮುಖದ ಪ್ಯಾಕ್ ಮೊದಲಾದವುಗಳು.

ಕಡಲೆ ಹಿಟ್ಟು ಮತ್ತು ಅರಿಶಿನದ ಫೇಸ್ ಪ್ಯಾಕ್

ಕಡಲೆ ಹಿಟ್ಟು ಮತ್ತು ಅರಿಶಿನದ ಫೇಸ್ ಪ್ಯಾಕ್

ಅರಿಶಿನದೊಂದಿಗೆ ಕಡಲೆ ಹಿಟ್ಟು ಬೆರೆಸಿ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ತ್ವಚೆಯ ಹೊಳಪಿಗೆ ಪ್ರಸಿದ್ಧ ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಆಗಿದೆ. ಕಡಲೆ ಹಿಟ್ಟು ಶಕ್ತಿ ತುಂಬಿದ ಘಟಕಾಂಶವಾಗಿದೆ, ಇದು ಮುಖವನ್ನು ಹೊಳಪಿಸಲು ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಅರಿಶಿನ ಮುಖದ ಮೇಲಿನ ಹೊಳಪನ್ನು ಪುನಃಸ್ಥಾಪಿಸುತ್ತದೆ, ಗಾಯವನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ತ್ವಚೆಯ ರಂಧ್ರಗಳನ್ನು ಮುಚ್ಚುವಲ್ಲಿ ಸಹಾಯ ಮಾಡುತ್ತದೆ ಹಾಗೆಯೇ ತ್ವಚೆಯ ಅಸಮತೋಲನವನ್ನು ಸರಿ ಮಾಡುವಲ್ಲೂ ಸಹಾಯ ಮಾಡುತ್ತದೆ.

ಬೇಕಾಗುವ ಸಾಮಗ್ರಿಗಳು

ಕಡಲೆ ಹಿಟ್ಟು - ಒಂದು ಟೀ ಚಮಚ

ಅರಿಶಿನ - ಒಂದು ಟೀ ಚಮಚ

ನೀರು - ಒಂದು ಟೀ ಚಮಚ

ಮಾಡುವ ವಿಧಾನ

  • ಸ್ವಚ್ಛವಾದ ಒಂದು ಬಟ್ಟಲಿನಲ್ಲಿ 1 ಚಮಚ ಕಡಲೆ ಹಿಟ್ಟನ್ನು ಹಾಕಿ.
  • ಅದಕ್ಕೆ ಅರಿಶಿನ ಮತ್ತು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ನಯವಾದ ಪೇಸ್ಟ್ ನ್ನು ತಯಾರಿಸಿ.
  • ಈ ಪೇಸ್ಟ್ ನ್ನು ಮುಖಕ್ಕೆ ಸಮವಾಗಿ ಅನ್ವಯಿಸಿ, ಅಗತ್ಯವಿದ್ದರೆ ಬ್ರಷ್ ಬಳಸಬಹುದು.
  • ಕಣ್ಣುಗಳಿಗೆ ಹಚ್ಚಬೇಡಿ.
  • ಇದು 15 - 20 ನಿಮಿಷಗಳ ಕಾಲ ಹಾಗೆಯೇ ಮುಖದಲ್ಲಿರಲಿ.
  • ನಂತರ ನಿಮ್ಮ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.
  • ನಂತರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ.
  • ಕಡಲೆ ಹಿಟ್ಟು ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

    ಕಡಲೆ ಹಿಟ್ಟು ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

    ಕಡಲೆ ಹಿಟ್ಟು ಮತ್ತು ಮುಲ್ತಾನಿ ಮಿಟ್ಟಿ ಎರಡೂ ಹಾನಿಯಾದ ಚರ್ಮದ ಕೋಶಗಳನ್ನು ತೆಗೆದುಹಾಕಲು, ಮುಖದ ಮೇಲಿನ ಬಿಸಿಲಿನ ಕಲೆ ಮತ್ತು ಇತರ ಕಲೆಗಳಿಗೆ ಚಿಕಿತ್ಸೆ ನೀಡಲು, ಮುಖದಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ಎಣ್ಣೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎಣ್ಣೆಯುಕ್ತ ಚರ್ಮಕ್ಕಾಗಿ ಕಡಲೆ ಹಿಟ್ಟಿನ ಜೊತೆ ಶುಷ್ಕ ತ್ವಚೆಗಾಗಿ ಮನೆಯಲ್ಲಿ ತಯಾರಿಸಿದ ಈ ಫೇಸ್ ಪ್ಯಾಕ್ ಎಣ್ಣೆಯುಕ್ತ ತ್ವಚೆಯೊಂದಿಗೆ, ತ್ವಚೆಗೆ ಸಂಬಂಧಿಸಿದ ಇತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಕಡಲೆ ಹಿಟ್ಟಿನಂತೆ ಮುಲ್ತಾನಿ ಮಿಟ್ಟಿಯೂ ಕೂಡ ತ್ವಚೆಯ ಹೊಳಪನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ.

    ಬೇಕಾಗುವ ಸಾಮಗ್ರಿಗಳು

    ಕಡಲೆ ಹಿಟ್ಟು - ಒಂದು ಟೀ ಚಮಚ

    ಮುಲ್ತಾನಿ ಮಿಟ್ಟಿ - ಒಂದು ಟೀ ಚಮಚ

    ರೋಸ್ ವಾಟರ್ (ಗುಲಾಬಿ ನೀರು) - ಒಂದು ಟೀ ಚಮಚ

    ಮಾಡುವ ವಿಧಾನ

    • ಸ್ವಚ್ಛವಾದ ಬೌಲ್ ಒಂದರಲ್ಲಿ ಮುಲ್ತಾನಿ ಮಿಟ್ಟಿ ಮತ್ತು ಕಡಲೆ ಹಿಟ್ಟನ್ನು ಸೇರಿಸಿ.
    • ಅದಕ್ಕೆ ರೋಸ್ ವಾಟರ್ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ನಯವಾದ ಪೇಸ್ಟ್ ತಯಾರಿಸಿ.
    • ಮುಖಕ್ಕೆ ಸ್ವಚ್ಛವಾದ ಬ್ರಷ್ ಸಹಾಯದಿಂದ ಈ ಪ್ಯಾಕ್ ಅನ್ನು ಸಮವಾಗಿ ಅನ್ವಯಿಸಿ.
    • ಇದನ್ನು 5 ನಿಮಿಷಗಳ ಕಾಲ ಸ್ವಲ್ಪ ಒಣಗಲು ಬಿಡಿ ಮತ್ತು ನಂತರ ಅದನ್ನು ಕೈ ಬೆರಳುಗಳಿಂದ ಚೆನ್ನಾಗಿ ಮಸಾಜ್ ಮಾಡಿ.
    • ಸಂಪೂರ್ಣವಾಗಿ ಒಣಗಿದ ನಂತರ, ಮುಖವನ್ನು ತೊಳೆಯಿರಿ.
    • ನಂತರ ಮುಖವನ್ನು ಒಣಗಿಸಿ ಮತ್ತು ತೇವಗೊಳಿಸಿದ ಮುಖದ ಮೇಲೆ ಮಾಯಿಶ್ಚರೈಸರ್ ಹಚ್ಚಿ.
    • ಕಡಲೆ ಹಿಟ್ಟು ಮತ್ತು ಟೊಮೆಟೊ ಫೇಸ್ ಪ್ಯಾಕ್

      ಕಡಲೆ ಹಿಟ್ಟು ಮತ್ತು ಟೊಮೆಟೊ ಫೇಸ್ ಪ್ಯಾಕ್

      ತ್ವಚೆಯ ಬಿಳುಪಿಗಾಗಿ, ಮುಖಕ್ಕೆ ಕಡಲೆ ಹಿಟ್ಟು ಮಿಶ್ರಿತ ಟೊಮ್ಯಾಟೊ ಪೇಸ್ ಪ್ಯಾಕ್ ಅತ್ಯುತ್ತಮವಾದದ್ದು. ಟೊಮೆಟೊದಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ಮತ್ತು ಆಮ್ಲಗಳು ಕಲೆಗಳು, ತ್ವಚೆಯಲ್ಲಿನ ಸೂರ್ಯನ ಶಾಖಕ್ಕೆ ಸುಟ್ಟ ಕಲೆ ಮೊದಲಾದವುಗಳಿಗೆ ಚಿಕಿತ್ಸೆಗೆ ನೀಡಲು ಸಹಾಯ ಮಾಡುತ್ತದೆ. ಇದು ಮಂದವಾಗಿ ಕಾಣುವ ತ್ವಚೆಯನ್ನು ಸಹ ಹೊಳಪಿಸುತ್ತದೆ. ಕಡಲೆ ಹಿಟ್ಟು ಮಿಶ್ರಿತ ಟೊಮ್ಯಾಟೊ ಪ್ಯಾಕ್ ಗಳು ಹೊಳಪಿನ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.

      ಬೇಕಾಗುವ ಸಾಮಗ್ರಿಗಳು

      ಕಡಲೆ ಹಿಟ್ಟು - ಒಂದು ಟೀ ಚಮಚ

      ಟೊಮ್ಯಾಟೊ ಪಲ್ಪ್ / ತಿರುಳು (ಮಾಗಿದ್ದು)

      ಮಾಡುವ ವಿಧಾನ

      • ಚೆನ್ನಾಗಿ ಮಾಗಿದ ಅಥವಾ ಹಣ್ಣಾದ ಟೊಮೆಟೊವನ್ನು ಕತ್ತರಿಸಿ, ಚೆನ್ನಾಗಿ ಮಿಶ್ರಣ ಮಾಡಿ ನಯವಾಗಿಸಿ.
      • ನಯವಾದ ಪೇಸ್ಟ್ ಮಾಡಲು ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
      • ಇದನ್ನು ಮುಖದ ಮೇಲೆ ಸಮವಾಗಿ ಅನ್ವಯಿಸಲು ಬ್ರಷ್ ನ್ನು ಬಳಸಬಹುದು ಅಥವಾ ಕೈಯಿಂದಲೂ ಹಚ್ಚಬಹುದು.
      • ಇದನ್ನು ಸುಮಾರು 10 - 15 ನಿಮಿಷಗಳ ಕಾಲ ನೈಸರ್ಗಿಕವಾಗಿ ಹಾಗೆಯೇ ಒಣಗಲು ಬಿಡಿ.
      • ಶುದ್ಧ ನೀರಿನಿಂದ ನಿಧಾನವಾಗಿ ಸ್ಕ್ರಬ್ ಮಾಡುವ ಮೂಲಕ ಪ್ಯಾಕ್ ಅನ್ನು ತೊಳೆಯಿರಿ.
      • ನಿಮ್ಮ ಮುಖವನ್ನು ಟವೆಲ್ ನಿಂದ ಒರೆಸಿ ಮತ್ತು ತೇವಯುತವಾದ ಮುಖದ ಮೇಲೆ ಮಾಯಿಶ್ಚರೈಸರ್ ಹಚ್ಚಿ.
      • ಕಡಲೆ ಹಿಟ್ಟು ಮತ್ತು ಮೊಸರಿನ ಫೇಸ್ ಪ್ಯಾಕ್

        ಕಡಲೆ ಹಿಟ್ಟು ಮತ್ತು ಮೊಸರಿನ ಫೇಸ್ ಪ್ಯಾಕ್

        ಮೊಸರು, ಲ್ಯಾಕ್ಟಿಕ್ ಆಮ್ಲದಿಂದ ತುಂಬಿರುತ್ತದೆ ಮತ್ತು ಹೊಳೆಯುವ ತ್ವಚೆಗಾಗಿ ಕಡಲೆ ಹಿಟ್ಟಿನ ಪ್ಯಾಕ್ಗೆ ಸೇರಿಸಿದಾಗ ತ್ವಚೆಯ ಮೇಲೆ ಅದ್ಭುತ ಪರಿಣಾಮಗಳನ್ನು ಉಂಟು ಮಾಡಬಹುದು. ಮೊಸರು ತ್ವಚೆಯನ್ನು ಆರ್ಧ್ರಕಗೊಳಿಸುತ್ತದೆ, ಕಲೆಗಳು ಮಸುಕಾಗಲು ಸಹಾಯ ಮಾಡುತ್ತದೆ ಜೊತೆಗೆ ಬಿಸಿಲಿನ ಸುಟ್ಟ ಕಲೆಗಳನ್ನು ಶಮನಗೊಳಿಸುತ್ತದೆ. ಇದು ತ್ವಚೆಯನ್ನು ಪುನರ್ಯೌವನಗೊಳಿಸುತ್ತದೆ ಮತ್ತು ಸುಕ್ಕಿನ ರೇಖೆಗಳನ್ನು ಸಹ ಕಡಿಮೆ ಮಾಡುತ್ತದೆ.

        ಬೇಕಾಗುವ ಸಾಮಗ್ರಿಗಳು

        ಕಡಲೆ ಹಿಟ್ಟು - ಒಂದು ಟೀ ಚಮಚ

        ಮೊಸರು - ಒಂದು ಟೀ ಚಮಚ

        ಮಾಡುವ ವಿಧಾನ

        • ಸ್ವಚ್ಛವಾದ ಬ್ರಷ್ ಬಳಸಿ ಮುಖಕ್ಕೆ ಸಮವಾಗಿ ಹಚ್ಚಿ.
        • ಕಣ್ಣುಗಳ ಸುತ್ತಲು ಹಚ್ಚಬೇಡಿ.
        • ಇದನ್ನು ಹಚ್ಚಿ ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಒಣಗಲು ಬಿಡಿ.
        • ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.
        • ಟವೆಲ್ ಸಹಾಯದಿಂದ ಮುಖವನ್ನು ಒರೆಸಿ ನಂತರ ತೇವಾಂಶವುಳ್ಳ ಮುಖದ ಮೇಲೆ ಮಾಯಿಶ್ಚರೈಸರ್ ಲೇಪಿಸಿ.
        • ಕಡಲೆ ಹಿಟ್ಟು ಮತ್ತು ಜೇನು ತುಪ್ಪದ ಫೇಸ್ ಪ್ಯಾಕ್

          ಕಡಲೆ ಹಿಟ್ಟು ಮತ್ತು ಜೇನು ತುಪ್ಪದ ಫೇಸ್ ಪ್ಯಾಕ್

          ಹೊಳೆಯುವ ತ್ಚಚೆಗಾಗಿ ಜೇನು ಅತ್ಯುತ್ತಮ ಕಡಲೆ ಹಿಟ್ಟಿನ ಜೊತೆಗಿನ ಫೇಸ್ ಮಾಸ್ಕ್ ಆಗಿ ಕೆಲಸ ಮಾಡುತ್ತದೆ. ಜೇನುತುಪ್ಪವು ತ್ವಚೆಯನ್ನು ತೇವಗೊಳಿಸುತ್ತದೆ ಮತ್ತು ಚರ್ಮದ ಕಿರಿಕಿರಿಯನ್ನು ಗುಣಪಡಿಸುತ್ತದೆ. ಕಡಲೆ ಹಿಟ್ಟು ತ್ವಚೆಯ ಮೇಲೆ ಶುದ್ಧೀಕರಣ ಏಜೆಂಟ್ ನಂತೆ ಕಾರ್ಯನಿರ್ವಹಿಸಿದರೆ, ಜೇನುತುಪ್ಪವು ಚರ್ಮವನ್ನು ತೇವಯುತ ಗೊಳಿಸುತ್ತದೆ ಮತ್ತು ಪೋಷಿಸುತ್ತದೆ.

          ಬೇಕಾಗುವ ಸಾಮಗ್ರಿಗಳು

          ಕಡಲೆ ಹಿಟ್ಟು - ಒಂದು ಟೀ ಚಮಚ

          ಜೇನು ತುಪ್ಪ - ಒಂದು ಟೀ ಚಮಚ

          ಮಾಡುವ ವಿಧಾನ

          • ಸ್ವಚ್ಛವಾದ ಬಟ್ಟಲಿನಲ್ಲಿ ಕಡಲೆ ಹಿಟ್ಟು ಮತ್ತು ಜೇನುತುಪ್ಪವನ್ನು ತೆಗೆದುಕೊಳ್ಳಿ.
          • ನಯವಾದ ಪೇಸ್ಟ್ ತಯಾರಿಸಲು ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
          • ಮುಖವನ್ನು ಸ್ಚಚ್ಛಗೊಳಿಸಿ ಈ ಪೇಸ್ಟ್ ಅನ್ನು ಬೆರಳುಗಳಿಂದ ಲೇಪಿಸಿ.
          • ಇದನ್ನು 15 ನಿಮಿಷಗಳ ಕಾಲ ಒಣಗಲು ಬಿಡಿ.
          • ವೃತ್ತಾಕಾರದ ಚಲನೆಯಲ್ಲಿ ಒದ್ದೆಯಾದ ಬೆರಳುಗಳಿಂದ ಮಸಾಜ್ ಮಾಡಿ.
          • ನಂತರ ಶುದ್ಧ ನೀರಿನಿಂದ ಮುಖವನ್ನು ತೊಳೆಯಿರಿ.
          • ಟವೆಲ್ ನಿಂದ ಮುಖವನ್ನು ಒರೆಸಿ ನಂತರ ತೇವಯುತ ಮುಖದ ಮೇಲೆ ಮಾಯಿಶ್ಚರೈಸರ್ ಹಚ್ಚಿ.
English summary

Homemade Besan Face Packs for Glowing Skin

Here we are discussing about Get Glowing Skin By Using Homemade Besan Face Packs. The conventional besan packs are besan and curd face pack, besan and honey face pack, etc. Read more.
X
Desktop Bottom Promotion