For Quick Alerts
ALLOW NOTIFICATIONS  
For Daily Alerts

ಮುಖದಲ್ಲಿ ಮೊಡವೆ ರೀತಿಯ ಗುಳ್ಳೆ (ರೊಸಾಸಿಯಾ)ಗೆ ಮನೆಮದ್ದು

|

ಹದಿಹರೆಯದ ಪ್ರಾಯದಲ್ಲಿ ಮೊಡವೆ ಸಮಸ್ಯೆ ಕಂಡು ಬರುತ್ತದೆ. ಆದರೆ ಕೆಲವರಲ್ಲಿ ಮುಖದಲ್ಲಿ ಕೆಂಪು-ಕೆಂಪು ಗುಳ್ಳೆಗಳು ಏಳುತ್ತವೆ, ಅವುಗಳು ಕೂಡ ನೋಡಲು ಮೊಡವೆ ರೀತಿಯಲ್ಲಿ ಇರುವುದರಿಂದ ನಾವು ಅದನ್ನು ಮೊಡವೆ ಎಂದೇ ಭಾವಿಸುತ್ತೇವೆ. ಆದರೆ ಮೊಡವೆ ರೀತಿಯಲ್ಲಿ ಕಾಣುವ ಅವುಗಳು ಮೊಡವೆಯಲ್ಲ, ಬದಲಿಗೆ ಅವುಗಳು ರೊಸಾಸಿಯಾ(Rosacea) ಆಗಿವೆ.

Most Effective Home Remedies For Rosacea On Face

ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಹೋಗಲಾಡಿಸಬಹುದು. ಕೆಲವೊಂದು ಮನೆಮದ್ದು ಹಾಗೂ ಜೀವನಶೈಲಿ ಬದಲಾವಣೆಯಿಂದ ಇವುಗಳನ್ನು ಹೋಗಲಾಡಿಸಬಹುದು. ಇಲ್ಲಿ ನಾವು ರೊಸಾಸಿಯಾ ಹೇಗೆ ಹೋಗಲಾಡಿಸಬಹುದೆಂದು ಟಿಪ್ಸ್ ನೀಡಿದ್ದೇವೆ ನೋಡಿ:
1. ಲೋಳೆಸರ

1. ಲೋಳೆಸರ

ನಿಮ್ಮ ಮುಖದಲ್ಲಿರುವ ರೊಸಾಸಿಯಾ ಹೋಗಲಾಡಿಸಲು ಲೋಳೆಸರ ತುಂಬಾ ಪರಿಣಾಮಕಾರಿ. ತಾಜಾ ಲೋಳೆಸರವನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದರ ಜೊತೆಗೆ ಲೋಳೆ ಸರ ಜ್ಯೂಸ್‌ ಮಾಡಿ ಕುಡಿಯುವುದರಿಂದ ದೇಹದ ಒಳಗಿರುವ ಕಶ್ಮಲಗಳನ್ನು ಹೊರಹಾಕಿ, ತ್ವಚೆ ಆರೋಗ್ಯವನ್ನು ವೃದ್ಧಿಸುತ್ತದೆ.

 2. ಗ್ರೀನ್ ಟೀ

2. ಗ್ರೀನ್ ಟೀ

ಇನ್ನು ರೊಸಾಸಿಯಾ ಸಮಸ್ಯೆ ಇರುವವರು ದಿನದಲ್ಲಿ ಎರಡು ಲೋಟ ಗ್ರೀನ್‌ ಟೀ ಕುಡಿಯುವುದು ಒಳ್ಳೆಯದು. ಇದು ತ್ವಚೆಯಲ್ಲಿರುವ ಕಶ್ಮಲಗಳನ್ನು ಹೊರಹಾಕುವುದರ ಜೊತೆಗೆ ಮುಖದಲ್ಲಿರುವ ಗುಳ್ಳೆಗಳು ಕಡಿಮೆಯಾಗುವುದು, ಮುಖದ ಹೊಳಪು ಕೂಡ ಹೆಚ್ಚುವುದು.

ಇನ್ನು ಗ್ರೀನ್‌ ಟೀಗೆ ಕಾಟನ್‌ ಅದ್ದಿ, ಅದರಿಂದ ಮುಖವನ್ನು ಒರೆಸಿ, 20 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯುವುದರಿಂದ ಕೂಡ ಮುಖದಲ್ಲಿ ಎದ್ದಂತಹ ಗುಳ್ಳೆಗಳು ಕಡಿಮೆಯಾಗುವುದು.

3. ಜೇನು

3. ಜೇನು

ರೊಸಾಸಿಯಾ ಸಮಸ್ಯೆ ಹೋಗಲಾಡಿಸಲು ಜೇನು ಕೂಡ ಅತ್ಯುತ್ತಮವಾದ ಮನೆಮದ್ದಾಗಿದೆ. ಜೇನನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ಪ್ರತಿದಿನ ಮಾಡಿದರೆ ಕೆಲವೇ ದಿನಗಳಲ್ಲಿ ಕ್ಲಿಯರ್‌ ಸ್ಕಿನ್ ನಿಮ್ಮದಾಗುವುದು.

4. ಸುವಾಸನೆ ಭರಿತ ಎಣ್ಣೆಗಳು

4. ಸುವಾಸನೆ ಭರಿತ ಎಣ್ಣೆಗಳು

ಸುವಾಸನೆ ಎಣ್ಣೆಯನ್ನು ಹಚ್ಚುವ ಮುನ್ನ ಅವುಗಳನ್ನು ಡೈಲ್ಯೂಟ್‌ ಮಾಡಬೇಕು. ನೀವು 2-3 ಹನಿ ಲ್ಯಾವೆಂಡರ್ ಎಣ್ಣೆ, ಟೀ ಟ್ರೀ ಎಣ್ಣೆ ಹಾಗೂ ಒಂದು ಚಮಚ ತೆಂಗಿಣ್ಣೆ ಅಥವಾ ಬಾದಾಮಿ ಎಣ್ಣೆ ತೆಗೆದು ಮಿಶ್ರ ಮಾಡಬೇಕು. ಈಗ ಈ ಎಣ್ಣೆಯನ್ನು ಚಿಕ್ಕ-ಚಿಕ್ಕ ಗುಳ್ಳೆಗಳು ಎದ್ದ ಕಡೆ ಹಚ್ಚಿ, ಮೆಲ್ಲನೆ ಮಸಾಜ್‌ ರೀತಿ ಮಾಡಿ ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆಯಬೇಕು. ಈ ರೀತಿ ಮಾಡುತ್ತಿದ್ದರೆ ಬೇಗನೆ ಶುಭ್ರವಾದ ತ್ವಚೆ ನಿಮ್ಮದಾಗುವುದು.

5. ಓಟ್‌ಮೀಲ್‌

5. ಓಟ್‌ಮೀಲ್‌

ಓಟ್‌ಮೀಲ್‌ ಸ್ಕ್ರಬ್ ಕೂಡ ರೊಸಾಸಿಯಾ ಸಮಸ್ಯೆ ಹೋಗಲಾಡಿಸುವಲ್ಲಿ ಪರಿಣಾಮಕಾರಿ. ಇದನ್ನು ಬಳಸುವುದು ಹೇಗೆ ಎಂದು ನೋಡೋಣ ಬನ್ನಿ:

ಅರ್ಧ ಕಪ್‌ ಓಟ್‌ ಮೀಲ್‌ಗೆ , 1/4 ಕಪ್ ನೀರು ಹಾಕಿ ಪೇಸ್ಟ್‌ ಮಾಡಬೇಕು, ನಂತರ ಅದನ್ನು ಮುಖಕ್ಕೆ ಹಚ್ಚಬೇಕು, 20 ನಿಮಿಷ ಬಿಟ್ಟಾಗ ಅದು ಒಣಗುತ್ತದೆ, ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

6. ಆ್ಯಪಲ್ ಸಿಡರ್ ವಿನೆಗರ್

6. ಆ್ಯಪಲ್ ಸಿಡರ್ ವಿನೆಗರ್

ರೊಸಾಸಿಯಾ ಸಮಸ್ಯೆ ಹೋಗಲಾಡಿಸುವಲ್ಲಿ ಆ್ಯಪಲ್ ಸಿಡರ್ ವಿನೆಗರ್ ಕೂಡ ಅತ್ಯುತ್ತಮವಾದ ಮನೆಮದ್ದಾಗಿದೆ. ಇದನ್ನು ಅನೇಕ ಸೌಂದರ್ಯ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಯಲ್ಲಿ ಬಳಸಲಾಗುವುದು. ಇದು ತುರಿಕೆ, ನೋವು ಇವುಗಳನ್ನು ಕಡಿಮೆ ಮಾಡುತ್ತದೆ. ಇದನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಬೇಕು. ಸೆನ್ಸಿಟಿವ್ ತ್ವಚೆಯವರು ಇದನ್ನು ಬಳಸಬೇಡಿ.

2 ಚಮಚ ಆ್ಯಪಲ್ ಸಿಡರ್ ವಿನೆಗರ್ ತೆಗೆದುಕೊಂಡು ಅದಕ್ಕೆ 8 ಚಮಚ ನೀರು ಹಾಕಿ ಮಿಶ್ರ ಮಾಡಿ. ನಂತರ ಅದಕ್ಕೆ ಸ್ವಲ್ಪ ಟವಲ್ ಅದ್ದಿ, ಅದನ್ನು ಗುಳ್ಳೆಗಳು ಎದ್ದಿರುವ ಕಡೆ 10 ನಿಮಿಷ ಇಡಿ. ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

 7. ಸೌತೆಕಾಯಿ

7. ಸೌತೆಕಾಯಿ

ಸೌತೆಕಾಯಿ ಕೂಡ ತ್ವಚೆ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ. ಇದನ್ನು ಸನ್‌ಟ್ಯಾನ್‌ ತೆಗೆಯಲು , ಕಣ್ಣಿನ ಸುತ್ತ ಬಿದ್ದಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಬಳಸಲಾಗುವುದು. ಮುಖದಲ್ಲಿರುವ ಮೊಡವೆ ರೀತಿಯ ಗುಳ್ಳೆಗಳನ್ನು ಹೋಗಲಾಡಿಸಲು ಸೌತೆಕಾಯಿಯನ್ನು 45 ನಿಮಿಷ ಫ್ರಿಡ್ಜ್‌ನಲ್ಲಿಡಿ. ನಂತರ ಅದನ್ನು ಚಿಕ್ಕದಾಗಿ ಕತ್ತರಿಸಿ ಪೇಸ್ಟ್ ಮಾಡಿ, ಆ ಪೇಸ್ಟ್ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 3-4 ಬಾರಿ ಮಾಡಿದರೆ ತ್ವಚೆಯಲ್ಲಿನ ಕಲೆಗಳು ಮಾಯವಾಗಿ ತ್ವಚೆ ಆಕರ್ಷಕವಾಗಿ ಕಾಣುವುದು.

 8. ಅರಿಶಿಣ

8. ಅರಿಶಿಣ

ಅರಿಶಿಣ ಬಳಸುವ ಮುನ್ನ ನಿಮ್ಮ ತ್ವಚೆಗೆ ಹೊಂದುತ್ತದೆಯೇ ಎಂದು ಪರೀಕ್ಷಿಸಿ. ಕೆಲವರಿಗೆ ಅರಿಶಿಣ ಹಚ್ಚಿದರೆ ಮೊಡವೆ, ಗುಳ್ಳೆಗಳು ಮತ್ತಷ್ಟು ಅಧಿಕವಾಗುವುದು. ನಿಮ್ಮ ಮುಖಕ್ಕೆ ಅರಿಶಿಣ ಹಾಕಿದರೆ ಯಾವುದೇ ಅಲರ್ಜಿ ಉಂಟಾಗುವುದಿಲ್ಲ ಎಂದಾದರೆ ಇದನ್ನು ಪ್ರತಿದಿನ ಹಚ್ಚಿ. ತಿಂಗಳ ಒಳಗಾಗಿ ನಿಮ್ಮ ಸಮಸ್ಯೆ ಮಾಯವಾಗುವುದು.

ಈ ಮನೆಮದ್ದುಗಳ ಜೊತೆಗೆ ಆಹಾರಕ್ರಮದಲ್ಲಿ ಈ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಿ.

ಈ ಮನೆಮದ್ದುಗಳ ಜೊತೆಗೆ ಆಹಾರಕ್ರಮದಲ್ಲಿ ಈ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಿ.

  • ಸಂಸ್ಕರಿಸಿದ ಆಹಾರ ತಿನ್ನಬೇಡಿ, ಸಾವಯವ ಆಹಾರ ಹೆಚ್ಚಾಗಿ ತಿನ್ನಿ.
  • ಹೆಚ್ಚು ಸಕ್ಕರೆ ತಿನ್ನಬೇಡಿ, ಸಿಹಿ ಪದಾರ್ಥಗಳನ್ನು ಮಿತಿಯಲ್ಲಿ ತಿನ್ನಿ.
  • ಶುಂಠಿ, ಬೆಳ್ಳುಳ್ಳಿ, ಗ್ರೀನ್‌ ಟೀ, ಅರಿಶಿಣ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. * ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.
  • ದಿನದಲ್ಲಿ 8 ತಾಸು ನಿದ್ದೆ ಮಾಡಿ
  • ಸಾಕಷ್ಟು ನೀರು ಕುಡಿಯಿರಿ.
  • ಮೇಕಪ್‌ ಸಾಧನಗಳ ಬಳಕೆ ಕಡಿಮೆ ಮಾಡಿ, ತ್ವಚೆ ಸೌಂದರ್ಯಕ್ಕೆ ನೈಸರ್ಗಿಕವಾದ ಸೌಂದರ್ಯವರ್ಧಕಗಳನ್ನು ಬಳಸಿ.
English summary

Home Remedies For Rosacea On Face

Rosacea is a chronic skin disorder that is characterised by inflammation, redness of the skin and bumps. It affects the areas around your cheeks and nose and causes blemishes, swelling and discomfort.
Story first published: Monday, July 13, 2020, 17:48 [IST]
X
Desktop Bottom Promotion