For Quick Alerts
ALLOW NOTIFICATIONS  
For Daily Alerts

ಡಾರ್ಕ್‌ ಸರ್ಕಲ್‌ ಸಮಸ್ಯೆಯೇ? ಈ ಎಕ್ಸ್‌ಪರ್ಟ್‌ ಟಿಪ್ಸ್‌ ಟ್ರೈ ಮಾಡಿ

|

ಡಾರ್ಕ್‌ ಸರ್ಕಲ್ ತುಂಬಾ ಜನರ ಸೌಂದರ್ಯ ಸಮಸ್ಯೆಯಾಗಿದೆ. ಅನೇಕ ಕಾರಣಗಳಿಂದ ಡಾರ್ಕ್‌ ಸರ್ಕಲ್ ಉಂಟಾಗುತ್ತದೆ. ಕೆಲವರಿಗೆ ವಂಶಪಾರಂಪರ್ಯವಾಗಿ ಕಾಣಿಸಿದರೆ ಇನ್ನು ಕೆಲವರಿಗೆ ನಿದ್ದೆ ಸರಿಯಾಗಿ ಇಲ್ಲದೆ, ತುಂಬಾ ಮೊಬೈಲ್‌ ಅಥವಾ ಲ್ಯಾಪ್‌ಟ್ಯಾಪ್‌, ಟಿವಿ ನೋಡುವುದು ಈ ಎಲ್ಲಾ ಕಾರಣಗಳಿಂದ ಕಣ್ಣಿನ ಕೆಳಗಡೆ ಡಾರ್ಕ್‌ ಸರ್ಕಲ್ ಬೀಳುವುದು.

ಆದರೆ ಅದನ್ನು ಹೋಗಲಾಡಿಸಲು ಸಾಧನೇ ಇಲ್ಲ ಎಂದೇನಿಲ್ಲ, ಕಣ್ಣಿನ ಸುತ್ತ ಬಿದ್ದಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು, ಅದಕ್ಕೆ ಈ ಎಕ್ಸ್‌ಪರ್ಟ್ ಸಲಹೆ ಪಾಲಿಸಿ:

1. ಮೇಕಪ್‌

1. ಮೇಕಪ್‌

* ನಿಮಗೆ ಡಾರ್ಕ್‌ ಸರ್ಕಲ್ ಸಮಸ್ಯೆ ಇದ್ದರೆ ವಾಟರ್‌ಫ್ರೂಫ್‌ ಐ ಮೇಕಪ್‌ ಬಳಸಿ. ವಾಟರ್‌ ಫ್ರೂಫ್‌ ಮಸ್ಕರಾ ಅಥವಾ ಐ ಪೆನ್ಸಿಲ್‌ ಬಳಸಿದರೆ ಕಣ್ಣಿನ ಸುತ್ತ ಸ್ಪ್ರೆಡ್‌ ಆಗುವುದಿಲ್ಲ. ಇದರಿಂದ ಕಣ್ಣಿನ ಕೆಳಗಡೆ ತುಂಬಾ ಬಲ ಹಾಕಿ ತೊಳೆಯ ಬೇಕಾಗಿಲ್ಲ. ನೀವು ಮೇಕಪ್‌ಗೆ ಕ್ರೀಮಿ ಕನ್ಸೀಲರ್‌ ಹಾಗೂ ಸೆಟ್ಟಿಂಗ್‌ ಪೌಡರ್‌ ಬಳಸಿ.

2. ಕ್ಲೆನ್ಸಿಂಗ್‌

2. ಕ್ಲೆನ್ಸಿಂಗ್‌

ಮಲಗುವ ಮುನ್ನ ಮುಖವನ್ನು ತೊಳೆಯಿರಿ, ಅದರಲ್ಲೂ ಕಣ್ಣಿನ ಕೆಳಭಾಗ ನೀರು ಹಾಕಿ ತೊಳೆಯಿರಿ, ಮಸ್ಕರಾ ಮೇಕಪ್‌ ತೆಗೆಯಲು ತೆಂಗಿನೆಣ್ಣೆ ಹಚ್ಚಿ ನಂತರ ಮುಖ ತೊಳೆಯಿರಿ. ಮುಖಕ್ಕೆ ಸೋಪ್‌ ಬದಲಿಗೆ ಫೇಸ್‌ವಾಶ್‌ ಬಳಸಿ. ತೆಂಗಿನೆಣ್ಣೆ ಬದಲಿಗೆ ಬಾದಾಮಿ ಎಣ್ಣೆಯನ್ನೂ ಬಳಸಬಹುದು.

3. ಕೋಲ್ಡ್‌ ಕಂಪ್ರೆಸ್‌

3. ಕೋಲ್ಡ್‌ ಕಂಪ್ರೆಸ್‌

ಕೋಲ್ಡ್‌ ಕಂಪ್ರೆಸ್ ಕಣ್ಣಿಗೆ ತುಂಬಾ ಒಳ್ಳೆಯದು. ಕೋಲ್ಡ್‌ ಕಂಪ್ರೆಸ್‌ ಅನ್ನು 10 ನಿಮಿಷ ಕಣ್ಣಿನ ಮೇಲಿಡಿ. ಐಸ್‌ ಪ್ಯಾಕ್‌ ಅನ್ನು ಮಸ್ಲಿನ್‌ ಬಟ್ಟೆಯಲ್ಲಿ ಸುತ್ತಿ ಕಣ್ಣಿನ ಮೇಲೆ ಇಡಿ. ಈ ರೀತಿ ಮಲಗುವ ಮುನ್ನಇಡಿ ಅಥವಾ ರಿಲ್ಯಾಕ್ಸ್ ಆಗಿದ್ದಾಗ ಕಣ್ಣಿನ ಮೇಲಿಡಿ.

4. ಐ ಸೆರಮ್

4. ಐ ಸೆರಮ್

ಕೆಫೀನ್‌ ನೀವು ಜೊತೆ ಸೆರಮ್ ಹಚ್ಚಿ. ನೀವು ಡಾರ್ಕ್‌ ಸರ್ಕಲ್‌ಗೆ ಅಗ್ಯತವಾಗಿರುವ ಐ ಸೆರಮ್ ಅನ್ನು ಮನೆಯಲ್ಲಿಯೇ ಮಾಡಬಹುದು. 2 ಚಮಚ ಕಾಫಿ ಪೌಡರ್‌ಗೆ 1ಚಮಚ ಲೋಳೆಸರ ಮತ್ತು 1 ಚಮಚ ರೋಸ್ ವಾಟರ್‌ ಹಾಕಿ ಮಿಕ್ಸ್‌ ಮಾಡಿ ಅದರ ರಸವನ್ನು ಒಂದು ಬಟ್ಟೆಯಲ್ಲಿ ಹಾಕಿ ಹಿಂಡಿ ಬಾಟಲಿನಲ್ಲಿ ಹಾಕಿಡಿ. ಅದನ್ನು ಕಣ್ಣಿನ ಕೆಳಗಡೆ ಹಚ್ಚಿ. ಒಮ್ಮೆ ಮಾಡಿ ಫ್ರಿಡ್ಜ್‌ನಲ್ಲಿಟ್ಟು ಬಳಸಿದರೆ 15 ದಿನ ಬಳಸಬಹುದು.

5. ಕೋಲ್ಡ್ ಮಿಲ್ಕ್‌ ಪ್ಯಾಚಸ್

5. ಕೋಲ್ಡ್ ಮಿಲ್ಕ್‌ ಪ್ಯಾಚಸ್

ಕಾಟನ್ ಪ್ಯಾಡ್‌ / ಹತ್ತಿಯ ಉಂಡೆ ತೆಗೆದು ಅದನ್ನು ತಣ್ಣನೆಯ ಹಸಿ ಹಾಲಿನಲ್ಲಿ ಅದ್ದಿ ಕಣ್ಣಿನ ಮೇಲೆ 5-6 ನಿಮಿಷ ಇಡಿ. ಇದನ್ನು ಪ್ರತಿದಿನ ಮಾಡುತ್ತಿದ್ದರೆ ಕಣ್ಣಿನ ಸುತ್ತಲಿನ ಡಾರ್ಕ್‌ ಸರ್ಕಲ್ ದೂರಾಗುವುದು.

6. ಕಣ್ಣಿಗೆ ಮಸಾಜ್‌

6. ಕಣ್ಣಿಗೆ ಮಸಾಜ್‌

ಕಣ್ಣಿಗೆ ಪ್ರತಿದಿನ ಸ್ವಲ್ಪ ಮಸಾಜ್‌ ಮಾಡಿ. ಅರ್ಧ ಚಮಚ ಬಾದಾಮಿ ಎಣ್ಣೆ, ಅರ್ಧ ಚಮಚ ತೆಂಗಿನೆಣ್ಣೆ, 1 ವಿಟಮಿನ್ ಇ ಕ್ಯಾಪ್ಸೂಲ್ ಹಾಕಿ ಮಿಕ್ಸ್ ಮಾಡಿ ಅದನ್ನು ಕಣ್ಣಿನ ಕೆಳಗಡೆ ಡಾರ್ಕ್ ಸರ್ಕಲ್ ಸುತ್ತ ಹಚ್ಚಿ ಒಂದು ರಾತ್ರಿ ಬಿಡಿ. ಈ ರೀತಿ ಪ್ರತಿದಿನ ಮಾಡುತ್ತಿದ್ದರೆ ಡಾರ್ಕ್‌ ಸರ್ಕಲ್ ಇರಲ್ಲ.

7. ನಿದ್ದೆ

7. ನಿದ್ದೆ

ಡಾರ್ಕ್‌ ಸರ್ಕಲ್ ಹೋಗಲಾಡಿಸಲು ನಿದ್ದೆ ತುಂಬಾನೇ ಮುಖ್ಯವಾಗಿದೆ. ನೀವು ಮೇಲೆ ಹೇಳಿರುವ ಟಿಪ್ಸ್‌ ಎಲ್ಲಾ ಟ್ರೈ ಮಾಡಿ ಸರಿಯಾಗಿ ನಿದ್ದೆ ಮಾಡಿಲ್ಲ ಎಂದಾದರೆ ಏನೂ ಪ್ರಯೋಜನವಿಲ್ಲ. ದಿನಾ ಸರಿಯಾದ ಸಮಯಕ್ಕೆ ನಿದ್ದೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. 6 ಗಂಟೆ ನಿದ್ದೆ ಅವಶ್ಯಕವಾಗಿದೆ.

English summary

Home Remedies For Dark Circles: Expert Tips To Get Rid of Dark Circles in kannada

Home Remedies For Dark Circles: Expert Tips To Get Rid of Dark Circles in kannada, Read on...
X
Desktop Bottom Promotion