For Quick Alerts
ALLOW NOTIFICATIONS  
For Daily Alerts

ನಿಮ್ಮ ಸೌಂದರ್ಯ ಕಳೆಗುಂದದಿರಲು ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ

|

ಸುಂದರವಾಗಿ ಕಾಣೋದು ಯಾರಿಗೆ ಇಷ್ಟ ಇಲ್ಲ ಹೇಳಿ? ಸೌಂದರ್ಯಕ್ಕೆ ಹೆಣ್ಣು -ಗಂಡು ಎಂಬ ಬೇಧವಿಲ್ಲ. ಆದರೆ ಗಂಡಿಗಿಂತ ಹೆಣ್ಣು ತುಸು ಜಾಸ್ತಿ ಸೌಂದರ್ಯದ ಕಾಳಜಿ ಹೊಂದಿರುತ್ತಾಳೆ ಎಂಬುದು ರೂಢಿಯಿಂದ ಬಂದ ಮಾತು. ಆದ್ರೆ ಇಂದಿನ ಪುರುಷರ ಸೌಂದರ್ಯ ಕಾಳಜಿ ನೋಡಿದ್ರೆ ಯಾವ ಹುಡುಗಿಯೂ ಈ ಮಾತನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದೇನೇ ಇರಲಿ, ಯುವಕರಿಗಾಗಲಿ - ಯುವತಿಯರಿಗಾಗಲೀ ಅವರ ಸೌಂದರ್ಯ ಹಾಗೇ ಕಾಪಾಡಿಕೊಳ್ಳಲು ಕೆಲವೊಂದು ಅಭ್ಯಾಸಗಳನ್ನು ನಾವಿಂದು ಹೇಳಹೊರಟಿದ್ದೇವೆ. ನೀವು ಓದಿ ಸೌಂದರ್ಯ ಕಾಪಾಡಿಕೊಳ್ಳಿ.

ಸೌಂದರ್ಯ ಕಾಪಾಡುವ ಅಭ್ಯಾಸಗಳನ್ನು ಈ ಕೆಳಗೆ ನೀಡಲಾಗಿದೆ :

ಉತ್ತಮವಾಗಿರುವುದನ್ನು ತಿನ್ನಿ:

ಉತ್ತಮವಾಗಿರುವುದನ್ನು ತಿನ್ನಿ:

ನಿಮ್ಮ ದೇಹವನ್ನು ಒಮ್ಮೆಯಾದರೂ ನಿರ್ವಿಷಗೊಳಿಸಿ. ಸಲಾಡ್, ಹಣ್ಣುಗಳು, ಪಾನೀಯ ರಸವನ್ನು ಸೇವಿಸಿ. ಇದು ಯೌವ್ವನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮಲಗುವ ಮುನ್ನ ಮುಖ ತೊಳೆಯಿರಿ:

ಮಲಗುವ ಮುನ್ನ ಮುಖ ತೊಳೆಯಿರಿ:

ರಾತ್ರಿ ಮಲಗುವ ಮುಖ ತೊಳೆಯುವುದು ತುಂಬಾ ಮುಖ್ಯ. ಈ ಮೂಲಕ ಇಡೀ ದಿನದ ಕೊಳೆಯನ್ನು ತೆಗೆದುಹಾಕಬಹುದು. ಇಲ್ಲವಾದಲ್ಲಿ ಕೊಳೆ ಹಾಗೇ ಉಳಿದು ತ್ವಚೆಯ ಸಮಸ್ಯೆಗೆ ಕಾರಣವಾಗುತ್ತದೆ.

ಹಣ್ಣಿನ ಫೇಸ್ ಪ್ಯಾಕ್ :

ಹಣ್ಣಿನ ಫೇಸ್ ಪ್ಯಾಕ್ :

ನಿಮ್ಮ ಅಡುಗೆ ಮನೆಯಲ್ಲಿರುವ ಉಳಿದ ಹಣ್ಣುಗಳನ್ನು ಎಸೆಯಬೇಡಿ, ಬದಲಿಗೆ ಅವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇದು ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಎಕ್ಸ್‌ಫೋಲಿಯೇಟ್ ಮಾಡಿ :

ಎಕ್ಸ್‌ಫೋಲಿಯೇಟ್ ಮಾಡಿ :

ನಿಮ್ಮಿಂದ ಬೇರೇನೂ ಮಾಡಲು ಸಾಧ್ಯವಿಲ್ಲವೇ ಹಾಗಾದ್ರೆ ಕೇವಲ ಎಫ್ಫೋಲಿಯೇಟ್ ಮಾಡಿ. ಇದರಿಂದ ನಿಮ್ಮ ತ್ವಚೆಯಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಬಹುದು.

ಅರಿಶಿನ:

ಅರಿಶಿನ:

ಉತ್ತಮವಾದ ಹಳೆಯ ವಸ್ತುಗಳಲ್ಲಿ ಅರಿಶಿನವು ಅತ್ಯುತ್ತಮ ಉರಿಯೂತದ ಪರಿಹಾರವಾಗಿದೆ. ಇದನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿ. ಅರಿಶಿನ ಹಾಲು ಕುಡಿಯಿರಿ, ಅರಿಶಿನ ಫೇಸ್‌ಪ್ಯಾಕ್ ಹಚ್ಚಿ.ಮತ್ತು ಹಳದಿ ಹಾಕಿದ ಆಹಾರವನ್ನು ಸೇವಿಸಿ.

ಸನ್ಸ್ಕ್ರೀನ್ ದಯವಿಟ್ಟು ಹಚ್ಚಿ :

ಸನ್ಸ್ಕ್ರೀನ್ ದಯವಿಟ್ಟು ಹಚ್ಚಿ :

ಯಾವಾಗಲೂ ನಿಮ್ಮನ್ನು ಸೂರ್ಯನಿಂದ ರಕ್ಷಿಸಿಕೊಳ್ಳಿ, ಮನೆಯಿಂದ ಹೊರಗೆ ಹೋಗುವಾಗ ಸನ್ ಸ್ಕ್ರೀಮ್ ಹಚ್ಚಿಕೊಳ್ಳಿ. ಮನೆಯೊಳಗೇ ಇರುವಾಗಲು ಇದು ಅತ್ಯಗತ್ಯವಾಗಿದೆ.

ಹಾಲಿನ ಸ್ನಾನ :

ಹಾಲಿನ ಸ್ನಾನ :

ಹಾಲು ಅತ್ಯುತ್ತಮ ಸೌಂದರ್ಯ ಅಮೃತವಾಗಿದ್ದು, ಅದರಲ್ಲಿ ಒಮ್ಮೆ ಸ್ನಾನ ಮಾಡಿ. ಇದು ನಿಮಗೆ ಉತ್ತಮ ಹೊಳಪನ್ನು ನೀಡುತ್ತದೆ. ಜೊತೆಗೆ ಯೋಗ ಮಾಡುವುದು ಸಹ ನಿಮ್ಮ ಮುಖ ಮತ್ತು ಚರ್ಮವನ್ನು ಆರೋಗ್ಯಕರವಾಗಿಡುವುದು.

ಸಾಕಷ್ಟು ನೀರು ಕುಡಿಯಿರಿ :

ಸಾಕಷ್ಟು ನೀರು ಕುಡಿಯಿರಿ :

ನಿಮ್ಮ ಚರ್ಮದ ಅರೋಗ್ಯಕ್ಕಾಗಿ ನೀವು ಮಾಡಬಹುದಾದ ಉತ್ತಮ ಕೆಲಸವೆಂದರೆ ಸಾಕಷ್ಟು ನೀರು ಕುಡಿಯುವುದು. ಇದು ಎಲ್ಲಾ ಸಮಸ್ಯೆಗಳಿಂದ ದೂರವಿಡುವುದಲ್ಲದೆ, ದೇಹದಿಂದ ಕಲ್ಮಶವನ್ನು ಹೊರಹಾಕುತ್ತದೆ.

English summary

Healthy Beauty Habits in Kannada

Here we talking about Healthy Beauty Habits in Kannada, read on
Story first published: Tuesday, May 18, 2021, 18:04 [IST]
X
Desktop Bottom Promotion