For Quick Alerts
ALLOW NOTIFICATIONS  
For Daily Alerts

ಹಣೆಯಲ್ಲಿ ಮೊಡವೆಯಾಗಲು ಕಾರಣವೇನು? ಅದರಿಂದ ಪರಿಹಾರ ಪಡೆಯುವುದು ಹೇಗೆ?

|

ನಮ್ಮಲ್ಲಿ ಹೆಚ್ಚಿನವರು ಮೊಡವೆ ಹೊಂದಿರುವ ಸಾಮಾನ್ಯ ಪ್ರದೇಶವೆಂದರೆ ಅದು ಹಣೆ. ಏಕೆಂದರೆ ನಮ್ಮ ಹಣೆಯು ನೈಸರ್ಗಿಕವಾಗಿ ಎಣ್ಣೆಯುಕ್ತವಾಗಿರುವುದರಿಂದ ಮೊಡವೆಗಳು ಹುಟ್ಟಿಕೊಳ್ಳುತ್ತವೆ. ಜೊತೆಗೆ ನಮ್ಮ ಕೂದಲಿನ ಎಣ್ಣೆ, ತ್ವಚೆ ಉತ್ಪನ್ನಗಳು ಅಥವಾ ಸ್ಟೈಲಿಂಗ್ ಉತ್ಪನ್ನಗಳ ಶೇಷವು ಮೊಡವೆಗಳನ್ನು ಉಂಟುಮಾಡುತ್ತದೆ. ಇದರ ಹೊರತಾಗಿ, ಒತ್ತಡ, ಹಾರ್ಮೋನುಗಳು, ಪ್ರೌಢಾವಸ್ಥೆ ಹಾಗೂ ಕಠಿಣ ಔಷಧಿಗಳು ಸಹ ಹಣೆಯಲ್ಲಿ ಮೊಡವೆಗಳಿಗೆ ಕಾರಣವಾಗಬಹುದು. ಹಾಗಾದರೆ, ಈ ಹಣೆಯ ಮೊಡವೆಗಳನ್ನು ಹೋಗಲಾಡಿಸುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಹಣೆಯಲ್ಲಿ ಬರುವ ಮೊಡವೆಗಳನ್ನು ಕಡಿಮೆ ಮಾಡಲು ಏನು ಮಾಡಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮುಖವನ್ನು ಸ್ವಚ್ಛಗೊಳಿಸಿ:

ಮುಖವನ್ನು ಸ್ವಚ್ಛಗೊಳಿಸಿ:

ನಿಮ್ಮ ಚರ್ಮದಿಂದ ಕೊಳಕು, ಎಣ್ಣೆ ಅಥವಾ ಇತರ ಉತ್ಪನ್ನಗಳನ್ನು ತೆಗೆದುಹಾಕಲು ಸೂಕ್ತವಾದ ಫೇಸ್ ವಾಶ್ ಮೂಲಕ ನಿಮ್ಮ ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸಿ. ಇದರಿಂದ ಮೊಡವೆ ಹುಟ್ಟಿಕೊಳ್ಳಲು ಕಾರಣವಾಗುವ ಕಲ್ಮಶಗಳನ್ನು ತೆಗದುಹಾಕಬಹುದು.

ನಿಯಮಿತವಾಗಿ ಮಾಯಿಶ್ಚರೈಸ್ ಮಾಡಿ:

ನಿಯಮಿತವಾಗಿ ಮಾಯಿಶ್ಚರೈಸ್ ಮಾಡಿ:

ತ್ವಚೆ ಶುದ್ಧೀಕರಣದ ನಂತರ, ನಿಮ್ಮ ಚರ್ಮಕ್ಕೆ ಸೂಕ್ತವಾದ ಮೃದುವಾದ ಮಾಯಿಶ್ಚರೈಸರ್ ಹಚ್ಚಿ. ಚರ್ಮದ ರಂಧ್ರಗಳು ಮುಚ್ಚುವುದನ್ನು ತಪ್ಪಿಸಲು ಮಾಯಿಶ್ಚರೈಸರ್ ಎಣ್ಣೆ ಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ತ್ವಚೆಯ ಆರೈಕೆಯ ದಿನಚರಿಯನ್ನು ಅನುಸರಿಸಿ:

ತ್ವಚೆಯ ಆರೈಕೆಯ ದಿನಚರಿಯನ್ನು ಅನುಸರಿಸಿ:

ಫೇಸ್ ವಾಶ್, ಟೋನರ್, ಮಾಯಿಶ್ಚರೈಸರ್, ಸನ್‌ಸ್ಕ್ರೀನ್ ಮತ್ತು ಸೀರಮ್‌ಗಳು ಅಥವಾ ಸಾರಭೂತ ತೈಲಗಳನ್ನು ಒಳಗೊಂಡಂತೆ ಸರಿಯಾದ ತ್ವಚೆಯ ದಿನಚರಿಯನ್ನು ನಿರ್ವಹಿಸಿ. ಇದು ನಿಮ್ಮ ಚರ್ಮದಲ್ಲಿರುವ ಕೊಳೆ ಮತ್ತು ಬ್ಯಾಕ್ಟೀರಿಯಾವನ್ನು ತೆಗದುಹಾಕಿ, ಮೊಡವೆಗಳನ್ನು ತಡೆಯಲು ಮತ್ತು ಈಗಾಗಲೇ ಮುಖದಲ್ಲಿರುವ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಓವರ್-ದಿ-ಕೌಂಟರ್ (OTC) ಔಷಧಿಗಳನ್ನು ಪ್ರಯತ್ನಿಸಿ:

ಓವರ್-ದಿ-ಕೌಂಟರ್ (OTC) ಔಷಧಿಗಳನ್ನು ಪ್ರಯತ್ನಿಸಿ:

ನಿಮ್ಮ ಮೊಡವೆಗಳು ಹೆಚ್ಚಿಲ್ಲದಿದ್ದರೆ ಮತ್ತು ನಿಯಂತ್ರಿಸಬಹುದಾದರೆ, ಜೆಲ್ಗಳು ಮತ್ತು ಮುಲಾಮುಗಳಂತಹ ಕೆಲವು OTC ಔಷಧಿಗಳನ್ನು ಬಳಸಬಹುದು. ಈ ಉತ್ಪನ್ನಗಳು ಸ್ಯಾಲಿಸಿಲಿಕ್ ಆಮ್ಲ, ರೆಟಿನಾಲ್, ಬೆಂಜಾಯ್ಲ್ ಪೆರಾಕ್ಸೈಡ್ ಅಥವಾ ರೆಸಾರ್ಸಿನಾಲ್ ಅನ್ನು ಹೊಂದಿರಬೇಕು. ಆದರೆ, ನೀವು ಗಂಭೀರವಾದ ಮೊಡವೆ ಸಮಸ್ಯೆ ಹೊಂದಿದ್ದರೆ, ಚರ್ಮರೋಗ ತಜ್ಞರನ್ನು ಸಂಪರ್ಕಿಸದೆ ಮುಖದ ಮೇಲೆ ಏನನ್ನೂ ಬಳಸಬೇಡಿ. OTC ಔಷಧಿಗಳಿಗೆ ಸಹ, ನಿಯಮಿತ ಬಳಕೆಯನ್ನು ಪ್ರಾರಂಭಿಸುವ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡಿ.

ಮನೆಮದ್ದುಗಳು:

ಮನೆಮದ್ದುಗಳು:

ಮನೆಮದ್ದುಗಳು ಸುರಕ್ಷಿತ, ಬಜೆಟ್ ಸ್ನೇಹಿ ಮತ್ತು ಇಂತಹ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಹೆಚ್ಚು ಪರಿಣಾಮಕಾರಿ ವಿಧಾನಗಳಾಗಿವೆ. ಸೌಮ್ಯವಾದ ಹಣೆಯ ಮೊಡವೆಗಳಿಗೆ ಚಿಕಿತ್ಸೆ ನೀಡಲು ನೀವು ಪ್ರಯತ್ನಿಸಬಹುದಾದ ಕೆಲವು ಮನೆಮದ್ದುಗಳೆಂದರೆ ಅಲೋವೆರಾ ಜೆಲ್, ಗ್ರೀನ್ ಟೀ ಮತ್ತು ಟೀ ಟ್ರೀ ಎಣ್ಣೆ.

ಡಯಟ್:

ಡಯಟ್:

ಮೊಡವೆ ಮತ್ತು ನಿಮ್ಮ ಆಹಾರ ಪದ್ಧತಿಯ ನಡುವೆ ಸಾಕಷ್ಟು ಸಂಬಂಧವಿದೆ; ಆದ್ದರಿಂದ, ನೀವು ಸೇವಿಸುವ ಆಹಾರವನ್ನು ಸಹ ನೋಡಿಕೊಳ್ಳಬೇಕು. ಮೊಡವೆಗಳನ್ನು ಉಂಟುಮಾಡುವ ಕೆಲವು ಆಹಾರಗಳೆಂದರೆ ಡೈರಿ ಉತ್ಪನ್ನಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಡೀಪ್ ಫ್ರೈಡ್ ಆಹಾರ, ಪ್ಯಾಕ್ ಮಾಡಿದ ಆಹಾರ, ಸಂಸ್ಕರಿಸಿದ ಧಾನ್ಯಗಳು ಮತ್ತು ಸಕ್ಕರೆ ಮತ್ತು ಎಣ್ಣೆಯುಕ್ತ ಆಹಾರ. ಆದ್ದರಿಂದ ಇವುಗಳನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.

ಚರ್ಮರೋಗ ತಜ್ಞರನ್ನು ಸಂಪರ್ಕಿಸಿ:

ಚರ್ಮರೋಗ ತಜ್ಞರನ್ನು ಸಂಪರ್ಕಿಸಿ:

ಹೆಚ್ಚಿನ ಜನರಿಗೆ ಮೊಡವೆಗಳು ತಾತ್ಕಾಲಿಕವಾಗಿರುತ್ತವೆ ಮತ್ತು ಕೆಲವು ಪರಿಹಾರಗಳ ನಂತರ ಅದು ಮಸುಕಾಗುತ್ತದೆ. ಆದರೆ, ಇದು ಬೆಳವಣಿಗೆಯನ್ನು ಮುಂದುವರೆಸಿದರೆ, ನೀವು ಚರ್ಮರೋಗ ವೈದ್ಯರನ್ನು ಸಂಪರ್ಕಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

English summary

Forehead Acne Causes and How to Get Rid of It in Kannada

Here we talking about Forehead Acne Causes and How to Get Rid of It in Kannada, read on
X
Desktop Bottom Promotion