For Quick Alerts
ALLOW NOTIFICATIONS  
For Daily Alerts

ಮದುಮಗಳೇ, ನೀವು ಬಯಸಿದಂಥ ಸ್ಕಿನ್‌ ಗ್ಲೋ ನೀಡುತ್ತೆ ಈ ಎಕ್ಸ್‌ಪರ್ಟ್ ಟಿಪ್ಸ್

|

ಪ್ರತಿಯೊಬ್ಬ ಹೆಣ್ಣಿಗೂ ತನ್ನ ಮದುವೆ ದಿನ ತುಂಬಾ ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾಳೆ. ಆ ದಿನ ಅವಳ ದಿನ, ಸೆಂಟರ್‌ ಆಫ್‌ ಅಟ್ರಾಕ್ಷನ್‌ ಅವಳೇ ಆಗಿರುವುದರಿಂದ ಸುಂದರವಾಗಿ ಕಾಣಬೇಕೆಂದು ಬಯಸುತ್ತಾಳೆ.

ಅದಕ್ಕಾಗಿ ತಿಂಗಳ ಮುಂಚೆಯೇ ಪ್ರಿಪರೇಷನ್‌ ಮಾಡಲಾಗುವುದು, ಅದರಲ್ಲೂ ಸ್ಕಿನ್‌ ಕೇರ್‌ ಬಗ್ಗೆ ತುಂಬಾನೇ ಗಮನ ನೀಡಲಾಗುವುದು. ಬಹುಮುಖ್ಯ ಸ್ಕಿನ್ ಗ್ಲೋ ಬರಬೇಕು, ಅದಕ್ಕಾಗಿ ಫೇಶಿಯಲ್ ಮಾಸ್ಕ್‌, ಫೇಶಿಯಲ್ ಟ್ರೈ ಮಾಡಲಾಗುವುದು.

ಮೇ ತಿಂಗಳಿನಲ್ಲಿ ಮದುವೆಯಾಗುವುದಾದರೆ ತ್ವಚೆ ಬಗ್ಗೆ ತುಸು ಹೆಚ್ಚಾಗಿಯೇ ಕಾಳಜಿವಹಿಸಿ, ಆಗ ಆ ದಿನ ನೀವು ಬಯಸಿದಂತೆ ಮದುಮಗಳಾಗಿ ಸುಂದರವಾಗಿ ಕಾಣಿಸಬಹುದು.

ನಾವಿಲ್ಲಿ ಕೆಲವೊಂದು ಟಿಪ್ಸ್ ನೀಡಿದ್ದೇವೆ, ಅವುಗಳತ್ತ ಗಮನ ನೀಡಿದರೆ ನಿಮ್ಮ ಮುಖದ ಕಾಂತಿ ಹೆಚ್ಚುವುದು:

 ಸೆರಮ್‌ ಟ್ರೀಟ್‌ಮೆಂಟ್‌

ಸೆರಮ್‌ ಟ್ರೀಟ್‌ಮೆಂಟ್‌

ನಿಮ್ಮ ಮದುವೆಗೆ ಕೆಲ ತಿಂಗಳ ಮುಂಚೆಯೇ ಸೆರಮ್‌ ಟ್ರೀಟ್ಮೆಂಟ್‌ ಮಾಡಿದರೆ ಇನ್ನೂ ಒಳ್ಳೆಯದು, ಈಗ ಸಮಯವಿಲ್ಲ ಎಂದಾದರೆ ತಿಂಗಳ ಮುಂಚೆ ಮಾಡಿಸಿ. ಮಲ್ಟಿ ವಿಟಮಿನ್ಸ್‌ ಬಳಸಿ ಮಾಡುವ ಫೇಶಿಯಲ್‌ ನಿಮ್ಮ ತ್ವಚೆ ಗ್ಲೋ ನೀಡುವುದು. ಸೆರಮ್ ಟ್ರೀಟ್ಮೆಂಟ್‌ ಪ್ರತೀ ತಿಂಗಳು ಮಾಡಿಸುತ್ತಿರುವವರ ತ್ವಚೆ ತುಂಬಾನೇ ಆಕರ್ಷಕವಾಗಿರುತ್ತದೆ.

 ಎಕ್ಸ್‌ಫೋಲೆಟ್‌

ಎಕ್ಸ್‌ಫೋಲೆಟ್‌

ವಾರಕ್ಕೊಮ್ಮೆ ತ್ವಚೆಯನ್ನು ಎಕ್ಸ್‌ಫೋಲೆಟ್‌ ಮಾಡಿ, ಇದರಿಂದ ತ್ವಚೆ ಮೃದುವಾಗುವುದು, ಡೆಡ್‌ ಸ್ಕಿನ್‌ ಇಲ್ಲವಾಗುವುದು.

ಫೇಶಿಯಲ್‌ ಬೇಗನೆ ಟ್ರೈ ಮಾಡಿ

ಫೇಶಿಯಲ್‌ ಬೇಗನೆ ಟ್ರೈ ಮಾಡಿ

ಕೆಲವರು ಮದುವೆಗೆ ಒಂದು ವಾರವಿರುವಾಗ ಫೇಶಿಯಲ್‌ ಮಾಡಿಸುತ್ತಾರೆ, ಆ ಫೇಶಿಯಲ್‌ ಈ ಹಿಂದೆ ಮಾಡಿಸಿರುವುದಿಲ್ಲ, ಬ್ಯೂಟಿಷಿಯನ್‌ ಮದುಮಗಳು ಅಂದ ತಕ್ಷಣ ಕೆಲವೊಂದು ದುಬಾರಿ ಫೇಶಿಯಲ್‌ ಬಗ್ಗೆ ಹೇಳುತ್ತಾಳೆ, ನೀವು ಅದನ್ನು ಮಾಡಿಸುತ್ತೀರಿ. ಈ ತಪ್ಪಿನಿಂದಾಗಿ ಕೆಲವರಿಗೆ ಮದುವೆ ದಿನ ಮುಖದಲ್ಲಿ ಮೊಡವೆ, ತ್ವಚೆ ಒಣಗುವುದು ಈ ರೀತಿಯ ಸಮಸ್ಯೆಗಳು ಕಂಡು ಬರುವುದು. ಆ ರೀತಿ ಮಾಡಬೇಡಿ. ನೀವು ಯಾವ ಫೇಶಿಯಲ್‌ ಮಾಡಬೇಕೆಂದು ಬಯಸುತ್ತೀರಾ ಅದನ್ನು ಮದುವೆ ಸೆಟ್‌ ಆದಾಗ ಟ್ರೈ ಮಾಡಿ, ನಂತರ ಮದುವೆಗೆ 15 ದಿನವಿರುವಾಗ ಹಾಗೂ ಒಂದು 5 ದಿನವಿರುವಾಗ ಮಾಡಿಸಿ. ಇದು ನಿಮ್ಮ ತ್ವಚೆಯ ಹೊಳಪು ಹೆಚ್ಚಿಸುವುದು.

ಹೈಡ್ರೇಟ್‌:

ಹೈಡ್ರೇಟ್‌:

ತ್ವಚೆ ಆರೈಕೆಯಲ್ಲಿ ಬಹುಮುಖ್ಯವಾದ ಅಂಶ ನೀರು ಕುಡಿಯಬೇಕು. ತುಂಬಾ ನೀರು ಕುಡಿಯಲು ಇಷ್ಟವಿಲ್ಲದಿದ್ದರೆ ತಾಜಾ ಹಣ್ಣಿನ ಜ್ಯೂಸ್‌ ಸೇವಿಸಿ. ಸಕ್ಕರೆ ಹೆಚ್ಚು ಬಳಸಬೇಡಿ. ತ್ವಚೆ ಮಾಯಿಶ್ಚರೈಸರ್‌ಗೆ ಕ್ರೀಮ್‌ ಬಳಸಿ.

ಐ ಕ್ರೀಮ್ ಮತ್ತು ಬ್ಯೂಟಿ ಸ್ಲೀಪ್‌

ಐ ಕ್ರೀಮ್ ಮತ್ತು ಬ್ಯೂಟಿ ಸ್ಲೀಪ್‌

ಐ ಕ್ರೀಮ್‌ ಬಳಸಿ, ಏಕೆಂದರೆ ಮದುವೆ ಸಮಯದಲ್ಲಿ ತುಂಬಾ ಮಾನಸಿಕ ಒತ್ತಡವಿರುವುದು ಸಹಜ ಅಲ್ಲದೆ ಸಂಗಾತಿ ಜೊತೆ ನಿದ್ದೆ ಬಿಟ್ಟು ಮಾತನಾಡುವುದರಿಂದ ಕಣ್ಣಿನ ಸುತ್ತ ಡಾರ್ಕ್‌ ಸರ್ಕಲ್ ಬೀಳಬಹುದು. ಅದನ್ನು ತಡೆಗಟ್ಟಲು ಐ ಕ್ರೀಮ್‌ ಬಳಸಿ ಜೊತೆಗೆ ಚೆನ್ನಾಗಿ ನಿದ್ದೆ ಮಾಡಿ.

ಮೇಕಪ್ ಟ್ರಯಲ್ ಮಾಡಿ

ಮೇಕಪ್ ಟ್ರಯಲ್ ಮಾಡಿ

ಮದುವೆಗೆ ಮುನ್ನವೇ ಮೇಕಪ್‌, ಹೇರ್‌ಸ್ಟೈಲ್‌ ಟ್ರಯಲ್‌ ಮಾಡುವುದು ಬೆಸ್ಟ್. ಏಕೆಂದರೆ ಆ ದಿನ ಮಾಡಿದಾಗ ಕೆಲವೊಮ್ಮೆ ನಾವು ಬಯಸಿದಂತೆ ಕಾಣದಿರಬಹುದು. ಬ್ಯೂಟಿಷಿಯನ್‌ ಓವರ್‌ ಮೇಕಪ್ ಮಾಡಿದರೆ ಅಥವಾ ಅವರು ಮಾಡಿದ ಹೇರ್‌ ಸ್ಟೈಲ್‌ ನಮ್ಮ ಮುಖಕ್ಕೆ ಸೂಟ್‌ ಆಗದಿದ್ದರೆ? ಆದ್ದರಿಂದ ಮೊದಲೇ ಟ್ರಯಲ್ ಮಾಡಿ.

 ಮೇಕಪ್‌:

ಮೇಕಪ್‌:

ಸ್ವೆಟ್‌ ಫ್ರೀ ಅಂಡ್ ಲಾಂಗ್‌ ಲಾಸ್ಟಿಂಗ್‌ ಮೇಕಪ್‌ ಖರೀದಿಸಿ. ಆ ದಿನ ಕ್ಯಾಮರಾ, ವೀಡಿಯೋ ಲೈಟ್, ಮಂಟಪದ ಲೈಟ್ ಜೊತೆಗೆ ಮದುವೆ ಕಾಸ್ಟ್ಯೂಮ್‌ ಇವುಗಳಿಂದ ತುಂಬಾ ಸೆಕೆ ಅನಿಸುವುದು. ಆದ್ದರಿಂದ ಬೆವರಿದಾಗ ಹಾಳಾಗುವ ಮೇಕಪ್‌ ಬಳಸಬೇಡಿ.

ಆಹಾರಕ್ರಮ:

ಇನ್ನು ನಿಮ್ಮ ಆಹಾರಕ್ರಮದ ಕಡೆ ತುಂಬಾನೇ ಗಮನ ನೀಡಬೇಕು. ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ನಾನ್‌ವೆಜ್‌, ಕರಿದ ಪದಾರ್ಥಗಳು, ಕೇಕ್ಸ್‌, ಸ್ವೀಟ್ಸ್‌ಗಳಿಂ ದೂರವಿರಿ ಅಥವಾ ಮಿತಿಯಲ್ಲಿ ಸೇವಿಸಿ.

English summary

Expert Tips Every Bride Should Follow For Glowing Skin in Summer in Kannada

Expert Tips Every Bride Should Follow For Glowing Skin in Summer in Kannada,read on...
Story first published: Wednesday, April 27, 2022, 12:24 [IST]
X
Desktop Bottom Promotion