For Quick Alerts
ALLOW NOTIFICATIONS  
For Daily Alerts

ಈ ಸಾರಭೂತ ತೈಲಗಳಿಂದ ಫೇಸ್ ಮಸಾಜ್ ಮಾಡಿದರೆ, ಮುಖ ಮತ್ತು ಮನಸ್ಸು ಎರಡಕ್ಕೂ ಒಳ್ಳೆಯದು

|

ವ್ಯಕ್ತಿಯ ಆರೋಗ್ಯ ಅಥವಾ ಮನಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಸಾರಭೂತ ತೈಲಗಳನ್ನು ಸುಮಾರು 6,000 ವರ್ಷಗಳಿಂದ ಬಳಸಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಅರೋಮಾಥೆರಪಿ ಕೂಡ ಒಂದು ಉದಾಹರಣೆ ಆಗಿದೆ. ಈ ಸಾರಭೂತ ತೈಲಗಳನ್ನ ಪ್ರಜ್ಞಾಪೂರ್ವಕವಾಗಿ ಬಳಸುವುದರಿಂದ ನಿಮ್ಮ ಮನಸ್ಸು, ದೇಹ ಮತ್ತು ಚರ್ಮಕ್ಕೆ ಉತ್ತಮ ಲಾಭವಿದೆ. ಆದ್ದರಿಂದ ನಾವಿಲ್ಲಿ ನಿಮ್ಮ ದೈನಂದಿನ ಜೀವನದಲ್ಲಿ ಬಳಸಬಹುದಾದ ಕೆಲವು ಫೇಶಿಯಲ್ ಸಾರಭೂತ ತೈಲಗಳ ಬಗ್ಗೆ ಹೇಳಿದ್ದೇವೆ.

ಮಲ್ಲಿಗೆ ಸಾರಭೂತ ತೈಲ:

ಮಲ್ಲಿಗೆ ಸಾರಭೂತ ತೈಲ:

ಜಾಸ್ಮಿನ್ ಎಸೆನ್ಷಿಯಲ್ ಆಯಿಲ್ ಜನಪ್ರಿಯ ಹೂವಿನ ಆರೊಮ್ಯಾಟಿಕ್ ಎಣ್ಣೆಯಾಗಿದ್ದು, ಇದು ಫ್ರೆಶ್ ಮತ್ತು ಶಾಂತಿಯುತ ಆಲೋಚನೆಗಳನ್ನು ನೀಡುತ್ತದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುತ್ತದೆ ಮತ್ತು ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮದ ಶುಷ್ಕತೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.

ಈ ಎಣ್ಣೆಯನ್ನು ಮುಖದ ಮಸಾಜ್‌ಗೆ ಬಳಸಬಹುದು. ಬಾದಾಮಿ ಎಣ್ಣೆಯೊಂದಿಗೆ 2 ಹನಿ ಮಲ್ಲಿಗೆ ಸಾರಭೂತ ತೈಲವನ್ನು ಸೇರಿಸಿ, ನಿಮ್ಮ ಮುಖದ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ಮಸಾಜ್ ಮಾಡಿದ ನಂತರ, ಎಣ್ಣೆ ಚೆನ್ನಾಗಿ ಹಿರಿಕೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ನಿಮ್ಮ ಮುಖದ ಮೇಲೆ ಬಿಸಿ ಟವೆಲ್ ಇರಿಸಿ. ಇದು ನಿಮ್ಮ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸೆನ್ಸಿಟಿವ್ ಸ್ಕಿನ್ ಆಯಿಲ್ :

ಸೆನ್ಸಿಟಿವ್ ಸ್ಕಿನ್ ಆಯಿಲ್ :

ಪ್ರತಿ ಚರ್ಮದ ಪ್ರಕಾರಕ್ಕೂ ವಿಶೇಷವಾದ ಎಣ್ಣೆ ಅಗತ್ಯವಿರುತ್ತದೆ ಮತ್ತು ಅದು ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ. ಫೇಶಿಯಲ್ ಆಯಿಲ್ ಬಳಸಬೇಕಾದ ಒಂದು ಚರ್ಮದ ಪ್ರಕಾರವೆಂದರೆ ಸೂಕ್ಷ್ಮ ಚರ್ಮ ಅಥವಾ ಸೆನ್ಸಿಟಿವ್ ಸ್ಕಿನ್. ಲ್ಯಾವೆಂಡರ್ ಎಣ್ಣೆ, ಕಿತ್ತಳೆ ಎಣ್ಣೆ ಮತ್ತು ಕ್ಯಾಮೊಮೈಲ್ ಎಣ್ಣೆಯ ಮಿಶ್ರಣದಿಂದ ತಯಾರಿಸಿದ ಈ ಸೆನ್ಸಿಟಿವ್ ಸ್ಕಿನ್ ಎಣ್ಣೆಯನ್ನು ಬಳಸಿ. ಲ್ಯಾವೆಂಡರ್ ಚರ್ಮದ ಉರಿಯೂತಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡಿದರೆ, ಕ್ಯಾಮೊಮೈಲ್ ವಿಶ್ರಾಂತಿ ನೀಡುತ್ತದೆ ಜೊತೆಗೆ ಕಿತ್ತಳೆ ಎಣ್ಣೆ ಹೊಳಪನ್ನು ನೀಡುತ್ತದೆ. ಈ ಮಿಶ್ರಣದ ಎಣ್ಣೆಯ 4-5 ಹನಿಗಳನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಸ್ವಚ್ಛವಾದ ಮುಖ ಮತ್ತು ಕುತ್ತಿಗೆಗೆ ಹಚ್ಚಿ.

ಗುಲಾಬಿ ಎಸೆನ್ಷಿಯಲ್ ಆಯಿಲ್:

ಗುಲಾಬಿ ಎಸೆನ್ಷಿಯಲ್ ಆಯಿಲ್:

ಗುಲಾಬಿ ಸಾರಭೂತ ತೈಲವನ್ನು ತೈಲಗಳ ರಾಣಿ ಎಂದು ಕರೆಯಲಾಗುತ್ತದೆ. ಇದು ಉರಿಯೂತದ, ತಂಪಾಗಿಸುವ ಮತ್ತು ಹಿತವಾದ ಗುಣಗಳನ್ನು ಹೊಂದಿದೆ. ಇದನ್ನು ಟೋನರ್‌ ಆಗಿ ಬಳಸಲಾಗುತ್ತದೆ. ಶುಷ್ಕ ಮತ್ತು ನಿರ್ಜಲೀಕರಣಗೊಂಡ ಚರ್ಮಕ್ಕೆ ಮರು ಜೀವ ನೀಡುತ್ತದೆ. ಜೊತೆಗೆ ಒತ್ತಡವನ್ನು ನಿವಾರಿಸಿ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ಸ್ಪ್ರೇ ಬಾಟಲಿಯಲ್ಲಿ, ಗುಲಾಬಿ ಸಾರಭೂತ ಎಣ್ಣೆಯ 3-4 ಹನಿಗಳನ್ನು ನೀರಿನಿಂದ ದುರ್ಬಲಗೊಳಿಸಿ ಟೋನರ್ ಅಥವಾ ಮುಖದ ಮೇಲೆ ಸ್ಪ್ರೇ ಮಾಡಿ. ಇದು ದಿನವಿಡೀ ತಾಜಾತನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಜೆರೇನಿಯಂ ಎಸೆನ್ಷಿಯಲ್ ಆಯಿಲ್:

ಜೆರೇನಿಯಂ ಎಸೆನ್ಷಿಯಲ್ ಆಯಿಲ್:

ಈ ಸಾರಭೂತ ತೈಲವು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಮತ್ತು ಚರ್ಮದ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಡ್ರೈ ಸ್ಕಿನ್ ನ್ನು ಪುನರ್ಯೌವನಗೊಳಿಸಲು ಜೆರೇನಿಯಂ ಸಾರಭೂತ ತೈಲ ಅತ್ಯುತ್ತಮವಾಗಿದೆ.

1 ಚಮಚ ಹಾಲಿನ ಪುಡಿಯನ್ನು 1 ಚಮಚ ಪಪ್ಪಾಯಿ ತಿರುಳಿನ ಪುಡಿಯೊಂದಿಗೆ,1 ಚಮಚ ಜೇನುತುಪ್ಪ ಮತ್ತು 2 ಹನಿ ಜೆರೇನಿಯಂ ಸಾರಭೂತ ಎಣ್ಣೆಯೊಂದಿಗೆ ಬೆರೆಸಿ ಮುಖದ ಪ್ಯಾಕ್‌ ಆಗಿ ಬಳಸಿ. ಈ ಎಣ್ಣೆಯು ವಿಶೇಷವಾಗಿ ಒಣ ಚರ್ಮ ಹೊಂದಿರುವವರಿಗೆ ಉತ್ತಮವಾದ ಮಾಯಿಶ್ಚರೈಸರ್ ಆಗಿದೆ.

ಅದಕ್ಕಾಗಿ ನೀವು 3 ಹನಿ ಶ್ರೀಗಂಧದ ಎಣ್ಣೆಯನ್ನು 1 ಡ್ರಾಪ್ ಜೆರೇನಿಯಂ ಎಣ್ಣೆ, 1 ಚಮಚ ಬಾದಾಮಿ ಎಣ್ಣೆ ಮತ್ತು 1 ಟೀಸ್ಪೂನ್ ಹರಳೆಣ್ಣೆ ಯೊಂದಿಗೆ ಮಿಶ್ರಣ ಮಾಡಿ. ಇದನ್ನು ಮುಖದ ಮೇಲೆ ಹಚ್ಚಿ ಮತ್ತು ಮಸಾಜ್ ಮಾಡಿ.

ಶ್ರೀಗಂಧದ ಸಾರಭೂತ ತೈಲ:

ಶ್ರೀಗಂಧದ ಸಾರಭೂತ ತೈಲ:

ಶ್ರೀಗಂಧದ ಸಾರಭೂತ ತೈಲವನ್ನು ಧೂಪ, ಸೌಂದರ್ಯವರ್ಧಕಗಳು, ಸಾಬೂನುಗಳು ಮತ್ತು ಸುಗಂಧ ದ್ರವ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಉರಿಯೂತದ, ಆಂಟಿಮೈಕ್ರೊಬಿಯಲ್ ಗುಣಗಳಿಂದ ಸಮೃದ್ಧವಾಗಿದೆ. ಆದ್ದರಿಂದ, ಇದು ಮೊಡವೆ ಮತ್ತು ಎಸ್ಜಿಮಾ, ಸೋರಿಯಾಸಿಸ್ ಮುಂತಾದ ಚರ್ಮದ ಸಮಸ್ಯೆಗಳಿಗೆ ಉತ್ತಮ. ಇದು ಚರ್ಮದಲ್ಲಿ ಮೆಲನಿನ್ ಉತ್ಪಾದನೆಯನ್ನು ವೇಗವಾಗಿಸುತ್ತದೆ.

ಈ ಎಣ್ಣೆಯನ್ನು ಡ್ರೈ ಸ್ಕಿನ್ ಇರುವವರು ಮಸಾಜ್‌ಗಳಿಗೆ ಬಳಸಬಹುದು. ಒಣ ಚರ್ಮಕ್ಕಾಗಿ ಎಕ್ಸ್‌ಫೋಲಿಯೇಟರ್ ತಯಾರಿಸಲು, 1 ದೊಡ್ಡ ಪಿಂಚ್ ಓಟ್‌ಮೀಲ್ ಅನ್ನು 1 ಚಮಚ ತಾಜಾ ಕೆನೆ, 1 ಪುಡಿಮಾಡಿದ ಬಾದಾಮಿ ಮತ್ತು 2 ಹನಿ ಶ್ರೀಗಂಧದ ಎಣ್ಣೆಯೊಂದಿಗೆ ಬೆರೆಸಿ, ಒದ್ದೆಯಾದ ಮುಖದ ಮೇಲೆ ಪ್ಯಾಕ್ ರೀತಿ ಹಚ್ಚಿ. ಎಣ್ಣೆಯ ಗುಣಲಕ್ಷಣಗಳು ನಿಮ್ಮ ಚರ್ಮವನ್ನು ಶುದ್ಧೀಕರಿಸುವುದಲ್ಲದೆ ನಿಮ್ಮ ನರಗಳನ್ನು ಶಾಂತಗೊಳಿಸುತ್ತದೆ.

English summary

Essential oils that your skin absolutely needs in Kannada

Essential oils that your skin absolutely needs in Kannada
Story first published: Tuesday, May 25, 2021, 18:23 [IST]
X
Desktop Bottom Promotion