For Quick Alerts
ALLOW NOTIFICATIONS  
For Daily Alerts

ಈ ಆಹಾರಗಳನ್ನು ತಿನ್ನುತ್ತಿದ್ದರೆ ಬೇಗನೆ ವಯಸ್ಸಾದಂತೆ ಕಾಣುವಿರಿ

|

ನಾವು ಏನು ತಿನ್ನುತ್ತೇವೋ ಅದು ನಮ್ಮ ಆರೋಗ್ಯ ಹಾಗೂ ಸೌಂದರ್ಯದ ಮೇಲೆ ಪರಿಣಾಮ ಬೀರುವುದು. ನಾವು ಆರೋಗ್ಯಕರ ಆಹಾರ ತಿನ್ನುತ್ತಿದ್ದರೆ ಆರೊಗ್ಯವೂ ಚೆನ್ನಾಗಿರುತ್ತದೆ, ನಮ್ಮ ತ್ವಚೆಯೂ ಸುಂದರವಾಗಿರುವುದು, ಅದೇ ಆಹಾರ ಅಭ್ಯಾಸ, ಲೈಫ್‌ಸ್ಟೈಲ್‌ ಚೆನ್ನಾಗಿ ಇಲ್ಲದಿದ್ದರೆ ಅದರ ನೇರ ಪರಿಣಾಮ ಶರೀರದ ಮೇಲೆ ಬೀರುವುದು.

Eating This Type Of Foods Make You Look Old faster

ಸಂಸ್ಕರಿಸದ ಆಹಾರಗಳಾದ ಚಿಪ್ಸ್, ಕ್ಯಾಂಡಿ, ಕಪ್‌ಕೇಕ್ ಮುಂತಾದ ಆಹಾರಗಳು ತಿನ್ನಲು ಖುಷಿ ಕೊಡುತ್ತದೆ, ಆದರೆ ಅವುಗಳು ನಮ್ಮ ಸೌಂದರ್ಯ ಹಾಳು ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುವುದು ಗೊತ್ತೇ?

ತುಂಬಾ ಸಂಸ್ಕರಿಸಿದ ಆಹಾರಗಳು
ಇಂಥ ಆಹಾರಗಳಲ್ಲಿ ಎಣ್ಣೆ, ಕೊಬ್ಬಿನಂಶ, ಸ್ಟ್ರಾಚ್ ಇವುಗಳು ಬಿಟ್ಟರೆ ಯಾವುದೇ ಪೋಷಕಾಂಶಗಳು ಇರುವುದಿಲ್ಲ. ಇವುಗಳಲ್ಲಿ ಕೃತಕ ಸಿಹಿ ಸೇರಿಸಲಾಗಿರುತ್ತದೆ. ಇವುಗಳನ್ನು ತುಂಬಾ ಸಮಯ ಇಡುವ ಸಲುವಾಗಿ ಪ್ರಿಸರ್‌ವೇಟಿವ್ ಬಳಸಿರುತ್ತಾರೆ. ಆದ್ದರಿಂದ ಇಂಥ ಆಹಾರಗಳು ಆರೋಗ್ಯಕ್ಕೆ ಎಂದಿಗೂ ಒಳ್ಳೆಯದಲ್ಲ.

1. ಅಧಿಕ ಸಕ್ಕರೆಯಂಶವಿರುವ ಆಹಾರ

1. ಅಧಿಕ ಸಕ್ಕರೆಯಂಶವಿರುವ ಆಹಾರ

ಅಧಿಕ ಸಿಹಿ ಇರುವ ಆಹಾರ ತಿನ್ನುವುದರಿಂದ ತೂಕ ಹೆಚ್ಚಾಗುವುದು ಅಲ್ಲದೆ ತ್ವಚೆ ಜೋತು ಬೀಳುವಂತೆ ಮಾಡುವುದು. ಇದರಿಂದಾಗಿ ನಮ್ಮ ನಿಜವಾದ ವಯಸ್ಸಿಗಿಂತ ಅಧಿಕ ವಯಸ್ಸಿನವರಂತೆ ಕಾಣುವುದು.

2. ಟ್ರಾನ್ಸ್‌ಫ್ಯಾಟ್‌ ಹಾಗೂ ಕರಿದ ಆಹಾರ

2. ಟ್ರಾನ್ಸ್‌ಫ್ಯಾಟ್‌ ಹಾಗೂ ಕರಿದ ಆಹಾರ

ಟ್ರಾನ್ಸ್‌ಫ್ಯಾಟ್‌ ಹಾಗೂ ಎಣ್ಣೆಯಲ್ಲಿ ಕರಿದ ಆಹಾರಗಳು ಇದು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ, ಅಲ್ಲದೆ ನರಗಳಲ್ಲಿ ರಕ್ತ ಸಂಚಾರಕ್ಕೂ ತೊಂದರೆ ಉಂಟಾಗುವುದು, ತ್ವಚೆಗೆ ಸರಿಯಾಗಿ ರಕ್ತ ಪೂರೈಕೆಯಾಗದೇ ಇದ್ದಾಗ ತ್ವಚೆ ಹೊಳಪು ಕಡಿಮೆಯಾಗುವುದು.

3. ಮದ್ಯಪಾನ

3. ಮದ್ಯಪಾನ

ದಿನಾ ಸ್ವಲ್ಪ ವೈನ್‌ ತೆಗೆದುಕೊಳ್ಳುವುದರಿಂದ ತ್ವಚೆಗೆ ತುಂಬಾನೇ ಒಳ್ಳೆಯದು, ಅದೇ ಅತಿಯಾದ ಮದ್ಯ ಸೇವನೆ ಮಾಡುವುದರಿಂದ ದೇಹದಲ್ಲಿ ಕಶ್ಮಲಗಳು ಹೆಚ್ಚಾಗಿ ಲಿವರ್‌ನ ಆರೋಗ್ಯ ಹಾಳು ಮಾಡುತ್ತದೆ, ಇದರಿಂದ ತ್ವಚೆಗೂ ಹಾನಿಯುಂಟಾಗುವುದು, ಬೇಗನೆ ಮುಖದ ಮೇಲೆ ನೆರಿಗೆಗಳು ಬೀಳುವುದು.

4. ಕಡಿಮೆ ಪ್ರಮಾಣದಲ್ಲಿ ಒಳ್ಳೆಯ ಕೊಬ್ಬಿನಂಶವಿರುವ ಆಹಾರಗಳ ಸೇವನೆ

4. ಕಡಿಮೆ ಪ್ರಮಾಣದಲ್ಲಿ ಒಳ್ಳೆಯ ಕೊಬ್ಬಿನಂಶವಿರುವ ಆಹಾರಗಳ ಸೇವನೆ

ಜಂಕ್‌ಫುಡ್‌ಗಳಲ್ಲಿ ಒಳ್ಳೆಯ ಕೊಬ್ಬಿನಂಶವಿರುವುದಿಲ್ಲ, ಇದು ಆರೋಗ್ಯ ಹಾಗೂ ತ್ವಚೆ ಸೌಂದರ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಸ್ನಾಕ್ಸ್‌ಗೆ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಬದಲಿಗೆ ನಟ್ಸ್, ಒಮೆಗಾ 3 ಕೊಬ್ಬಿನಂಶವಿರುವ ಆಹಾರ, ತೆಂಗಿನೆಣ್ಣೆ ಇವುಗಳ ಸೇವನೆ ಮಾಡುವುದು ಒಳ್ಳೆಯದು.

5. ಉಪ್ಪಿನಂಶವಿರುವ ಆಹಾರ ದೇಹಲ್ಲಿ ನೀರಿನಂಶ ಕಡಿಮೆ ಮಾಡುತ್ತದೆ

5. ಉಪ್ಪಿನಂಶವಿರುವ ಆಹಾರ ದೇಹಲ್ಲಿ ನೀರಿನಂಶ ಕಡಿಮೆ ಮಾಡುತ್ತದೆ

ಚೀಸ್,ಪಿಜ್ಜಾ, ಚಿಪ್ಸ್ ಮುಂತಾದ ಪ್ಯಾಕೆಟ್‌ ಆಹಾರಗಳಲ್ಲಿ ಉಪ್ಪಿನಂಶ ಅಧಿಕವಿರುತ್ತದೆ. ಇಂಥ ಆಹಾರಗಳನ್ನು ತಿಂದಾಗ ದೇಹದಲ್ಲಿ ಉಪ್ಪಿನಂಶ ಹೆಚ್ಚಾಗಿ ನೀರಿನಂಶ ಕಡಿಮೆಯಾಗುವುದು. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತ್ವಚೆ ಡ್ರೈಯಾಗುವುದು ಹಾಗೂ ಕಳೆಗುಂದುವುದು.

6. ಸಂಸ್ಕರಿಸಿದ ಮಾಂಸ

6. ಸಂಸ್ಕರಿಸಿದ ಮಾಂಸ

ಮಾರುಕಟ್ಟೆಗೆ ಹೆಚ್ಚಾಗಿ ಸಂಸ್ಕರಿಸಿದ ಹಾಗೂ ರೆಡಿ ಟು ಕುಕ್ ಮಾಂಸಗಳು ಬರುತ್ತವೆ. ಇವುಗಳನ್ನು ಹೆಚ್ಚಾಗಿ ಬಳಸುವುದರಿಂದ ಕೂಡ ತ್ವಚೆಗೆ ಹಾನಿಯುಂಟಾಗುವುದು. ಈ ಆಹಾರಗಳನ್ನು ತಿನ್ನುವುದರಿಂದ ವಿಟಮಿನ್ ಸಿ ಕಡಿಮೆಯಾಗುತ್ತದೆ, ಇದರಿಂದ ಕೊಲೆಜಿನ್ ಉತ್ಪತ್ತಿ ಸರಿಯಾದ ರೀತಿಯಲ್ಲಿ ಉಂಟಾಗುವುದಿಲ್ಲ. ಆದ್ದರಿಂದ ಸಂಸ್ಕರಿಸಿದ ಆಹಾರ ಮಿತಿಯಲ್ಲಿ ಬಳಸಿ.

 7. ಸುಟ್ಟ ಮಾಂಸ

7. ಸುಟ್ಟ ಮಾಂಸ

ಮಾಂಸವನ್ನು ಸುಟ್ಟು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಆದರೆ ಸುಟ್ಟ ಮಾಂಸದ ಮೇಲ್ಭಾಗದಲ್ಲಿರುವ ಕಪ್ಪು ಅಂಶ ತಿನ್ನುವುದು ಆರೋಗ್ಯಕ್ಕೆ ಹಾಗೂ ತ್ವಚೆಗೆ ಒಳ್ಳೆಯದಲ್ಲ. ಸುಟ್ಟ ಮಾಂಸದ ಮೇಲ್ಭಾಗದ ಕಪ್ಪು ಭಾಗವನ್ನು ತೆಗೆದು ತಿನ್ನುವುದರಿಂದ ತೊಂದರೆಯಿಲ್ಲ.

8. ಕಾಫಿ

8. ಕಾಫಿ

ದಿನದಲ್ಲಿ ಒಂದು ಅಥವಾ ಎರಡು ಲೋಟ ಕಾಫಿ ಸೇವನೆಯಾದರೆ ತೊಂದರೆಯಿಲ್ಲ. ಆದರೆ ಕೆಲವರಿಗೆ ಆಗಾಗ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಈ ರೀತಿ ಅಭ್ಯಾಸ ನಿಮ್ಮಲ್ಲಿ ಇದ್ದರೆ 30 ವರ್ಷ ತಲುಪುವಷ್ಟರಲ್ಲಿ ನಲ್ವತ್ತು ವರ್ಷದವರಂತೆ ಕಾಣುವಿರಿ. ಸೌಂದರ್ಯದ ಕಾಳಜಿ ನಿಮಗಿದ್ದರೆ ಈ ಅಭ್ಯಾಸಕ್ಕೆ ಕಡಿವಾಣ ಹಾಕಿ.

English summary

Eating This Type Of Foods Make You Look Old faster

Eating ultra-processed foods can taste to your tongue but actually expedite the aging of your cells.
X
Desktop Bottom Promotion