For Quick Alerts
ALLOW NOTIFICATIONS  
For Daily Alerts

ಈ ಹಣ್ಣು ತಿನ್ನುವುದರಿಂದ ಮೆನೋಪಾಸ್ ನಂತರವೂ ಮುಖದಲ್ಲಿ ಯೌವನದ ಕಳೆ ಮಾಸಲ್ಲ

|

ಋತುಬಂಧವು ಮಹಿಳೆಯರಲ್ಲಿ ಚರ್ಮದ ವಿವಿಧ ಸಮಸ್ಯೆಗಳಾದ ಚರ್ಮ ಒಣಗುವಿಕೆ, ಹಣೆಯ ರೇಖೆಗಳು ಮತ್ತು ಸುಕ್ಕುಗಳಿಗೆ ಕಾರಣವಾಗುತ್ತದೆ. ಅದಕ್ಕೆ ಕಾರಣವೆಂದರೆ ಋತುಬಂಧದಿಂದ ಉಂಟಾಗುವ ಕಾಲಜನ್ ಮಟ್ಟದ ಇಳಿಕೆ. ಕಾಲಜನ್ ಎಂಬುದು ಚರ್ಮಕ್ಕೆ ಅಗತ್ಯವಾಗಿದ್ದು, ಚರ್ಮಕ್ಕೆ ಅದರ ದೃಢತೆ, ಪೂರ್ಣತೆ ಮತ್ತು ರಚನೆಯನ್ನು ನೀಡುತ್ತದೆ.

ಋತುಬಂಧದ ಮೊದಲ ಐದು ವರ್ಷಗಳಲ್ಲಿ ಮಹಿಳೆಯರ ಚರ್ಮವು ಅದರ ಕಾಲಜನ್ ನ 30% ನಷ್ಟು ಕಳೆದುಕೊಳ್ಳುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಋತುಬಂಧಕ್ಕೊಳಗಾದಾಗ ಮುಖದ ಸುಕ್ಕುಗಳನ್ನು ಕಡಿಮೆ ಮಾಡುವ ಕೆಲವೊಂದು ವಿಚಾರಗಳಿವೆ. ಅವುಗಳಲ್ಲಿ ಮಾವಿನ ಹಣ್ಣಿನ ಸೇವನೆ ಕೂಡ ಒಂದು ಎಂದು ನ್ಯೂಟ್ರಿಯಂಟ್ಸ್ ಜರ್ನಲ್ನಲ್ಲಿ ಪ್ರಕಟವಾದ ಹೊಸ ಅಧ್ಯಯನ ಹೇಳುತ್ತದೆ. ಹಾಗಾದರೆ ಅದು ಹೇಗೆ? ಎಷ್ಟು ಪ್ರಮಾಣದ ಮಾವಿನ ಹಣ್ಣು ತಿನ್ನಬೇಕು ಎಂಬುದನ್ನು ಈ ಲೇಖನದಲ್ಲಿ ಹೇಳಿದ್ದೇವೆ.

ಈ ಹಣ್ಣು ತಿನ್ನುವುದರಿಂದ ಮೆನೋಪಾಸ್ ನಂತರವೂ ಮುಖದಲ್ಲಿ ಯೌವನದ ಕಳೆ ಮಾಸುವುದಿಲ್ಲ! ಆ ಹಣ್ಣು ಯಾವುದು ಗೊತ್ತಾ?

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಅಟಾಲ್ಫೊ ಮಾವಿನಹಣ್ಣಿನ ಸುಕ್ಕು ಕಡಿಮೆ ಮಾಡುವ ಲಕ್ಷಣವನ್ನು ಗುರುತಿಸಿದ್ದಾರೆ. ಇದನ್ನು ಜೇನುತುಪ್ಪ ಅಥವಾ ಷಾಂಪೇನ್ ಮಾವಿನಹಣ್ಣು ಎಂದೂ ಕರೆಯುತ್ತಾರೆ. ಋತುಬಂಧಕ್ಕೊಳಗಾದ ಮಹಿಳೆಯರು ವಾರಕ್ಕೆ ನಾಲ್ಕು ಬಾರಿ ಅರ್ಧ ಕಪ್ ಅಟಾಲ್ಫೊ ಮಾವಿನಹಣ್ಣನ್ನು ತಿನ್ನುತ್ತಿದ್ದರು, ಎರಡು ತಿಂಗಳ ನಂತರ ಅವರ ಸುಕ್ಕುಗಳಲ್ಲಿ ಶೇಕಡಾ 23 ರಷ್ಟು ಕಡಿಮೆಯಾಗಿದೆ ಮತ್ತು ನಾಲ್ಕು ತಿಂಗಳ ನಂತರ ಶೇಕಡಾ 20 ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನ ತೋರಿಸಿದೆ.

ಆದರೆ ಹೆಚ್ಚಿನ ಮಾವಿನ ಹಣ್ಣು ಸೇವನೆ ಹಾನಿ ಉಂಟು ಮಾಡಬಹುದು:

ಆದರೆ ಹೆಚ್ಚಿನ ಮಾವಿನ ಹಣ್ಣು ಸೇವನೆ ಹಾನಿ ಉಂಟು ಮಾಡಬಹುದು:

ಇದೇ ಅಧ್ಯಯನದಲ್ಲಿ ಹೆಚ್ಚು ಮಾವಿನ ಹಣ್ಣು ಸೇವನೆ ಚರ್ಮಕ್ಕೆ ಒಳ್ಳೆಯದಲ್ಲ ಎಂದು ತೋರಿಸಿದೆ. ಅದೇಗೆ ಅಂದರೆ ಒಂದು ಗುಂಪು ವಾರಕ್ಕೆ ನಾಲ್ಕು ಬಾರಿ ನಾಲ್ಕು ಕಪ್ ಮಾವಿನಹಣ್ಣನ್ನು ತಿಂದರೆ, ಇನ್ನೊಂದು ಗುಂಪು ಅದೇ ಅವಧಿಗೆ ಒಂದೂವರೆ ಕಪ್ ತಿನ್ನುತ್ತಿದ್ದರು. ಆಗ ಎರಡನೇ ಗುಂಪು ಸುಕ್ಕುಗಳ ಹೆಚ್ಚಳವನ್ನು ಕಂಡಿದ್ದಾರೆ. ಮಾವಿನಹಣ್ಣು ಹೆಚ್ಚು ಸೇವಿಸುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಇದು ತೋರಿಸುತ್ತದೆ. ಆದಾಗ್ಯೂ, ಹೆಚ್ಚು ಮಾವನ್ನು ಸೇವಿಸುವುದರಿಂದ ಸುಕ್ಕುಗಳು ಏಕೆ ಹೆಚ್ಚಾಗುತ್ತದೆ ಎಂದು ಸಂಶೋಧಕರಿಗೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಮಾವಿನಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುವುದು ಇದಕ್ಕೆ ಕಾರಣ ಎಂದು ಸಂಶೋಧಕರು ನಂಬುತ್ತಾರೆ.

ಮಾವಿನ ಹಣ್ಣು ಸೇವನೆಯಿಂದ ಚರ್ಮಕ್ಕೆ ಸಿಗುವ ಪ್ರಯೋಜನಗಳು:

ಮಾವಿನ ಹಣ್ಣು ಸೇವನೆಯಿಂದ ಚರ್ಮಕ್ಕೆ ಸಿಗುವ ಪ್ರಯೋಜನಗಳು:

ಮಾವು ವಿಟಮಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು ಅದು ನಿಮ್ಮ ಚರ್ಮ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದ್ದು ಅದು ನಿಮ್ಮ ದೇಹದ ನೈಸರ್ಗಿಕ ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುತ್ತದೆ. ಮಾವಿನಹಣ್ಣಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಸೂರ್ಯನ ಹಾನಿ ಮತ್ತು ಅಕಾಲಿಕ ವಯಸ್ಸನ್ನು ತಡೆಯಬಹುದು.

ಮಾವಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಅನ್ನು ಹೊಂದಿರುತ್ತದೆ, ಇದು ನಿಮ್ಮ ಚರ್ಮದ ಆರೋಗ್ಯಕ್ಕೆ ಅಗತ್ಯವಾದ ಮತ್ತೊಂದು ಪೋಷಕಾಂಶವಾಗಿದೆ. ವಿಟಮಿನ್ ಎ ಕೊರತೆಯು ಕೆರಾಟಿನ್ ಎಂಬ ಪ್ರೋಟೀನ್‌ನ ಹೆಚ್ಚಿದ ಉತ್ಪಾದನೆಗೆ ಸಂಬಂಧಿಸಿದೆ, ಇದು ಮೊಡವೆಗಳಿಗೆ ಕಾರಣವಾಗಬಹುದು.

ಸುಕ್ಕುಗಳನ್ನು ಕಡಿಮೆ ಮಾಡಲು ಇನ್ನೇನು ಮಾಡಬಹುದು?:

ಸುಕ್ಕುಗಳನ್ನು ಕಡಿಮೆ ಮಾಡಲು ಇನ್ನೇನು ಮಾಡಬಹುದು?:

ಚರ್ಮದ ಮೇಲೆ ಋತುಬಂಧದ ಪರಿಣಾಮಗಳನ್ನು ಕಡಿಮೆ ಮಾಡಲು ನಾವು ಮುಂಚಿತವಾಗಿ ಕಾರ್ಯನಿರ್ವಹಿಸಬೇಕು. ನಿಮ್ಮ ಚರ್ಮವನ್ನು ಹೈಡ್ರೀಕರಿಸಿದಂತೆ ಮತ್ತು ಯೌವನತೆಯಿಂದ ಕಾಣಲು ನೀವು ಮೂವತ್ತೆನೆಯ ವಯಸ್ಸಿನಿಂದಲೇ ಕಟ್ಟುನಿಟ್ಟಿನ ದಿನಚರಿಯನ್ನು ಪಾಲಿಸಬೇಕು. ಅವುಗಳಾವುವು ಎಂಬುದನ್ನ ಈ ಕೆಳಗೆ ನೀಡಲಾಗಿದೆ.

ಆರೋಗ್ಯಕರ ಆಹಾರ ಸೇವನೆ:

ಆರೋಗ್ಯಕರ ಆಹಾರ ಸೇವನೆ:

ನಿಮ್ಮ ಆಹಾರದಲ್ಲಿ ಹೆಚ್ಚು ಉತ್ಕರ್ಷಣ ನಿರೋಧಕ ಮತ್ತು ನೀರು ಭರಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಆ್ಯಂಟಿಆಕ್ಸಿಡೆಂಟ್ಗಳು ಕಾಲಜನ್ ನ ಸ್ಥಗಿತ ಮತ್ತು ದುರ್ಬಲಗೊಳ್ಳುವಿಕೆಯ ವಿರುದ್ಧ ಹೋರಾಡಬಲ್ಲವು. ತೋಫು ತಿನ್ನುವುದು ಈಸ್ಟ್ರೊಜೆನ್ ಮಟ್ಟವನ್ನು ಸಾಮಾನ್ಯಗೊಳಿಸಲು ಮತ್ತು ಋತುಬಂಧದ ನಂತರದ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ನೆನೆಸಿದ ಸೋಯಾಬೀನ್ ನಿಂದ ಉತ್ಪತ್ತಿಯಾಗುವ ತೋಫು, ನಮ್ಮ ದೇಹದಲ್ಲಿ ಈಸ್ಟ್ರೊಜೆನ್ ನಂತೆ ವರ್ತಿಸುವ 'ಐಸೊಫ್ಲಾವೊನ್ಸ್' ಎಂದು ಕರೆಯಲ್ಪಡುವ ಸಸ್ಯ-ಯುಕ್ತ ಸಂಯುಕ್ತಗಳನ್ನು ಹೊಂದಿರುತ್ತದೆ. ಜೊತೆಗೆ ಇದರಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಚರ್ಮದ ಸಮಸ್ಯೆಗಳು ಸೇರಿದಂತೆ ಋತುಬಂಧದ ಲಕ್ಷಣಗಳನ್ನು ತಡೆಯಲು ಪ್ರೈಮ್ರೋಸ್ ಎಣ್ಣೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಕಾಲಜನ್ ಅನ್ನು ನಾಶಪಡಿಸುವ ಚಟುವಟಿಕೆಗಳನ್ನು ತಪ್ಪಿಸಿ:

ಕಾಲಜನ್ ಅನ್ನು ನಾಶಪಡಿಸುವ ಚಟುವಟಿಕೆಗಳನ್ನು ತಪ್ಪಿಸಿ:

ಧೂಮಪಾನ, ಒತ್ತಡ ಮತ್ತು ಕಡಿಮೆ ನೀರು ಸೇವನೆ ಇವು ಕಾಲಜನ್ ಮಟ್ಟವನ್ನು ಕಡಿಮೆ ಮಾಡುವ ಅಥವಾ ಚರ್ಮದ ಕಾಲಜನ್ ಫೈಬರ್ ಅನ್ನು ನಾಶಪಡಿಸುವ ಕೆಲವು ಅಂಶಗಳಾಗಿವೆ. ಅಕಾಲಿಕ ಚರ್ಮದ ವಯಸ್ಸಾಗುವುದನ್ನು ತಡೆಯಲು ನೀವು ಈ ತಪ್ಪುಗಳನ್ನು ಮಾಡಬೇಡಿ. ನಿಮ್ಮ ದೇಹ ಮತ್ತು ಚರ್ಮದಿಂದ ವಿಷ ಹೊರಹಾಕಲು ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಕುಡಿಯಿರಿ.

ಪ್ರತಿದಿನ ಕನಿಷ್ಠ ಎಸ್‌ಪಿಎಫ್ 30 ಇರುವ ಸನ್‌ಸ್ಕ್ರೀನ್ ಧರಿಸಿ:

ಪ್ರತಿದಿನ ಕನಿಷ್ಠ ಎಸ್‌ಪಿಎಫ್ 30 ಇರುವ ಸನ್‌ಸ್ಕ್ರೀನ್ ಧರಿಸಿ:

ಚಳಿಗಾಲ ಅಥವಾ ಬೇಸಿಗೆ, ಒಳಗೆ ಅಥವಾ ಹೊರಗೆ ನೀವು ಪ್ರತಿದಿನ ಸನ್‌ಸ್ಕ್ರೀನ್ ಧರಿಸುವುದು ಮುಖ್ಯ. ಕನಿಷ್ಠ ಎಸ್‌ಪಿಎಫ್ 30 ಹೊಂದಿರುವ ಸನ್‌ಸ್ಕ್ರೀನ್ ನಿಮ್ಮ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಹೊಸ ಸುಕ್ಕುಗಳು ರೂಪುಗೊಳ್ಳದಂತೆ ತಡೆಯಲು ಸಹಾಯ ಮಾಡುತ್ತದೆ.

ಹೈಡ್ರೇಟಿಂಗ್ ಕ್ಲೆನ್ಸರ್ ಬಳಸಿ:

ಚರ್ಮದ ರಕ್ಷಣೆಯ ದಿನಚರಿಯಲ್ಲಿ ಶುದ್ಧೀಕರಣವು ಒಂದು ಪ್ರಮುಖ ಭಾಗವಾಗಿದೆ. ಋತುಬಂಧಕ್ಕೊಳಗಾದ ಮಹಿಳೆಯರಿಗೆ ಹೈಡ್ರೇಟಿಂಗ್ ಕ್ಲೆನ್ಸರ್ ಅನ್ನು ಬಳಸಲು ಸೂಚಿಸಲಾಗುತ್ತದೆ, ಅದು ತೇವಾಂಶವನ್ನು ದೂರವಿಡುವುದಿಲ್ಲ, ಏಕೆಂದರೆ ಶುಷ್ಕ ಚರ್ಮವು ಋತುಬಂಧದ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ನಿಮ್ಮ ಮುಖವನ್ನು ತೊಳೆದ ನಂತರ, ನೀರಿನಾಂಶ ಹೆಚ್ಚಿಸಲು ಉತ್ತಮ ಮಾಯಿಶ್ಚರೈಸರ್ ಅನ್ನು ಅನ್ವಯಿಸಿ. ಕಾಲಜನ್ ಮಾಸ್ಕನ್ನು ವಾರಕ್ಕೆ ಎರಡು ಮೂರು ಬಾರಿ ಅನ್ವಯಿಸುವುದರಿಂದ ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ನಿಮ್ಮ ಮೈಬಣ್ಣವನ್ನು ಬೆಳಗಿಸಲು ಸಹಾಯ ಮಾಡುತ್ತದೆ.

English summary

Eating Mangoes May Help Reduce Facial Wrinkles In Postmenopausal Women

Here we talking about Eating Mangoes May Help Reduce Facial Wrinkles In Postmenopausal Women, read on
X