For Quick Alerts
ALLOW NOTIFICATIONS  
For Daily Alerts

ಮೊಡವೆಗೆ ಚಿಕಿತ್ಸೆ ಪಡೆಯುತ್ತಿದ್ದರೆ ಇವುಗಳು ತಿಳಿದಿರಲಿ

|

ಎಣ್ಣೆ ತ್ವಚೆ ಇರುವವರಿಗೆ ಹದಿಹರೆಯ ಹಾಗೂ ಯೌವನ ಪ್ರಾಯದಲ್ಲಿ ಕಾಡುವ ದೊಡ್ಡ ತ್ವಚೆ ಸಮಸ್ಯೆಯೆಂದರೆ ಮೊಡವೆ. ಎಣ್ಣೆಯಂಶ, ಡೆಡ್‌ಸ್ಕಿನ್‌ ಅಥವಾ ಬ್ಯಾಕ್ಟಿರಿಯಾ ಈ ಅಂಶಗಳು ತ್ವಚೆ ರಂಧ್ರವನ್ನು ಮುಚ್ಚಿದಾಗ ಮೊಡವೆ ಉಂಟಾಗಿ ನೋವು, ತುರಿಕೆ, ಉರಿಯೂತ ಕಂಡು ಬರುವುದು.

ಕೆಲವರಲ್ಲಿ ಮೊಡವೆ ಬಂದು ಹಾಗೇ ಹೋದರೆ ಇನ್ನು ಕೆಲವರಲ್ಲಿ ದೊಡ್ಡ ಸಮಸ್ಯೆಯನ್ನೇ ಉಂಟು ಮಾಡುತ್ತದೆ. ಅವರ ಮುಖದ ಅಂದವನ್ನೇ ಕೆಡಿಸುವಷ್ಟು ಮೊಡವೆ ಬಂದಿರುತ್ತದೆ. ಏನು ಮಾಡಿದರೂ ಕಡಿಮೆಯಾಗುವುದಿಲ್ಲ. ಕೆಲವರಲ್ಲಿ ಮೊಡವೆ ಹೆಚ್ಚಾಗಿ ಮುಖದಲ್ಲಿ ರಂಧ್ರಗಳು, ಕಲೆಗಳು ಉಂಟಾಗಿ ಅವರ ಆತ್ಮವಿಶ್ವಾಸವನ್ನೇ ಕುಗ್ಗಿಸಬಹುದು. ಮೊಡವೆ ಬಂದಾಗ ಬೇಗನೆ ಚಿಕಿತ್ಸೆ ಪಡೆದರೆ ಅದರಿಂದ ಮುಖದ ಅಂದ ಹಾಳಾಗುವುದನ್ನು ತಡೆಗಟ್ಟಬಹುದು. ಮೊಡವೆ ಸ್ವಲ್ಪ ಬರುವುದಾದರೆ ತೊಂದರೆಯಿಲ್ಲ, ಆದರೆ ತುಂಬಾ ಬರುವುದಾದರೆ ಮಾತ್ರ ಚಿಕಿತ್ಸೆ ಪಡೆದರೆ ಒಳ್ಳೆಯದು.

ಮೊಡವೆಗೆ ಚಿಕಿತ್ಸೆ ಪಡೆಯುವಾಗ ತ್ವಚೆ ಆರೈಕೆ ವಿಷಯದಲ್ಲಿ ತುಂಬಾನೇ ಎಚ್ಚರವಹಿಸಬೇಕಾಗುತ್ತದೆ. ಮೊಡವೆ ಚಿಕಿತ್ಸೆ ಪಡೆಯುವವರು ಏನು ಮಾಡಬಾರದು, ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಮೊಡವೆಗೆ ಚಿಕಿತ್ಸೆ ಪಡೆಯುವಾಗ ಏನು ಮಾಡಬೇಕು?

ಮೊಡವೆಗೆ ಚಿಕಿತ್ಸೆ ಪಡೆಯುವಾಗ ಏನು ಮಾಡಬೇಕು?

* ವಾಟರ್ ಬೇಸ್ಡ್ ಮಾಯಿಶ್ಚರೈಸರ್ ಬಳಸಬೇಕು.

* ಆ್ಯಂಟಿಆಕ್ಸಿಡೆಂಟ್ ಇರುವ ನೈಟ್‌ ಕ್ರೀಮ್ ಬಳಸಿ

* ಕಲೆ ಹೋಗಲಾಡಿಸುವ ಕ್ರೀಮ್ ಬಳಸಿ.

* ಫೇಸ್‌ವಾಶ್‌ ಮೈಲ್ಡ್‌ ಆಗಿರಲಿ.

* ತಲೆಬುಡವನ್ನು ಸ್ವಚ್ಛವಾಗಿಡಿ

* ಚರ್ಮರೋಗ ತಜ್ಞರ ಬಳಿ ನಿಯಮಿತ ಚಿಕಿತ್ಸೆ ಮಾಡಿಸಿ.

* ಬಿಸಿಲಿನಲ್ಲಿ ಹೋಗುವಾಗ ಸನ್‌ಸ್ಕ್ರೀನ್‌ ಲೋಷನ್‌ ಬಳಸಿ.

* ವೈದ್ಯರು ಸೂಚಿಸಿದಂತೆ ಕ್ರೀಮ್ ಬಳಸಿ, ಔಷಧಿಗಳನ್ನು ತೆಗೆದುಕೊಳ್ಳಿ.

* ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರಗಳನ್ನು ಸೇವಿಸಿ.

* ಹೊಟ್ಟೆಯನ್ನು ಶುದ್ಧವಾಗಿ ಇಟ್ಟುಕೊಳ್ಳಿ

ಮೊಡವೆಗೆ ಚಿಕಿತ್ಸೆ ಪಡೆಯುವಾಗ ಏನು ಮಾಡಬಾರದು?

ಮೊಡವೆಗೆ ಚಿಕಿತ್ಸೆ ಪಡೆಯುವಾಗ ಏನು ಮಾಡಬಾರದು?

* Salicylic ಆಮ್ಲವನ್ನು ಹೆಚ್ಚು ಬಳಸಬಾರದು.

* ರಾಸಾಯನಿಕ ಅಧಿಕವಿರುವ ಕ್ರೀಮ್‌ ಬಳಸಬೇಡಿ

* ಒಂದೇ ಬಾರಿಗೆ ತುಂಬಾ ಬೆಂಜೋಲ್‌ ಪರಾಕ್ಸೈಡ್ ಬಳಸಬೇಡಿ.

ಮೊಡವೆಗೆ ಕಾರಣಗಳೇನು?

ಮೊಡವೆಗೆ ಕಾರಣಗಳೇನು?

*ಅತ್ಯಧಿಕ ಎಣ್ಣೆಯಂಶ ಉತ್ಪತ್ತಿಯಾಗುತ್ತಿದ್ದರೆ

* ಕೆಲವೊಂದು ಕಾರಣಗಳಿಂದ ಎಣ್ಣೆ ಗ್ರಂಥಿ ಮುಚ್ಚಿದ್ದರೆ

* ಮುಖದ ಆರೈಕೆ ಕಡೆಗೆ ಸರಿಯಾಗಿ ಗಮನ ನೀಡದಿದ್ದರೆ

* ಅವಧಿ ಮುಗಿದ ಮೇಕಪ್ ಬಳಸಿದರೆ

* ಮತ್ತೊಬ್ಬರು ಬಳಸಿದ ಮೇಕಪ್ ಬ್ರೆಷ್‌ಗಳನ್ನು ಬಳಸಿದಾಗ

* ಹಾರ್ಮೋನ್‌ಗಳ ಅಸಮತೋಲನ

* ಅತ್ಯಧಿಕ ಮಾನಸಿಕ ಒತ್ತಡ

ಮೊಡವೆ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ, ಆದರೆ ಈ ಮೇಲಿನ ಕಾರಣಗಳಿಂದಾಗಿ ಮೊಡವೆ ಸಮಸ್ಯೆ ಹೆಚ್ಚುವುದು.

FAQ's
  • ಮೊಡವೆ ಸಮಸ್ಯೆಗೆ ಇರುವ ಚಿಕಿತ್ಸೆಯೇನು?

    * ಮೊಡವೆ ಸ್ವಲ್ಪ ಇದ್ದರೆ ರೆಡಿನಾಯ್ಡ್ ಚಿಕಿತ್ಸೆ ನೀಡಲಾಗುವುದು.
    * ಆ್ಯಂಟಿಬಯೋಟಿಕ್ ನೀಡಲಾಗುವುದು. ಇದು ಮೊಡವೆ ಕೆಂಪಾಗುವುದನ್ನು ತಡೆಗಟ್ಟಲು ಸಹಕಾರಿ.
    * ಅಜೆಲಿಕ್ ಆಮ್ಲ ಮತ್ತು ಸ್ಯಾಲಿಸಿಲಿಕ್ ಆಮ್ಲ ನೀಡಲಾಗುವುದು.
    *Dapsone ಜೆಲ್
    ಇವುಗಳನ್ನು ಸಾಮಾನ್ಯವಾಗಿ ಮೊಡವೆ ಚಿಕಿತ್ಸೆ ನೀಡಲಾಗುವುದು.

  • ಮೊಡವೆ ಸಮಸ್ಯೆ ಇರುವವರಿಗೆ ಯಾವ ಆಹಾರ ಒಳ್ಳೆಯದಲ್ಲ?

    * ಹಾಲು, ಚಾಕೋಲೆಟ್, ಫ್ರೆಂಚ್‌ ಫ್ರೈ, ಕೃತಕ ಸಿಹಿ ಇರುವ ಆಹಾರಗಳು, ನಾನ್‌ವೆಜ್‌ ಇಂಥ ಆಹಾರಗಳು ಮೊಡವೆ ಸಮಸ್ಯೆ ಹೆಚ್ಚಿಸುತ್ತದೆ.

English summary

Do's and Don'ts to Follow During Acne Treatment in Kannada

Do's and Don'ts to Follow During Acne Treatment in Kannada,Read on...
X
Desktop Bottom Promotion