For Quick Alerts
ALLOW NOTIFICATIONS  
For Daily Alerts

ಮುಖದ ಕಾಂತಿಗೆ ಬಳಸಿ, ಕೇವಲ ಮೂರೇ ಪದಾರ್ಥಗಳ ಈ ಹೋಮ್ಮೇಡ್ ಫೇಸ್ ಸೀರಮ್

|

ಇತ್ತೀಚಿನ ದಿನಗಳಲ್ಲಿ ಫೇಸ್ ಸೀರಮ್ಗಳು ಸೌಂದರ್ಯ ಕಾಪಾಡುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ತ್ವಚೆಯ ಸಮಸ್ಯೆಗಳನ್ನು ನಿವಾರಿಸಿ, ಮುಖದ ಕಾಂತಿಯನ್ನು ಹೆಚ್ಚಿಸಲು ಫೆಸ್ ಸೀರಮ್ ತ್ವಚೆಯ ಆರೈಕೆಯಲ್ಲಿ ಬಳಸಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ.

ಆದರೆ, ಮಾರುಕಟ್ಟೆಯಲ್ಲಿ ದೊರೆಯುವ ಸೀರಮ್ಗಳು ರಾಸಾಯನಿಕಗಳಿಂದ ತುಂಬಿಕೊಂಡಿದ್ದು, ದೀರ್ಘಕಾಲದ ಬಳಕೆಯಿಂದ ನಿಮ್ಮ ತ್ವಚೆಗೆ ಹಾನಿಯಾಗಬಹುದು. ಆದ್ದರಿಂದ ನಮ್ಮ ಮುಖಕ್ಕಾಗಿ, ನೈಸರ್ಗಿಕ ಅಥವಾ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬಳಸುವುದು ಉತ್ತಮ. ಆದ್ದರಿಂದ, ಇಲ್ಲಿ ನಾವು ನಿಮಗೆ ಮನೆಯಲ್ಲಿ ತಯಾರಿಸಬಹುದಾದ ಫೇಸ್ ಸೀರಮ್ ಬಗ್ಗೆ ಹೇಳಿದ್ದೇವೆ.

DIY ಫೇಸ್ ಸೀರಮ್ ಮಾಡುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

DIY ಫೇಸ್ ಸೀರಮ್ ಮಾಡುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಬೇಕಾಗುವ ಪದಾರ್ಥಗಳು:

2 ಚಮಚ ಅಲೋವೆರಾ ಜೆಲ್

2 ಚಮಚ ರೋಸ್ ವಾಟರ್

2 ವಿಟಮಿನ್ ಇ ಕ್ಯಾಪ್ಸುಲ್ಗಳು

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

ಈ ಫೇಸ್ ಸೀರಮ್ ತಯಾರಿಸಲು, ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಅಲೋವೆರಾ ಜೆಲ್ ಮತ್ತು ರೋಸ್ ವಾಟರ್ ಸೇರಿಸಿ . ಮನೆಯಲ್ಲಿ ಅಲೋವೆರಾ ಗಿಡ ಇದ್ದರೆ,ಒಂದು ಚಮಚವನ್ನು ಬಳಸಿ ಸ್ವಲ್ಪ ಜೆಲ್ ತೆಗೆಯಿರಿ. ಇಲ್ಲವಾದಲ್ಲಿ ಇತರ ಅಲೋವೆರಾ ಜೆಲ್ ಅನ್ನು ಬಳಸಬಹುದು. ತಾಜಾ ಗುಲಾಬಿ ದಳಗಳನ್ನು ಬಳಸಿ ಮನೆಯಲ್ಲಿ ರೋಸ್ ವಾಟರ್ ಅನ್ನು ಸಹ ತಯಾರಿಸಬಹುದು. ಮುಂದೆ, ಬೌಲ್ಗೆ 2 ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದರೆ, ನಿಮ್ಮ ಮುಖದ ಸೀರಮ್ ಸಿದ್ಧವಾಗುತ್ತದೆ. ಈ ಫೇಸ್ ಸೀರಮ್ ಸಂಗ್ರಹಿಸಲು ಸ್ಪ್ರೇ ಬಾಟಲ್ ಅಥವಾ ಸಾಮಾನ್ಯ ಬಾಟಲ್ ಬಳಸಿ.

ಬಳಸುವ ವಿಧಾನ:

ಬಳಸುವ ವಿಧಾನ:

ಮನೆಯಲ್ಲಿ ತಯಾರಿಸಿದ ಸೀರಮ್ ಅನ್ನು ದಿನಕ್ಕೆ ಎರಡು ಬಾರಿ ಹಚ್ಚಬಹುದು. ನಿಮ್ಮ ಮುಖವನ್ನು ತೊಳೆದ ನಂತರವೇ ಬಳಸಬೇಕು ಎಂಬುದನ್ನು ಮರೆಯಬೇಡಿ. ಇದನ್ನು ನಿಮ್ಮ ಮುಖದ ಮೇಲೆ ಮೃದುವಾಗಿ ಮಸಾಜ್ ಮಾಡಿ, ಇದನ್ನು ನಿಮ್ಮ ಮುಖದ ಮೇಲೆ ಇಡಲು ಇಷ್ಟವಿಲ್ಲದಿದ್ದರೆ, ನೀರಿನಿಂದ ತೊಳೆಯಿರಿ.

ಈ ಮನೆಯಲ್ಲಿ ತಯಾರಿಸಿದ ಸೀರಮ್ ಬಳಸುವ ಪ್ರಯೋಜನಗಳು:

ಈ ಮನೆಯಲ್ಲಿ ತಯಾರಿಸಿದ ಸೀರಮ್ ಬಳಸುವ ಪ್ರಯೋಜನಗಳು:

1. ಈ ಸೀರಮ್ ತಯಾರಿಸಲು ಬಳಸುವ 3 ಪದಾರ್ಥಗಳು ನೈಸರ್ಗಿಕವಾಗಿವೆ. ನೈಸರ್ಗಿಕ ಪದಾರ್ಥಗಳಾದ ಅಲೋವೆರಾ ಮತ್ತು ರೋಸ್ ವಾಟರ್ ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಫೇಸ್ ಸೀರಮ್ಗಳಿಗಿಂತ ಈ ಸೀರಮ್ ಉತ್ತಮವಾಗಿದೆ.

2. ಅಲೋವೆರಾ, ರೋಸ್ ವಾಟರ್ ಮತ್ತು ವಿಟಮಿನ್ ಇ ಸಂಯೋಜನೆಯು ನಿಮ್ಮ ಮುಖಕ್ಕೆ ಉತ್ತಮವಾದ ಹೊಳಪನ್ನು ನೀಡುತ್ತದೆ.

3. ಈ ಫೇಸ್ ಸೀರಮ್ ಕಪ್ಪು ಕಲೆಗಳ ನೋಟವನ್ನು ಕಡಿಮೆ ಮಾಡಲು ಸಹ ಪರಿಣಾಮಕಾರಿಯಾಗಿದೆ .

DIY Homemade Face Serum with 3 Ingredients for Glowing Skin in Kannada

4. ಈ ಸೀರಮ್ ತಯಾರಿಸಲು ಬಳಸುವ ರೋಸ್ ವಾಟರ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಮೊಡವೆಗಳಂತಹ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

5. ಅಲೋವೆರಾ ನಿಮ್ಮ ಮುಖಕ್ಕೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದು ನಿಮ್ಮ ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ ಮತ್ತು ಪಫಿನೆಸ್ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಗುಣಪಡಿಸುವ ಗುಣಗಳನ್ನು ಹೊಂದಿದ್ದು, ಮೊಡವೆ ಪೀಡಿತ ಚರ್ಮಕ್ಕೆ ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಇದು ಶುಷ್ಕತೆಯನ್ನು ನಿವಾರಿಸಿ, ಚರ್ಮವನ್ನು ತೇವಗೊಳಿಸುತ್ತದೆ.
6. ಅಲೋವೆರಾ ಮತ್ತು ರೋಸ್ ವಾಟರ್ ಒಟ್ಟಿಗೆ ನಿಮ್ಮ ಮುಖಕ್ಕೆ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ. ಇವು ನಿಮ್ಮ ರಂಧ್ರಗಳನ್ನು ಸ್ವಚ್ಛಗೊಳಿಸುತ್ತವೆ.

7. ರೋಸ್ ವಾಟರ್ ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದ್ದು ಅದು ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಮತ್ತು ತಾರುಣ್ಯದಿಂದ ಕೂಡಿರುವಂತೆ ಮಾಡುತ್ತದೆ. ಇದು ನಿಮ್ಮ ಚರ್ಮದ pH ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
8. ವಿಟಮಿನ್ ಇ ಚರ್ಮದ ಹಾನಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮವನ್ನು ಪೋಷಿಸುತ್ತದೆ ಮತ್ತು ಸ್ವತಂತ್ರ ರಾಡಿಕಲ್ಗಳಿಂದ ಹಾನಿಗೊಳಗಾಗುವುದನ್ನು ತಡೆಯುತ್ತದೆ.
ಗಮನಿಸಿ: ಈ ಫೇಸ್ ಸೀರಮ್ ಅನ್ನು ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ ಆದರೆ ಯಾವುದೇ ಸೋಂಕು ಅಥವಾ ಅಲರ್ಜಿಯನ್ನು ತಡೆಗಟ್ಟಲು ಅದನ್ನು ನಿಮ್ಮ ಮುಖಕ್ಕೆ ಹಚ್ಚುವ ಮೊದಲು ನಿಮ್ಮ ಕೈಗೆ ಪ್ಯಾಚ್ ಪರೀಕ್ಷೆಯನ್ನು ಮಾಡಿ.

English summary

DIY Homemade Face Serum with 3 Ingredients for Glowing Skin in Kannada

Here we talking about DIY Homemade Face Serum with 3 Ingredients for Glowing Skin in Kannada, read on
Story first published: Wednesday, November 24, 2021, 13:13 [IST]
X
Desktop Bottom Promotion