For Quick Alerts
ALLOW NOTIFICATIONS  
For Daily Alerts

ಸುಕ್ಕು ನಿವಾರಿಸಲು ಮನೆಯಲ್ಲೇ ತಯಾರಿಸಿ ಅವಾಕಾಡೊ ಫೇಸ್‌ಮಾಸ್ಕ್‌

|

ಯಾರಿಗೇ ಆಗಲಿ ಸುಕ್ಕುಗಳು ಕಿರಿಕಿರಿ ಮತ್ತು ಮುಜುಗರವನ್ನು ಉಂಟು ಮಾಡುತ್ತವೆ. ಇಂದಿನ ಕಾಲಮಾನದಲ್ಲಿ ತಮಗೆ ವಯಸ್ಸಾಗಿದೆ ಎಂದು ತೋರಿಸಿಕೊಳ್ಳಲು ಯಾರಿಗೂ ಇಷ್ಟವಿಲ್ಲ. ಬಿಳಿ ಕೂದಲನ್ನು ಸಹ ಸುಲಭವಾಗಿ ಕಪ್ಪಾಗಿ ಮಾಡಿಕೊಳ್ಳಲು ಹಲವು ಮಾರ್ಗಗಳಿವೆ, ಮನೆದ್ದುಗಳಿವೆ. ಆದರೆ ತ್ವಚೆಯಲ್ಲಿ ಉಂಟಾಗುವ ನೆರಿಗೆಗಳನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ, ಆದರೂ ವಯಸ್ಸಾಗುವುದು ಅನಿವಾರ್ಯ ಅಲ್ಲವೇ.

ನೀವು ಚರ್ಮದ ಮೇಲಿನ ಸುಕ್ಕನ್ನು ಮರೆಮಾಚಲು ಸಾಧ್ಯವಿಲ್ಲವಾದರೂ ನೆರಿಗೆಗಳನ್ನು ತಡೆಯುವುದು ಅಥವಾ ನೆರಿಗೆ ಮೂಡುವುದನ್ನು ಮುಂದೂಡುವುದು ನಮ್ಮ ಕೈಯಲ್ಲಿದೆ. ತ್ವಚೆಗೆ ಬೇಕಾದ ಆರೈಕೆ ಮಾಡಿದಲ್ಲಿ ಚರ್ಮ ನಿಮ್ಮ ನಿಯಂತ್ರಣದಲ್ಲಿರುತ್ತದೆ.

ಅತಿಯಾದ ಶುಷ್ಕ ಚರ್ಮ, ಪರಿಸರ ಮಾಲಿನ್ಯಕ್ಕೆ ದೈನಂದಿನ ಒಡ್ಡಿಕೊಳ್ಳುವಿಕೆ, ಸೂರ್ಯನ ಕಿರಣಗಳಿಂದ ಹಾನಿಯಾಗುವುದು, ನಮ್ಮ ದೈನಂದಿನ ಆಹಾರದಲ್ಲಿ ಪೌಷ್ಠಿಕಾಂಶದ ಕೊರತೆ, ತ್ವಚೆಗೆ ಅಗತ್ಯ ಜಲಸಂಚಯನ ಕೊರತೆ, ಧೂಮಪಾನದ ಅಭ್ಯಾಸ ಇತ್ಯಾದಿಗಳು ನಿಮ್ಮ ಚರ್ಮ ಸುಕ್ಕುಗಟ್ಟುವುದಕ್ಕೆ ಕಾರಣವಾಗಿದೆ.

ಸುಕ್ಕು ಮೂಡುವುದನ್ನು ತಡೆಯಲು ಜೀವನಶೈಲಿಯ ಬದಲಾವಣೆಗಳ ಜತೆಗೆ, ಯಾವುದೇ ರಾಸಾಯನಿಕ ಇಲ್ಲದೇ ಮನೆಮದ್ದುಗಳಿಂದಲೇ ಹೇಗೆ ತಡೆಯಬಹುದು ಎಂಬ ಬಗ್ಗೆ ನಾವಿಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ:

ಅವಕಾಡೊ ಪೇಸ್ಟ್‌ ಅನ್ವಯಿಸಿ

ಅವಕಾಡೊ ಪೇಸ್ಟ್‌ ಅನ್ವಯಿಸಿ

ಒಂದು ಮಾಗಿದ ಅವಕಾಡೊ ಹಣ್ಣಿನ ಪೇಸ್ಟ್ ತಯಾರಿಸಿ ಮುಖದ ಮೇಲೆ ಮತ್ತು ಕುತ್ತಿಗೆಯ ಮೇಲೆ ಸಮವಾಗಿ ಅನ್ವಯಿಸಿ. ಇದು 20-30 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಶುದ್ಧವಾದ ತಣ್ಣೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ಪ್ರತಿ ಪರ್ಯಾಯ ದಿನ ಪುನರಾವರ್ತಿಸಿ.

ಜೇನುತುಪ್ಪ ಮತ್ತು ಅವಕಾಡೊ

ಜೇನುತುಪ್ಪ ಮತ್ತು ಅವಕಾಡೊ

ಮಾಗಿದ ಅವಕಾಡೊ ಹಣ್ಣಿನ ಪೇಸ್ಸ್ಟ್‌ಗೆ ಒಂದು ಚಮಚ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಸಮವಾಗಿ ಅನ್ವಯಿಸಿ. ಇದು 20-30 ನಿಮಿಷಗಳ ಕಾಲ ಶುದ್ಧ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಇದನ್ನು ಹಚ್ಚಿದರೆ ಸುಕ್ಕುಗಳು ಬರದಂತೆ ತಡೆಯಬಹುದು.

ಬಾಳೆಹಣ್ಣು ಮತ್ತು ಅವಕಾಡೊ

ಬಾಳೆಹಣ್ಣು ಮತ್ತು ಅವಕಾಡೊ

ಮಾಗಿದ ಬಾಳೆಹಣ್ಣು ಮತ್ತು ಅವಕಾಡೊದ ನಯವಾದ ಪೇಸ್ಟ್ ತಯಾರಿಸಲು ಎರಡೂ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ಅದನ್ನು ತೆಗೆದುಕೊಂಡು ಮುಖ ಮತ್ತು ಕತ್ತಿನ ಮೇಲೆ ಸಮ ಪದರವನ್ನು ಅನ್ವಯಿಸಿ. ಇದನ್ನು 20-30 ನಿಮಿಷಗಳ ಕಾಲ ಚರ್ಮದ ಮೇಲೆ ಬಿಡಿ ನೀರಿನಿಂದ ತೊಳೆಯಿರಿ. ಒಂದು ವಾರದಲ್ಲಿ 2-3 ಬಾರಿ ಸುಕ್ಕುಗಳಿಗೆ ಈ ರೀತಿ ಚಿಕಿತ್ಸೆ ನೀಡಿ.

ಗ್ರೀನ್ ಟೀ ಮತ್ತು ಅವಕಾಡೊ

ಗ್ರೀನ್ ಟೀ ಮತ್ತು ಅವಕಾಡೊ

ಹಣ್ಣಾದ ಅವಕಾಡೊದ ಪೇಸ್ಟ್ ತಯಾರಿಸಿ, ಜತೆಗೆ ಪ್ರತ್ಯೇಕವಾಗಿ ಹಸಿರು ಚಹಾ ತಯಾರಿಸಿ ತಣ್ಣಗಾದ ನಂತರ ಅವಕಾಡೊ ಪೇಸ್ಟ್‌ ಸೇರಿಸಿ ಮಿಶ್ರಣ ಮಾಡಿ.ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ, ಕೆಲವು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. 20 ರಿಂದ 30 ನಿಮಿಷಗಳ ಕಾಲ ಚರ್ಮದ ಮೇಲೆ ಬಿಡಿ ನಂತರ ಶುದ್ಧ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ತ್ವಚೆಗೆ ಈ ರೀತಿ ಚಿಕಿತ್ಸೆ ನೀಡಿದರೆ ಸುಕ್ಕನ್ನು ತಡೆಯಬಹುದು.

ತೆಂಗಿನ ಎಣ್ಣೆ ಮತ್ತು ಅವಕಾಡೊ

ತೆಂಗಿನ ಎಣ್ಣೆ ಮತ್ತು ಅವಕಾಡೊ

ಮಾಗಿದ ಅವಕಾಡೊದ ನಯವಾದ ಪೇಸ್ಟ್ ತಯಾರಿಸಿ ಅದಕ್ಕೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಒಟ್ಟಿಗೆ ಮಿಶ್ರಣ ಮಾಡಿ.

ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ, ಬೆರಳ ತುದಿಯಿಂದ ನಿಧಾನವಾಗಿ ಮಸಾಜ್ ಮಾಡಿ. ಇದು ಚರ್ಮದ ಮೇಲೆ 20-30 ನಿಮಿಷಗಳ ಕಾಲ ಇರಲಿ ನಂತರ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕೆ ವಾರಕ್ಕೆ ಎರಡು ಅಥವಾ ಮೂರು ಬಾರಿ ಇದನ್ನು ಪುನರಾವರ್ತಿಸಿ.

English summary

DIY Avocado Face Mask For Fine Lines and Wrinkles in Kannada

Here we are discussing about DIY Avocado Face Mask For Fine Lines and Wrinkles in Kannada. The best way to treat your damaged and wrinkled skin is to bring changes to your lifestyle habits along with taking extra care of your skin, and even better, by using natural ingredients, such as avocado. Find out here how to use avocado to treat wrinkles. Read more
Story first published: Monday, July 5, 2021, 13:17 [IST]
X
Desktop Bottom Promotion