For Quick Alerts
ALLOW NOTIFICATIONS  
For Daily Alerts

ಮುಖಕ್ಕೆ ಮುಲ್ತಾನಿ ಮಿಟ್ಟಿ ಬಳಸುವ ಮುನ್ನ ಈ ಅಡ್ಡಪರಿಣಾಮಗಳೂ ತಿಳಿದಿರಲಿ

|

ಮುಲ್ತಾನಿ ಮಿಟ್ಟಿ ತ್ವಚೆಗೆ ತುಂಬಾ ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದೇ ಇದೆ. ಇದನ್ನು ಆಯುರ್ವೇದದಲ್ಲಿ ಔಷಧವಾಗಿಯೂ ಬಳಸುತ್ತಾರೆ. ಈ ಮಣ್ಣಿನ ಸಂಯೋಜನೆಯು ಕ್ಯಾಲ್ಸಿಯಂ ಬೆಂಟೋನೈಟ್ ಮತ್ತು ಮೆಗ್ನೀಸಿಯಮ್ ಕ್ಲೋರೈಡ್ ಅನ್ನು ಒಳಗೊಂಡಿದ್ದು, ಪ್ರಾಚೀನ ಕಾಲದಿಂದಲೂ ಮಹಿಳೆಯರು ಕೂದಲು ಮತ್ತು ತ್ವಚೆಯ ಪ್ರಯೋಜನಗಳಿಗಾಗಿ ಇದನ್ನು ಬಳಸುತ್ತಿರುವುದರಿಂದ ಮುಲ್ತಾನಿ ಮಿಟ್ಟಿ ಐತಿಹಾಸಿಕ ಮಹತ್ವವನ್ನು ಹೊಂದಿದೆ.

mltani miti

ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಮಹಿಳೆಯರು ಇದನ್ನು ಹೆಚ್ಚಾಗಿ ಬಳಸುತ್ತಾರೆ, ಆದರೆ ಇದು ಕೆಲವರಿಗೆ ಹಾನಿ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಮುಲ್ತಾನಿ ಮಿಟ್ಟಿ ಪರಿಣಾಮಕಾರಿ ಮತ್ತು ಸುರಕ್ಷಿತವಾಗಿದ್ದರೂ, ಪ್ರಯೋಜನಕಕ್ಕಿಂತ ಕೆಲವೊಮ್ಮೆ ಚರ್ಮಕ್ಕೆ ಹಾನಿ ಮಾಡುತ್ತದೆ. ಮುಖ್ಯವಾಗಿ ಇದನ್ನು ತಪ್ಪಾಗಿ ಬಳಸಿದರೆ, ಇತರ ಚರ್ಮದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಆದ್ದರಿಂದ ನೀವು ಇದನ್ನು ನಿಯಮಿತವಾಗಿ ಬಳಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಅನಾನುಕೂಲಗಳನ್ನು ಸಹ ತಿಳಿಯುವುದು ಮುಖ್ಯ.

ಮುಲ್ತಾನಿ ಮಿಟ್ಟಿಯ ಅನಾನುಕೂಲ ಅಥವಾ ಅಡ್ಡಪರಿಣಾಮಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಒಣ ಚರ್ಮ ಅಥವಾ ಡ್ರೈ ಸ್ಕಿನ್:

ಒಣ ಚರ್ಮ ಅಥವಾ ಡ್ರೈ ಸ್ಕಿನ್:

ಮುಲ್ತಾನಿ ಮಿಟ್ಟಿ ಎಲ್ಲರಿಗೂ ಒಂದೇ ರೀತಿಯ ಸಕಾರಾತ್ಮಕ ಫಲಿತಾಂಶ ನೀಡುವುದಿಲ್ಲ. ಜಿಗುಟಾದ ಮತ್ತು ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಿಗೆ ಮುಲ್ತಾನಿ ಮಿಟ್ಟಿ ಉತ್ತಮವಾಗಿದೆ. ಆದರೆ ನಿಮ್ಮದು ಒಣ ತ್ವಚೆಯಾಗಿದ್ದರೆ, ಮುಲ್ತಾನಿ ಮಿಟ್ಟಿ ಚರ್ಮವನ್ನು ಮತ್ತಷ್ಟು ಒಣಗಿಸುತ್ತದೆ. ಇದರಿಂದಾಗಿ ತ್ವಚೆಯು ಒರಟಾಗಿ, ಒಣಗಿದಂತೆ ಆಗಬಹುದು. ಜೊತೆಗೆ ಕಿರಿಕಿರಿಯನ್ನು ಉಂಟುಮಾಡಬಹುದು. ಆದ್ದರಿಂದ ಮುಲ್ತಾನಿ ಮಿಟ್ಟಿ ಬಳಸುವಾಗ ನಿಮ್ಮ ಚರ್ಮ ಪ್ರಕಾರವನ್ನು ಮೊದಲು ತಿಳಿದುಕೊಳ್ಳುವುದು ತುಂಬಾ ಮುಖ್ಯ.

 ಚರ್ಮ ಉರಿ:

ಚರ್ಮ ಉರಿ:

ಮುಲ್ತಾನಿ ಮಿಟ್ಟಿ ಅನೇಕರಿಗೆ ಸರಿಹೊಂದುವುದಿಲ್ಲ. ಏಕೆಂದರೆ, ಪ್ರತಿಯೊಬ್ಬರ ತ್ವಚೆಯ ಪ್ರಕಾರ ವಿಭಿನ್ನವಾಗಿರುವುದರಿಂದ, ಪರಿಣಾಮಗಳು ಸಹ ಭಿನ್ನವಾಗಿಯೇ ಇರುತ್ತವೆ, ಅದು ಸಕಾರಾತ್ಮಕವಾಗಿಯೂ ಇರಬಹುದು ಅಥವಾ ನಕಾರಾತ್ಮಕವಾಗಿಯೂ ಇರಬಹುದು. ಆದ್ದರಿಂದ ಕೆಲವರಿಗೆ ಮುಲ್ತಾನಿ ಮಿಟ್ಟಿಯಿಂದ ತಯಾರಿಸಿದ ಫೇಸ್ ಪ್ಯಾಕ್ ಹಚ್ಚಿದ ತಕ್ಷಣ ಚರ್ಮವು ಉರಿಯಲು ಪ್ರಾರಂಭಿಸುತ್ತದೆ. ನಿಮಗೂ ಉರಿ ಕಾಣಿಸಿಕೊಂಡರೆ ತಕ್ಷಣ ನೀರಿನಿಂದ ಮುಖ ತೊಳೆದು ತಣ್ಣನೆಯ ಅಲೋವೆರಾ ಜೆಲ್ ಹಚ್ಚಿಕೊಳ್ಳಿ.

 ಸೂಕ್ಷ್ಮ ಚರ್ಮಕ್ಕೆ ಹಾನಿ:

ಸೂಕ್ಷ್ಮ ಚರ್ಮಕ್ಕೆ ಹಾನಿ:

ಸೂಕ್ಷ್ಮವಾದ ತ್ವಚೆಯನ್ನು ಹೊಂದಿರುವವರಿಗೆ, ತ್ವಚೆಯ ರಕ್ಷಣೆ ಸುಲಭವಾಗಿರುವುದಿಲ್ಲ. ಏಕೆಂದರೆ, ಹೆಚ್ಚಿನ ಸೌಂದರ್ಯವರ್ಧಕಗಳು ಅವರಿಗೆ ಹಾನಿಯನ್ನುಂಟುಮಾಡುತ್ತವೆ. ಅದೇ ರೀತಿ ಈ ಮುಲ್ತಾನಿ ಮಿಟ್ಟಿಯೂ ಸಹ. ಅವರಲ್ಲಿ ಇದರ ಬಳಕೆಯಿಂದ ಮುಖದ ಮೇಲೆ ದದ್ದು ಉಂಟಾಗುತ್ತದೆ. ಆದ್ದರಿಂದ ಸೂಕ್ಷ್ಮ ತ್ವಚೆ ಹೊಂದಿರುವವರು ಮುಲ್ತಾನಿ ಮಿಟ್ಟಿಯನ್ನೂ ಬಳಸಬಾರದು. ಬಳಸುವುದಾದರೆ, ಪ್ಯಾಚ್ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮವಾಗಿದೆ.

 ಚರ್ಮದ ಹಿಗ್ಗಿಸುವಿಕೆ:

ಚರ್ಮದ ಹಿಗ್ಗಿಸುವಿಕೆ:

ಚರ್ಮದ ಪ್ರಕಾರದ ಜೊತೆಗೆ ಮುಲ್ತಾನಿ ಮಿಟ್ಟಿಯನ್ನು ಯಾವ ಋತುವಿನಲ್ಲಿ ಬಳಸಲಾಗುತ್ತಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಹ ಮುಖ್ಯವಾಗಿದೆ. ಉದಾಹರಣೆಗೆ, ಮುಲ್ತಾನಿ ಮಿಟ್ಟಿ ಚಳಿಗಾಲದಲ್ಲಿ ಹಾನಿಯನ್ನುಂಟುಮಾಡುತ್ತದೆ. ಏಕೆಂದರೆ, ಶೀತಕಾಲದಲ್ಲಿ ಚರ್ಮ ಮೊದಲೇ ಒಣಗಿರುವುದರಿಂದ ಮುಲ್ತಾನಿ ಮಿಟ್ಟಿ ಬಳಕೆಯಿಂದ ಮತ್ತಷ್ಟು ಒಣಗಬಹುದು, ವಿಸ್ತಾರವಾಗಬಹುದು. ಇದರಿಂದ ವಯಸ್ಸಾದಂತೆ ಕಾಣಲು ಪ್ರಾರಂಭಿಸುತ್ತದೆ. ಆದ್ದರಿಂದ, ನೀವು ಚಳಿಗಾಲದಲ್ಲಿ ಮುಲ್ತಾನಿ ಮಿಟ್ಟಿ ಪೇಸ್ಟ್ ಹಚ್ಚುತ್ತಿದ್ದರೆ, ಖಂಡಿತವಾಗಿ ಜೇನುತುಪ್ಪ ಅಥವಾ ಬಾದಾಮಿ ಎಣ್ಣೆಯಂತಹ ನೈಸರ್ಗಿಕ ಮಾಯಿಶ್ಚರೈಸರ್ ಅನ್ನು ಸೇರಿಸಿ.

FAQ's
  • ಮುಲ್ತಾನಿ ಮಿಟ್ಟಿಯನ್ನು ಪ್ರತಿದಿನ ಬಳಸಬಹುದೇ?

    ಹೌದು, ತ್ವಚೆ ಎಣ್ಣೆಯುಕ್ತವಾಗಿದ್ದರೆ ಮುಲ್ತಾನಿ ಮಿಟ್ಟಿ ಪ್ಯಾಕ್ ಅನ್ನು ಪ್ರತಿ ದಿನವೂ ಹಚ್ಚಬಹುದು. ಇದಕ್ಕೆ ನಿಂಬೆ ರಸವನ್ನು ಬಳಸಬೇಕಾಗಿಲ್ಲ, ರೋಸ್ ವಾಟರ್ ಬಳಸಿ ಮಿಶ್ರಣ ಮಾಡಿ. ಎಣ್ಣೆಯುಕ್ತ ಚರ್ಮವನ್ನು ಹೊಂದಿರುವುದರಿಂದ, ಫೇಸ್ ವಾಶ್ ಅಥವಾ ಸೋಪ್ ಬಳಸಿ ಬೆಳಿಗ್ಗೆ ಮುಖ ಸ್ವಚ್ಛಗೊಳಿಸಿದ ನಂತರ ವಾರಕ್ಕೆ ಎರಡು ಅಥವಾ ಮೂರು ಬಾರಿ ಸ್ಕ್ರಬ್ ಆಗಿ ಬಳಸಿ.

  • ಮುಲ್ತಾನಿ ಮಿಟ್ಟಿ ಯಾವ ತ್ವಚೆ ಪ್ರಕಾರಕ್ಕೆ ಒಳ್ಳೆಯದಲ್ಲ?

    ಸಾಮಾನ್ಯವಾಗಿ ಮುಲ್ತಾನಿ ಮಿಟ್ಟಿ, ಎಣ್ಣೆಯುಕ್ತ ತ್ವಚೆಗೆ ಒಳ್ಳೆಯದು. ಆದರೆ ಒಣ ತ್ವಚೆ ಅಂದರೆ, ಡ್ರೈ ಸ್ಕಿನ್ ಇರುವವರಿಗೆ ಇದು ಒಳ್ಳೆಯದಲ್ಲ. ಹಾಗೇನಾದರೂ ಬಳಸುವುದಿದ್ದರೆ, ಜೇನುತುಪ್ಪ ಅಥವಾ ಬಾದಾಮಿ ಎಣ್ಣೆಯನ್ನು ಸೇರಿಸಿ, ಬಳಸಿ.

English summary

Disadvantages of using Multani Mitti on Skin in Kannada

Here we talking about Disadvantages of using Multani Mitti on Skin in Kannada, read on
X
Desktop Bottom Promotion