For Quick Alerts
ALLOW NOTIFICATIONS  
For Daily Alerts

ಮೊಡವೆ ಸಮಸ್ಯೆಗೆ ತಜ್ಞರು ಹೇಳುವ ಉಪಾಯಗಳಿವು, ತಪ್ಪದೇ ಪಾಲಿಸಿ

|

ಮೊಡವೆಗಳೊಂದಿಗೆ ಬದುಕುವುದು ಸುಲಭದ ಮಾತಲ್ಲ, ನಮ್ಮ ಆತ್ಮ ವಿಶ್ವಾಸ ಕುಂದಿಸುವಲ್ಲಿ ಇದು ಕೂಡ ಒಂದು ಅಂಶ ಎಂದರೆ ತಪ್ಪಾಗಲ್ಲ. ಮೊಡವೆಗಳಿಗಾಗಿ ಜಾಹೀರಾತುಗಳಲ್ಲಿ ಬರುವ ಸಾಕಷ್ಟು ಉತ್ಪನ್ನಗಳನ್ನು ಬಳಸಿದರೂ, ಅವುಗಳಿಗೆ ಮುಕ್ತಿ ಸಿಗುವುದಿಲ್ಲ. ಆಗ ನಾವು ನಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು, ಈ ಕೆಳಗೆ ನೀಡಿರುವ ಅಂಶಗಳನ್ನು ಪಾಲಿಸಿದರೆ, ನಿಮ್ಮ ಮೊಡವೆ ಸಮಸ್ಯೆ ಹತೋಟಿಗೆ ಬರುವುದು ಎಂಬುದು ತಜ್ಞರ ಅಭಿಪ್ರಾಯ. ಹಾಗಾದರೆ, ಬನ್ನಿ ಮೊಡವೆ ಕಡಿಮೆಮಾಡಲು ಪಾಲಿಸಬೇಕಾದ್ದು ಏನು ಎಂಬುದನ್ನು ಇಲ್ಲಿ ನೋಡೋಣ.

ಚರ್ಮರೋಗ ತಜ್ಞರ ಪ್ರಕಾರ, ಮೊಡವೆ ಕಡಿಮೆಮಾಡಲು ಪಾಲಿಸಬೇಕಾದ ಸಲಹೆಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸಕ್ಕರೆ ಮತ್ತು ಡೈರಿ ಉತ್ಪನ್ನವನ್ನು ತಪ್ಪಿಸಿ:

ಸಕ್ಕರೆ ಮತ್ತು ಡೈರಿ ಉತ್ಪನ್ನವನ್ನು ತಪ್ಪಿಸಿ:

ಸಕ್ಕರೆ ಮತ್ತು ಡೈರಿ ಉತ್ಪನ್ನಗಳಿಗೆ ಕೇವಲ ಕರುಳನ್ನು ಮಾತ್ರವಲ್ಲದೆ ಚರ್ಮವನ್ನೂ ಹಾಳು ಮಾಡುವ ಶಕ್ತಿಯೂ ಇದೆ ಎಂಬುದನ್ನು ಮರೆಯಬಾರದು. ನೀವು ಸಕ್ಕರೆ, ಡೈರಿ ಮತ್ತು ಮೈದಾ ಮುಂತಾದ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರಗಳನ್ನು ಸೇವಿಸುವುದರಿಂದ, ಇದು ದೇಹದಲ್ಲಿ ಇನ್ಸುಲಿನ್ ಬೆಳವಣಿಗೆಯ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೆಚ್ಚು ಮೊಡವೆಗಳನ್ನು ಉಂಟಾಗುತ್ತದೆ, ಏಕೆಂದರೆ ಇದು ತೈಲ ಗ್ರಂಥಿಗಳನ್ನು ಹೆಚ್ಚು ಉತ್ಪಾದಿಸಲು ಪ್ರಚೋದಿಸುತ್ತದೆ. ಜೊತೆಗೆ ಹಾಲು ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡಬಹುದು ಏಕೆಂದರೆ ಹಾಲಿನಲ್ಲಿ ಈಸ್ಟ್ರೊಜೆನ್ ನಂತಹ ಹಾರ್ಮೋನುಗಳು ಹೆಚ್ಚಾಗಿರುತ್ತವೆ ಎಂದು ತಜ್ಞರು ಹೇಳುತ್ತಾರೆ.

ಒತ್ತಡದಿಂದ ದೂರವಿರಿ:

ಒತ್ತಡದಿಂದ ದೂರವಿರಿ:

ಒತ್ತಡವು ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ದಿನದ ಸಮಸ್ಯೆಯನ್ನು ಆದಷ್ಟು ಬೇಗ ಹೊರಹಾಕಬೇಕು. ಏಕೆಂದರೆ, ಇದು ಮೊಡವೆಗಳ ಮೇಲೂ ಪರಿಣಾಮ ಬೀರುತ್ತದೆ. ಒತ್ತಡವು ಕಾರ್ಟಿಸೋಲ್ ಹಾರ್ಮೋನ್ ಅನ್ನು ಹೆಚ್ಚಿಸಿ. ಪ್ರಮುಖ ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತದೆ. ಜೊತೆಗೆ, ಇದು ಸೆಬಾಸಿಯಸ್ ಗ್ರಂಥಿಗಳಿಗೆ ಸಂಕೇತಗಳನ್ನು ಕಳುಹಿಸಿ, ಮೇದೋಗ್ರಂಥಿಗಳ ಸ್ರಾವದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಮೊಡವೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಎಣ್ಣೆ ಆಧಾರಿತ ದಪ್ಪ ಕ್ರೀಮ್ ಬೇಡ:

ಎಣ್ಣೆ ಆಧಾರಿತ ದಪ್ಪ ಕ್ರೀಮ್ ಬೇಡ:

ದಪ್ಪ ಮತ್ತು ಎಣ್ಣೆ ಆಧಾರಿತ ಕ್ರೀಮ್‌ಗಳು ತ್ವಚೆಯ ಮೇಲೆ ಭಾರವಾಗಿರುತ್ತದೆ ಮತ್ತು ಹೀರಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಜೊತೆಗೆ ಮುಖಕ್ಕೆ ಎಣ್ಣೆಯುಕ್ತ ನೋಟವನ್ನು ನೀಡುತ್ತದೆ. ಆದರೆ, ನಿಮಗೆ ತಿಳಿದಿಲ್ಲದಿರುವುದೇನೆಂದರೆ, ಅಂತಹ ಉತ್ಪನ್ನಗಳು ತೇವಾಂಶದ ರೀತಿ ತೋರುತ್ತದೆಯಾದರೂ, ಅವುಗಳು ಕಾಮೆಡೋಜೆನಿಕ್ ಆಗಿರಬಹುದು. ಇದರಿಂದ ನಿಮ್ಮ ರಂಧ್ರಗಳು ಮುಚ್ಚಿ, ಹೆಚ್ಚು ಮೊಡವೆ ಮತ್ತು ಹಾನಿಗೊಳಗಾದ ರಂಧ್ರಗಳನ್ನು ಉಂಟುಮಾಡಬಹುದು. ದಪ್ಪ ಮತ್ತು ಎಣ್ಣೆ ಆಧಾರಿತ ಕ್ರೀಮ್‌ಗಳು ಕಾಮೆಡೋಜೆನಿಕ್ ಮತ್ತು ವೈಟ್‌ಹೆಡ್‌ಗಳನ್ನು ಹೆಚ್ಚಿಸುತ್ತದೆ, ಅದಕ್ಕಾಗಿಯೇ ತೈಲ ಮುಕ್ತ ಮತ್ತು ಜೆಲ್ ಆಧಾರಿತ ಉತ್ಪನ್ನಗಳನ್ನು ಬಳಸುವುದು ಹೆಚ್ಚು ಸೂಕ್ತವಾಗಿವೆ.

ಮೊಡವೆಗಳನ್ನು ಹಿಸುಕಬೇಡಿ:

ಮೊಡವೆಗಳನ್ನು ಹಿಸುಕಬೇಡಿ:

ಹೌದು, ನಿಮ್ಮಲ್ಲಿ ಕೆಲವರು ಮೊಡವೆ ಕಡಿಮೆಮಾಡಲು, ಅದನ್ನು ಹಿಸುಕಿ ತೆಗೆಯುವ ಪ್ರಯತ್ನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ ಎಂಬ ಭ್ರಮೆ. ಆದರೆ, ಹೀಗೆ ಹಿಸುಕುವುದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗುವುದು, ಜೊತೆಗೆ ಹೈಪರ್ಪಿಗ್ಮೆಂಟೇಶನ್ ಅಂದರೆ ಕಲೆಗಳು ಉಂಟಾಗಬಹುದು. ಮುಖ್ಯವಾಗಿ ಚರ್ಮಕ್ಕೆ ಹೆಚ್ಚು ಸೂಕ್ಷ್ಮಜೀವಿಗಳು ಸೇರುವ ಸಾಧ್ಯತೆಯಿದ್ದು, ಅದು ಹೆಚ್ಚಿನ ಸೋಂಕನ್ನು ಉಂಟುಮಾಡುತ್ತದೆ.

ಸ್ಯಾಲಿಸಿಲಿಕ್ ಆಸಿಡ್ ಜೊತೆಗಿರಲಿ:

ಸ್ಯಾಲಿಸಿಲಿಕ್ ಆಸಿಡ್ ಜೊತೆಗಿರಲಿ:

ಸ್ಯಾಲಿಸಿಲಿಕ್ ಆಮ್ಲ ಎಂದು ಕರೆಯಲ್ಪಡುವ ಇದು ನಿಜವಾಗಿಯೂ ಎಣ್ಣೆಯುಕ್ತ ಮತ್ತು ಮೊಡವೆ ಪೀಡಿತ ಚರ್ಮಕ್ಕೆ ಉತ್ತಮವಾದ ಘಟಕಾಂಶವಾಗಿದೆ. ಸ್ಯಾಲಿಸಿಲಿಕ್ ಆಸಿಡ್ ಲಿಪೊಫಿಲಿಕ್ ಆಗಿದ್ದು, ಲಿಪಿಡ್‌ಗಳನ್ನು ಎಣ್ಣೆ ಗ್ರಂಥಿಗಳು ಮತ್ತು ರಂಧ್ರಗಳಲ್ಲಿ ಕರಗಿಸಲು ಸಹಾಯ ಮಾಡುತ್ತದೆ ಜೊತೆಗೆ ಇದು ಕಪ್ಪು ಕಲೆಗಳು ಮತ್ತು ವೈಟ್‌ಹೆಡ್‌ಗಳನ್ನು ಕಡಿಮೆ ಮಾಡುತ್ತದೆ.

English summary

Dermatologist Shares Simple Rules Care for Acne-Prone Skin in Kannada

Here we talking about Dermatologist Shares Simple Rules Care for Acne-Prone Skin in Kannada, read on
Story first published: Friday, October 22, 2021, 13:15 [IST]
X
Desktop Bottom Promotion