For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್‌: ತ್ವಚೆಗೆ ಅರಿಶಿನ ಹಚ್ಚುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ

|

ಅಡುಗೆ ಮನೆಯಲ್ಲಿ ಖಾದ್ಯಗಳ ರುಚಿ ಹೆಚ್ಚಿಸುವ ಅರಿಶಿನ ಪುಡಿ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ಸೌಂದರ್ಯ ವೃದ್ಧಿಯಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ. ಯಾವುದೇ ರಾಸಾಯನಿಕಗಳ ಗೋಜಿಲ್ಲದೆ ಮಹಿಳೆಯರ ಸೌಂದರ್ಯ ಕಾಳಜಿಗೆ ಅತ್ಯುತ್ತಮ ಮನೆಮದ್ದು ಹಾಗೂ ಸದಾ ಪ್ರಥಮ ಆದ್ಯತೆ ಈ ಅರಿಶಿನಕ್ಕಿದೆ.

ಆದರೆ ಅರಿಶಿನ ಬಹಳ ಶಕ್ತಿಯುತವಾದ ಮನೆಮದ್ದು, ಇದನ್ನು ನಿಯಮಿತವಾಗಿ ಮಾತ್ರ ಬಳಸಬೇಕು, ಅತಿಯಾದರೆ ಇದರ ಅಡ್ಡಪರಿಣಾಮಗಳು ಹಲವಿದೆ. ಆದ್ದರಿಂದ ಮೊಡವೆ ದೂರಾಗಲು, ತ್ವಚೆಯ ಬಣ್ಣ ಹೆಚ್ಚಲು, ಕಲೆಗಳ ನಿವಾರಣೆಗೆ ನಿತ್ಯ ಅರಿಶಿನ ಬಳಸುವವರು ತಿಳಿಯಲೇಬೇಕಾದ ಕೆಲವು ಎಚ್ಚರಿಕೆಗಳಿವೆ.

ನಿಯಮಿತವಾಗಿ ಅರಿಶಿನ ಹಚ್ಚುವವರು ಈ ತಪ್ಪುಗಳನ್ನು ಮಾಡಲೇಬಾರದು, ಇದರ ಅಡ್ಡಪರಿಣಾಮಗಳು ಸಾಕಷ್ಟಿದೆ. ಏನು ಮುಂದೆ ನೋಡೋಣ:

ಅರಿಶಿನದ ನಂತರ ಸೋಪ್ ಅಥವಾ ಫೇಸ್ ವಾಶ್‌ನಿಂದ ತೊಳೆಯಬೇಡಿ

ಅರಿಶಿನದ ನಂತರ ಸೋಪ್ ಅಥವಾ ಫೇಸ್ ವಾಶ್‌ನಿಂದ ತೊಳೆಯಬೇಡಿ

ನೀವು ಅರಿಶಿನವನ್ನು ನಿಮ್ಮ ಚರ್ಮಕ್ಕೆ ಅನ್ವಯಿಸುತ್ತಿದ್ದರೆ ಸಾಮಾನ್ಯ ಈ ತಪ್ಪುಗಳನ್ನು ಮಾಡಿರುತ್ತೀರಿ. ಅರಿಶಿನ ಹಚ್ಚಿನ ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯುವಾಗ ಸೋಪು ಅಥವಾ ಫೇಸ್‌ವಾಶ್‌ನಿಂದ ತೊಳೆಯುತ್ತೀರಿ, ಆದರೆ ಇದು ನೀವು ಮಾಡುವ ತಪ್ಪು ಕ್ರಮ ಅಲ್ಲದೆ ಇದರಿಂದ ತ್ವಚೆಗೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಅರಿಶಿನ ಹಚ್ಚಿನ ಬಳಿಕ ಕೇವಲ ನೀರು ಅದರಲ್ಲೂ ತಣ್ಣಿರಾದರೆ ಇನ್ನು ಉತ್ತಮ ತಣ್ಣೀರಿನಿಂದ ತೊಳೆಯಿರಿ. ಸಾಬೂನಿನಿಂದ ತೊಳೆದಾಗ, ಅರಿಶಿನದ ಪರಿಣಾಮವು ಕಣ್ಮರೆಯಾಗುತ್ತದೆ.

ಅರಿಶಿನ ಎಲ್ಲರಿಗೂ ಸರಿ ಹೊಂದುವುದಿಲ್ಲ

ಅರಿಶಿನ ಎಲ್ಲರಿಗೂ ಸರಿ ಹೊಂದುವುದಿಲ್ಲ

ನಿಮ್ಮ ಚರ್ಮಕ್ಕೆ ಅರಿಶಿನವನ್ನು ನಿಯಮಿತವಾಗಿ ಹಚ್ಚುತ್ತಿದ್ದರೆ ಅದರ ಪರಿಣಾಮವನ್ನು ಮೊದಲು ಪರಿಶೀಲಿಸಿ. ದೇಹದಲ್ಲಿ ಎಲ್ಲಿಯಾದರೂ ಅರಿಶಿನದ ಮಿಶ್ರಣಕ್ಕೆ ನೀವು ಅಲರ್ಜಿಯನ್ನು ಹೊಂದಿದ್ದರೆ ತಕ್ಷಣವೇ ಆ ಪ್ರದೇಶವನ್ನು ಶುದ್ಧ ನೀರಿನಿಂದ ತೊಳೆಯಿರಿ. ಕೆಲವರಿಗೆ ಅರಿಶಿನವು ದೇಹದ ಕೆಲವು ಭಾಗಗಳಿಗೆ ಆಗಿ ಬರುವುದಿಲ್ಲ, ಇನ್ನು ಕೆಲವರಿಗೆ ತಮ್ಮ ಚರ್ಮಕ್ಕೆ ಅರಿಶಿನವೇ ಸರಿ ಹೊಂದುವುದಿಲ್ಲ. ಅಲ್ಲದೆ, ತುರಿಕೆ ಮತ್ತು ಗಾಯವನ್ನು ಉಂಟುಮಾಡಬಹುದು. ನೀವು ಇತರ ಆರೋಗ್ಯ ಸಮಸ್ಯೆಗಳನ್ನು ಸಹ ಹೊಂದಿರಬಹುದು. ಮೊದಲು ಪರಿಶೀಲಿಸಿ ನಂತರ ಸಂಪೂರ್ಣವಾಗಿ ಅನ್ವಯಿಸಿ.

ದೀರ್ಘಕಾಲದವರೆಗೆ ಅರಿಶಿನ ಹಚ್ಚುವುದನ್ನು ತಪ್ಪಿಸಿ

ದೀರ್ಘಕಾಲದವರೆಗೆ ಅರಿಶಿನ ಹಚ್ಚುವುದನ್ನು ತಪ್ಪಿಸಿ

ಅನೇಕ ಮಹಿಳೆಯರು ತಮ್ಮ ದೇಹವನ್ನು ಬಿಳುಪುಗೊಳಿಸಲು ದೀರ್ಘಕಾಲದವರೆಗೆ ಅರಿಶಿನವನ್ನು ಅನ್ವಯಿಸಲು ಬಯಸುತ್ತಾರೆ. ಅರಿಶಿನವನ್ನು ಅನ್ವಯಿಸುವ ತಪ್ಪು ಮಾರ್ಗ ಇದಾಗಿದೆ. ಅರಿಶಿನದ ಪರಿಣಾಮವು ಬಿಸಿಯಾಗಿರುತ್ತದೆ. ಈ ಸಂದರ್ಭದಲ್ಲಿ, ದೀರ್ಘಕಾಲದವರೆಗೆ ಚರ್ಮದ ಮೇಲೆ ಅರಿಶಿನವನ್ನು ಅನ್ವಯಿಸಿದ ನಂತರ ಗಾಯದ ಗುರುತುಗಳು ಹಾಗೆಯೇ ಇರುತ್ತದೆ. ಆದ್ದರಿಂದ ತ್ವಚೆಗೆ ಹಚ್ಚಿನ ಸ್ವಲ್ಪ ಸಮಯದ ನಂತರ ಅರಿಶಿನ ಒಣಗಿದ ಮೇಲೆ ಶುದ್ಧ ನೀರಿನಿಂದ ತಕ್ಷಣ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ.

ಬೇಸಿಗೆಯಲ್ಲಿ ಅರಿಶಿನ ಕಡಿಮೆ ಬಳಸಿ

ಬೇಸಿಗೆಯಲ್ಲಿ ಅರಿಶಿನ ಕಡಿಮೆ ಬಳಸಿ

ಅರಿಶಿನವನ್ನು ನಿಯಮಿತ ಹಚ್ಚುವವರಿಗೆ ಅತ್ಯಂತ ಮುಖ್ಯವಾದ ವಿಷಯ ಇದಾಗಿದೆ. ಬೇಸಿಗೆಯಲ್ಲಿ ಅರಿಶಿನವನ್ನು ಬಹಳ ಮಿತವಾಗಿ ಬಳಸಿ. ಅದನ್ನು ಪೇಸ್ಟ್ ರೂಪದಲ್ಲಿ ದೇಹಕ್ಕೆ ಹಚ್ಚಿಕೊಳ್ಳಿ. ನೀವು ಅರಿಶಿನಕ್ಕೆ ಮೊಸರು ಅಥವಾ ಸ್ವಲ್ಪ ಕಡಲೆಹಿಟ್ಟು ಸೇರಿಸಿ. ಹಾಗೆ ಮಾಡುವುದರಿಂದ ನಿಮ್ಮ ದೇಹ ಸಹ ಸ್ವಲ್ಪ ತಂಪಾಗಿರಿಸುತ್ತದೆ. ಈ ಮಿಶ್ರಣವನ್ನು ಬೇಸಿಗೆಯಲ್ಲು ಸಹ ಸ್ವಲ್ಪ ಸಮಯದವರೆಗೆ ದೇಹದ ಮೇಲೆ ಅನ್ವಯಿಸಬಹುದು ಮತ್ತು ಹೊಳೆಯುವ ಚರ್ಮವನ್ನು ಪಡೆಯಬಹುದು.

English summary

Common mistakes to avoid while applying turmeric on your skin in Kannada

Here we are discussing about Common mistakes to avoid while applying turmeric on your skin in Kannada. Read more.
Story first published: Friday, May 27, 2022, 8:44 [IST]
X
Desktop Bottom Promotion