For Quick Alerts
ALLOW NOTIFICATIONS  
For Daily Alerts

ಈ ಸಾಮಾನ್ಯ ಅಭ್ಯಾಸಗಳಿಂದಲೇ ಸಣ್ಣ ವಯಸ್ಸಿನಲ್ಲಿಯೇ ತ್ವಚೆ ಕಳಾಹೀನವಾಗುವುದು !

|

ವಯಸ್ಸಾಗುವಿಕೆ ಎಂಬುದು ಅನಿವಾರ್ಯ ಪ್ರಕ್ರಿಯೆ ಆದರೆ ವಯಸ್ಸಾಗುವುದಕ್ಕಿಂತ ಮುನ್ನವೇ ವಯಸ್ಸಾದವರಂತೆ ಕಂಡಾಗ ಅದರ ಬಗ್ಗೆ ಕಾಳಜಿ ವಹಿಸಲೇಬೇಕು. ಏಕೆಂದರೆ ಹೀಗಾಗಲು ಕಾರಣ ನಾವೇ, ನಾವು ಬೆಳೆಸಿಕೊಂಡಿರುವ ಅಭ್ಯಾಸಗಳಿಂದಲೇ ಅಕಾಲಿಕವಾಗಿ ವಯಸ್ಸಾದಂತೆ ಕಾಣುವುದು. ಅಂತಹ ಅಭ್ಯಾಸಗಳಾವುವು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ. ನೀವೂ ಈ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದರೆ, ಈ ಕೂಡಲೇ ಬಿಡಲು ಪ್ರಯತ್ನಿಸಿ.

ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುವ ನಮ್ಮ ಸಾಮಾನ್ಯ ಅಭ್ಯಾಸಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಅತಿಯಾದ ಮದ್ಯ ಸೇವನೆ:

ಅತಿಯಾದ ಮದ್ಯ ಸೇವನೆ:

ಆಲ್ಕೊಹಾಲ್ ಸೇವನೆಯು ನಮಗೆ ತಿಳಿಯದಿರುವ ಹಲವಾರು ತಕ್ಷಣದ ಪರಿಣಾಮಗಳನ್ನು ನಮ್ಮ ದೇಹದ ಮೇಲೆ ಬೀರುತ್ತದೆ. ಇದು ತ್ವಚೆಯನ್ನು ನಿರ್ಜಲೀಕರಣಗೊಳಿಸಬಹುದು ಜೊತೆಗೆ ಉರಿಯೂತವನ್ನು ಉಂಟುಮಾಡಬಹುದು. ಇದರ ಪರಿಣಾಮವಾಗಿ ಮುಖ ಕಳೆಯನ್ನು ಕಳೆದುಕೊಂಡು ಹೆಚ್ಚು ವಯಸ್ಸಾದವರಂತೆ ಕಾಣಬಹುದು. ಜೊತೆಗೆ ಆಲ್ಕೊಹಾಲ್ ಸೇವನೆಯು ಮುಖದ ಮೇಲೆ ಸುಕ್ಕುಗಳನ್ನು ಉಂಟುಮಾಡಬಹುದು ಮತ್ತು ಕಣ್ಣಿನ ಕೆಳಗೆ ಊತವನ್ನು ಉಂಟುಮಾಡಬಹುದು ಎಂದು ಹಲವಾರು ಅಧ್ಯಯನಗಳಿಂದ ಸಾಬೀತಾಗಿವೆ.

ಹೆಚ್ಚು ಮೊಬೈಲ್ಕಂಪ್ಯೂಟರ್ ನೋಡುವುದು:

ಹೆಚ್ಚು ಮೊಬೈಲ್ಕಂಪ್ಯೂಟರ್ ನೋಡುವುದು:

ಕೊರೊನಾ ಸಾಂಕ್ರಾಮಿಕ ರೋಗವು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರಿದೆ. ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯು ಬೆಳೆದಿದೆ. ಇದಕ್ಕಾಗಿ ಬಳಕೆ ಮಾಡುವ ಗ್ಯಾಜೆಟ್ ಗಳು, ಅದರಿಂದ ಹೊರಬರುವ ನೀಲಿವಿಕಿರಣಗಳು, ನಮ್ಮನ್ನು ವಯಸ್ಸಾದವರಂತೆ ಮಾಡುತ್ತಿದೆ. ಮೀಟಿಂಗ್‌ ಗಳು ಮತ್ತು ಒಟ್ಟಿಗೆ ಸೇರುವುದೆಲ್ಲವೂ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಬದಲಾಗಿದೆ. ಆದ್ದರಿಂದ ಇದರ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ, ಆದರೆ ನಾವು ಮಾಡಬಹುದಾದ ಒಂದು ವಿಷಯವಿದೆ, ಅದು ಅತಿಯಾಗಿ ನೋಡುವುದನ್ನು ತಪ್ಪಿಸಿ. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡಿ. ಡುವುದರ

ಸಾಕಷ್ಟು ನೀರು ಕುಡಿಯದೇ ಇರುವುದು:

ಸಾಕಷ್ಟು ನೀರು ಕುಡಿಯದೇ ಇರುವುದು:

ನೀರು ಮಾನವ ದೇಹದಲ್ಲಿ ಸುಮಾರು 60% ನಷ್ಟು ಭಾಗವನ್ನು ಹೊಂದಿದ್ದು, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಬಹಳ ಮುಖ್ಯವಾಗಿದೆ. ಸಾಕಷ್ಟು ನೀರು ಕುಡಿಯದೇ ಇರುವುದರಿಂದ ಆಯಾಸ, ಆಗಾಗ್ಗೆ ಅನಾರೋಗ್ಯ, ಮಲಬದ್ಧತೆ ಮತ್ತು ಕಳಪೆ ಚರ್ಮದ ಆರೋಗ್ಯದಂತಹ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ನಿರ್ಜಲೀಕರಣವು ನಮ್ಮ ಮುಖದಲ್ಲಿ ಶುಷ್ಕತೆ, ಸೂಕ್ಷ್ಮ ಗೆರೆಗಳು ಮತ್ತು ಡಾರ್ಕ್ ಸರ್ಕಲ್ ಗಳ ರೂಪದಲ್ಲಿ ಕಾಣಬಹುದು. ನಮ್ಮ ತ್ವಚೆಯು ಹೊಳೆಯುವ ಮತ್ತು ಹೆಚ್ಚು ಯೌವ್ವನದಂತೆ ಕಾಣಲು ಸಾಕಷ್ಟು ನೀರು ಕುಡಿಯುವುದು ತುಂಬಾ ಮುಖ್ಯ.

ಧೂಮಪಾನ:

ಧೂಮಪಾನ:

ತಂಬಾಕು ಹೊಗೆಯಲ್ಲಿ ಆಮ್ಲಜನಕದ ಪರಿಚಲನೆ ಮತ್ತು ಚರ್ಮದಲ್ಲಿರುವ ಹಲವಾರು ಪ್ರಮುಖ ಪೋಷಕಾಂಶಗಳನ್ನು ಕಡಿಮೆ ಮಾಡುವ ಹಲವಾರು ವಿಷಗಳಿವೆ. ಧೂಮಪಾನವು ನಮ್ಮ ಚರ್ಮ ಹೊಸ ಕೋಶಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ನಿಲ್ಲಿಸುತ್ತದೆ ಮತ್ತು ಆದ್ದರಿಂದ ನಾವು ವಯಸ್ಸಾದವರಂತೆ ಕಾಣುತ್ತೇವೆ.

ಅತಿಯಾಗಿ ಸಕ್ಕರೆ ಸೇವಿಸುವುದು:

ಅತಿಯಾಗಿ ಸಕ್ಕರೆ ಸೇವಿಸುವುದು:

ಕಾಲಜನ್ ಮತ್ತು ಎಲಾಸ್ಟಿನ್ ಚರ್ಮದ ಎರಡು ಪ್ರಮುಖ ಸಂಯುಕ್ತಗಳಾಗಿವೆ. ಅಧ್ಯಯನದ ಪ್ರಕಾರ, ಅಧಿಕ ಮಟ್ಟದ ಸಕ್ಕರೆ ಅಥವಾ ಗ್ಲುಕೋಸ್ ಸೇವಿಸಿದಾಗ, ಈ ಕಾಲಜನ್ ಮತ್ತು ಎಲಾಸ್ಟಿನ್ ಗಳಿಗೆ ಹಾನಿಯಾಗುತ್ತವೆ. ಇದರಿಂದ ದೇಹದ ನೈಸರ್ಗಿಕ ದುರಸ್ತಿ ಪ್ರಕ್ರಿಯೆಗೆ ಅಡ್ಡಿಯಾಗುತ್ತವೆ.

ಒತ್ತಡ ಮತ್ತು ನಿದ್ರೆಯ ಕೊರತೆ:

ಒತ್ತಡ ಮತ್ತು ನಿದ್ರೆಯ ಕೊರತೆ:

ಪ್ರಸ್ತುತ ಬಹುತೇಕ ಜನರು ನಿದ್ರೆಯಿಂದ ವಂಚಿತನಾಗುತ್ತಿದ್ದಾರೆ ಅಥವಾ ಒತ್ತಡದಲ್ಲಿ ಬದುಕುತ್ತಿದ್ದಾರೆ. ನಾವು ಮಲಗಿದಾಗ, ನಮ್ಮ ದೇಹದ ವ್ಯವಸ್ಥೆಯು ನವೀಕರಣ ಮತ್ತು ದುರಸ್ತಿಗೆ ಒಳಗಾಗುತ್ತದೆ. ಅಗತ್ಯಕ್ಕಿಂತ ಕಡಿಮೆ ನಿದ್ರೆ ಮಾಡುವುದರ ಪರಿಣಾಮ ನಿಮ್ಮ ಮುಖದ ಮೇಲೆ ಕಾಣಿಸಿಕೊಳ್ಳಬಹುದು. ನೀವು ಒತ್ತಡಕ್ಕೊಳಗಾದಾಗ, ನಿಮ್ಮ ನರಮಂಡಲವು ಕಾರ್ಟಿಸೋಲ್ ನಂತಹ ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಒತ್ತಡದ ಹಾರ್ಮೋನ್ ನಮ್ಮ ಚರ್ಮದಲ್ಲಿ ಹೆಚ್ಚಿದ ಎಣ್ಣೆ ಉತ್ಪಾದನೆಗೆ ಕಾರಣವಾಗುತ್ತದೆ ಇದರಿಂದ ರಂಧ್ರಗಳು ಮುಚ್ಚಿಹೋಗಿ ಮೊಡವೆಗಳು ಉಂಟಾಗುತ್ತವೆ.

English summary

Common Habits Which Can Make you Look Older in Kannada

Here we talking about common habits which can make you look older in kannada, read on
Story first published: Saturday, July 31, 2021, 13:30 [IST]
X