For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತಣ್ಣೀರಿನಿಂದ ಮುಖ ತೊಳೆದರೆ, ಈ ತ್ವಚೆ ಸಮಸ್ಯೆಗಳು ದೂರವಾಗುತ್ತವೆ

|

ಚಳಿಗಾಲದಲ್ಲಿ, ತ್ವಚೆಯು ತುಂಬಾ ಒಣಗಿ, ಹಲವಾರು ಚರ್ಮದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇದನ್ನು ಹೋಗಲಾಡಿಸಲು ಕೋಲ್ಡ್ ಕ್ರೀಮ್ ಅಥವಾ ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ, ತಣ್ಣೀರು ಚಳಿಗಾಲದಲ್ಲಿ ಅನೇಕ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ?.

ಹೌದು, ಯಾವುದೇ ಉತ್ತಮ ಮಾಯಿಶ್ಚರೈಸರ್ ಅಥವಾ ಸೌಂದರ್ಯ ಉತ್ಪನ್ನಗಳಿಗಿಂತ ತಣ್ಣೀರು ನಿಮ್ಮ ಚರ್ಮದ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಮುಖ ಅಥವಾ ಕಣ್ಣು ಊದಿಕೊಂಡಿದ್ದರೆ, ತಕ್ಷಣವೇ ಚಿಕಿತ್ಸೆ ನೀಡುವುದು. ಹಾಗಾದರೆ, ತಣ್ಣೀರು ತ್ವಚೆಗೆ ಏನೆಲ್ಲಾ ಪ್ರಯೋಜನಗಳನ್ನು ತರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ತಣ್ಣೀರಿನಿಂದ ಚರ್ಮಕ್ಕೆ ಆಗುವ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮುಖದ ಊತವನ್ನು ನಿವಾರಿಸುವುದು:

ಮುಖದ ಊತವನ್ನು ನಿವಾರಿಸುವುದು:

ನಾವು ಬೆಳಿಗ್ಗೆ ಬೇಗ ಹಾಸಿಗೆಯಿಂದ ಎದ್ದಾಗ, ನಮ್ಮ ಕಣ್ಣುಗಳು ಊದಿಕೊಂಡಿರುತ್ತವೆ. ಕೆಲವೊಮ್ಮೆ, ನಿದ್ರೆಯ ಕೊರತೆ, ಒತ್ತಡ ಅಥವಾ ಆಹಾರದ ಅಲರ್ಜಿಯ ಕಾರಣದಿಂದಾಗಿ, ಮುಖದ ಮೇಲೆ ಪಫಿನೆಸ್ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಮುಖ ಮತ್ತು ಕಣ್ಣುಗಳ ಊತವನ್ನು ತೆಗೆದುಹಾಕಲು ತಣ್ಣೀರು ತುಂಬಾ ಪರಿಣಾಮಕಾರಿಯಾಗಿದೆ. ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ತಣ್ಣೀರಿನಿಂದ ಮುಖ ತೊಳೆಯಿರಿ. ತಣ್ಣೀರು ಉಬ್ಬಿದ ಮುಖವನ್ನು ಗುಣಪಡಿಸುವುದು ಮಾತ್ರವಲ್ಲದೆ ರಾತ್ರಿ ಚರ್ಮದ ಮೇಲೆ ಸಂಗ್ರಹವಾಗುವ ಎಣ್ಣೆಯನ್ನು ಹೋಗಲಾಡಿಸುತ್ತದೆ.

ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುವುದು:

ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುವುದು:

ತಣ್ಣೀರಿನಿಂದ ಮುಖ ತೊಳೆದರೆ ತ್ವಚೆಯು ತಾರುಣ್ಯ ಮತ್ತು ಫ್ರೆಶ್ ಆಗಿ ಕಾಣುತ್ತದೆ. ತಣ್ಣೀರು ಮುಖದ ಮೇಲಿನ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ಚಳಿಗಾಲದಲ್ಲೂ ಬೆಳಗ್ಗೆ ಎದ್ದ ತಕ್ಷಣ ತಣ್ಣೀರಿನಿಂದ ಮುಖ ತೊಳೆಯಿರಿ.

ಡಲ್‌ನೆಸ್ ನಿವಾರಿಸುವುದು:

ಡಲ್‌ನೆಸ್ ನಿವಾರಿಸುವುದು:

ತಣ್ಣೀರಿನಿಂದ ಮುಖ ತೊಳೆದರೆ ತ್ವಚೆಯ ಮಂದತೆ ದೂರವಾಗುತ್ತದೆ. ತಣ್ಣೀರು ಚರ್ಮವನ್ನು ತಾಜಾವಾಗಿರಿಸುತ್ತದೆ. ಚಳಿಗಾಲದಲ್ಲಿ, ತಣ್ಣೀರು ನಿಮ್ಮ ಚರ್ಮಕ್ಕೆ ಹೆಚ್ಚು ರಕ್ತವನ್ನು ಪಂಪ್ ಮಾಡಿ, ಚರ್ಮವನ್ನು ಹೆಚ್ಚು ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ. ಈ ಮೂಲಕ ತ್ವಚೆಯಲ್ಲಿ ಕಾಂತಿ ಹೊಮ್ಮುವಂತೆ ಮಾಡುತ್ತದೆ.

ತೆರೆದ ಚರ್ಮದ ರಂಧ್ರಗಳನ್ನು ಮುಚ್ಚುವುದು:

ತೆರೆದ ಚರ್ಮದ ರಂಧ್ರಗಳನ್ನು ಮುಚ್ಚುವುದು:

ಚಳಿಗಾಲದಲ್ಲಿ ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಈ ಚರ್ಮದ ರಂಧ್ರಗಳನ್ನು ಮುಚ್ಚಲು ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಬಿಸಿನೀರಿನಲ್ಲಿ ಸ್ನಾನ ಮಾಡಿದರೂ, ಮುಖವನ್ನು ತಣ್ಣೀರಿನಿಂದ ತೊಳೆಯುವುದು ಉತ್ತಮ. ಜೊತೆಗೆ ತಣ್ಣೀರು ನಿಮ್ಮ ತ್ವಚೆಯ ಜೊತೆಗೆ ನಿಮ್ಮ ಕಣ್ಣುಗಳನ್ನು ತಾಜಾವಾಗಿರಿಸುತ್ತದೆ.

ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುವುದು:

ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುವುದು:

ಚಳಿಗಾಲದಲ್ಲಿ, ನಾವು ದೀರ್ಘಕಾಲದವರೆಗೆ ಸೂರ್ಯನಲ್ಲಿ ಕುಳಿತುಕೊಳ್ಳುತ್ತೇವೆ, ಇದು ಚರ್ಮಕ್ಕೆ ಹೆಚ್ಚು ಹಾನಿಯನ್ನುಂಟುಮಾಡುತ್ತದೆ. ತಣ್ಣೀರಿನಿಂದ ಮುಖ ತೊಳೆಯುವುದರಿಂದ ಸೂರ್ಯನ ಹಾನಿಕಾರಕ ಕಿರಣಗಳ ಪ್ರಭಾವದಿಂದ ಚರ್ಮವನ್ನು ರಕ್ಷಿಸಬಹುದು. ಮುಖದ ಮೇಲಿನ ಸೂಕ್ಷ್ಮ ರೇಖೆಗಳನ್ನು ತೊಡೆದುಹಾಕಲು, ನಾವು ಅತ್ಯುತ್ತಮವಾದ ಕ್ರೀಮ್ಗಳು ಮತ್ತು ವಿವಿಧ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಮುಖದ ಅಂದವನ್ನು ಹೆಚ್ಚಿಸಲು ಮತ್ತು ಕಣ್ಣುಗಳ ಊತವನ್ನು ಹೋಗಲಾಡಿಸಲು ಕೇವಲ ತಣ್ಣೀರು ಸಾಕು ಎಂಬುದು ಈ ಮೂಲಕ ತಿಳಿದುಬರುತ್ತದೆ.

English summary

Benefits of Washing Face with Cold Water in Kannada

Here we talking about Benefits of washing face with cold water in kannada, read on
Story first published: Saturday, January 1, 2022, 16:28 [IST]
X
Desktop Bottom Promotion