For Quick Alerts
ALLOW NOTIFICATIONS  
For Daily Alerts

ಶ್ರೀಗಂಧ ಹಚ್ಚಿದರೆ ಈ ಚರ್ಮ ಸಮಸ್ಯೆಗಳು ಬರುವುದೇ ಇಲ್ಲ

|

ಸೌಂದರ್ಯದ ಕಾಳಜಿ ಯಾರಿಗೇ ಆಗಲಿ ತ್ವಚೆ ಕಪ್ಪಾಗುವುದು, ಮೊಡವೆಗಳು, ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ಸೇರಿದಂತೆ ಹಲವು ತ್ವಚೆಯ ಸಮಸ್ಯೆಗಳು ಒಂದಿಲ್ಲೊಂದು ವಯಸ್ಸಿನಲ್ಲಿ ಕಾಡಿರುತ್ತದೆ. ಅದಕ್ಕೆ ಸಾಕಷ್ಟು ರಾಸಾಯನಿಕಯುಕ್ತ ಕ್ರೀಂಗಳ ಪ್ರಯೋಗಗಳು ಸಹ ನಡೆದಿರುತ್ತದೆ. ಕೆಲವು ತಾತ್ಕಾಲಿಕ ಪರಿಹಾರ ನೀಡಿದರೆ, ಕೆಲವು ದೀರ್ಘಕಾಲದ ಸಮಸ್ಯೆಗಳನ್ನು ತಂದೊಡ್ಡುತ್ತದೆ.

Benefits Of Sandalwood For Skin in Kannada

ತ್ವಚೆಯ ಕಾಳಜಿಗೆ ಈಗಾಗಲೇ ನಾವು ಸಾಕಷ್ಟು ಮನೆಮದ್ದುಗಳ ಪರಿಹಾರಗಳನ್ನು ನೀಡಿದ್ದೇವೆ. ಇದೀಗ ಕೊಂಚ ದುಬಾರಿಯಾದರೂ ಸುಲಭವಾಗಿಯೇ ಸಿಗುವ ಶುದ್ಧವಾದ ಶ್ರೀಗಂಧದ ಮೂಲಕ ತ್ವಚೆಯನ್ನು ಕಾಳಜಿ ಮಾಡುವುದರಿಂದ ನಿಮ್ಮ ತ್ವಚೆಯನ್ನು ಯಾವೆಲ್ಲಾ ಸಮಸ್ಯೆಗಳಿಂದ ರಕ್ಷಿಸುತ್ತದೆ, ಚಂದನ ತ್ವಚೆಗೆ ಎಚ್ಟು ಸುರಕ್ಷಿತ ಎಂಬುದನ್ನು ಇಲ್ಲಿ ತಿಳಿಸಿಕೊಡಲಿದ್ದೇವೆ.

ಚರ್ಮದಿಂದ ಹೆಚ್ಚುವರಿ ಎಣ್ಣೆ ಮತ್ತು ಮೇದೋಗ್ರಂಥಿಯನ್ನು ನೆನೆಸುವಲ್ಲಿ ಶ್ರೀಗಂಧ ಪರಿಣಾಮಕಾರಿ. ಶ್ರೀಗಂಧದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಚಂದನ ತ್ವಚೆಯನ್ನು ಹೇಗೆಲ್ಲಾ ರಕ್ಷಿಸುತ್ತದೆ ಗೊತ್ತಾ:

ತ್ವಚೆ ಕಪ್ಪಾಗುವುದನ್ನು ತಪ್ಪಿಸುತ್ತದೆ

ತ್ವಚೆ ಕಪ್ಪಾಗುವುದನ್ನು ತಪ್ಪಿಸುತ್ತದೆ

ಸುಡುವ ಬಿಸಿಲಿನ ಬೇಗೆಯಿಂದ ಶಮನಗೊಳಿಸಲು ಮತ್ತು ಚರ್ಮ ಕಪ್ಪಾಗುವುದನ್ನು ತಡೆಯಲು ಬಳಸಬಹುದಾದ ಅತ್ಯುತ್ತಮ ಮನೆಮದ್ದು ಎಂದರೆ ಶ್ರೀಗಂಧದ ಪೇಸ್ಟ್. ಶ್ರೀಗಂಧದ ನೈಸರ್ಗಿಕ ತೈಲಗಳು ಚರ್ಮದ ಮೈಬಣ್ಣವನ್ನು ನೈಸರ್ಗಿಕವಾಗಿಯೇ ಕಪ್ಪು ಕಲೆ ನಿವಾರಿಸಿ ಆರೋಗ್ಯಕರ ಹೊಳಪನ್ನು ನೀಡುತ್ತದೆ.

ತ್ವಚೆ ಸುಕ್ಕಾಗುವುದನ್ನು ತಪ್ಪಿಸುತ್ತದೆ

ತ್ವಚೆ ಸುಕ್ಕಾಗುವುದನ್ನು ತಪ್ಪಿಸುತ್ತದೆ

ಶ್ರೀಗಂಧವು ಚರ್ಮದ ರಂಧ್ರಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದು ಚರ್ಮವನ್ನು ನವಯೌವ್ವನಗೊಳಿಸುತ್ತದೆ, ಚರ್ಮ ಕುಗ್ಗುವುದು ಮತ್ತು ವಯಸ್ಸಾದಂತೆ ಆಗುವುದನ್ನು ತಡೆಯುತ್ತದೆ. ಇದು ಚರ್ಮ ಸದಾ ತಾಜಾ ಆಗಿರುವಂತೆ ಮಾಡಲು ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ.

ಚರ್ಮ ಮೃದುಗೊಳಿಸುತ್ತದೆ

ಚರ್ಮ ಮೃದುಗೊಳಿಸುತ್ತದೆ

ಚರ್ಮವನ್ನು ಮಗುವಿನ ಚರ್ಮದಂತೆ ಮೃದುವಾಗಿಸಲು ಶ್ರೀಗಂಧದ ಎಣ್ಣೆಯ ಬಹಳ ಪ್ರಯೋಜನಕಾರಿ. ಶ್ರೀಗಂಧದ ಎಣ್ಣೆಯನ್ನೇ ನೇರವಾಗಿ ತ್ವಚೆಗೆ ಅನ್ವಯಿಸಬಹುದು ಅಥವಾ ಇತರ ನೈಸರ್ಗಿಕ ಎಣ್ಣೆಗಳ ಜತೆ ಬೆರೆಸಿ ಚರ್ಮಕ್ಕೆ ಮಸಾಜ್ ಮಾಡಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಮೊಡವೆಗೆ ಚಿಕಿತ್ಸೆ

ಮೊಡವೆಗೆ ಚಿಕಿತ್ಸೆ

ಶ್ರೀಗಂಧದ ಶಕ್ತಿಯುತ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಇದು ಗುಳ್ಳೆಗಳು ಮತ್ತು ಮೊಡವೆಗಳು ಒಡೆಯುವುದನ್ನು ತಡೆಯುತ್ತದೆ.

ಕಜ್ಜಿ ನಿವಾರಣೆ

ಕಜ್ಜಿ ನಿವಾರಣೆ

ಚರ್ಮದ ಮೇಲೆ ಶ್ರೀಗಂಧವನ್ನು ಅನ್ವಯಿಸಿದ 30 ನಿಮಿಷಗಳಲ್ಲಿ ಚರ್ಮ ತುರಿಕೆ ಮತ್ತು ಸೋಂಕುಗಳನ್ನು ನಿವಾರಿಸಬಹುದು. ಅಷ್ಟು ಪರಿಣಾಮಕಾರಿ ದಿವ್ಯೌಷಧಿ ಚಂದನ. ಉರಿಯೂತ, ಚರ್ಮ ಕೆಂಪಾಗುವುದು ಮತ್ತು ಚರ್ಮದ ಇತರೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಬೆವರಿನ ತುರಿಕೆ

ಬೆವರಿನ ತುರಿಕೆ

ಬೇಸಿಗೆಯ ಸಮಯದಲ್ಲಿ ಅತಿಯಾದ ಶೆಕೆಯಿಂದ ಬೆವರು ಹೆಚ್ಚಾಗಿ ತುರಿಕೆ ಮತ್ತು ಒಂದು ರೀತಿಯ ಚರ್ಮದ ಹಿಂಸೆಗೆ ಕಾರಣವಾಗುತ್ತದೆ. ಆದರೆ ಶ್ರೀಗಂಧದಲ್ಲಿ ತಂಪಾಗಿಸುವ ಗುಣವನ್ನು ಹೊಂಇದ್ದು,ಇದು ಚರ್ಮವನ್ನು ತಂಪಾಗಿಸಲು, ತುರಿಕೆ ಮತ್ತು ಚರ್ಮದ ಕಿರಿಕಿರಿಯನ್ನು ತಪ್ಪಿಸುತ್ತದೆ.

ಚರ್ಮ ಹೊಳೆಯುವಂತೆ ಮಾಡುತ್ತದೆ

ಚರ್ಮ ಹೊಳೆಯುವಂತೆ ಮಾಡುತ್ತದೆ

ಕಪ್ಪಾಗಿರುವ ತ್ವಚೆ ಯಾರಿಗೆ ತಾನೆ ಇಷ್ಟವಾಗುತ್ತದೆ. ಕೆಲವು ಬಾರಿ ನಮ್ಮ ನೈಜ ಬಣ್ಣವನ್ನು ಮರೆಮಾಚಿ, ಧೂಳು, ಹೊಗೆ, ಬಿಸಿಲಿಗೆ ಚರ್ಮ ಕಪ್ಪಾಗುತ್ತದೆ. ಇದಕ್ಕೆ ಇತರ ನೈಸರ್ಗಿಕ ಪದಾರ್ಥಗಳೊಂದಿಗೆ ಬೆರೆಸಿದ ಶ್ರೀಗಂಧವನ್ನು ಹಚ್ಚುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನೈಸರ್ಗಿಕವಾಗಿ ಚರ್ಮವನ್ನು ಕಾಂತಿಯುತಗೊಳಿಸಬಹುದು.

English summary

Benefits Of Sandalwood For Skin in Kannada

There is a wide range of medicinal properties of sandalwood that makes it the best and most reliable of home remedies for face and all types of skin conditions like eczema, psoriasis and ringworm rash treatment. Read more.
Story first published: Saturday, October 17, 2020, 10:58 [IST]
X
Desktop Bottom Promotion