For Quick Alerts
ALLOW NOTIFICATIONS  
For Daily Alerts

ತೊಂಡೆಯಂತಹ ಗುಲಾಬಿ ಬಣ್ಣದ ತುಟಿಗಳು ನಿಮ್ಮದಾಗಬೇಕೇ? ಇಲ್ಲಿದೆ ಸರಳ ಉಪಾಯ

|

ಮಗುವಿನಂತಹ ಕೋಮಲವಾದ ತುಟಿ ಪಡೆಯಬೇಕೆಂಬುದು ಪ್ರತಿಯೊಬ್ಬರ ಆಸೆ. ಆದರೆ ಬಿಸಿಲು, ಪೋಷಕಾಂಶಗಳ ಕೊರತೆ, ಧೂಮಪಾನದಂತಹ ನಾನಾ ಕಾರಣಗಳಿಂದ ನಮ್ಮ ತುಟಿಗಳು ಕಪ್ಪಾಗಿ ಕಳಾಹೀನವಾಗಿರುತ್ತವೆ. ಆದ್ದರಿಂದ ನಾವಿಲ್ಲಿ ಕೊಬ್ಬಿದ ಹಾಗೂ ಗುಲಾಬಿ ಬಣ್ಣದ ತುಟಿಗಳನ್ನು ಸಿಂಪಲ್ ಮನೆಮದ್ದು ಬಳಸಿ ಪಡೆಯುವುದು ಹೇಗೆ ಎಂಬುದನ್ನು ಹೇಳಿದ್ದೇವೆ.

ಕೊಬ್ಬಿದ ಹಾಗೂ ಗುಲಾಬಿ ಬಣ್ಣದ ತುಟಿಗಳನ್ನು ಪಡೆಯಲು ಸಿಂಪಲ್ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ಕೊಬ್ಬಿದ ತುಟಿಗಳಿಗೆ ಪರಿಹಾರಗಳು:

1. ಆಲಿವ್ ಎಣ್ಣೆ :

1. ಆಲಿವ್ ಎಣ್ಣೆ :

ಈ ನೈಸರ್ಗಿಕ ಪರಿಹಾರವು ನಿಮ್ಮ ತುಟಿಗಳನ್ನು ರಸಗುಲ್ಲದಂತೆ ಉಬ್ಬುವಂತೆ ಮಾಡುತ್ತದೆ. ಇದಕ್ಕಾಗಿ ನೀವು ಒಂದು ಚಮಚ ಆಲಿವ್ ಎಣ್ಣೆಯನ್ನು ಒಂದು ಪಿಂಚ್ ಕೆಂಪುಮೆಣಸಿನೊಂದಿಗೆ ಬೆರೆಸಿ, ನಿಮ್ಮ ತುಟಿಗಳಿಗೆ ನಿಧಾನವಾಗಿ ಹಚ್ಚಿ. 10 ನಿಮಿಷಗಳ ನಂತರ ತೊಳೆಯಿರಿ. ನಂತರ ಜೆಲ್ ಆಧಾರಿತ ಲಿಪ್ ಬಾಮ್‌ನಿಂದ ನಿಮ್ಮ ತುಟಿಗಳನ್ನು ಆರ್ಧ್ರಕಗೊಳಿಸಿ.

2. ದಾಲ್ಚಿನ್ನಿ ಬಾಮ್:

2. ದಾಲ್ಚಿನ್ನಿ ಬಾಮ್:

ಈ ಪರಿಮಳಯುಕ್ತ ದಾಲ್ಚಿನ್ನಿ ಬಾಮ್ ನಿಮ್ಮ ತುಟಿಗಳು ಕೊಬ್ಬಿದಂತಾಗಲು ಸಹಾಯ ಮಾಡುತ್ತದೆ ಜೊತೆಗೆ ಅವುಗಳನ್ನು ದೀರ್ಘಕಾಲದವರೆಗೆ ಮಾಯಿಶ್ಚರೈಸರ್ ನಿಂದ ಕೂಡಿರುವಂತೆ ಮಾಡುವುದು. ಇದಕ್ಕಾಗಿ ನಿಮ್ಮ ನೆಚ್ಚಿನ ಲಿಪ್ ಬಾಮ್ ನ ಸ್ವಲ್ಪ ಪ್ರಮಾಣವನ್ನು ತೆಗೆದುಕೊಂಡು ಅದನ್ನು ಕರಗಿಸಿ. ಕರಗಿದ ಲಿಪ್ ಬಾಮ್ ಅನ್ನು ¼ ಟೀಚಮಚ ದಾಲ್ಚಿನ್ನಿ ಎಣ್ಣೆಯೊಂದಿಗೆ ಬೆರೆಸಿ. ಈ ಮಿಶ್ರಣವು ತಣ್ಣಗಾದ ನಂತರ, ನಿಮಗೆ ಬೇಕಾದಾಗ ಅದನ್ನು ಹಚ್ಚಿಕೊಳ್ಳಿ.

3. ಪುದೀನಾ:

3. ಪುದೀನಾ:

ಇದು ನಯವಾದ ತುಟಿಗೆ ಉತ್ತಮ ಹೊಳಪು ನೀಡುವುದು. ಇದಕ್ಕಾಗಿ ಪರಿಮಳವಿಲ್ಲದ ಲಿಪ್ ಗ್ಲೋಸ್, 6 ಹನಿ ಪುದೀನಾ ಎಣ್ಣೆ, ಮತ್ತು ಒಂದು ಪಿಂಚ್ ಕೆಂಪುಮೆಣಸನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಯಾವುದೇ ಸಮಯದಲ್ಲಿ ಪೂರ್ಣ ತುಟಿಗಳನ್ನು ಪಡೆಯಲು ಅದನ್ನು ಹಚ್ಚಿ.

ಗುಲಾಬಿ ತುಟಿಗಳಿಗೆ ಸರಳ ಪರಿಹಾರಗಳು:

ಗುಲಾಬಿ ತುಟಿಗಳಿಗೆ ಸರಳ ಪರಿಹಾರಗಳು:

1. ಜೇನುತುಪ್ಪ ಮತ್ತು ಸಕ್ಕರೆ:

ಈ ನೈಸರ್ಗಿಕ ತುಟಿಯ ಸ್ಕ್ರಬ್ ನಿಮ್ಮ ತುಟಿಗಳಿಂದ ಎಲ್ಲಾ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಮೃದುಗೊಳಿಸುತ್ತದೆ. ಇದಕ್ಕಾಗಿ ನೀವು

1 ಚಮಚ ಬ್ರೌನ್ ಅಥವಾ ಬಿಳಿ ಸಕ್ಕರೆಯನ್ನು 1 ಚಮಚ ಜೇನುತುಪ್ಪದೊಂದಿಗೆ ಬೆರೆಸಿ, ಅದನ್ನು ನಿಮ್ಮ ತುಟಿಗಳಿಗೆ ಸ್ಕ್ರಬ್ ಆಗಿ ಬಳಸಿ, ಲಘುವಾಗಿ ಮಸಾಜ್ ಮಾಡಿ. 10-15 ನಿಮಿಷಗಳ ಕಾಲ ಬಿಡಿ. ತಣ್ಣೀರು ಬಳಸಿ ತೊಳೆಯಿರಿ. ಪಿಂಕ್ ತುಟಿಗಳಿಗಾಗಿ ವಾರಕ್ಕೆ 2-3 ಬಾರಿ ಇದನ್ನು ಪುನರಾವರ್ತಿಸಿ.

2. ಅರಿಶಿನ ಮತ್ತು ಹಾಲು:

2. ಅರಿಶಿನ ಮತ್ತು ಹಾಲು:

ಅರಿಶಿನಕ್ಕೆ ಆಯುರ್ವೇದದಲ್ಲಿ ಮಹತ್ತರ ಸ್ಥಾನವಿದೆ. ಜೊತೆಗೆ ಬೆರೆಸುವ ಹಾಲು ಕೂಡ ತುಟಿಗಳ ಕೋಮಲತೆಯನ್ನು ಕಾಪಾಡಲು ಸಹಾಯ ಮಾಡುವುದು. ಇದಕ್ಕಾಗಿ ನೀವು 1 ಚಮಚ ಹಾಲನ್ನು ½ ಟೀಸ್ಪೂನ್ ಅರಿಶಿನದೊಂದಿಗೆ ಬೆರೆಸಿ, ಪೇಸ್ಟ್ ತಯಾರಿಸಿ ತುಟಿಗಳಿಗೆ ಹಚ್ಚಿ. 5-10 ನಿಮಿಷಗಳ ಕಾಲ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ.

3. ನಿಂಬೆ ಮತ್ತು ಪುದಿನಾ:

3. ನಿಂಬೆ ಮತ್ತು ಪುದಿನಾ:

ನಿಮ್ಮ ಒಣ ತುಟಿಗಳಿಗೆ ವಿದಾಯ ಹೇಳಿ, ಮೃದುವಾದ, ಮತ್ತು ಗುಲಾಬಿ ಬಣ್ಣದ ತುಟಿಗಳನ್ನು ಪಡೆಯಲು ಈ ಎರಡು ಉತ್ಪನ್ನಗಳನ್ನು ಬಳಸಬಹುದು. ಇದಕ್ಕಾಗಿ 5-6 ಪುಡಿಮಾಡಿದ ಪುದೀನ ಎಲೆಗಳನ್ನು ಕೆಲವು ಹನಿ ಜೇನುತುಪ್ಪ ಮತ್ತು 2-3 ಟೀ ಚಮಚ ನಿಂಬೆ ರಸದೊಂದಿಗೆ ಬೆರೆಸಿ ನಂತರ ಈ ಮಿಶ್ರಣವನ್ನು ತುಟಿಗಳಿಗೆ ಹಚ್ಚಿ ಮತ್ತು ನಿಮಗೆ ಬೇಕಾದಾಗ ಒರೆಸಿಕೊಳ್ಳಿ. ಈ ಪರಿಹಾರವನ್ನು ನೀವು ಮೂರು ದಿನಗಳಿಗೊಮ್ಮೆ ಅಭ್ಯಾಸ ಮಾಡಬಹುದು.

English summary

Beauty tips for Plumper and Pinker Lips in Kannada

Here we talking about Beauty tips for plumper and pinker lips in Kannada, read on
Story first published: Thursday, June 24, 2021, 12:00 [IST]
X
Desktop Bottom Promotion