For Quick Alerts
ALLOW NOTIFICATIONS  
For Daily Alerts

ತುಳಸಿಯಿಂದ ಮಾಯವಾಗುವುದು ಮೊಡವೆ! ಹೇಗೆ ಇಲ್ಲಿ ನೋಡಿ

|

ತುಳಸಿಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಮಹೋನ್ನತ ಸ್ಥಾನವಿದೆ. ಪೂಜ್ಯನೀಯ ಭಾವವಿರುದ ಈ ತುಳಸಿಯನ್ನು ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಸ್ಯವೆಂದು ಪರಿಗಣಿಸಲಾಗುತ್ತದೆ. ಅನೇಕ ರೋಗಗಳಲ್ಲಿ ತುಳಸಿಯನ್ನು ಔಷಧಿಯಾಗಿ ಬಳಸುವುದರ ಜೊತೆಗೆ, ತುಳಸಿ ಎಲೆಗಳನ್ನು ಚರ್ಮದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸಲಾಗುತ್ತದೆ. ಇಂತಹ ತುಳಸಿ ನಿಮ್ಮ ಸೌಂದರ್ಯಕ್ಕೆ ಎಂತಹ ಮ್ಯಾಜಿಕ್ ಮಾಡುತ್ತೆ ಗೊತ್ತಾ? ಈ ಸ್ಟೋರಿ ಓದಿ.

ತುಳಸಿಯಲ್ಲಿರುವ ಪೋಷಕಾಂಶಗಳು:

ತುಳಸಿಯಲ್ಲಿರುವ ಪೋಷಕಾಂಶಗಳು:

ತುಳಸಿ ಎಲೆಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದ್ದು, ಮುಖ್ಯವಾಗಿ ವಿಟಮಿನ್ ಸಿ, ಕ್ಯಾಲ್ಸಿಯಂ, ಸತು ಮತ್ತು ಕಬ್ಬಿಣ ಇತ್ಯಾದಿಗಳನ್ನು ಹೊಂದಿರುತ್ತದೆ. ಇದರೊಂದಿಗೆ ಸಿಟ್ರಿಕ್, ಟಾರ್ಟಾರಿಕ್ ಮತ್ತು ಮಾಲಿಕ್ ಆಮ್ಲವು ತುಳಸಿಯಲ್ಲಿ ಕಂಡುಬರುತ್ತದೆ. ಇವೆಲ್ಲವೂ ನಿಮ್ಮ ಕೂದಲು ಹಾಗೂ ತ್ವಚೆ ರಕ್ಷಣೆಗೆ ಸಹಾಯ ಮಾಡುವಂತಹ ಅಂಶಗಳಾಗಿವೆ.

ಚರ್ಮದ ಆರೈಕೆಗಾಗಿ ತುಳಸಿ :

ಚರ್ಮದ ಆರೈಕೆಗಾಗಿ ತುಳಸಿ :

ತುಳಸಿ ಗುಳ್ಳೆಗಳು ಮತ್ತು ಮೊಡವೆಗಳ ಮೇಲೆ ಸಹ ಕಾರ್ಯನಿರ್ವಹಿಸುತ್ತದೆ. ವಿಷ ಮತ್ತು ಕಲ್ಮಶಗಳನ್ನು ತೆಗೆದುಹಾಕಿ ರಕ್ತವನ್ನು ಸ್ವಚ್ಛಗೊಳಿಸುವಲ್ಲಿ ತುಳಸಿ ಕೆಲಸ ಮಾಡುತ್ತದೆ. ಇದು ಮೊಡವೆಗಳನ್ನು ಕಡಿಮೆ ಮಾಡುವ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದಕ್ಕಾಗಿ, ತುಳಸಿ ಎಲೆಗಳ ಪೇಸ್ಟ್ ತಯಾರಿಸಿ, ಅದಕ್ಕೆ ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ, 10 ನಿಮಿಷಗಳ ಕಾಲ ಬಿಟ್ಟು, ಸರಳ ನೀರಿನಿಂದ ತೊಳೆಯಿರಿ.

ತುಳಸಿಯ ಇತರ ಪ್ರಯೋಜನಗಳು:

ತುಳಸಿಯ ಇತರ ಪ್ರಯೋಜನಗಳು:

  • ಉಸಿರಾಟದ ಸಮಸ್ಯೆಗಳಿಗೆ, ತುಳಸಿ ಎಲೆಗಳನ್ನು ಕಪ್ಪು ಉಪ್ಪಿನೊಂದಿಗೆ ಸೇರಿಸಿ ಬಾಯಿಯಲ್ಲಿ ಇಟ್ಟುಕೊಳ್ಳುವುದು ಪರಿಹಾರವನ್ನು ನೀಡುತ್ತದೆ.
  • ತುಳಸಿಯ ಹಸಿರು ಎಲೆಗಳನ್ನು ಬೆಂಕಿಯಲ್ಲಿ ಸುಟ್ಟು ಉಪ್ಪಿನೊಂದಿಗೆ ತಿನ್ನಿರಿ, ಇದು ಕೆಮ್ಮು ಮತ್ತು ಗಂಟಲು ಗುಣಪಡಿಸುತ್ತದೆ.
  • ತುಳಸಿ ಎಲೆಗಳೊಂದಿಗೆ 4 ಹುರಿದ ಲವಂಗವನ್ನು ಅಗಿಯುವುದರಿಂದ ಕೆಮ್ಮು ಗುಣವಾಗುತ್ತದೆ.
  • ಎಳೆ ತುಳಸಿ ಎಲೆಗಳನ್ನು ಅಗಿಯುವುದರಿಂದ ಕೆಮ್ಮು ಮತ್ತು ವಾಕರಿಕೆ ನಿವಾರಣೆಯಾಗುತ್ತದೆ.
  • ಕೆಮ್ಮು ಮತ್ತು ಶೀತ ಇರುವಾಗ ತುಳಸಿ ಎಲೆಗಳಿಂದ ತಯಾರಿಸಿದ ಚಹಾವನ್ನು ಕುಡಿಯುವುದು ಜೊತೆಗೆ ಅದಕ್ಕೆ ಶುಂಠಿ ಮತ್ತು ಕರಿಮೆಣಸು ಸೇರಿಸಿದರೆ ತಕ್ಷಣದ ಪ್ರಯೋಜನಗಳನ್ನು ನೀಡುತ್ತದೆ.
  • 10-12 ತುಳಸಿ ಎಲೆಗಳು ಮತ್ತು 8-10 ಕರಿಮೆಣಸಿನಿಂದ ಮಾಡಿದ ಚಹಾವು ಕೆಮ್ಮು, ಶೀತ, ಜ್ವರವನ್ನು ಗುಣಪಡಿಸುವುದು.
  • ಸುಮಾರು ಒಂದೂವರೆ ಟೀಸ್ಪೂನ್ ಕರಿಮೆಣಸಿನೊಂದಿಗೆ ಕಪ್ಪು ತುಳಸಿಯನ್ನು ಕಾಯಿಸಿ, ಕಷಾಯವನ್ನು ಮಾಡಿ ಕುಡಿಯುವ ಮೂಲಕ ಕೆಮ್ಮು ಸಂಪೂರ್ಣವಾಗಿ ಕಡಿಮೆಯಾಗುವುದು.
  • 5 ಗ್ರಾಂ ಜೇನುತುಪ್ಪದೊಂದಿಗೆ 10 ಗ್ರಾಂ ತುಳಸಿ ರಸವನ್ನು ಸೇವಿಸುವುದರಿಂದ, ಆಸ್ತಮಾ ಮತ್ತು ಉಸಿರಾಟದ ಕಾಯಿಲೆಗಳನ್ನು ಗುಣಪಡಿಸಬಹುದು.
English summary

Beauty Benefits of Tulsi for Skin in Kannada

Here we talking about Beauty benefits of tulsi for skin in kannada, read on
Story first published: Saturday, July 24, 2021, 18:32 [IST]
X
Desktop Bottom Promotion