For Quick Alerts
ALLOW NOTIFICATIONS  
For Daily Alerts

ನಲವತ್ತರ ಮೇಲೂ ತ್ವಚೆಯಲ್ಲಿ ಕಾಂತಿ ಬೇಕೇ? ಹಾಗಾದ್ರೆ ಪ್ರತಿದಿನ ನೆಲಗಡಲೆ ತಿನ್ನಿ

|

ಪ್ರತಿಯೊಬ್ಬರೂ ಸ್ಪಷ್ಟ ಮತ್ತು ಹೊಳೆಯುವ ತ್ವಚೆಯನ್ನು ಬಯಸುತ್ತಾರೆ. ಅದನ್ನು ಪಡೆಯಲು ನಾನಾ ವಿಷಯಗಳನ್ನು ಪ್ರಯತ್ನಿಸುತ್ತಲೂ ಇರುತ್ತಾರೆ. ಆದರೆ ಕಡಲೆಕಾಯಿಯನ್ನು ಸೇವಿಸುವುದು ಕಾಂತಿಯುತ ತ್ವಚೆಯನ್ನು ಪಡೆಯುವ ಅತ್ಯಂತ ನೈಸರ್ಗಿಕ ವಿಧಾನವೆಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಬಡವರ ಬಾದಾಮಿ ಎಂದೇ ಪ್ರಸಿದ್ಧಿಯಾದ ಕಡಲೆಕಾಯಿ ಅಥವಾ ನೆಲಗಡಲೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು ತಿಳಿದಿರುವ ಸಂಗತಿಯಾಗಿದೆ. ಆದರೆ ಇದು ನಿಮ್ಮ ಚರ್ಮಕ್ಕೂ ಹೇಗೆ ಪ್ರಯೋಜನಕಾರಿ ಆಗಲಿದೆ ಎಂಬುದನ್ನು ತಿಳಿದುಕೊಳ್ಳಲು ಕೆಳಗೆ ಸ್ಕ್ರೋಲ್ ಮಾಡಿ.

Beauty Benefits of Peanuts for Skin

ಕಡಲೆಕಾಯಿ ಸೇವನೆಯಿಂದ ತ್ವಚೆಗೆ ಎಷ್ಟು ಪ್ರಯೋಜನ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ತ್ವಚೆಯನ್ನು ಕ್ಲೀನ್ -ಕ್ಲಿಯರ್ ಮಾಡುವುದು:

ತ್ವಚೆಯನ್ನು ಕ್ಲೀನ್ -ಕ್ಲಿಯರ್ ಮಾಡುವುದು:

ಕಡಲೆಕಾಯಿ ಅಥವಾ ಶೇಂಗಾವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಚರ್ಮವನ್ನು ಸ್ವಚ್ಛ ಮತ್ತು ಸ್ಪಷ್ಟವಾಗಿಸಬಹುದು. ಏಕೆಂದರೆ ಇದು ಆರೋಗ್ಯಕರ ರೆಸ್ವೆರಾಟ್ರೊಲ್ ಮತ್ತು ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದರ ಹೊರತಾಗಿ, ನಾರಿನಾಂಶ ಹೆಚ್ಚಿರುವುದರಿಂದ ದೇಹದಿಂದ ಕಲ್ಮಷಗಳನ್ನು ತೆಗೆಯಲು ಸಹಾಯ ಮಾಡುವ ಮೂಲಕ, ಚರ್ಮಕ್ಕೆ ಆಗುವ ಹಾನಿಯನ್ನು ತಡೆದು, ಸ್ಪಷ್ಟ ಹಾಗೂ ಸ್ವಚ್ಛವಾಗಿಸುವುದು.

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು:

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು:

ಕಡಲೆಕಾಯಿಯನ್ನು ಒಂದು ಮಿತಿಯಲ್ಲಿ ಸೇವಿಸುವುದರಿಂದ, ವಯಸ್ಸಾಗುವಿಕೆಯ ಲಕ್ಷಣಗಳಾದ ಸೂಕ್ಷ್ಮ ಗೆರೆಗಳು, ಸುಕ್ಕುಗಳು, ಕಪ್ಪು ಕಲೆಗಳು ಇತ್ಯಾದಿಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ದೇಹದ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಿ, ಚರ್ಮವನ್ನು ಹಾನಿಯಿಂದ ರಕ್ಷಿಸುತ್ತವೆ. ಅಷ್ಟೇ ಅಲ್ಲ, ಇದರಲ್ಲಿರುವ ವಿಟಮಿನ್ ಸಿ ತ್ವಚೆಯನ್ನು ತಾರುಣ್ಯಪೂರ್ಣಗೊಳಿಸಲು ಮತ್ತು ಅದರ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

 ತ್ವಚೆಯನ್ನ ತೇವಾಂಶದಿಂದ ಕೂಡಿರುವಂತೆ ಮಾಡುವುದು:

ತ್ವಚೆಯನ್ನ ತೇವಾಂಶದಿಂದ ಕೂಡಿರುವಂತೆ ಮಾಡುವುದು:

ಪ್ರತಿದಿನ ಕಡಲೆಕಾಯಿಯನ್ನು ಸೇವಿಸುವುದರಿಂದ ನಿಮ್ಮ ತ್ವಚೆಯನ್ನು ತೇವಾಂಶಭರಿತವಾಗಿರಿಸಲು ಸಹಾಯವಾಗುವುದು. ಆರೋಗ್ಯಕರ ಚರ್ಮದ ಪ್ರಮುಖ ಅಂಶವೆಂದರೆ ಸರಿಯಾದ ಜಲಸಂಚಯನ, ಏಕೆಂದರೆ ಇದು ಶುಷ್ಕತೆ, ಅಕಾಲಿಕವಾಗಿ ಬರುವ ವಯಸ್ಸಾಗುವಿಕೆಯ ಲಕ್ಷಣಗಳನ್ನು ತಪ್ಪಿಸಲು ಸಹಾಯ ಮಾಡುವುದು.

 ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುವುದು:

ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುವುದು:

ಸೂರ್ಯನ ಯುವಿ ಕಿರಣಗಳು ಚರ್ಮಕ್ಕೆ ಅತ್ಯಂತ ಹಾನಿಕಾರಕವಾಗಿದ್ದು, ಇವು ಕ್ಯಾನ್ಸರ್ ಅಥವಾ ಅನೇಕ ರೀತಿಯ ಚರ್ಮ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಸೂರ್ಯನ ಹಾನಿಕಾರಕ ಪರಿಣಾಮಗಳಿಂದ ತ್ವಚೆಯನ್ನು ರಕ್ಷಿಸಲು ಬಯಸಿದರೆ, ಕಡಲೆಕಾಯಿಯನ್ನು ಸೇವಿಸಿ. ಏಕೆಂದರೆ ಕಡಲೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಇ ಸಮೃದ್ಧವಾಗಿದ್ದು , ಇದು ದೇಹದ ಅಸ್ಥಿರ ಕೋಶಗಳು ವಿರುದ್ಧ ಹೋರಾಡಲು ಮತ್ತು ಅವುಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

 ಸೋರಿಯಾಸಿಸ್, ಎಸ್ಜಿಮಾದಂತಹ ರೋಗಗಳನ್ನು ಗುಣಪಡಿಸುವುದು:

ಸೋರಿಯಾಸಿಸ್, ಎಸ್ಜಿಮಾದಂತಹ ರೋಗಗಳನ್ನು ಗುಣಪಡಿಸುವುದು:

ಕಡಲೆಕಾಯಿಯು ತ್ವಚೆಯನ್ನು ವಯಸ್ಸಾಗುವಿಕೆಯ ಲಕ್ಷಣಗಳಿಂದ ತಡೆಯುವುದಲ್ಲದೇ, ಸೋರಿಯಾಸಿಸ್ ಮತ್ತು ಎಸ್ಜಿಮಾದಂತಹ ಸಾಮಾನ್ಯ ಚರ್ಮ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕೊಬ್ಬಿನಾಮ್ಲ ಇರುವುದರಿಂದ ಚರ್ಮದ ಊತ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ಕಡಲೆಕಾಯಿಯಲ್ಲಿರುವ ಪ್ರೋಟೀನ್‌ನಿಂದ ಜೀವಕೋಶಗಳು ಉತ್ಪತ್ತಿಯಾಗುತ್ತವೆ.

English summary

Beauty Benefits of Peanuts for Skin in Kannada

Here we talking Beauty Benefits of Peanuts for Skin in Kannada, read on
X
Desktop Bottom Promotion