For Quick Alerts
ALLOW NOTIFICATIONS  
For Daily Alerts

ಹೊಳೆಯುವ ಚರ್ಮ ಹಾಗೂ ಆರೋಗ್ಯಕರ ಕೂದಲು ಬೇಕೆ, ತಪ್ಪದೆ ಸೋರೆಕಾಯಿ ಸೇವಿಸಿ

|

ಹಸಿರು ತರಕಾರಿಗಳು ಆರೋಗ್ಯಕ್ಕೆ ಸಂಜೀವಿನಿಯಂತೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ತರಕಾರಿಯ ಒಂದು ವಿಧವಾದ ಸೋರೆಕಾಯಿಯ ಆರೋಗ್ಯ ಪ್ರಯೋಜನಗಳೇನು ಎಂಬುದು ನಿಮಗೆ ಗೊತ್ತೆ?. ಈ ಸೋರೆಕಾಯಿ ಕೇವಲ ಆರೋಗ್ಯವಲ್ಲ ನಮ್ಮ ಸೌಂದರ್ಯವನ್ನು ಸಹ ಇಮ್ಮಡಿಗೊಳಿಸುತ್ತದೆ ಎನ್ನುತ್ತಾರೆ ವೈದ್ಯರು. ಈ ಲೇಖನದಲ್ಲಿ ಸೋರೆಕಾಯಿಯ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ:

ಸೋರೆಕಾಯಿಯಲ್ಲಿ ಪೋಷಕಾಂಶಗಳು ಹೀಗಿದೆ?

ಸೋರೆಕಾಯಿಯಲ್ಲಿ ಪೋಷಕಾಂಶಗಳು ಹೀಗಿದೆ?

ಬಾಟಲ್ ಗಾರ್ಡ್‌ ಎನ್ನುವ ಸೋರೆಕಾಯಿಯು ಕುಕುರ್ಬಿಟೇಸೀ ಕುಟುಂಬಕ್ಕೆ ಸೇರಿದ ಒಂದು ಹಣ್ಣಿನ ತರಕಾರಿಯಾಗಿದೆ. ಇದು ಜೀವಸತ್ವ, ಖನಿಜ, ಉತ್ಕರ್ಷಣ ನಿರೋಧಕಗಳು, ಫೈಟೊನ್ಯೂಟ್ರಿಯಂಟ್‌ಗಳು ಮತ್ತು ಉತ್ತಮ ನಾರಿನಾಂಶಗಳಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿದೆ ಮತ್ತು ಹಲವಾರು ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಸೋರೆಕಾಯಿ ಒಣಗಿದ ನಂತರ ಇದನ್ನು ಬಾಟಲ್‌ಗಳು, ಪೈಪ್‌ಗಳು ಮತ್ತು ಪಾತ್ರೆಗಳಾಗಿ ಸಹ ಬಳಸುತ್ತಾರೆ.

ಚರ್ಮದ ಆರೋಗ್ಯ ಕಾಪಾಡುತ್ತದೆ

ಚರ್ಮದ ಆರೋಗ್ಯ ಕಾಪಾಡುತ್ತದೆ

ಸೋರೆಕಾಯಿಯಲ್ಲಿರುವ ವಿಟಮಿನ್‌, ಖನಿಜ ಮತ್ತು ಇತರ ಅಗತ್ಯ ಸಂಯುಕ್ತಗಳು ನಮ್ಮ ಚರ್ಮವನ್ನು ಮೃದುವಾಗಿ ಮತ್ತು ಕಾಂತಿಯುತವಾಗಿ ಮಾಡುತ್ತದೆ ಮತ್ತು ಇದರಿಂದ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಬಹುದಾಗಿದೆ. ಸೋರೆಕಾಯಿಯಲ್ಲಿರುವ ನಾರಿನಂಶ ಚರ್ಮದ ರಂಧ್ರಗಳಿಂದ ವಿಷ ಮತ್ತು ಇತರ ಕಲ್ಮಶಗಳನ್ನು ತೆಗೆದುಹಾಕುತ್ತದೆ ಮತ್ತು ಇದರಿಂದಾಗಿ ಉತ್ತಮ ಚರ್ಮದ ಆರೋಗ್ಯ ಇದು ಅನನ್ಯ ಕೊಡುಗೆ ನೀಡುತ್ತದೆ.

ಅಷ್ಟೇ ಅಲ್ಲದೆ, ಸೋರೆಕಾಯಿಯಲ್ಲಿ ಹೆಚ್ಚಿನ ಮಟ್ಟದ ಸುಮಾರು 92ರಷ್ಟು ನೀರಿನಂಶವೇ ಇದ್ದು, ಇದು ನಮ್ಮ ಚರ್ಮವನ್ನು ಚೆನ್ನಾಗಿ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಸೋರೆಕಾಯಿಯಲ್ಲಿರುವ ಇತರ ಸತು, ತಾಮ್ರ, ಸೆಲೆನಿಯಂ ಇತ್ಯಾದಿ ಚರ್ಮದ ನೈಸರ್ಗಿಕ ಹೊಳಪನ್ನು ತರಲು ಸಹಾಯ ಮಾಡುತ್ತದೆ.

ಅಕಾಲಿಕ ವಯಸ್ಸಾಗುವ ಅಪಾಯ ಕಡಿಮೆ ಮಾಡುತ್ತದೆ

ಅಕಾಲಿಕ ವಯಸ್ಸಾಗುವ ಅಪಾಯ ಕಡಿಮೆ ಮಾಡುತ್ತದೆ

ಸೋರೆಕಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಇತರ ಸಂಬಂಧಿತ ಸಂಯುಕ್ತಗಳಾದ ವಿಟಮಿನ್ ಸಿ, ವಿಟಮಿನ್ ಎ, ಫೈಟೊನ್ಯೂಟ್ರಿಯೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳು ಪೋಷಕಾಶಗಳು ನಮ್ಮ ಚರ್ಮದ ಕೋಶಗಳು ಮತ್ತು ಅಂಗಾಂಶಗಳನ್ನು ಫ್ರೀ ರ್ಯಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ ಮತ್ತು ಇದರಿಂದಾಗಿ ಸೂಕ್ಷ್ಮ ರೇಖೆಗಳು, ಸುಕ್ಕುಗಳು, ವಯಸ್ಸಿನ ಕಲೆಗಳಂತಹ ಅಕಾಲಿಕ ವಯಸ್ಸಾದ ಚಿಹ್ನೆಗಳು ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ .

ಮೊಡವೆ ನಿವಾರಣೆಗೆ ಮನೆಮದ್ದು

ಮೊಡವೆ ನಿವಾರಣೆಗೆ ಮನೆಮದ್ದು

ಸೋರೆಕಾಯಿಯ ರಸವು ಮೊಡವೆಗಳಂಥ ಚರ್ಮದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಚರ್ಮದ ರಂಧ್ರಗಳಿಂದ ವಿಷ, ಮಾಲಿನ್ಯಕಾರಕಗಳು, ಕೊಳಕು, ಕಲ್ಮಶಗಳು ಮತ್ತು ಇತರ ಅನಗತ್ಯ ಪದಾರ್ಥಗಳ ಶೇಖರಣೆಯಿಂದ ಉಂಟಾಗುತ್ತದೆ. ಸೋರೆಕಾಯಿಯಲ್ಲಿನ ಆಹಾರದ ನಾರುಗಳ ನಿರ್ವಿಶೀಕರಣ ಗುಣಗಳು ನಮ್ಮ ದೇಹದಿಂದ ವಿಷ, ಮಾಲಿನ್ಯಕಾರಕಗಳು ಮತ್ತು ಇತರ ಬೇಡದ ವಸ್ತುಗಳು ಚರ್ಮದ ಗ್ರಂಥಿಗಳಿಂದ ಹೆಚ್ಚುವರಿ ಎಣ್ಣೆಯನ್ನು ಬೇರ್ಪಡಿಸುವುದನ್ನು ನಿಯಂತ್ರಿಸಿ ಮೊಡವೆಗಳು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ.

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ

ಸೋರೆಕಾಯಿಯು ವಿಟಮಿನ್, ಖನಿಜಗಳು, ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶಗಳ ಸಮೃದ್ಧತೆಯಿಂದಾಗಿ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಿಟಮಿನ್ ಸಿ ನಂತಹ ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಇತರ ಸಂಯುಕ್ತಗಳು ನಮ್ಮ ಕೂದಲು ಕಿರುಚೀಲಗಳು ಮತ್ತು ನೆತ್ತಿಯನ್ನು ಹಾನಿಯಿಂದ ರಕ್ಷಿಸುತ್ತವೆ ಕೂದಲಿನ ಬೂದು, ಕೂದಲು ವಿಭಜನೆ, ಒಣ ಕೂದಲು, ಒಡೆದ ತುದಿಗಳು ಮುಂತಾದ ಅಕಾಲಿಕ ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಸೋರೆಕಾಯಿಯಲ್ಲಿರುವ ಪೊಟ್ಯಾಸಿಯಮ್ ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಇದರಿಂದ ನಮ್ಮ ಕೂದಲು ಕಿರುಚೀಲಗಳಿಗೆ ಮತ್ತು ನೆತ್ತಿಗೆ ಪೋಷಣೆಯನ್ನು ನೀಡುತ್ತದೆ. ಅವುಗಳನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ ಮತ್ತು ಆರೋಗ್ಯಕರ ನೆತ್ತಿಯು ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇತರ ಪೋಷಕಾಂಶಗಳಾದ ಸತು, ತಾಮ್ರ, ಕಬ್ಬಿಣ ಇತ್ಯಾದಿ ಕೂದಲು ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ

ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ

ಸೋರೆಕಾಯಿಯಲ್ಲಿರುವ ವಿಟಮಿನ್ ಸಿ, ಉತ್ಕರ್ಷಣ ನಿರೋಧಕ ಸಂಯುಕ್ತವು ನಮ್ಮ ವ್ಯವಸ್ಥೆಯಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಕಾಲಜನ್ ನಮ್ಮ ಚರ್ಮದ ಸ್ಥಿತಿಸ್ಥಾಪಕತ್ವವನ್ನು ನಿರ್ವಹಿಸುವ ಪ್ರಮುಖ ಅಮೈನೋ ಆಮ್ಲವಾಗಿದ್ದು, ಮುಖ್ಯವಾಗಿ ಕೀಲುಗಳು, ಸ್ನಾಯುಗಳು, ಮೂಳೆಗಳು ಮತ್ತು ಕಾರ್ಟಿಲೆಜ್‌ಗಳಂಥ ಸಂಯೋಜಕ ಅಂಗಾಂಶಗಳಲ್ಲಿ ಕಂಡುಬರುತ್ತದೆ.

English summary

Beauty Benefits Of Bottle Gourd for Skin and Hair in Kannada

Here we are discussing about Beauty Benefits Of Bottle Gourd for Skin and Hair in Kannada. Read more.
X
Desktop Bottom Promotion