For Quick Alerts
ALLOW NOTIFICATIONS  
For Daily Alerts

ತ್ವಚೆಯ ಅಂದ ಹೆಚ್ಚಿಸುವ ಫೇಶಿಯಲ್‌ ಕಪ್ಪಿಂಗ್

|

ಮುಖದ ಕಪ್ಪಿಂಗ್ ಅನ್ನುವುದು ಕೂಡ ಒಂದು ರೀತಿಯ ಚಿಕಿತ್ಸಾ ವಿಧಾನವಾಗಿದೆ. ಇದರ ಮೂಲಕ ನೀವು ಮುಖದ ಚರ್ಮವನ್ನು ಬಿಗಿಗೊಳಿಸಬಹುದು,ಸುಗಮಗೊಳಿಸಬಹುದು,ಮುಖದ ಕಾಂತಿ ಹೆಚ್ಚಿಸುವುದಕ್ಕೆ ಇದು ನೆರವು ನೀಡುತ್ತದೆ. ಮುಖದ ಚರ್ಮದ ಮೇಲ್ಬಾಗದಲ್ಲಿ ಲೋಟದಂತಹ ವಸ್ತುವಿನಿಂದ ಚಿಕಿತ್ಸೆ ನೀಡುವ ವಿಧಾನವೇ ಫೇಶಿಯಲ್ ಕಪ್ಪಿಂಗ್.

ಮುಖದ ಮೇಲ್ಬಾಗದಲ್ಲಿ ಈ ರೀತಿ ಕಪ್ಪಿಂಗ್ ಚಿಕಿತ್ಸೆ ನೀಡುವುದಕ್ಕಾಗಿ ಬಲ್ಲೆಟಾಜ್ ಅನ್ನೋ ಫೇಶಿಯಲ್ ಕಪ್ ಗಳನ್ನು ಬಳಸಾಗುತ್ತದೆ.ಅವುಗಳು ಮುಖದ ಯಾವ ಭಾಗದಲ್ಲಿ ಚಿಕಿತ್ಸೆ ನೀಡಬೇಕು ಮತ್ತು ಮುಖದ ಗಾತ್ರ ಎಂತದ್ದು ಅನ್ನುವುದರ ಆಧಾರದ ಮೇಲೆ ಗಾತ್ರದಲ್ಲೂ ಬದಲಾವಣೆಯನ್ನು ಹೊಂದಿರುತ್ತದೆ.ಈ ಕಪ್ ಗಳಿಗೆ ಸಿಲಿಕಾನ್ ಗುಳ್ಳೆಗಳನ್ನು ಅಳಡಿಸಲಾಗಿರುತ್ತದೆ.

ಫೇಶಿಯಲ್ ಕಪ್ಪಿಂಗ್ ಚಿಕಿತ್ಸೆಯನ್ನು ಫೇಶಿಯಲ್ ಆಕ್ಯುಪಂಚರ್ ಚಿಕಿತ್ಸೆಯೊಂದಿಗೆ ಅಳವಡಿಸಲಾಗುತ್ತದೆ ಅಥವಾ ಪ್ರತ್ಯೇಕವಾಗಿ ಕೇವಲ ಫೇಶಿಯಲ್ ಕಪ್ಪಿಂಗ್ ಚಿಕಿತ್ಸೆಯನ್ನು ಮಾತ್ರವೇ ಪಡೆಯಲು ಇಚ್ಛಿಸುವವರಿಗೂ ಕೂಡ ಅವಕಾಶವಿರುತ್ತದೆ.ಅದಕ್ಕಾಗಿ ನೀವು ಈ ವಿಚಾರದಲ್ಲಿ ಪರಿಣತಿ ಹೊಂದಿರುವ ದೈಹಿಕ ಚಿಕಿತ್ಸಕರು, ಆಕ್ಯುಪಂಕ್ಚರ್ ಚಿಕಿತ್ಸೆ ನೀಡುವವರು ಅಥವಾ ನಾವೇನು ಉಳುಕು ತೆಗೆಯುವವರು ಎಂದು ಹೇಳುತ್ತೇವೆ ಆ ರೀತಿಯ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ ವೈದ್ಯರು ಸೇರಿದಂತೆ ನುರಿತ ತಜ್ಞರ ಬಳಿ ಮಾತ್ರವೇ ಈ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತದೆ.

ಮೈಕ್ರೋ ಸಂಚಾರ ಪ್ರಕ್ರಿಯೆಯನ್ನು ಇದು ಹೆಚ್ಚಿಸುತ್ತದೆ

ಮೈಕ್ರೋ ಸಂಚಾರ ಪ್ರಕ್ರಿಯೆಯನ್ನು ಇದು ಹೆಚ್ಚಿಸುತ್ತದೆ

ಫೇಶಿಯಲ್ ಕಪ್ ಗಳ ಸಹಾಯದಿಂದ ಮುಖದ ರಕ್ತಸಂಚಾರವನ್ನು ಹೆಚ್ಚುಗೊಳಿಸುವುದಕ್ಕೆ ಸಾಧ್ಯವಾಗುತ್ತದೆ. ಆಕ್ಸಿಜನ್ ಮತ್ತು ನ್ಯೂಟ್ರಿಯಂಟ್ಸ್ ಗಳ ಹರಿವನ್ನು ಮುಖದಲ್ಲಿ ಅಧಿಕವಾಗಿಸುವುದಕ್ಕೆ ಇದು ನೆರವು ನೀಡುತ್ತದೆ. ನೈಟ್ರಿಕ್ ಆಕ್ಸೈಡ್ ನ ಭಾಗವಹಿಸುವಿಕೆಯಿಂದಾಗಿ ಇದು ಸಾಧ್ಯವಾಗುತ್ತದೆ ಎಂದು ಒಂದು ಅಧ್ಯಯನ ಕೂಡ ಸಾಬೀತು ಪಡಿಸಿದೆ.

ಕೊಲಾಜಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ

ಕೊಲಾಜಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ

ಕೊಲಾಜಿನ್ ಫೈಬರ್ ಗಳು ಚರ್ಮದ ಯೌವನ್ನಾವಸ್ಥೆಗೆ, ಗಟ್ಟಿತನಕ್ಕೆ ಕಾರಣವಾಗುತ್ತದೆ. ವಯಸ್ಸಾದಂತೆ ಚರ್ಮದ ಕೊಲಾಜಿನ್ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಚರ್ಮದಲ್ಲಿ ನೆರಿಗೆಗಳು ಕಾಣಿಸಿಕೊಂಡು ಚರ್ಮವು ಸಡಿಲವಾಗುತ್ತದೆ. ಫೇಶಿಯಲ್ ಕಪ್ಪಿಂಗ್ ಸಹಾಯದಿಂದ ಕೊಲಾಜಿನ್ ಉತ್ಪಾದನೆಯನ್ನು ಹೆಚ್ಚಿಸಬಹುದು. ಹಾಗಾಗಿ ಆಂಟಿ ಏಜಿಂಗ್ ಅಂದ್ರೆಚರ್ಮವು ವಯಸ್ಸಾದಂತೆ ಕಾಣುವುದನ್ನು ತಡೆಯುವುದಕ್ಕೆ ಸಹಾಯವಾಗುತ್ತದೆ. ಚರ್ಮವು ಪುನಃ ಸುಸ್ಥಿತಿ ಬರುವುದಕ್ಕೆ ಇದು ಸಹಾಯ ಮಾಡುತ್ತದೆ. ಯಾಕೆಂದರೆ ನೈಟ್ರಿಕ್ ಆಕ್ಸೈಡ್ ಸ್ಟಿಮುಲೇಟ್ ಆಗುವುದನ್ನು ಫೇಶಿಯಲ್ ಕಪ್ಪಿಂಗ್ ನಲ್ಲಿ ನಿಯಂತ್ರಿಸಬಹುದಾಗಿದೆ.

ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ

ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ

ಮುಖ್ಯವಾಗಿ ಮಸಾಜ್ ಜೊತೆಗೆ ಫೇಶಿಯಲ್ ಕಪ್ಪಿಂಗ್ ನ್ನು ಮಾಡುವುದರಿಂದಾಗಿ ಚರ್ಮವನ್ನು ಬಿಗಿಗೊಳಿಸಲು ಇದು ನೆರವು ನೀಡುತ್ತದೆ. ಹಾಗಾಗಿ ನೆರಿಗೆಗಳು ಕಡಿಮೆಯಾಗುತ್ತದೆ. ಕೆನ್ನೆಗಳಲ್ಲಿ ಹೊಳಪು ಬರುತ್ತದೆ. ಜೊತೆಗೆ ಗಲ್ಲವು ಜೋತು ಬೀಳುವುದನ್ನು ತಡೆಯುವುದಕ್ಕೆ ಇದು ಸಹಕಾರಿಯಾಗಿದೆ.

ಚರ್ಮದ ರಂದ್ರಗಳನ್ನು ತೆರೆಯುತ್ತದೆ ಮತ್ತು ಮುದುಡಿಸುತ್ತದೆ

ಚರ್ಮದ ರಂದ್ರಗಳನ್ನು ತೆರೆಯುತ್ತದೆ ಮತ್ತು ಮುದುಡಿಸುತ್ತದೆ

ಫೇಶಿಯಲ್ ಕಪ್ಪಿಂಗ್ ನಿಂದಾಗಿ ಮುಚ್ಚಿಹೋದ ಮುಖದ ರಂದ್ರಗಳನ್ನು ತೆರೆಯುವುದಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ಚರ್ಮವು ಸರಾಗವಾಗಿ ಉಸಿರಾಟ ಪ್ರಕ್ರಿಯೆ ನಡೆಸುವುದಕ್ಕೆ ನೆರವಾಗುತ್ತದೆ. ಇದರ ಪರಿಣಾಮದಿಂದಾಗಿ ಚರ್ಮದ ಪುನರ್ ನಿರ್ಮಾಣ ಕೆಲಸವು ನಿಮಗೆ ಗೊತ್ತಿಲ್ಲದಂತೆ ಉತ್ತಮವಾಗಿ ನಡೆಯುತ್ತದೆ. ಅಂದರೆ ಫೇಶಿಯಲ್ ಕಪ್ಪಿಂಗ್ ನ ಸಹಾಯದಿಂದಾಗಿ ರಂದ್ರಗಳ ತೆರೆಯುವಿಕೆ ಮತ್ತು ಮುಚ್ಚುವಿಕೆ ಉತ್ತಮವಾಗಿ ನಡೆಯುವುದರಿಂದಾಗಿ ಮುಖದ ಹೊಳಪು ಹೆಚ್ಚುತ್ತದೆ.

ಅನಗತ್ಯವಾಗಿ ಮುಖದಲ್ಲಿ ಚರ್ಮ ಬೆಳೆಯುವುದನ್ನು ತಡೆಯುತ್ತದೆ

ಅನಗತ್ಯವಾಗಿ ಮುಖದಲ್ಲಿ ಚರ್ಮ ಬೆಳೆಯುವುದನ್ನು ತಡೆಯುತ್ತದೆ

ಕೆಲವರ ಮುಖದಲ್ಲಿ ಅನಗತ್ಯವಾಗಿ ಹೆಚ್ಚುವರಿ ಚರ್ಮ ಬೆಳೆಯುತ್ತದೆ. ಇದು ಸೆಲ್ಯುಲರ್ ವೇಸ್ಟ್ ಗಳ ಕಾರಣದಿಂದ, ಹಾರ್ಮೋನುಗಳ ಇಂಬ್ಯಾಲೆನ್ಸ್ ನಿಂದ ಅಥವಾ ಫ್ಲೂಯಿಡ್ಸ್ ಗಳ ಸರಿಯಾದ ಹರಿಯುವಿಕೆಯ ಕೊರತೆಯಿಂದ ಆಗಿರಬಹುದು. ಇದರಿಂದಾಗಿ ಮುಖದಲ್ಲಿ ಕೆಲವು ಕಡೆ ಅನಗತ್ಯವಾಗಿ ಚರ್ಮ ಹಿಡಿದಿಟ್ಟಂತೆ ಆಗುವುದು ಅಥವಾ ಗಂಟುಕಟ್ಟಿದಂತೆ ಮುಖದಲ್ಲಿ ಭಾಸವಾಗುವುದು ಆಗುತ್ತದೆ. ಆದರೆ ಫೇಶಿಯಲ್ ಕಪ್ಪಿಂಗ್ ಸಹಾಯದಿಂದ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು.

ತಲೆನೋವಿನಿಂದ ಮುಕ್ತಿ ನೀಡುತ್ತದೆ

ತಲೆನೋವಿನಿಂದ ಮುಕ್ತಿ ನೀಡುತ್ತದೆ

ಮುಖದ ಆರೋಗ್ಯ ಸರಿ ಇಲ್ಲದೆ ಇದ್ದರೆ ತಲೆ ನೋವು ಬರುವುದು ಸಾಮಾನ್ಯ. ತಲೆ ನೋವು ಬಂದಾಗ ಹಣೆಯ ಭಾಗಕ್ಕೆ ಅಥವಾ ಹುಬ್ಬುಗಳಲ್ಲಿ ಮಸಾಜ್ ಮಾಡಿದರೆ ರಿಲ್ಯಾಕ್ಸ್ ಆಗುತ್ತದೆ ಅಲ್ಲವೇ? ಅಂದ ಮೇಲೆ ತಲೆ ನೋವಿಗೂ ಮುಖದ ಭಾಗಗಳಿಗೂ ನೇರ ಸಂಬಂಧವಿದೆ ಅನ್ನೋದನ್ನು ನೀವು ಒಪ್ಪಲೇಬೇಕು. ಹೌದು ಫೇಶಿಯಲ್ ಕಪ್ಪಿಂಗ್ ಸಹಾಯದಿಂದ ತಲೆನೋವು ಕೂಡ ನಿವಾರಣೆಯಾಗುತ್ತದೆಯಂತೆ.

ಚರ್ಮದ ಸಮಸ್ಯೆಗಳನ್ನು ಚಿಕಿತ್ಸೆಗೊಳಿಸಲು ಸಹಕಾರಿ

ಚರ್ಮದ ಸಮಸ್ಯೆಗಳನ್ನು ಚಿಕಿತ್ಸೆಗೊಳಿಸಲು ಸಹಕಾರಿ

ಚರ್ಮದ ಅನೇಕ ಸಮಸ್ಯೆಗಳ ನಿವಾರಣೆಯಲ್ಲಿ ಇದು ಸಹಕಾರಿ. ಹರ್ಬಲ್ ಫೇಶಿಯಲ್ ಮಾಸ್ಕ್ ಜೊತೆಗೆ ಈ ಚಿಕಿತ್ಸೆಯನ್ನು ಪಡೆಯುವುದರಿಂದ ಚರ್ಮದ ಅನೇಕ ರೀತಿಯ ನೋವುಗಳ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ವರ್ತಿಸುತ್ತದೆ ಎಂದು ತಿಳಿದುಬಂದಿದೆ. ಎಸ್ಜಿಮಾ,ಉರ್ಟೇರಿಯಾ ಮತ್ತು ಸೋರಿಯಾಸಿಸ್ ನಂತರ ಚರ್ಮದ ಕಾಯಿಲೆಗಳ ನಿವಾರಣೆಯಲ್ಲಿಯೂ ಕೂಡ ಫೇಶಿಯಲ್ ಕಪ್ಪಿಂಗ್ ಚಿಕಿತ್ಸೆ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ.

English summary

Amazing Benefits Of Facial Cupping in Kannada

Here we are discussing about Amazing Benefits Of Facial Cupping in Kannada. Facial cupping is a type of noninvasive therapy generally used to tighten, smoothen, and contour facial skin. Similar to body cupping,Read more
Story first published: Saturday, June 26, 2021, 18:36 [IST]
X
Desktop Bottom Promotion