For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಹೆಚ್ಚಾಗುವ ಮೊಡವೆ ಸಮಸ್ಯೆ: ಇದನ್ನು ಹೋಗಲಾಡಿಸುವುದು ಹೇಗೆ?

|

ಮಳೆಗಾಲ ತುಂಬಾ ಹಿತವಾದ ಕಾಲವಾಗಿದೆ, ಪ್ರಕೃತಿಯಲ್ಲಿ ಹಸಿರು ತುಂಬಿರುತ್ತದೆ. ಆರ್ದ್ರತೆ ವಾತಾವರಣ. ಸೌಂದರ್ಯದ ದೃಷ್ಟಿಯಿಂದ ನೋಡುವುದಾದರೆ ಈ ವಾತಾವರಣ ಮೊಡವೆ ಸಮಸ್ಯೆ ಇರುವವರಿಗೆ ಸ್ವಲ್ಪ ತೊಂದರೆಯನ್ನುಂಟು ಮಾಡಬಹುದು. ಹೌದು ಈ ಸಮಯದಲ್ಲಿ ತ್ವಚೆ ಆರೈಕೆ ಕಡೆ ಗಮನ ಹರಿಸದಿದ್ದರೆ ಮೊಡವೆ ಹೆಚ್ಚಾಗಬಹುದು.

ಮಳೆಗಾಲದಲ್ಲಿ ಮೊಡವೆ ಸಮಸ್ಯೆಗೆ ಕಾರಣ:

ಮಳೆಗಾಲದಲ್ಲಿ ಮೊಡವೆ ಸಮಸ್ಯೆಗೆ ಕಾರಣ:

ಬೇಸಿಗೆಯ ಉಷ್ಣತೆಯ ಜೊತೆಗೆ ಮಳೆಗಾಲದ ಆರ್ದ್ರತೆ ಸೇರಿದಾಗ ತ್ವಚೆಯಲ್ಲಿ ಸೆಬಮ್‌ ಉತ್ಪತ್ತಿ ಹೆಚ್ಚಾಗಿ ಇದು ಮುಖದಲ್ಲಿ ಎಣ್ಣೆಯಂಶ ಹೆಚ್ಚಿಸುವುದು, ಎಣ್ಣೆ ತ್ವಚೆಯಲ್ಲಿ ಬ್ಯಾಕ್ಟಿರಿಯಾಗಳು ಕೂತಾಗ ಮೊಡವೆ ಬರುವುದು. ಕೆಲವರಿಗಂತೂ ಉಳಿದ ಎರಡು ಕಾಲದಲ್ಲಿ ಮೊಡವೆ ಸಮಸ್ಯೆ ಇರಲ್ಲ, ಮಳೆಗಾಲ ಬಂತೆಂದರೆ ಮೊಡವೆ ಬರುತ್ತದೆ, ಮೊಡವೆ ಮುಖದಲ್ಲಿ ಮಾತ್ರವಲ್ಲ ಕೈಗಳಲ್ಲಿ, ಬೆನ್ನಿನಲ್ಲಿ ಕುತ್ತಿಗೆ ಭಾಗದಲ್ಲಿ, ಬೆನ್ನಿನಲ್ಲಿ, ಹಿಂಬದಿಯಲ್ಲೂ ಕೂಡ ಕಂಡು ಬರುವುದು.

ಮೊಡವೆ ಹೋಗಲಾಡಿಸುವುದು ಹೇಗೆ?

ಮೊಡವೆ ಹೋಗಲಾಡಿಸುವುದು ಹೇಗೆ?

ಮೊಡವೆ ಹೋಗಲಾಡಿಸಲು ಮೊದಲಿಗೆ ನಿಮ್ಮದು ಯಾವ ಬಗೆಯ ತ್ವಚೆಯೆಂದು ಅರಿಯಬೇಕು, ಇಲ್ಲದಿದ್ದರೆ ಅತೀ ಹೆಚ್ಚು ಕ್ಲೆನ್ಸ್ ಮಾಡುವುದರಿಂದ ಹೆಚ್ಚು ಸೆಬಮ್‌ ಉತ್ಪತ್ತಿ ಹೆಚ್ಚಿ ಮೊಡವೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇಲ್ಲಿ ಮೊಡವೆ ಸಮಸ್ಯೆ ನಿವಾರಣೆಗೆ ಕೆಲವೊಂದು ಸರಳವಾದ ಟಿಪ್ಸ್ ನೀಡಿದ್ದೇವೆ ನೋಡಿ:

ಕಹಿ ಬೇವಿನ ಎಲೆ, ಎಣ್ಣೆ ಹಾಗೂ ಅದರ ಕಾಯಿ

* ಕಹಿ ಬೇವಿನ ಎಲೆಯನ್ನು ಅರಿದು ಪೇಸ್ಟ್ ಮಾಡಿ, ಅದಕ್ಕೆ ಸ್ವಲ್ಪ ಅರಿಶಿಣ ಪುಡಿ ಹಾಗೂ ಹಾಲು ಸೇರಿಸಿ ಮಿಶ್ರ ಮಾಡಿ, ಅದನ್ನು ಮುಖಕ್ಕೆ ಹಚ್ಚಬೇಕು. 10 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

* ಮತ್ತೊಂದು ವಿಧಾನವೆಂದರೆ ಕಹಿ ಬೇವಿನ ಎಣ್ಣೆಯನ್ನು ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಜೊತೆ ಮಿಶ್ರ ಮಾಡಿ ಹಚ್ಚಿ. ಈ ರೀತಿ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು.

* ಕಹಿ ಬೇವಿನ ಮರದ ಹಣ್ಣನ್ನು ಕಿತ್ತು ಅದರ ಒಳಭಾಗವನ್ನು ಮೊಡವೆ ಮೇಲೆ ಹಚ್ಚಿ, ಒಣಗಿದ ಮೇಲೆ ಬಿಸಿ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ಪ್ರತಿದಿನ ಮಾಡಿ.

ತ್ವಚೆ ಸ್ವಚ್ಛತೆಗೆ

ತ್ವಚೆ ಸ್ವಚ್ಛತೆಗೆ

1 ಚಮಚ ಜೇನಿಗೆ 3 ಚಮಚ ಬ್ರೌನ್‌ ಶುಗರ್‌ ಹಾಕಿ ಮಿಶ್ರ ಮಾಡಿ ಅದರಿಂದ ಮುಖವನ್ನು ಸ್ಕ್ರಬ್‌ ಮಾಡಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಮುಖದಲ್ಲಿ ಯಾವುದೇ ಕೊಳೆಯಿಲ್ಲದೆ ಸ್ವಚ್ಛವಾಗಿರುತ್ತದೆ.

ಆಲೂಗಡ್ಡೆಯಿಂದ ತ್ವಚೆ ಆರೈಕೆ

ನೀವು ಮೊಡವೆ ಸಮಸ್ಯೆ ನಿವಾರಣೆಗೆ ಆಲೂಗಡ್ಡೆಯನ್ನು ಬಳಸಿ. ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ಮೊಡವೆ ಮೇಲೆ ಮೆಲ್ಲನೆ ತಿಕ್ಕಿ, ನಂತರ ಆ ರಸ ಒಣಗಿದ ಮೇಲೆ ಮುಖ ತೊಳೆಯಿರಿ.

ಎಣ್ಣೆ ತ್ವಚೆಯೇ:

ಎಣ್ಣೆ ತ್ವಚೆಯೇ:

ನಿಮ್ಮದು ಸ್ವಾಭಾವಿಕವಾಗಿ ಎಣ್ಣೆ ತ್ವಚೆಯಾಗಿದ್ದರೆ ಮೇಲೆ ಹೇಳಿರುವ ವಿಧಾನದಲ್ಲಿ ಮುಖವನ್ನು ಕ್ಲೆನ್ಸ್ ಮಾಡಿದ ಬಳಿಕ ಆಸ್ಟ್ರಿನ್‌ಜೆಂಟ್ ಬಳಸಿ. ಇದು ತ್ವಚೆಯಲ್ಲಿನ ಎಣ್ಣೆಯಂಶ ತೆಗೆಯಲು ಸಹಕಾರಿ.

ಸಾಕಷ್ಟು ನೀರು ಕುಡಿಯಿರಿ, ಮುಖವನ್ನು ತೊಳೆದು ಸ್ವಚ್ಛವಾಗಿಡಿ

ಸಾಕಷ್ಟು ನೀರು ಕುಡಿಯಿರಿ, ಮುಖವನ್ನು ತೊಳೆದು ಸ್ವಚ್ಛವಾಗಿಡಿ

ಮಳೆಗಾಲ ಬಂತೆಂದರೆ ದಾಹ ಆಗಲ್ಲ ಎಂದು ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಇದು ಕೂಡ ತ್ವಚೆ ಕಾಂತಿ ಕುಗ್ಗಲು ಒಂದು ಕಾರಣವಾಗಿದೆ. ಮಳೆಗಾಲವಾದರೂ ಕೂಡ ನೀವು ದಿನಾ 8 ಲೋಟ ನೀರು ಕುಡಿಯಿರಿ. ತಣ್ಣೀರು ಕುಡಿದರೆ ಬೇಗನೆ ಸಾಕು ಅನಿಸುವುದು, ಅದಕ್ಕೆ ಈ ಸಮಯದಲ್ಲಿ ಬಿಸಿ ನೀರು ಕುಡಿಯಿರಿ.

ಅಲ್ಲದೆ ಮುಖವನ್ನು 3-4 ಬಾರಿ ತೊಳೆಯಿರಿ. ಹೀಗೆ ಮಾಡುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗಿ ಆಕರ್ಷಕ ತ್ವಚೆ ಕಾಂತಿ ಪಡೆಯಬಹುದು.

English summary

Acne in Monsoon: Reasons and How to Treat in Kannada

Acne in Monsoon: Reasons and how to treat, read on...
Story first published: Thursday, June 17, 2021, 13:16 [IST]
X
Desktop Bottom Promotion