For Quick Alerts
ALLOW NOTIFICATIONS  
For Daily Alerts

ತಕ್ಷಣದ ಮುಖದ ಕಾಂತಿಗೆ ಕೇವಲ ಮೂರೇ ಪದಾರ್ಥ ಬಳಸಿ ಈ ಪ್ಯಾಕ್ ತಯಾರಿಸಿ

|

ಇಂದಿನ ಬಿಡುವಿಲ್ಲದ ಜೀವನ ಹೇಗಾಗಿದೆ ಅಂದರೆ, ನಮ್ಮ ತ್ವಚೆಯ ಅರೈಕೆ ಮಾಡಲು ಸಮಯವಿಲ್ಲದಂತಾಗಿದೆ. ಹಾಗಂತ ತ್ವಚೆಯ ಆರೈಕೆ ಮಾಡದೇ ಬಿಡಬಾರದು. ಆಗಾಗ ಅಗತ್ಯವಿರುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಅಕಾಲಿಕವಾಗಿ ಸೌಂದರ್ಯ ಸಂಬಂಧಿತ ಸಮಸ್ಯೆಗಳು ಉದ್ಭವಿಸುತ್ತವೆ.

ಇಂದು ನಾವು ನಿಮಗೆ ಕೇವಲ 15ನಿಮಿಷದಲ್ಲೇ ಮುಖಕ್ಕೆ ಹೊಳಪು ನೀಡುವಂತಹ ಫೇಸ್ ಪ್ಯಾಕ್ ಒಂದನ್ನು ಹೇಳಲಿದ್ದೇವೆ. ಈ ಮೂಲಕ ಪಾರ್ಟಿ, ಫಂಕ್ಷನ್‌ಗಳಿಗೆ ಕೆಲವೇ ನಿಮಿಷಗಳಲ್ಲಿ ತಯಾರಾಗಬಹುದು. ಹಾಗಾದರೆ, ಬನ್ನಿ ಈ ಫೇಸ್ ಪ್ಯಾಕ್‌ಗೆ ಏನೆಲ್ಲಾ ಬೇಕು? ಅದನ್ನು ಬಳಸುವ ವಿಧಾನ ಹೇಗೆ ಎಂಬುದನ್ನು ನೋಡೋಣ.

15ನಿಮಿಷದಲ್ಲೇ ಮುಖಕ್ಕೆ ಹೊಳಪು ನೀಡುವಂತಹ ಫೇಸ್ ಪ್ಯಾಕ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ:

ಬೇಕಾಗಿರುವ ಪದಾರ್ಥಗಳು:

ಬೇಕಾಗಿರುವ ಪದಾರ್ಥಗಳು:

8-10 ಬಾದಾಮಿ

2 ಚಮಚ ಹಸಿ ಹಾಲು

1 ಚಮಚ ಜೇನುತುಪ್ಪ

ಬಳಸುವ ವಿಧಾನ ಹೇಗೆ?:

ಬಳಸುವ ವಿಧಾನ ಹೇಗೆ?:

1. ಮೊದಲಿಗೆ ಬಾದಾಮಿಗಳನ್ನು ಪುಡಿಮಾಡಿ.

2. ಒಂದು ಬಟ್ಟಲಿನಲ್ಲಿ, ಮಿಶ್ರಣವನ್ನು ತಯಾರಿಸಲು ಬಾದಾಮಿ ಪುಡಿ, ಹಸಿ ಹಾಲು ಮತ್ತು ಜೇನುತುಪ್ಪವನ್ನು ಸೇರಿಸಿ.

3. ನಿಮ್ಮ ತೊಳೆದ ಮುಖಕ್ಕೆ ಮುಖವಾಡವನ್ನು ಹಚ್ಚಿ, 10-12 ನಿಮಿಷಗಳ ಕಾಲ ಅದನ್ನು ಬಿಡಿ.

4. ತಣ್ಣೀರಿನಿಂದ ತೊಳೆಯಿರಿ ಮತ್ತು ಒಣಗಿಸಿ.

5. ದಿನಚರಿಯನ್ನು ಪೂರ್ಣಗೊಳಿಸಲು ನಿಮ್ಮ ಮುಖವನ್ನು ಟೋನ್ ಮತ್ತು ಮಾಯಿಶ್ಚರೈಸರ್ ಮಾಡಿ.

ಪದಾರ್ಥಗಳು ಮುಖಕ್ಕೆ ಹೇಗೆ ಸಹಕಾರಿ:

ಪದಾರ್ಥಗಳು ಮುಖಕ್ಕೆ ಹೇಗೆ ಸಹಕಾರಿ:

ಬಾದಾಮಿ:

ಬಾದಾಮಿಯು ವಿಟಮಿನ್ ಇ ಯಿಂದ ತುಂಬಿದ್ದು, ಚರ್ಮವನ್ನು ತೇವಾಂಶದಿಂದ ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿದ್ದು, ವಯಸ್ಸಾದ ಇತರ ಚಿಹ್ನೆಗಳೊಂದಿಗೆ ಹೋರಾಡಿ, ಚರ್ಮವನ್ನು ಸುಕ್ಕು-ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಇದು ಮೊಡವೆಯುಕ್ತ ತ್ವಚೆ ಇರುವವರಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದು, ಮೃದು ಹಾಗೂ ಎಣ್ಣೆಮುಕ್ತ ಮುಖ ಪಡೆಯಲು ಸಹಾಯ ಮಾಡುವುದು.

ಹಸಿ ಹಾಲು:

ಹಸಿ ಹಾಲು:

ಬಹಳ ಹಿಂದಿನಿಂದಲೂ ಹಸಿ ಹಾಲು ತ್ವಚೆಯ ನಾನಾ ಸಮಸ್ಯೆಗಳಿಗೆ ಬಳಸಲಾಗುತ್ತಿದೆ. ಹಸಿ ಹಾಲಿನಲ್ಲಿ ಲ್ಯಾಕ್ಟೋಸ್, ಪ್ರೋಟೀನ್, ಕೊಬ್ಬು, ಕೌಲ್ಸಿಯಮ್, ವಿಟಮಿನ್ ಎ, ಬಿ-12, ಡಿ ಮತ್ತು ಸತು ಮೊದಲಾದ ಪೋಷಕಾಂಶಗಳು ನಮ್ಮ ಚರ್ಮಕ್ಕೆ ತುಂಬಾ ಉಪಯುಕ್ತವಾಗಿವೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶವನ್ನು ನೀಡುವ ಮೂಲಕ ಚರ್ಮಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ನೀಡಲಾಗುತ್ತದೆ. ಜೊತೆಗೆ ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ರಂಧ್ರಗಳನ್ನು ಶುದ್ಧೀಕರಿಸುತ್ತದೆ. ಈ ಮೂಲಕ ಮೊಡವೆಗಳಿಗೆ ಕಾರಣವಾಗುವ ಎಲ್ಲಾ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುತ್ತದೆ.

ಜೇನುತುಪ್ಪ:

ಜೇನುತುಪ್ಪ:

ಮತ್ತೊಂದೆಡೆ, ಜೇನುತುಪ್ಪವು ಉತ್ತಮವಾದ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಅದು ಚರ್ಮವನ್ನು ಮೃದುಗೊಳಿಸುತ್ತದೆ. ಜೊತೆಗೆ ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆ ಪೀಡಿತ ಚರ್ಮದ ಮೇಲೆ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಅಷ್ಟೇ ಅಲ್ಲ, ಮುಖದಲ್ಲಿರುವ ಕಪ್ಪು ಕಲೆಗಳನ್ನು ನಿವಾರಿಸುವಲ್ಲಿಯೂ ಸಹ ಜೇನುತುಪ್ಪ ಸಹಕಾರಿ.

English summary

3 Ingredients DIY Face Mask for Glowing Skin in Kannada

Here we talking about 3 Ingredients DIY Face Mask for Glowing Skin in Kan nada, read on
Story first published: Saturday, November 20, 2021, 15:20 [IST]
X
Desktop Bottom Promotion