For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಸೀತಾಫಲ ತಿಂದರೆ, ತ್ವಚೆಗೆ ತುಂಬಾನೇ ಪ್ರಯೋಜನಗಳಿವೆ

|

ಪ್ರಕೃತಿಯು ಪ್ರತೀ ಋತುವಿಗೆ ಅನುಗುಣವಾಗಿ ನಮ್ಮ ದೇಹಕ್ಕೆ ಬೇಕಾಗುವಂತಹ ಹಲವಾರು ರೀತಿಯ ಹಣ್ಣುಗಳನ್ನು ನೀಡುತ್ತದೆ. ನಾವು ಇದರ ಲಾಭ ಪಡೆದುಕೊಳ್ಳಬೇಕು ಎನ್ನುವುದು ಪ್ರಕೃತಿ ಕೂಡ ಬಯಸುತ್ತದೆ. ಯಾಕೆಂದರೆ ಋತುವಿಗೆ ಅನುಗುಣವಾಗಿ ಸಿಗುವಂತಹ ಹಣ್ಣುಗಳನ್ನು ಉಪಯೋಗಿಸಿದರೆ ಅದರಿಂದ ನಮ್ಮ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಸಿಗುವುದು ಮತ್ತು ಆಯಾ ಸಮಯದಲ್ಲಿ ಬರುವಂತಹ ಅನಾರೋಗ್ಯಗಳಿಂದ ನಮ್ಮನ್ನು ರಕ್ಷಿಸುವುದು.

ಇಷ್ಟು ಮಾತ್ರವಲ್ಲದೆ ಇಂತಹ ಹಣ್ಣುಗಳು ನಮ್ಮ ಸೌಂದರ್ಯವನ್ನು ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸುವುದು. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಹಣ್ಣುಗಳು ಸಿಗಲು ಆರಂಭವಾಗುವುದು. ಈ ವೇಳೆ ನಮಗೆ ಸಿಗುವಂತಹ ಒಂದು ಹಣ್ಣೆಂದರೆ ಅದು ಸೀತಾಫಲ. ಇದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಸೀತಾಫಲವು ಹೆಚ್ಚಾಗಿ ಚಳಿಗಾಲದಲ್ಲಿಯೇ ಸಿಗುವುದು. ಬೇರೆ ಸಮಯದಲ್ಲಿ ಸಿಗುವಂತಹ ಸೀತಾಫಲವನ್ನು ಬಳಸಲು ಹೋಗಬೇಡಿ. ಯಾಕೆಂದರೆ ಇದನ್ನು ರಾಸಾಯನಿಕ ಬಳಸಿಕೊಂಡು ಸಂರಕ್ಷಿಸಿ ಇಡಲಾಗುತ್ತದೆ. ಇದು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಆಯಾ ಋತುವಿನಲ್ಲಿ ಸಿಗುವಂತಹ ತಾಜಾ ಹಣ್ಣುಗಳನ್ನು ಮಾತ್ರ ಬಳಸಿಕೊಳ್ಳಬೇಕು. ಸೀತಾಫಲವು ತುಂಬಾ ಸಿಹಿಯಾಗಿರುವ, ಹಲವಾರು ಪೋಷಕಾಂಶಗಳನ್ನು ಹೊಂದಿರುವ ಹಣ್ಣು.

ಸೀತಾಫಲದಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ

ಸೀತಾಫಲದಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ

ಸೀತಾಫಲವು ಅಂನನೇಸಿ ಕುಟುಂಬಕ್ಕೆ ಸೇರಿದ ಹಣ್ಣು. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾವು ಇದರ ತವರು. ವಿಶ್ವದ ಹೆಚ್ಚಿನ ಉಷ್ಣವಲಯ ರಾಷ್ಟ್ರಗಳಲ್ಲಿ ಇದನ್ನು ಬೆಳೆಸಲಾಗುತ್ತದೆ. ಸೀತಾಫಲವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹಲವಾರು ರೀತಿಯ ಸೌಂದರ್ಯ ಲಾಭಗಳು ನಿಮಗೆ ನೈಸರ್ಗಿಕವಾಗಿ ಸಿಗುವುದು. ಸೀತಾಫಲದಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಚರ್ಮವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಹಣ್ಣಿನಲ್ಲಿ ಕೆಲವೊಂದು ಪೋಷಕಾಂಶಗಳು ಹಾಗೂ ಚರ್ಮದ ಆರೈಕೆಗೆ ಬೇಕಾಗಿರುವ ಅದ್ಭುತ ಲಾಭಗಳು ಇವೆ.

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ಸೀತಾಫಲದಲ್ಲಿ ಎಲ್- ಲೈಸಿನ್ ಎಲ್-ಪ್ರೋಲಿನ್ ಎನ್ನುವ ಅಮಿನೋ ಆಮ್ಲಗಳು ಇದ್ದು, ದೇಹದಲ್ಲಿ ಕಾಲಜನ್ ಉತ್ಪತ್ತಿಗೆ ಇದು ನೆರವಾಗುವುದು. ಕಾಲಜನ್ ಚರ್ಮದ ಅಂಗಾಂಶಗಳಿಗೆ ವಿನ್ಯಾಸ ಮತ್ತು ಸ್ಥಿತಿಸ್ಥಾಪಕತ್ವ ನೀಡುವುದು. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ನಿಂದಾಗಿ ಹಾನಿಯಾಗುವಂತಹ ಕೋಶದ ಪೊರೆಗಳನ್ನು ರಕ್ಷಣೆ ಮಾಡುವುದು. ಇದರಿಂದಾಗಿ ದೇಹವು ವಯಸ್ಸಾಗುವ ಲಕ್ಷಣಗಳನ್ನು ತಡೆಯಲು ನೆರವಾಗುವುದು. ಸೀತಾಫಲವು ಹೊಸ ಅಂಗಾಂಶಗಳ ಬೆಳವಣಿಗೆಗೆ ನೆರವಾಗುವುದು. ಇದರಿಂದಾಗಿ ಚರ್ಮವು ಯೌವನಯುತವಾಗುವುದು. ವಯಸ್ಸಾಗುವ ವೇಳೆ ಕಾಣಿಸಿಕೊಳ್ಳುವ ನೆರಿಗೆ ಮತ್ತು ಬಣ್ಣ ಕುಂದುವುದನ್ನು ಇದು ತಡೆಯುವುದು. ಇದು ಚರ್ಮಕ್ಕೆ ಬಣ್ಣ ಮತ್ತು ಬಿಗಿತ್ವ ನೀಡುವುದು.

ಚಿಕಿತ್ಸಕ ಪ್ರಕ್ರಿಯೆ

ಚಿಕಿತ್ಸಕ ಪ್ರಕ್ರಿಯೆ

ಸೀತಾಫಲದಲ್ಲಿ ಇರುವಂತಹ ವಿಟಮಿನ್ ಸಿ ಯು ಹೈಡ್ರಾಕ್ಸಿಪ್ರೊಲೈನ್ ಮತ್ತು ಹೈಡ್ರಾಕ್ಸಿಲೈಸೈನ್ ಉತ್ಪತ್ತಿಗೆ ಅತೀ ಮುಖ್ಯವಾಗಿ ಬೇಕಾಗಿರುವುದು. ಯಾಕೆಂದರೆ ಇದು ಕಾಲಜನ್ ಉತ್ಪತ್ತಿ ಮಾಡುವಂತಹ ಕಣಗಳನ್ನು ಬಂಧಿಸುವುದು. ಇದು ಚರ್ಮದ ಪದರದೊಳಗಡೆ ಹೋಗಿ ಯಾವುದೇ ರೀತಿಯ ಗಾಯವಿದ್ದರೆ ಅದನ್ನು ಗುಣಪಡಿಸುವುದು. ಸೀತಾಫಲದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ರಕ್ತಪರಿಚಲನೆಗೆ ತುಂಬಾ ನೆರವಾಗುವುದು ಮತ್ತು ಹೊಸ ಚರ್ಮದ ಬೆಳವಣಿಗೆಗೆ ಕಾರಣವಾಗುವುದು. ಇದರಿಂದ ಚರ್ಮದಲ್ಲಿ ಕಲೆಗಳು ಮಾಯವಾಗುವುದು. ಇದು ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಣೆ ಮಾಡುವುದು ಮತ್ತು ಅಂಗಾಂಶಗಳಲ್ಲಿ ಯಾವುದೇ ಕಲೆಗಳು ಇರದಂತೆ ಮಾಡಿ, ಬೇಗನೆ ಗುಣಮುಖವಾಗಲು ನೆರವಾಗುವುದು.

ಚರ್ಮದ ಸೌಂದರ್ಯಕ್ಕಾಗಿ…

ಚರ್ಮದ ಸೌಂದರ್ಯಕ್ಕಾಗಿ…

ಸೀತಾಫಲವು ಚರ್ಮದ ಕೋಶಗಳನ್ನು ರಕ್ಷಿಸಿ, ಸಂರಕ್ಷಿಸುವ ಮೂಲಕ ಚರ್ಮವು ತುಂಬಾ ಕಾಂತಿ ಹಾಗೂ ಸುಂದರವಾಗಿ ಕಾಣುವಂತೆ ಮಾಡುವುದು. ಆಕ್ಸಿಡೇಟಿವ್ ಒತ್ತಡದಿಂದ ಚರ್ಮವನ್ನು ತಡೆದು ಚರ್ಮವು ಹೊಸತನ ಪಡೆಯಲು ನೆರವಾಗುವುದು. ಈ ಹಣ್ಣು ಚರ್ಮದ ಬಣ್ಣ ಮತ್ತು ಅದು ಪುನಶ್ಚೇತನಗೊಳ್ಳಲು ನೆರವಾಗುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಸೂರ್ಯನ ಕಿರಣಗಳಿಂದ ಕಾಪಾಡುವುದು ಮತ್ತು ಬಿಸಿಲಿನಿಂದ ಆಗುವ ಹಾನಿ ತಪ್ಪಿಸುವುದು. ಚರ್ಮದ ಮೇಲೆ ಸೀತಾಫಲದ ತಿರುಳನ್ನು ಹಚ್ಚಿಕೊಳ್ಳುವುದರಿಂದ ಚರ್ಮದಲ್ಲಿ ಇರುವಂತಹ ಕಲೆ, ನೆರಿಗೆ ಮತ್ತು ಇತರ ಕೆಲವೊಂದು ಸಮಸ್ಯೆಗಳು ದೂರವಾಗುವುದು. ಈ ಹಣ್ಣು ಚರ್ಮದ ಪದರದ ಆಳಕ್ಕೆ ಹೋಗುವುದು ಮತ್ತು ಅಲ್ಲಿ ಚರ್ಮಕ್ಕೆ ಬೇಕಾಗಿರುವಂತಹ ಪೋಷಕಾಂಶಗಳನ್ನು ನೀಡುವುದು. ಸೀತಾಫಲದಲ್ಲಿ ಇರುವಂತಹ ವಿಟಮಿನ್ ಬಿ ಅಂಶವು ಅತಿಯಾಗಿ ಮೇದೋಗ್ರಂಥಿ ಉತ್ಪತ್ತಿಯಾದಂತೆ ತಡೆಯುವುದು ಮತ್ತು ಚರ್ಮವು ಆರೋಗ್ಯವಾಗಿ ಇರುವಂತೆ ಮಾಡುವುದು. ಸೀತಾಫಲದಲ್ಲಿ ಇರುವಂತಹ ತಾಮ್ರದ ಅಂಶವು ಮೆಲನಿನ್ ಉತ್ಪತ್ತಿಯನ್ನು ಉತ್ತೇಜಿಸುವುದು. ಇದು ಚರ್ಮ ಹಾಗೂ ಕೂದಲಿಗೆ ಬಣ್ಣ ನೀಡುವಂತಹ ಅಂಶವಾಗಿದೆ.

Most Read:ತಾಯಿಗೆ ಸಿಸಿಟಿವಿಯಲ್ಲಿ ಕಾಣಿಸುತ್ತಿದೆಯಂತೆ ಸತ್ತ ಮಗನ ದೃಶ್ಯಗಳು!!

ಚರ್ಮಕ್ಕೆ ಮೊಶ್ಚಿರೈಸ್

ಚರ್ಮಕ್ಕೆ ಮೊಶ್ಚಿರೈಸ್

ಸೀತಾಫಲದಲ್ಲಿ ವಿಟಮಿನ್ ಈ ಸಮೃದ್ಧವಾಗಿದೆ. ಇದರಿಂದಾಗಿ ಚರ್ಮದಲ್ಲಿ ಮೊಶ್ಚಿರೈಸ್ ಹಾಗೆ ಉಳಿಯವುದು ಮತ್ತು ಚರ್ಮವು ನಿಸ್ತೇಜವನ್ನು ಮೀರಿ ಆರೋಗ್ಯಕಾರಿ ಹಾಗೂ ತಾಜಾವಾಗಿ ಕಾಣಿಸುವುದು. ಇದು ಚರ್ಮಕ್ಕೆ ಲ್ಯೂಬ್ರಿಕೇಟ್ ಮಾಡಿ ಚರ್ಮದ ಪದರಗಳಿಗೆ ರಕ್ಷಣೆ ನೀಡುವುದು ಮತ್ತು ಹವಾಮಾನದಿಂದಾಗಿ ಆಗುವಂತಹ ಹಾನಿ ತಡೆಯುವುದು. ಸೀತಾಫಲದಲ್ಲಿ ಇರುಂತಹ ಒಮೆಗಾ 3 ಕೊಬ್ಬಿನಾಮ್ಲವು ಆರೋಗ್ಯಕಾರಿ ಅಂಗಾಂಶಗಳನ್ನು ಕಾಪಾಡಲು ನೆರವಾಗುವುದು. ಚರ್ಮದ ಕೆಲವೊಂದು ರೀತಿಯ ಸಮಸ್ಯೆಗಳಾಗಿರುವಂತಹ ಚರ್ಮ ಕಿತ್ತು ಬರುವುದು, ಇಸಬು, ಅಲ್ಸರ್, ಬೊಕ್ಕೆ ಮತ್ತು ಸೋರಿಯಾಸಿಸ್ ಮತ್ತು ಎರಿಥೆಮಾವನ್ನು

ತಡೆಯುವುದು.

Most Read:ಸೀತಾಫಲ ತಿಂದರೆ ಶೀತವಾಗುವುದಿಲ್ಲ!, ಭಯಬಿಟ್ಟು ಹೊಟ್ಟೆ ತುಂಬಾ ತಿನ್ನಿ...

ಕಾಂತಿಯುತ ಚರ್ಮ

ಕಾಂತಿಯುತ ಚರ್ಮ

ಸೀತಾಫಲದಲ್ಲಿ ಇರುವಂತಹ ಹೆಚ್ಚಿನ ಮಟ್ಟದ ನಾರಿನಾಂಶವು ವಿರೇಚಕವಾಗಿ ಕೆಲಸ ಮಾಡುವುದು. ಇದರಿಂದಾಗಿ ದೇಹದಲ್ಲಿ ಇರುವಂತಹ, ರಕ್ತನಾಳಗಳಿಗೆ ಹೋಗುವ ವಿಷಕಾರಿ ಅಂಶಗಳು ಮತ್ತು ತ್ಯಾಜ್ಯವನ್ನು ಹೊರಹಾಕುವುದು. ದೇಹದಲ್ಲಿ ವಿಷಕಾರಿ ಅಂಶಗಳು ಇದ್ದರೆ ಅದರಿಂದ ಚರ್ಮವು ನಿಸ್ತೇಜ ಹಾಗೂ ಕಳೆಹೀನ ಆಗುವುದು. ನಾರಿನಾಂಶವು ಸಕ್ಕರೆ ಮಟ್ಟದಲ್ಲಿ ಏರು ಪೇರಾಗುವುದನ್ನು ತಡೆಯುವುದು. ಸಕ್ಕರೆ ಮಟ್ಟದಲ್ಲಿ ಏರುಪೇರಾದರೆ ಅದು ಚರ್ಮದಲ್ಲಿ ಕಾಲಜನ್ ಗೆ ಹಾನಿ ಉಂಟು ಮಾಡುವುದು. ನೀವು ಈ ಎಲ್ಲಾ ಲಾಭಗಳನ್ನು ಪಡೆಯಬೇಕು ಎಂದಾದರೆ ಆಗ ನೀವು ನಿಯಮಿತವಾಗಿ ಸೀತಾಫಲವನ್ನು ಸೇವನೆ ಮಾಡಬೇಕು. ಸೀತಾಫಲವನ್ನು ಖರೀದಿಸುವ ವೇಳೆ ನೀವು ಇದು ಗಟ್ಟಿಯಾಗಿದೆಯಾ ಎಂದು ನೋಡಿ ಮತ್ತು ಯಾವುದೇ ಹಾನಿಯಾಗದೆ ಇರುವುದನ್ನು ತೆಗೆದುಕೊಳ್ಳಿ. ಸೀತಾಫಲವು ಫ್ರಿಡ್ಜ್ ನಲ್ಲಿ ಎರಡರಿಂದ ಮೂರು ದಿನಗಳ ಕಾಲ ಹಾಗೆ ಇರಬಲ್ಲದು. ಈ ಹಣ್ಣನ್ನು ವಿವಿಧ ರೀತಿಯ ಸಿಹಿ ತಿನಿಸುಗಳಲ್ಲಿ ಕೂಡ ಬಳಸಲಾಗುತ್ತದೆ. ಈ ಹಣ್ಣು ಮಿಲ್ಕ್ ಶೇಕ್ ಮತ್ತು ಸ್ಮೂಥಿಗಳಿಗೆ ಹೇಳಿ ಮಾಡಿಸಿರುವ ಹಣ್ಣಾಗಿದೆ.

English summary

Winter Fruit Custard Apple Has Many Skin Benefits

Consuming custard apple regularly can help to beautify your skin naturally. The vitamin A content present abundantly in this fruit benefits to keep skin healthy. Know the nutritional value and its amazing benefits for skin care.
X
Desktop Bottom Promotion