For Quick Alerts
ALLOW NOTIFICATIONS  
For Daily Alerts

ಒಂದೇ ವಾರದಲ್ಲಿ ಮುಖದ ಸೌಂದರ್ಯ ಹೆಚ್ಚಿಸಲು ಸರಳ ಟಿಪ್ಸ್

|

ಹೆಚ್ಚಿನವರಿಗೆ ಇಂದಿನ ದಿನಗಳಲ್ಲಿ ಹಠಾತ್ ಆಗಿ ಸೌಂದರ್ಯ ಹಾಗೂ ಮುಖದ ಕಾಂತಿ ಬೇಕಿರುವುದು. ಇದಕ್ಕಾಗಿ ಅವರು ಹಲವಾರು ರೀತಿಯಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳನ್ನು ಬಳಸಿಕೊಂಡು ತಾವು ಕೂಡ ಆ ಉತ್ಪನ್ನದ ಜಾಹೀರಾತಿನಲ್ಲಿ ನಟಿಸಿರುವ ಬಾಲಿವುಡ್ ನಟಿಯೋ ಅಥವಾ ರೂಪದರ್ಶಿಯಂತೆಯೋ ಕಾಣಿಸಿಕೊಳ್ಳಬೇಕು ಎಂದು ಬಯಸುವರು. ಆದರೆ ಇದೆಲ್ಲವೂ ಹಾಗೆ ಸಾಧ್ಯವಿಲ್ಲ.

ಆದರೆ ಕೆಲವೊಂದು ವಿಧಾನಗಳನ್ನು ಬಳಸಿಕೊಂಡರೆ ಆಗ ಅದರಿಂದ ತ್ವಚೆಯ ಸೌಂದರ್ಯ ಹೆಚ್ಚಿಸಲು ಸಾಧ್ಯವಿದೆ. ಇಂತಹ ಕೆಲವೊಂದು ವಿಧಾನಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಂಡು ಮುಂದೆ ನಿಮ್ಮ ತ್ವಚೆಯು ಕಾಂತಿಯುತವಾಗುವಂತೆ ಮಾಡಿಕೊಳ್ಳಿ.

ಹಸಿರೆಲೆ ತರಕಾರಿ ಹೆಚ್ಚಾಗಿ ಸೇವಿಸಿ

ಹಸಿರೆಲೆ ತರಕಾರಿ ಹೆಚ್ಚಾಗಿ ಸೇವಿಸಿ

ನಿಮ್ಮ ಮನೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದರೆ ಆಗ ಮನೆ ತುಂಬಾ ಜನರು ತುಂಬಿದ್ದರೆ ಖಂಡಿತವಾಗಿಯೂ ನಿಮ್ಮ ನಿಸ್ತೇಜ ಹಾಗೂ ಬಾಡಿದ ಚರ್ಮವನ್ನು ನೋಡಿಯೇ ಇರುವರು. ಯಾಕೆಂದರೆ ನಿಮ್ಮ ತ್ವಚೆಯು ಕಾಂತಿಯನ್ನು ಕಳೆದುಕೊಂಡಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಆದರೆ ನೀವು ಈ ಬಗ್ಗೆ ಚಿಂತೆ ಮಾಡಬಾರದು. ನಾವು ನಿಮಗೆ ಇಲ್ಲಿ ಕೆಲವು ವಿಧಾನಗಳನ್ನು ತಿಳಿಸುತ್ತೇವೆ. ಅದನ್ನು ಪಾಲಿಸಿಕೊಂಡು ಹೋದರೆ ನೀವು ಕಾಂತಿಯುತವಾದ ಚರ್ಮ ಪಡೆಯಬಹುದು. ಹಸಿರೆಲೆ ತರಕಾರಿ ಹೆಚ್ಚಾಗಿ ಸೇವಿಸಿ.

ಪೋಷಣೆ ನೀಡಿ..

ಪೋಷಣೆ ನೀಡಿ..

ನೀವು ತಡರಾತ್ರಿ 2 ಗಂಟೆಗೆ ಮನೆಗೆ ಬಂದರೂ ಮುಖದಲ್ಲಿರುವ ಮೇಕಪ್ ತೆಗೆಯದೆ ಮಲಗಲು ಹೋಗಬೇಡಿ. ನಾವು ನಿದ್ರೆಗೆ ಜಾರಿದಂತೆ ಮೆದುಳು ಚರ್ಮಕ್ಕೆ ಪುನರುಜ್ಜೀವನಗೊಳಿಸುವ ಸಂಕೇತ ನೀಡುವುದು. ಆದರೆ ನಿಮ್ಮ ಮುಖದ ಮೇಲೆ ಹಲವಾರು ಮೇಕಪ್ ಇರುವುದು. ಇದರಿಂದಾಗಿ ನೀವು ಮೇಕಪ್ ತೆಗೆದ ಬಳಿಕ ರಾತ್ರಿ ಬಳಸಿಕೊಳ್ಳುವ ಕ್ರೀಮ್ ಹಚ್ಚಿಕೊಳ್ಳಿ. ಇದರಿಂದ ಚರ್ಮವು ಒಳ್ಳೆಯ ರೀತಿಯ ಪುನರುಜ್ಜೀನವಗೊಳ್ಳುವುದು.

ತೇವಾಂಶ ನೀಡಿ

ತೇವಾಂಶ ನೀಡಿ

ಚರ್ಮಕ್ಕೆ ತೇವಾಂಶ ನೀಡುವುದು ಕೂಡ ಅತೀ ಅಗತ್ಯ ಆಗಿರುವುದು. ನಿಮ್ಮ ದೇಹ ಹಾಗೂ ಚರ್ಮವು ಆರೋಗ್ಯವಾಗಿ ಇರಬೇಕೆಂದರೆ ಆಗ ನೀವು ಶುದ್ಧವಾಗಿರುವಂತಹ ನೀರಿನ ಸೇವನೆ ಮಾಡಬೇಕು.

ಒಳ್ಳೆಯ ಮೊಶ್ಚಿರೈಸರ್

ಒಳ್ಳೆಯ ಮೊಶ್ಚಿರೈಸರ್

ಒಣ ಹಾಗೂ ಸಾಮಾನ್ಯ ಚರ್ಮಕ್ಕೆ ಬಾದಾಮಿ ಎಣ್ಣೆ ಬಳಸಿಕೊಳ್ಳಿ, ಎಣ್ಣೆಯಂಶ ವಿರುವಂತಹ ಚರ್ಮಕ್ಕೆ ಮಗುವಿನ ಎಣ್ಣೆ ಬಳಸಿಕೊಳ್ಳಿ. ಇದು ಎಲ್ಲಾ ಹವಾಮಾನದಲ್ಲಿ ಚರ್ಮಕ್ಕೆ ಒಳ್ಳೆಯ ಮೊಶ್ಚಿರೈಸರ್ ನೀಡುವುದು. ಸ್ವಲ್ಪ ಪ್ರಮಾಣದಲ್ಲಿ ನೀವು ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಎಣ್ಣೆಯುಕ್ತ ಚರ್ಮಕ್ಕೆ ಹಚ್ಚಿಕೊಂಡ ಒಂದು ಗಂಟೆ ಬಳಿಕ ಒರೆಸಿಕೊಳ್ಳಿ. ಒಣ ಹಾಗೂ ಸಾಮಾನ್ಯ ಚರ್ಮ ಇರುವಂತಹವರು ದೀರ್ಘ ಸಮಯ ಬಾದಾಮಿ ಎಣ್ಣೆಯನ್ನು ಮುಖದ ಮೇಲೆ ಇಟ್ಟುಕೊಳ್ಳಬಹುದು.

ಸ್ನಾನ ಮಾಡುವುದು ನಿಮ್ಮಿಷ್ಟದಂತೆ

ಸ್ನಾನ ಮಾಡುವುದು ನಿಮ್ಮಿಷ್ಟದಂತೆ

ಲಘುವಾಗಿರುವ ಸೋಪ್ ಮತ್ತು ಅದರ ಮೇಲೆ ಸಾರಭೂತ ತೈಲ ಹಾಕಿಕೊಂಡು ಮೊಶ್ಚಿರೈಸ್ ಮಾಡಿದರೆ ಆಗ ಅದು ದೇಹಕ್ಕೆ ಹೆಚ್ಚಿನ ಮೊಶ್ಚಿರೈಸ್ ನೀಡುವುದು. ಶುದ್ಧ ಪೆಟ್ರೋಲಿಯಂ ಜೆಲ್ಲಿ, ಗ್ಲಿಸರಿನ್, ಖನಿಜದ ತೈಲ ಮೊಶ್ಚಿರೈಸ್ ನ್ನು ಹಿಡಿದಿಟ್ಟುಕೊಳ್ಳಲು ನೆರವಾಗುವುದು ಮತ್ತು ಚಳಿಗಾಲದಲ್ಲಿ ಚರ್ಮವು ಒಣಗುವುದನ್ನು ಇದು ತಪ್ಪಿಸುವುದು.

English summary

Tips to get glowing skin in one weeks

Tired of that dull skin and the fact that people don't notice you when you are in a room full of people? Well, that's because your skin doesn't glow anymore! But, fret not because here's a list of 6 sure shot tips that will bring back that old glow on your face.
X
Desktop Bottom Promotion