For Quick Alerts
ALLOW NOTIFICATIONS  
For Daily Alerts

ಈ ಫೇಸ್ ಮಾಸ್ಕ್ ಬಳಸಿದರೆ ಮುಖದಲ್ಲಿ ಇರುವ ವೈಟ್ ಹೆಡ್ಸ್ ನಿವಾರಣೆಯಾಗುವುದು!

|

ಸುಂದರವಾದ ತ್ವಚೆ ಹಾಗೂ ಆಕರ್ಷಕವಾದ ನೋಟವನ್ನು ಹೊಂದಬೇಕು ಎನ್ನುವುದನ್ನು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಾರೆ. ಮಗುವಿನಂತಹ ನಿರ್ಮಲವಾದ ತ್ವಚೆಯನ್ನು ಪಡೆಯುವುದು ಎಂದರೆ ಅದು ಅಷ್ಟು ಸುಲಭವಲ್ಲ. ಏಕೆಂದರೆ ನಿತ್ಯವೂ ಎದುರಿಸುವ ಧೂಳು, ಮಾಲಿನ್ಯ, ಅನುಚಿತವಾದ ಆಹಾರ ಕ್ರಮ ಹಾಗೂ ಸ್ವಚ್ಛತೆಯನ್ನು ಅನುಸರಿಸದೆ ಇರುವುದು ಮತ್ತು ರಾಸಾಯನಿಕ ಪದಾರ್ಥಗಳನ್ನು ಹೊಂದಿರುವ ಕ್ರೀಮ್ ಹಾಗೂ ಲೋಷನ್‍ಗಳ ಬಳಕೆ ಮಾಡುವುದರಿಂದಲೂ ತ್ವಚೆಯು ಬಹುಬೇಗ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುವುದು.

ಬಾಲ್ಯದಿಂದ ತಾರುಣ್ಯದ ಜೀವನಕ್ಕೆ ಕಾಲಿಡುತ್ತಿದ್ದಂತೆ ಮುಖದಲ್ಲಿ ಹಾಗೂ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಹಾರ್ಮೋನ್‍ಗಳ ಬದಲಾವಣೆ ಹಾಗೂ ಚರ್ಮದಲ್ಲಿ ಉಂಟಾಗುವ ಬದಲಾವಣೆಗಳು ವ್ಯಕ್ತಿಯ ನೋಟವನ್ನು ಬದಲಾಯಿಸುತ್ತವೆ. ಮುಖದಲ್ಲಿ ಸಾಕಷ್ಟು ಜಿಡ್ಡಿನ ಪರಿವರ್ತನೆ ಹಾಗೂ ಮೊಡವೆಗಳು, ಬ್ಲ್ಯಾಕ್ ಮತ್ತು ವೈಟ್ ಹೆಡ್ಸ್‍ಗಳು ಕಾಣಿಸಿಕೊಳ್ಳುತ್ತವೆ. ಇವು ಮುಖದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಮುಖದ ತ್ವಚೆಯು ಗಡಸು ಹಾಗೂ ಜಿಡ್ಡಿನಿಂದ ಕೂಡಿರುವಂತೆ ತೋರುವುದು.

ಮೊಡವೆ, ಬ್ಯಾಕ್ ಹೆಡ್ಸ್ ಮತ್ತು ಸತ್ತ ಜೀವಕೋಶಗಳನ್ನು ನಿವಾರಿಸಿಕೊಳ್ಳಲು ಸಾಕಷ್ಟು ಸುಲಭ ಪರಿಹಾರಗಳ ಮೊರೆ ಹೋಗಬಹುದು. ಕೆಲವು ಬಹುಬೇಗ ಉತ್ತಮ ಪರಿಣಾಮ ಅಥವಾ ಫಲಿತಾಂಶವನ್ನು ನೀಡಬಹುದು. ಆದರೆ ವೈಟ್ ಹೆಡ್ಸ್ ನಂತಹ ಸಮಸ್ಯೆಗಳನ್ನು ಬಗೆಹರಿಸುವುದು ಎಂದರೆ ಕೊಂಚ ಜಟಿಲವಾದ ಸಂಗತಿ ಎನ್ನಬಹುದು. ಚರ್ಮದ ಒಳಭಾಗದಿಂದ ಕಾಣಿಸಿಕೊಳ್ಳುವ ಈ ಸಮಸ್ಯೆಯು ಚರ್ಮದ ಗುಣಮಟ್ಟವನ್ನು ಕಳಪೆಯಾಗಿ ತೋರುವುದು. ಜೊತೆಗೆ ಇದರ ಅತಿಯಾದ ಹುಟ್ಟಿನಿಂದ ಒಂದು ಬಗೆಯ ತುರಿಕೆ, ಉರಿಯೂತವು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇದ ಬಗ್ಗೆ ಸಾಕಷ್ಟು ಕಾಳಜಿಯನ್ನು ತೋರುವುದರ ಮೂಲಕ ನಿವಾರಿಸಬೇಕಾಗುವುದು. ನೀವು ಸಹ ವೈಟ್ ಹೆಡ್ಸ್ ಗಳಿಂದ ಸಾಕಷ್ಟು ಇರಿಸುಮುರಿಸನ್ನು ಅನುಭವಿಸುತ್ತಿದ್ದೀರಿ ಎಂದಾರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ಸರಳವಾದ ಎರಡು ಫೇಸ್ ಪ್ಯಾಕ್ ಅನ್ನು ಅನ್ವಯಿಸಿ. ಅದು ನಿಮ್ಮ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಚರ್ಮವನ್ನು ಕಾಂತಿಯಿಂದ ಕೂಡಿರುವಂತೆ ಮಾಡುವುದು.

ವೆಟ್ ಹೆಡ್ಸ್

ವೆಟ್ ಹೆಡ್ಸ್

ಇದು ಮೊಡವೆಯಂತೆ ಹೋಲುತ್ತದೆಯಾದರೂ ಬಹಳ ಸೂಕ್ಷ್ಮ ರೀತಿಯಲ್ಲಿ ಕಲ್ಮಶಗಳಿಂದ ಕೂಡಿರುತ್ತದೆ. ಜೊತೆಗೆ ಸಾಕಷ್ಟು ನೋವಿನಿಂದ ಕೂಡಿರುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧ ಹಾಗೂ ಕ್ರೀಮ್‍ಗಳು ದೊರೆಯುತ್ತವೆಯಾದರೂ ಅಡ್ಡ ಪರಿಣಾಮ ಬೀರುವ ಸಾದ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಕೆಲವು ನೈಸರ್ಗಿಕ ಘಟಕಗಳ ಬಳಕೆಯಿಂದ ಆರೋಗ್ಯಕರ ಫೇಸ್ ಪ್ಯಾಕ್ ಅನ್ನು ಅನುಸರಿಸಬಹುದು. ಅವುಗಳೆಂದರೆ ಒಂದು ಸಕ್ಕರೆ ಮತ್ತು ಆಲಿವ್ ಎಣ್ಣೆಯ ಫೇಸ್ ಪ್ಯಾಕ್, ನೀರು ಮತ್ತು ಅಡುಗೆ ಸೋಡಾದ ಫೇಸ್ ಪ್ಯಾಕ್, ಕಡ್ಲೇ ಹಿಟ್ಟು ಮತ್ತು ಹಾಲಿನ ಮಿಶ್ರಣದ ಫೇಸ್ ಪ್ಯಾಕ್ ಮತ್ತು ಮೊಟ್ಟೆ ಮತ್ತು ಹನಿ ಮಿಶ್ರಿತವಾದ ಫೇಸ್ ಪ್ಯಾಕ್.

Most Read: ವೈಟ್ ಹೆಡ್‌ ಸಮಸ್ಯೆಯೇ? ಚಿಂತೆ ಬಿಡಿ, ಟೂತ್ ಪೇಸ್ಟ್ ಬಳಸಿ!

ಸಕ್ಕರ ಮತ್ತು ಆಲಿವ್ ಎಣ್ಣೆ

ಸಕ್ಕರ ಮತ್ತು ಆಲಿವ್ ಎಣ್ಣೆ

*ಸ್ವಲ್ಪ ಆಲಿವ್ ಎಣ್ಣೆಗೆ 1 ಟೀ ಚಮಚ ಸಕ್ಕರೆಯನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಮೃದುವಾದ ಬ್ರಶ್ ಸಹಾಯದಿಂದ ಮುಖ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

* ಬಳಿಕ 5-10 ನಿಮಿಷಗಳ ಕಾಲ ಮೃದುವಾಗಿ ಉಜ್ಜಿರಿ. ನಂತರ ತಣ್ಣನೆಯ ನೀರಿನಿಂದ ಸ್ವಚ್ಛಗೊಳಿಸಿ.

*ವಾರಕ್ಕೆ ಒಮ್ಮೆ ಈ ಕ್ರಮವನ್ನು ಅನುಸರಿಸುವುದರಿಂದ ಅತ್ಯುತ್ತಮವಾದ ಫಲಿತಾಂಶವನ್ನು ಪಡೆಯಬಹುದು.

ಅಡುಗೆ ಸೋಡಾ ಮತ್ತು ನೀರು

ಅಡುಗೆ ಸೋಡಾ ಮತ್ತು ನೀರು

*ಅಡುಗೆ ಸೋಡಾಕ್ಕೆ ಸ್ವಲ್ಪ ನೀರನ್ನು ಬೆರೆಸಿ ದಪ್ಪದಾದ ಮಿಶ್ರಣವನ್ನು ತಯಾರಿಸಿ.

*ಮಿಶ್ರಣವನ್ನು ಪೀಡಿತ ಪ್ರದೇಶ ಹಾಗೂ ಮುಖಕ್ಕೆ ಅನ್ವಯಿಸಿ.

*ಸ್ವಲ್ಪ ಸಮಯಗಳ ಕಾಲ ಆರಲು ಬಿಡಿ. (ಮುಖದ ಮೇಲೆ ಸಂಪೂರ್ಣವಾಗಿ ಆರಬೇಕು)

*ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

*ಗಣನೀಯವಾಗಿ ಈ ಕ್ರಮವನ್ನು ಅನುಸರಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಮೊಟ್ಟೆ ಮತ್ತು ಜೇನುತುಪ್ಪ

ಮೊಟ್ಟೆ ಮತ್ತು ಜೇನುತುಪ್ಪ

*1/2 ಟೀ ಚಮಚ ಬಾದಾಮಿ ಎಣ್ಣೆ, 1 ಟೇಬಲ್ ಚಮಚ ಮೊಸರು, 1 ಮೊಟ್ಟೆಯ ಬಿಳಿಯ ಭಾಗ ಮತ್ತು 1 ಟೇಬಲ್ ಚಮಚ ಬೆಚ್ಚಗಿನ ಜೇನುತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖದ ಮೇಲೆ ತೆಳುವಾಗಿ ಅನ್ವಯಿಸಿ. ಸ್ವಲ್ಪ ಸಮಯ ಆರಲು ಬಿಡಿ.

*ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ.

*ವಾರಕ್ಕೆ ಒಮ್ಮೆ ಈ ಕ್ರಮವನ್ನು ಅನುಸರಿಸುವುದರಿಂದ ಅತ್ಯುತ್ತಮವಾದ ಫಲಿತಾಂಶವನ್ನು ಪಡೆಯಬಹುದು.

ಕಡ್ಲೆ ಹಿಟ್ಟು ಮತ್ತು ಹಾಲು

ಕಡ್ಲೆ ಹಿಟ್ಟು ಮತ್ತು ಹಾಲು

*ಒಂದು ಟೇಬಲ್ ಚಮಚ ಹಾಲಿಗೆ ಸ್ವಲ್ಪ ಕಡ್ಲೆ ಹಿಟ್ಟನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖಕ್ಕೆ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

*ಸ್ವಲ್ಪ ಕಾಲ ಆರಲು ಬಿಟ್ಟು, ಬಳಿಕ ಬೆಚ್ಚಗಿನ ನೀರಿನಿಂದ ಶುಚಿಗೊಳಿಸಿ.

*ವಾರಕ್ಕೊಮ್ಮೆ ಈ ಕ್ರಮವನ್ನು ಅನುಸರಿಸುವುದರಿಂದ ಸಮಸ್ಯೆಯಿಂದ ಬಹುಬೇಗ ಮುಕ್ತರಾಗಬಹುದು.

English summary

these 2-ingredient facemasks to get rid of whiteheads

Anyone with oily skin knows the struggle of getting rid of blackheads and whiteheads. But just in case you didn't know, here's how the two are different:Whiteheads develop under the skin and look like white bumps--these bothersome pimple-like bumps are a combination of sebum (oil) and dead skin in our follicle.Blackheads are open-hair follicles filled with lots of dead skin cells and sebum that have developed because ofoxidation
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more