For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮುಖದ ಸೌಂದರ್ಯ ಹೆಚ್ಚಿಸಲು ಸ್ಟ್ರಾಬೆರಿ ಹಣ್ಣುಗಳ ಫೇಸ್ ಪ್ಯಾಕ್

|

ತ್ವಚೆಯ ಆರೈಕೆಯ ವಿಷಯದಲ್ಲಿ ಹಣ್ಣುಗಳ ಬಳಕೆಯಿಂದ ಹಲವಾರು ಅಪ್ರತಿಮ ಪ್ರಯೋಜನಗಳಿವೆ. ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯ ವೃದ್ದಿಯಾಗುವುದರ ಜೊತೆಗೇ ಇದರ ತಿರುಳನ್ನು ಅರೆದು ಲೇಪಿಸಿಕೊಳ್ಳುವುದರಿಂದಲೂ ಹೆಚ್ಚಿನ ಆರೈಕೆ ಪಡೆಯಬಹುದು. ಅಲ್ಲದೇ ಹಣ್ಣುಗಳನ್ನು ಯಾವುದೇ ಬಗೆಯ ತ್ವಚೆಗಾದರೂ ಸರಿ, ಸುರಕ್ಷಿತವಾಗಿ ಬಳಸಬಹುದು.

ತ್ವಚೆಗೆ ಆರೈಕೆ ನೀಡುವ ಅತ್ಯುತ್ತಮ ಹಣ್ಣುಗಳ ಪಟ್ಟಿಯಲ್ಲಿ ಸ್ಟ್ರಾಬೆರಿ ಹಣ್ಣು ಅಗ್ರಸ್ಥಾನ ಪಡೆಯುತ್ತದೆ. ಸಾಮಾನ್ಯವಾಗಿ ಇತರ ಹಣ್ಣುಗಳಲ್ಲಿ ಬೀಜಗಳು ಒಳಗಿದ್ದರೆ ಈ ಹಣ್ಣಿನಲ್ಲಿ ಬೀಜಗಳು ಹೊರಗಿರುವುದು ಒಂದು ವಿಶೇಷ. ಹುಳಿಮಿಶ್ರಿತ ಸಿಹಿಯಾಗಿರುವ ಈ ಹಣ್ಣು ಮಕ್ಕಳಿಂದ ವೃದ್ದರವರೆಗೆ ಎಲ್ಲರಿಗೂ ಇಷ್ಟವಾಗಿದೆ. ಒಂದು ವೇಳೆ ನಿಯಮಿತವಾಗಿ ತ್ವಚೆಯ ಆರೈಕೆಯ ರೂಪದಲ್ಲಿ ಬಳಸುತ್ತಾ ಬಂದರೆ ಆರೋಗ್ಯಕರ ಮೇಲ್ಮೈ ಹಾಗೂ ಕಾಂತಿಯನ್ನು ಪಡೆಯಬಹುದು. ಈ ಅದ್ಭುತ ಸ್ಟ್ರಾಬೆರಿ ಹಣ್ಣುಗಳನ್ನು ನಿತ್ಯದ ತ್ವಚೆಯ ಆರೈಕೆಗಾಗಿ ಹೇಗೆ ಬಳಸಬಹುದು ಎಂಬುದನ್ನು ನೋಡೋಣ:

ಸಹಜವರ್ಣವನ್ನು ಪ್ರಜ್ವಲಿಸಲು

ಸಹಜವರ್ಣವನ್ನು ಪ್ರಜ್ವಲಿಸಲು

ಸ್ಟ್ರಾಬೆರಿ ಹಣ್ಣುಗಳನ್ನು ಬಳಸುವ ಮೂಲಕ ಬಿಸಿಲಿಗೆ ಗಾಢಗೊಂಡಿರುವ ತ್ವಚೆಯನ್ನು ಮತ್ತೆ ಸಹಜವರ್ಣಕ್ಕೆ ತರಲು ನೆರವಾಗುತ್ತದೆ ಎಂದು ಈಗಾಗಲೇ ಸೌಂದರ್ಯತಜ್ಞರು ಕಂಡುಕೊಂಡಿದ್ದಾರೆ ಹಾಗೂ ಕಲೆಗಳು, ಮೊಡವೆ ಅಳಿದ ಬಳಿಕ ಉಳಿದ ಗುರುತುಗಳೆಲ್ಲವೂ ಗಮನೀಯವಾಗಿ ಇಲ್ಲವಾಗಿರುವುದನ್ನು ಕಾಣಲಾಗಿದೆ. ಇದಕ್ಕಾಗಿ ಸುಮಾರು ಮೂರರಿಂದ ನಾಲ್ಕು ಚೆನ್ನಾಗಿ ಹಣ್ಣಾದ ಸ್ಟ್ರಾಬೆರಿ ಹಣ್ಣುಗಳನ್ನು ಒಂದು ಬೋಗುಣಿಯಲ್ಲಿ ಚೆನ್ನಾಗಿ ಕಿವುಚಿ ತೆಳುವಾದ ಮಸ್ಲಿನ್ ಬಟ್ಟೆಯಲ್ಲಿ ಸೋಸಿ ರಸವನ್ನು ಸಂಗ್ರಹಿಸಿ. ಈ ರಸವನ್ನು ಈಗತಾನೇ ತೊಳೆದು ಒತ್ತಿ ಒರೆಸಿಕೊಂಡ ಮುಖದ ತ್ವಚೆಯ ಮೇಲೆ ತೆಳುವಾಗಿ ಸಿಂಪಡಿಸಿ. ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳೀ. ಉತ್ತಮ ಪರಿಣಾಮಕ್ಕಾಗಿ ವಾರದಲ್ಲಿ ಮೂರು ಬಾರಿ ಈ ವಿಧಾನವನ್ನು ಅನುಸರಿಸಿ. ವಿಶೇಷವಾಗಿ ಸೂರ್ಯನ ಬೆಳಕಿನಲ್ಲಿ ಗಾಢಗೊಂಡಿದ್ದ ತ್ವಚೆಯನ್ನು ಈ ವಿಧಾನ ಶೀಘ್ರವೇ ಸಹಜವರ್ಣ ಪಡೆಯಲು ನೆರವಾಗುತ್ತದೆ ಹಾಗೂ ಮುಂದಿನ ಬಾರಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕಾದಾಗ ಎರಗುವ ಹಾನಿಯನ್ನು ತಗ್ಗಿಸುತ್ತದೆ.

Most Read: ಚರ್ಮ ಹಾಗೂ ಕೂದಲಿಗೆ ಸ್ಟ್ರಾಬೆರಿ ಹಣ್ಣಿನ ಆರೈಕೆ

ಮೊಡವೆಗಳನ್ನು ಗುಣಪಡಿಸುತ್ತದೆ.

ಮೊಡವೆಗಳನ್ನು ಗುಣಪಡಿಸುತ್ತದೆ.

ಸುಮಾರು ಅರ್ಧ ಕಪ್ ನಷ್ಟು ಎರಡಾಗಿ ತುಂಡರಿಸಿದ ಸ್ಟ್ರಾಬೆರಿ ಹಣ್ಣುಗಳನ್ನು ಒಂದು ದೊಡ್ಡ ಚಮಚ ಹುಳಿಯಾದ ಕೆನೆಯೊಂದಿಗೆ (sour cream) ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮೊಡವೆಗಳ ಮೇಲೆ ದಪ್ಪನಾಗಿ ಹಚ್ಚಿ ಹತ್ತು ನಿಮಿಷ ಹಾಗೇ ಬಿಡಿ. ಸ್ಟ್ರಾಬೆರಿಯಲ್ಲಿರುವ ಸ್ವಚ್ಟತಾ ಗುಣ ಮತ್ತು ವಿಶೇಷವಾಗಿ ಇದರಲ್ಲಿರುವ ಸ್ಯಾಲಿಸೈಲಿಕ್ ಆಮ್ಲ ತ್ವಚೆಯಿಂದ ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ ಹಾಗೂ ಸೂಕ್ಷ್ಮರಂಧ್ರಗಳನ್ನು ಕಿರಿದಾಗಿಸಿ ಇನ್ನಷ್ಟು ಬಿರುಕು ಬಿಡುವುದರಿಂದ ತಪ್ಪಿಸುತ್ತದೆ. ಅಲ್ಲದೇ ಸೂಕ್ಷ್ಮರಂಧ್ರಗಳ ಮೂಲಕ ಇಳಿದು ಕಲ್ಮಶಗಳನ್ನು ನಿವಾರಿಸಿ ಮೊಡವೆಗಳು ಶೀಘ್ರವಾಗಿ ಕಲೆಯಿಲ್ಲದಂತೆ ನಿರ್ಮೂಲನೆಯಾಗಲು ನೆರವಾಗುತ್ತವೆ. ಇದೇ ಕಾರಣಕ್ಕೆ ಹಲವಾರು ಫೇಸ್ ವಾಶ್ ಗಳಲ್ಲಿ ಸ್ಟ್ರಾಬೆರಿ ಹಣ್ಣುಗಳನ್ನು ಪ್ರಮುಖ ಸ್ವಚ್ಛತಾ ಘಟಕವನ್ನಾಗಿ ಪರಿಗಣಿಸಲಾಗುತ್ತದೆ.

Most Read: ಸ್ಟ್ರಾಬೆರಿಯಿಂದ ಪಡೆಯಿರಿ ಸ್ಟ್ರಾಂಗ್ ಕೂದಲು

ಅದ್ಭುತ ಟೋನರ್ ಆಗಿದೆ

ಅದ್ಭುತ ಟೋನರ್ ಆಗಿದೆ

ಒಂದು ಹಿಡಿಯಷ್ಟು ಸ್ಟ್ರಾಬೆರಿಗಳನ್ನು ಹಿಂಡಿ ರಸವನ್ನು ಸಂಗ್ರಹಿಸಿ. ಎರಡು ದೊಡ್ಡಚಮಚದಷ್ಟು ರಸವನ್ನು ನೂರು ಮಿ.ಲೀ ಗುಲಾಬಿನೀರಿನೊಂದಿಗೆ ಮಿಶ್ರಣ ಮಾಡಿ. ಒಂದು ಹತ್ತಿಯುಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ರಾತ್ರಿ ಮಲಗುವ ಮುನ್ನ ಮುಖದ ತ್ವಚೆಗೆ ಹಚ್ಚಿಕೊಳ್ಳಿ. ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಮಿಶ್ರಣ ಯಾವುದೇ ಬಗೆಯ ತ್ವಚೆಗೂ ಅದ್ಭುತವಾದ ಟೋನರ್ ಪರಿಣಾಮವನ್ನು ಒದಗಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ಈ ವಿಧಾನವನ್ನು ನಿತ್ಯವೂ ಅನುಸರಿಸಿ ಹಾಗೂ ಇದರೊಂದಿಗೆ ಬೇರೆ ಯಾವುದೇ ರಾತ್ರಿ ಹಚ್ಚಿಕೊಳ್ಳುವ ಕ್ರೀಂ ಹಚ್ಚದಿರಿ. ಅಲ್ಲದೇ ಈ ರಸವನ್ನು ಸುಮಾರು ಹದಿನೈದು ದಿನಗಳವರೆಗೂ ಫ್ರಿಜ್ಜಿನಲ್ಲಿ ಹಾಳಾಗದಂತೆ ಇರಿಸಬಹುದು.

ತಾರುಣ್ಯದ ತ್ವಚೆ ಪಡೆಯಲು ಸ್ಟ್ರಾಬೆರಿ ಹಣ್ಣುಗಳ ಸ್ಕ್ರಬ್

ತಾರುಣ್ಯದ ತ್ವಚೆ ಪಡೆಯಲು ಸ್ಟ್ರಾಬೆರಿ ಹಣ್ಣುಗಳ ಸ್ಕ್ರಬ್

ಐದು ಸ್ಟ್ರಾಬೆರಿ ಹಣ್ಣುಗಳನ್ನು ಎರಡು ದೊಡ್ಡ ಚಮಚ ಜೇನಿನೊಂದಿಗೆ ಚಮಚದ ಅಡಿಯಿಂದ ಒತ್ತಿ ಚೆನ್ನಾಗಿ ಕಿವುಚಿ ಮಿಶ್ರಣ ಮಾಡಿ. ಅಂದರೆ ಇವುಗಳ ಬೀಜಗಳು ಹಾಗೇ ಇರಬೇಕು. ಬೀಜಗಳನ್ನು ನಿವಾರಿಸಬೇಡಿ. ಇದಕ್ಕೆ ಸುಮಾರು ಮೂರು ತೊಟ್ಟು ಉಗುರುಬೆಚ್ಚನೆಯ ನೀರು ಬೆರೆಸಿ. ಈ ಲೇಪದಿಂದ ವೃತ್ತಾಕಾರದಲ್ಲಿ, ಪ್ರದಕ್ಷಿಣ, ಅಪ್ರದಕ್ಷಿಣ ಹಾಗೂ ಚಂದ್ರಾಕೃತಿಯಲ್ಲಿ ಹೆಚ್ಚಿನ ಒತ್ತಡವಿಲ್ಲದೇ ಮುಖದ ಅಷ್ಟೂ ಭಾಗಕ್ಕೆ ಸುಮಾರು ಹತ್ತು ನಿಮಿಷದ ಕಾಲ ಚೆನ್ನಾಗಿ ಮಸಾಜ್ ಮಾಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಮೂರು ಬಾರಿ ಈ ವಿಧಾನವನ್ನು ಅನುಸರಿಸಿ.

Most Read: ಸ್ಟ್ರಾಬೆರಿಯಂಥ ಕೆನ್ನೆ ಪಡೆಯಲು ಕಷ್ಟವೇನಿಲ್ಲ

ಸ್ಟ್ರಾಬೆರಿ ಹಣ್ಣು ಮತ್ತು ಹಾಲಿನ ಮುಖಲೇಪದ ಆರೈಕೆ

ಸ್ಟ್ರಾಬೆರಿ ಹಣ್ಣು ಮತ್ತು ಹಾಲಿನ ಮುಖಲೇಪದ ಆರೈಕೆ

ಕಲೆಯಿಲ್ಲದ ತ್ವಚೆಗಾಗಿ ಈ ಎರಡೂ ಸಾಮಾಗ್ರಿಗಳು ನಿಸರ್ಗದ ಅದ್ಭುತ ಕೊಡುಗೆಯಾಗಿದೆ. ಮೂರು ಸ್ಟ್ರಾಬೆರಿ ಹಣ್ಣುಗಳನ್ನು ಏಳು ಚಿಕ್ಕ ಚಮಚ ಹಾಲಿನೊಂದಿಗೆ ಬೆರೆಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಚೆನ್ನಾಗಿ ಗೊಟಾಯಿಸಿ ಈ ಮಿಶ್ರಣವನ್ನು ಮುಖಲೇಪದ ರೂಪದಲ್ಲಿ ಬೆಳಗ್ಗೆದ್ದು ತಣ್ಣೀರಿನಿಂದ ಮುಖ ತೊಳೆದು ಒತ್ತಿ ಒರೆಸಿಕೊಂಡ ಬಳಿಕ ದಪ್ಪನಾಗಿ ಹಚ್ಚಿಕೊಳ್ಳಿ. ಎಷ್ಟು ಹೊತ್ತು ಸಾಧ್ಯವೋ ಅಷ್ಟೂ ಹೊತ್ತು ಈ ಲೇಪವನ್ನು ಮುಖದ ಮೇಲೆ ಇರುವಂತೆ ಮಾಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ದಿನದ ಅವಧಿಯಲ್ಲಿ ಮುಖಕ್ಕೆ ಬೇರೇನೂ ಹಚ್ಚದಿರಿ. ಇದೊಂದು ಅತಿ ಸುಲಭವಾದ ಮುಖಲೇಪವಾಗಿದ್ದು ದಣಿದ ಮತ್ತು ಶುಷ್ಕವಾದ ತ್ವಚೆ ಇರುವ ವ್ಯಕ್ತಿಗಳಿಗೆ ನಿಸರ್ಗದ ಅದ್ಭುತ ವರದಾನವಾಗಿದೆ.

English summary

Beauty Tips-strawberry face pack for face glowing!

Fruits have innumerable benefits when it comes to skin care. While eating them is beneficial, applying them as scrub, mask or facial has remarkable effects on any skin type. One of the most effective fruits one can find in an orchard is the luscious red wonder berry—strawberry.Delectable and yummy, it is a favourite of both grown-ups and kids. If used regularly, strawberries can work wonders in giving your face a shine and healthy glow. Here are a few ways you can use strawberries in your daily beauty regime.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more