For Quick Alerts
ALLOW NOTIFICATIONS  
For Daily Alerts

ಮುಖದ ಕಾಂತಿ ಹೆಚ್ಚಿಸಲು ಗೋಧಿ ಹಿಟ್ಟಿನ ಫೇಸ್ ಪ್ಯಾಕ್

|

ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಚರ್ಮದ ಮೇಲೆ ಪವಾಡವನ್ನು ಸೃಷ್ಟಿಸುವಂತಹ ಶಕ್ತಿಯನ್ನು ಪಡೆದುಕೊಂಡಿದೆ. ಇದರಲ್ಲಿ ಇರುವ ನಾರಿನಂಶ, ಜೀವಸತ್ವಗಳು ಹಾಗೂ ಪೋಷಕಾಂಶಗಳು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುವುದು. ಭಾರತೀಯರ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾದ ಗೋಧಿ ಹಿಟ್ಟು ಸಾಕಷ್ಟು ಆರೋಗ್ಯಕರ ಗುಣಗಳನ್ನು ಒಳಗೊಂಡಿದೆ. ಇದರ ನಿಯಮಿತವಾದ ಸೇವನೆಯಿಂದ ದೇಹಕ್ಕೆ ಶಕ್ತಿ ಹಾಗೂ ಚೈತನ್ಯ ದೊರೆಯುವುದು.

ಗೋಧಿ ಹಿಟ್ಟಿನಲ್ಲಿ ದೇಹಕ್ಕೆ ಹೇಗೆ ಪರಿಪೂರ್ಣವಾದ ಆಹಾರ ಎನಿಸಿಕೊಳ್ಳುವುದೋ ಹಾಗೆಯೇ ತ್ವಚೆಯ ಸೌಂದರ್ಯವನ್ನು ಕಾಯ್ದುಕೊಳ್ಳುವಲ್ಲೂ ಅತ್ಯುತ್ತಮ ರೀತಿಯ ಸಹಕಾರ ನೀಡುವುದು. ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಹೊಂದುವುದರಿಂದ ಒಂದು ಬಗೆಯ ಮಾಂತ್ರಿಕತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುವುದು. ಚರ್ಮದಲ್ಲಿರುವ ಕೊಳೆಗಳ ನಿವಾರಣೆ ಸೇರಿದಂತೆ ಅನೇಕ ಸಮಸ್ಯೆಗಳ ನಿರ್ಮೂಲನೆ ಹಾಗೂ ಅಗತ್ಯವಾದ ಹೊಳಪನ್ನು ಪಡೆದುಕೊಳ್ಳುವುದರ ಮೂಲಕ ಸೌಂದರ್ಯ ವೃದ್ಧಿಯಾಗುವುದು.

Wheat Flour Face Packs

ನೀವು ನೈಸರ್ಗಿಕವಾದ ಆರೈಕೆ ವಿಧಾನವನ್ನು ಅರಸುತ್ತಿದ್ದರೆ ಇದು ನಿಮಗೆ ಅತ್ಯುತ್ತಮ ಪರಿಹಾರ ಎನಿಸಿಕೊಳ್ಳುವುದು. ವಿವಿಧ ತ್ವಚೆಯವರಿಗೆ ಯಾವ ಬಗೆಯ ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಹೊಂದಬಹುದು ಎನ್ನುವುದನ್ನು ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾಗಿದೆ.

ಎಣ್ಣೆಯುಕ್ತ ತ್ವಚೆಗಾಗಿ:

ಗೋಧಿ ಹಿಟ್ಟು ತ್ವಚೆಯ ಮೇಲಿರುವ ಹೆಚ್ಚುವರಿ ಎಣ್ಣೆಯ ಅಂಶವನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಎಣ್ಣೆಯುಕ್ತ ತ್ವಚೆ/ಚರ್ಮದವರು ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಹೊಂದುವುದರ ಮೂಲಕ ಅತ್ಯುತ್ತಮ ಪರಿಹಾರ ಕಂಡುಕೊಳ್ಳಬಹುದು.

ಫೇಸ್ ಪ್ಯಾಕ್ ತಯಾರಿಸುವ ವಿಧಾನ:

- ಒಂದು ಬೌಲ್ ಅಲ್ಲಿ 4 ಟೇಬಲ್ ಚಮಚ ಗೋಧಿ ಹಿಟ್ಟನ್ನು ತೆಗೆದುಕೊಳ್ಳಿ.
- ಅದಕ್ಕೆ 3 ಟೀಚಮಚ ಹಾಲು ಮತ್ತು ಒಂದು ಟೇಬಲ್ ಚಮಚ ಗುಲಾಬಿ ನೀರನ್ನು ಸೇರಿಸಿ.
- ಅಗತ್ಯವಿದ್ದರೆ ಹಾಲನ್ನು ಸೇರಿಸಿಕೊಂಡು ಸ್ವಲ್ಪ ದಪ್ಪಗಿರುವ ಪೇಸ್ಟ್ ಅಂತೆ ಮಿಶ್ರಮಾಡಿಕೊಳ್ಳಿ.
- ನಂತರ ಮುಖಕ್ಕೆ ಮಿಶ್ರಣವನ್ನು ಅನ್ವಯಿಸಿ.
- 20 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಿ. ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿ.
- ವಾರದಲ್ಲಿ ಎರಡು ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ಅತ್ಯುತ್ತಮ ಪರಿಹಾರ ಕಂಡುಕೊಳ್ಳಬಹುದು.

ಮುಖ ಹೊಳಪಿನಿಂದ ಕೂಡಿರಲು:

ನೈಸರ್ಗಿಕವಾದ ಉತ್ಪನ್ನಗಳಿಂದ ನಿಮ್ಮ ಮುಖದ ಕಾಂತಿ ಹೆಚ್ಚಬೇಕು ಎಂದು ಬಯಸುತ್ತಿದ್ದರೆ ಗೋಧಿ ಹಿಟ್ಟಿನ ಪೇಸ್ ಪ್ಯಾಕ್ ನಿಮಗೆ ಅತ್ಯುತ್ತಮ ಪರಿಹಾರ ನೀಡುವುದು.

- ಒಂದು ಬೌಲ್ ಅಲ್ಲಿ 2-3 ಟೇಬಲ್ ಚಮಚ ಕೆನೆ ಅಥವಾ ಮಲೈ ಅನ್ನು ತೆಗೆದುಕೊಳ್ಳಿ.
- ಗೋಧಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ, ಮೃದುವಾದ ಪೇಸ್ಟ್‍ನಂತೆ ಮಾಡಿ.
- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.
- 10 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಿ. ಬಳಿಕ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ.
- ಗಣನೀಯವಾಗಿ ಈ ಕ್ರಮವನ್ನು ಅನುಸರಿಸುವುದರಿಂದ ಚರ್ಮವು ಕಾಂತಿ/ಹೊಳಪಿನಿಂದ ಕೂಡಿರುವುದು.

ಸೂರ್ಯನ ಕಿರಣದಿಂದ ಸುಟ್ಟ ಕಲೆಯ ನಿವಾರಣೆಗೆ:

ಗೋಧಿಹಿಟ್ಟಿನಲ್ಲಿ ಚರ್ಮಕ್ಕೆ ಪುನಃರುಜ್ಜೀವನ ಗೊಳಿಸಬಲ್ಲ ಎಫ್ಪೋಲಿಯಾಯಿಂಗ್ ಗುಣವನ್ನು ಒಳಗೊಂಡಿದೆ.

- ಎರಡು ಟೇಬಲ್ ಚಮಚ ಗೋಧಿಹಿಟ್ಟಿಗೆ ಒಂದು ಟೇಬಲ್ ಚಮಚ ನೀರನ್ನು ಸೇರಿಸಿ, ಮಿಶ್ರಗೊಳಿಸಿ.
- ಮಿಶ್ರಣವು ಮೃದುವಾದ ಪೇಸ್ಟ್‍ಅಂತೆ ಇರಬೇಕು.
- ಮುಖಕ್ಕೆ ಹಾಗೂ ಪೀಡಿತ ಪ್ರದೇಶಕ್ಕೆ ಮಿಶ್ರಣವನ್ನು ಅನ್ವಯಿಸಿ.
- 5-8 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಮೃದುವಾಗಿ ಮಸಾಜ್ ಮಾಡಿ.
- ಬಳಿಕ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.
- ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ ಎರಡು ಬಾರಿ ಈ ಕ್ರಮವನ್ನು ಅನ್ವಯಿಸಿ.

ವಿವಿಧ ಚರ್ಮದ ಸಮಸ್ಯೆಗಳಿಗೆ:

ಋತುಮಾನಗಳಿಗೆ ಅನುಗುಣವಾಗಿ ಚರ್ಮದ ಮೇಲೆ ಕಜ್ಜಿ, ತುರಿಕೆ, ಅಲರ್ಜಿ ಸೇರಿದಂತೆ ತ್ವಚೆಯ ಮೇಲೆ ಸಣ್ಣಪುಟ್ಟ ಕಿರಿಕಿರಿಗಳು ಉಂಟಾಗುತ್ತಲೇ ಇರುತ್ತವೆ. ಇವುಗಳ ನಿವಾರಣೆಗೆ ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಅತ್ಯುತ್ತಮ ಪರಿಹಾರ ಆಗಬಲ್ಲದು.

- ಒಂದು ಬೌಲ್ ಅಲ್ಲಿ 4 ಟೇಬಲ್ ಚಮಚ ಗೋಧಿ ಹಿಟ್ಟು, 4 ಟೇಬಲ್ ಚಮಚ ಗುಲಾಬಿ ದಳ ಮತ್ತು 1 ಟೇಬಲ್ ಚಮಚ ಕಿತ್ತಳೆ ಸಿಪ್ಪೆಯ ಪುಡಿ ಸೇರಿಸಿ, ಮಿಶ್ರಗೊಳಿಸಿ.
- ಮೃದುವಾದ ಪೇಸ್ಟ್ ಅಂತಯೇ ಮಿಶ್ರಣವನ್ನು ತಯಾರಿಸಿ. ಮಿಶ್ರಣಕ್ಕೆ ಜೇನುತುಪ್ಪ ಮತ್ತು ನೀರನ್ನು ಸೇರಿಸಿಕೊಳ್ಳಬಹುದು.
- ಮುಖ ಹಾಗೂ ಪೀಡಿತ ಪ್ರದೇಶಕ್ಕೆ ಮಿಶ್ರಣವನ್ನು ಅನ್ವಯಿಸಿ.
- 15 ನಿಮಿಷಗಳ ಬಳಿಕ ಮೃದುವಾದ ನೀರಿನಿಂದ ತೊಳೆಯಿರಿ.
- ಈ ಕ್ರಮದಿಂದ ಚರ್ಮವು ಬ್ಯಾಕ್ಟೀರಿಯಾದಿಂದ ರಕ್ಷಣೆ ಪಡೆದುಕೊಳ್ಳುವುದು.
- ಗಣನೀಯವಾಗಿ ಈ ಕ್ರಮವನ್ನು ಅನುಸರಿಸುವುದರ ಮೂಲಕ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

English summary

Wheat Flour Face Packs For Glowing Skin

Wheat flour packs can work miracles on our skin as it has vitamins, fibres and many other essential nutrients. So, why not try it to reduce all your skin problems with it.
X
Desktop Bottom Promotion