For Quick Alerts
ALLOW NOTIFICATIONS  
For Daily Alerts

ರಾತ್ರಿ ಮಲಗುವ ಮೊದಲು, ಇಂತಹ ಕ್ರೀಮ್‌ಗಳನ್ನು ಹಚ್ಚಿ-ತ್ವಚೆಯ ಸೌಂದರ್ಯ ಹೆಚ್ಚುತ್ತದೆ

By Hemanth
|

ದಿನವಿಡಿ ನೀವು ತ್ವಚೆಯ ಆರೈಕೆ ಮಾಡುವಂತೆ ರಾತ್ರಿ ವೇಳೆ ಕೂಡ ಇದರ ಆರೈಕೆ ಮಾಡುವುದು ಅತೀ ಅಗತ್ಯ. ರಾತ್ರಿ ವೇಳೆ ಚರ್ಮದ ಆರೈಕೆ ಮಾಡಿದರೆ ಆಗ ಹೆಚ್ಚು ಪರಿಣಾಮಕಾರಿಯಾಗಿರುವುದು. ಇದರಿಂದ ಚರ್ಮವು ಆರೋಗ್ಯ ಮತ್ತು ನಯವಾಗಿರುವುದು. ರಾತ್ರಿ ವೇಳೆ ಬಳಸುವಂತಹ ಕೆಲವು ಕ್ರೀಮ್ ಗಳಿಂದ ನೀವು ಇದರ ಆರೈಕೆ ಮಾಡಬಹುದು. ಆದರೆ ಇದು ಸ್ವಲ್ಪ ದುಬಾರಿ. ಹೀಗಾಗಿ ಮನೆಯಲ್ಲೇ ಇದನ್ನು ತಯಾರಿಸಿಕೊಂಡು ಬಳಸಿದರೆ ಆಗ ತುಂಬಾ ಲಾಭಕರ.

ತ್ವಚೆಯ ಎಲ್ಲಾ ಸಮಸ್ಯೆಗಳಿಗೆ ಅಡುಗೆಮನೆಯಲ್ಲಿಯೇ ಇದೆ ಪರಿಹಾರ

How To Make Night Creams At Home

ಈ ಕ್ರೀಮ್ ಗಳನ್ನು ನೀವು ರಾತ್ರಿ ವೇಳೆ ಬಳಸಿಕೊಂಡ ಬಳಿಕ ಅದನ್ನು ಮುಂದಿನ ದಿನಗಳಲ್ಲಿ ಬಳಕೆ ಮಾಡಲು ತೆಗೆದಿಟ್ಟುಕೊಳ್ಳಬಹುದು. ಎಲ್ಲಾ ರೀತಿಯ ಚರ್ಮಗಳಿಗೆ ಹೊಂದಿಕೊಳ್ಳುವ ಕೆಲವೊಂದು ಮನೆಯಲ್ಲೇ ತಯಾರಿಸಿದ ಕ್ರೀಮ್‌ಗಳ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ನೀವು ಇನ್ನು ಹೆಚ್ಚು ಸಮಯ ವ್ಯರ್ಥ ಮಾಡದೆ ಅದನ್ನು ತಯಾರಿಸುವುದು ಹೇಗೆ ಎಂದು ತಿಳಿಯಿರಿ.

ಗ್ಲಿಸರಿನ್ ಕ್ರೀಮ್

ಗ್ಲಿಸರಿನ್ ಕ್ರೀಮ್

ಬೇಕಾಗುವ ಸಾಮಗ್ರಿಗಳು

  • 1 ಚಮಚ ಗ್ಲಿಸರಿನ್
  • 2 ಚಮಚ ರೋಸ್ ವಾಟರ್
  • 1 ಚಮಚ ಬಾದಾಮಿ ಎಣ್ಣೆ
  • 1 ಚಮಚ ತೆಂಗಿನೆಣ್ಣೆ
  • ತಯಾರಿಸುವ ವಿಧಾನ

    1. ಬಾದಾಮಿ ಎಣ್ಣೆ ಮತ್ತು ತೆಂಗಿನೆಣ್ಣೆ ಜತೆಯಾಗಿ ಮಿಶ್ರಣ ಮಾಡಿಕೊಂಡು ಹದ ಬೆಂಕಿಯಲ್ಲಿ ಕುದಿಸಿ.

    2.ಇದನ್ನು ಬೆಂಕಿಯಿಂದ ತೆಗೆದ ಬಳಿಕ ಗ್ಲಿಸರಿನ್ ಮತ್ತು ರೋಸ್ ವಾಟರ್ ಹಾಕಿ.

    3. ಇದನ್ನು ನೀವು ಬಿಗಿಯಾದ ಮುಚ್ಚಳವಿರುವ ಡಬ್ಬದಲ್ಲಿ ಹಾಕಿಡಿ ಮತ್ತು ಪ್ರತೀ ರಾತ್ರಿ ಮಲಗುವ ಮೊದಲು ಇದನ್ನು ಹಚ್ಚಿಕೊಳ್ಳಿ.

    ಆಲಿವ್ ತೈಲದ ರಾತ್ರಿ ಕ್ರೀಮ್

    ಆಲಿವ್ ತೈಲದ ರಾತ್ರಿ ಕ್ರೀಮ್

    *½ ಕಪ್ ಆಲಿವ್ ತೈಲ

    *2 ಚಮಚ ತೆಂಗಿನೆಣ್ಣೆ

    *ವಿಟಮಿನ್ ಇ ತೈಲಕ್ಕೆ ಎರಡು ಕ್ಯಾಪ್ಸೂಲ್

    *1 ಚಮಚ ಜೇನಿನ ಮೇಣ

    ತಯಾರಿಸುವ ವಿಧಾನ

    *ಒಂದು ತವಾದಲ್ಲಿ ಆಲಿವ್ ತೈಲ, ತೆಂಗಿನೆಣ್ಣೆ ಮತ್ತು ಜೇನಿನ ಮೇಣ ಹಾಕಿ.

    *ಕಡಿಮೆ ಬೆಂಕಿಯಲ್ಲಿ ಇದನ್ನು ಬಿಸಿ ಮಾಡಿ.

    *ವಿಟಮಿನ್ ಇ ಕ್ಯಾಪ್ಸೂಲ್ ನಿಂದ ಎಣ್ಣೆ ತೆಗೆದು ಅದನ್ನು ಮಿಶ್ರಣಕ್ಕೆ ಹಾಕಿ.

    *ಈ ಮಿಶ್ರಣವು ತಣ್ಣಗಾಗಲಿ ಮತ್ತು ಇದನ್ನು ಡಬ್ಬದಲ್ಲಿ ಹಾಕಿಡಿ.

    *ಇದನ್ನು ರಾತ್ರಿ ವೇಳೆ 3 ತಿಂಗಳ ಕಾಲ ಬಳಸಿ.

    ಅಲೋವೆರಾದ ರಾತ್ರಿ ಕ್ರೀಮ್

    ಅಲೋವೆರಾದ ರಾತ್ರಿ ಕ್ರೀಮ್

    ಹಿಂದಿನ ಕಾಲದಿಂದಲೂ ಯಾವುದೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ನಮ್ಮ ಪೂರ್ವಜರು ಪ್ರಕೃತಿಯ ಮೊರೆಹೋಗುತ್ತಿದ್ದರು. ಯಾವುದೇ ದುಷ್ಪರಿಣಾಮವನ್ನು ಬೀರದೆಯೇ ಈ ಗಿಡಮೂಲಿಕೆಗಳು ಸೌಂದರ್ಯ ಸಮಸ್ಯೆಯನ್ನು ಹೋಗಲಾಡಿಸಿ ಉತ್ತಮ ತ್ವಚೆಯನ್ನು ದಯಪಾಲಿಸುತ್ತಿದ್ದವು. ಆದರೆ ಇಂದು ಪ್ರಾಕೃತಿಕವಾಗಿ ದೊರೆಯುವ ಉತ್ಪನ್ನಕ್ಕಿಂತಲೂ ನಾವು ರೆಡಿಮೇಡ್ ಆಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿಕೊಳ್ಳುತ್ತಿದ್ದೇವೆ. ಸಮಯದ ಅಭಾವ ಮತ್ತು ಉದಾಸೀನದಿಂದಾಗಿ ಮಾರುಕಟ್ಟೆಯಲ್ಲಿ ದೊರೆಯುವ ಸಿದ್ಧ ಉತ್ಪನ್ನಕ್ಕಾಗಿ ನಾವು ಈಗ ಕೈಚಾಚುತ್ತಿದ್ದೇವೆ. ಆದರೆ ಇಂತಹ ತಪ್ಪುಗಳನ್ನು ಎಸಗಿ ನಂತರ ಪಶ್ಚತ್ತಾಪ ಪಡುವುದರ ಬದಲಿಗೆ ನಿಮ್ಮ ಸೌಂದರ್ಯದ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲೇ ಪರಿಹರಿಸುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ. ಇಂತಹ ಸಂಪನ್ಮೂಲಗಳಲ್ಲಿ ಅಲೊವೇರಾ ಕೂಡ ಒಂದು. ಹೆಚ್ಚು ಬಿಸಿಲು ಮತ್ತು ಕಡಿಮೆ ನೀರಿನಲ್ಲಿ ಬೆಳೆಯುವ ಅತ್ಯಮೂಲ್ಯ ಸಸ್ಯಸಂಪತ್ತು ಅಲೊವೇರಾ ಆಗಿದ್ದು ನಿಮ್ಮ ಕೂದಲು ಮತ್ತು ತ್ವಚೆಗೆ ಇದು ಸಂಜೀವಿನಿಯಾಗಿದೆ. ಅಲೋವೆರಾ ಬಳಸುವ ವಿಧಾನ ಹೇಗೆ ಎಂಬುದನ್ನು ನೋಡೋಣ...

    ಬೇಕಾಗುವ ಸಾಮಾಗ್ರಿಗಳು

    *2 ಚಮಚ ಅಲೋವೆರಾ ಲೋಳೆ

    *1 ಚಮಚ ಲ್ಯಾವೆಂಡರ್ ತೈಲ

    *1 ಚಮಚ ಪ್ರೈಮ್ ರೋಸ್ ತೈಲ

    ತಯಾರಿಸುವ ವಿಧಾನ

    *ತಾಜಾ ಅಲೋವೆರಾ ಎಲೆಯನ್ನು ಕತ್ತರಿಸಿದ ಅದರ ಲೋಳೆ ತೆಗೆಯಿರಿ ಮತ್ತು ಇದನ್ನು ಒಂದು ಪಿಂಗಾಣಿಗೆ ಹಾಕಿ.

    *ಇದಕ್ಕೆ ಲ್ಯಾವೆಂಡರ್ ತೈಲ ಮತ್ತು ಪ್ರೈಮ್ ರೋಸ್ ತೈಲ ಹಾಕಿಕೊಂಡು ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿ.

    *ಇದನ್ನು ಡಬ್ಬದಲ್ಲಿ ಹಾಕಿಕೊಂಡು ಬೇಕಿರುವಾಗ ಬಳಸಿಕೊಳ್ಳಿ.

    ಹಾಲಿನ ಕೆನೆ

    ಹಾಲಿನ ಕೆನೆ

    ಪ್ರಾಚೀನ ಕಾಲದಲ್ಲಿ ಹಾಲಿನ ಕೆನೆಯು ಪ್ರಮುಖವಾದ ಸೌಂದರ್ಯವರ್ಧಕ ಸಾಮಗ್ರಿಯಾಗಿತ್ತು. ಇದು ತ್ವಚೆಯನ್ನು ಒಣ ತ್ವಚೆಯಿಂದ ಮೃದು ತ್ವಚೆಯನ್ನಾಗಿ ಮಾಡಲು ಸಹಕರಿಸುತ್ತಿತ್ತು. ಹಾಲಿನಲ್ಲಿರುವ ಪ್ರತಿಯೊಂದು ಅಂಶಗಳು ಮುಖದ ಸೌಂದರ್ಯಕ್ಕೆ ಕಳೆಯನ್ನು ನೀಡುತ್ತವೆ. ಹಾಲಿನ ಕೆನೆಯಿಂದ ಹಲವಾರು ಪ್ರಯೋಜನಗಳು ತ್ವಚೆಗೆ ಲಭಿಸುತ್ತವೆ. ಇದು ತ್ವಚೆಗೆ ಸುರಕ್ಷಿತವಾದ ಮತ್ತು ಅಗ್ಗವಾದ ಮನೆ ಮದ್ದಾಗಿರುತ್ತದೆ. ಹಾಲಿನ ಕೆನೆಯನ್ನು ಆರೋಗ್ಯದ ಕಾರಣಗಳಿಗಾಗಿ ಬಹುತೇಕ ಮಂದಿ ಸುಮ್ಮನೆ ಕಸದ ಬುಟ್ಟಿಗೆ ಹಾಕುತ್ತಾರೆ. ಆದರೆ ಅದರ ಪ್ರಯೋಜನ ತಿಳಿದಿದ್ದರೆ, ಪವಾಡಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಲಿನ ಕೆನೆಯ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ, ಮೊಡವೆಗಳನ್ನು ನಿವಾರಿಸುತ್ತದೆ, ಜೊತೆಗೆ ತ್ವಚೆಯನ್ನು ಮೃದುವಾಗಿಸುತ್ತದೆ.

    ಬೇಕಾಗುವ ಸಾಮಗ್ರಿಗಳು

    *1 ಚಮಚ ಹಾಲಿನ ಕೆನೆ

    *1 ಚಮಚ ಆಲಿವ್ ತೈಲ

    *1 ಚಮಚ ಗ್ಲಿಸರಿನ್

    *1 ಚಮಚ ರೋಸ್ ವಾಟರ್

    ತಯಾರಿಸುವ ವಿಧಾನ

    *ಸ್ವಚ್ಛವಾಗಿರುವ ಪಿಂಗಾಣಿಗೆ ಹಾಲಿನ್ ಕನೆ, ಆಲಿವ್ ತೈಲ, ಗ್ಲಿಸರಿನ್, ರೋಸ್ ವಾಟರ್ ಹಾಕಿಕೊಳ್ಳಿ.

    *ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ.

    *ಇದನ್ನು ಗಾಳಿಯಾಡದ ಡಬ್ಬಕ್ಕೆ ಹಾಕಿಡಿ.

    *ಇದನ್ನು ಪ್ರತೀ ರಾತ್ರಿ ನಿಯಮಿತವಾಗಿ ಬಳಸಿ.

    ಬಾದಾಮಿಯ ಕ್ರೀಮ್

    ಬಾದಾಮಿಯ ಕ್ರೀಮ್

    ಬಾದಾಮಿ ಒಂದು ಅದ್ಭುತ ಒಣಫಲವಾಗಿದ್ದು ಇದರಲ್ಲಿರುವ ಪೋಷಕಾಂಶಗಳು ಆರೋಗ್ಯ ಹಾಗೂ ಸೌಂದರ್ಯವನ್ನು ಹೆಚ್ಚಿಸಲು ನೆರವಾಗುತ್ತವೆ. ವಿಶೇಷವಾಗಿ ತ್ವಚೆ ಮತ್ತು ಕೂದಲಿಗೆ ಇದರಲ್ಲಿರುವ ವಿಟಮಿನ್ ಇ ಹಾಗೂ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ. ಅಲ್ಲದೇ ಇದರಲ್ಲಿರುವ ಆರೋಗ್ಯಕರ ಕೊಬ್ಬು, ಪ್ರೋಟೀನ್ ಹಾಗೂ ಇತರ ಪೋಷಕಾಂಶಗಳು ಹಲವರು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತವೆ. ಇನ್ನು ಬಾದಾಮಿಯಲ್ಲಿರುವ ಪೋಷಕಾಂಶಗಳ ಗರಿಷ್ಠ ಪ್ರಯೋಜನ ಪಡೆಯಲು ಕೊಂಚ ಬಾದಾಮಿಗಳನ್ನು ರಾತ್ರಿ ತಣ್ಣೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ತಿನ್ನಬೇಕು. ಅಲ್ಲದೇ ಹೇಗೆ ನೆನೆಸಿಟ್ಟ ಬಾದಾಮಿಗಳನ್ನು ಅರೆದು ಮುಖಕ್ಕೆ ಮುಖಲೇಪದ ರೂಪದಲ್ಲಿ ಹಚ್ಚಿಕೊಳ್ಳುವ ಮೂಲಕ ಸೌಂದರ್ಯವೂ ಹೆಚ್ಚುತ್ತದೆ ಹಾಗೂ ಕೂದಲಿಗೆ ಹಚ್ಚಿಕೊಂಡಾಗ ಕೂದಲೂ ಸೊಂಪಾಗುತ್ತದೆ.

    ಬೇಕಾಗುವ ಸಾಮಗ್ರಿಗಳು

    *8 ಬಾದಾಮಿ

    *1 ಚಮಚ ಶ್ರೀಗಂಧದ ಹುಡಿ

    *1 ಚಮಚ ಅರಿಶಿನ

    *1 ಚಮಚ ಲಿಂಬೆರಸ

    ತಯಾರಿ ಹೇಗೆ?

    *ಬಾದಾಮಿ ರಾತ್ರಿ ವೇಳೆ ನೆನೆಸಿಡಿ.

    *ಬೆಳಗ್ಗೆ ಇದನ್ನು ರುಬ್ಬಿಕೊಂಡು ನಯವಾದ ಪೇಸ್ಟ್ ಮಾಡಿ.

    *ಇದಕ್ಕೆ ಶ್ರೀಗಂಧದ ಹುಡಿ, ಅರಿಶಿನ ಮತ್ತು ಕೆಲವು ಹನಿ ಲಿಂಬೆರಸ ಹಾಕಿಕೊಳ್ಳಿ ಮತ್ತು ಎಲ್ಲವನ್ನು ಜತೆಯಾಗಿ ಮಿಶ್ರಣ ರುಬ್ಬಿ.

    *ಮಲಗುವ ಮೊದಲು ಇದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು ಮಸಾಜ್ ಮಾಡಿಕೊಳ್ಳಿ

    *ರಾತ್ರಿವೇಳೆ ಹಾಗೆ ಬಿಡಿ ಮತ್ತು ಬೆಳಗ್ಗೆ ತೊಳೆಯಿರಿ.

    ಬ್ಯೂಟಿ ಟಿಪ್ಸ್: ಆಕರ್ಷಕ ಮೈಕಾಂತಿ ಪಡೆಯಲು ನೈಸರ್ಗಿಕ ವಿಧಾನ

English summary

Try These Homemade Night Creams To Pamper Your Skin

Just like how you take care of your skin during the day, it is important to take care of it at night too. Night time skin care routine is important to maintain a healthy and smooth skin. One of the easiest ways to do this is to pamper your skin with a night cream. You can make homemade night creams using ingredients like glycerine, milk, lemon, etc.
X
Desktop Bottom Promotion