For Quick Alerts
ALLOW NOTIFICATIONS  
For Daily Alerts

ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಸರಳ ಫೇಸ್ ಮಾಸ್ಕ್‌ಗಳು

By Deepu
|

ವಯಸ್ಸಾಗುವುದು ಯಾರಿಗೂ ಇಷ್ಟವಿರಲ್ಲ. ಭೂಮಿ ಮೇಲಿರುವ ಪ್ರತಿಯೊಬ್ಬನು ತಾನು ತುಂಬು ಯೌವನದಿಂದ ಇರಬೇಕು ಎಂದು ಬಯಸುತ್ತಾನೆ. ಆದರೆ ಪ್ರಕೃತಿ ನಿಯಮದಂತೆ ಪ್ರತಿಯೊಬ್ಬರಿಗೂ ವಯಸ್ಸಾಗುತ್ತದೆ. ಅದೇ ರೀತಿ ವಯಸ್ಸಾಗುವ ಲಕ್ಷಣಗಳು ದೇಹದ ಮೇಲೆ ಮೂಡಲು ಆರಂಭವಾಗುವುದು. ವಯಸ್ಸಾಗುವಾಗ ಬೀಳುವಂತಹ ನೆರಿಗೆಗಳ ಸಹಿತ, ಕಪ್ಪು ಕಲೆಗಳೂ, ನಿಸ್ತೇಜ ಚರ್ಮ, ಚರ್ಮದ ಬಣ್ಣ ಮಾಸುವುದು, ಜೋತು ಬಿದ್ದ ಚರ್ಮ, ಬೊಕ್ಕೆಗಳು ಕಾಣಿಸಿಕೊಳ್ಳುವುದು ಇತ್ಯಾದಿ.

ನಿಮ್ಮಲ್ಲಿ ಯಾವುದೇ ರೀತಿಯ ಅಕಾಲಿಕ ವಯಸ್ಸಾಗುವ ಲಕ್ಷಣಗಳು ಕಾಣಿಸಿಕೊಂಡರೆ ಇದು ವಾತಾವರಣದ ಕಲ್ಮಶ, ಅತಿಯಾಗಿ ಬಿಸಿಲಿಗೆ ಮೈಯೊಡ್ಡುವುದು, ಅತಿಯಾಗಿ ಆಲ್ಕೋಹಾಲ್ ಸೇವನೆ, ಧೂಮಪಾನ ಅತಿಯಾಗಿ ಮಾಡುವುದು, ಜೀವನಶೈಲಿ ಇತ್ಯಾದಿ. ಅಕಾಲಿಕವಾಗಿ ಕಾಣಿಸಿಕೊಳ್ಳುವ ವಯಸ್ಸಾಗುವ ಲಕ್ಷಣಗಳಿಗೆ ಮಾರುಕಟ್ಟೆಯಲ್ಲಿ ಇರುವಂತಹ ಹಲವಾರು ರೀತಿಯ ಉತ್ಪನ್ನಗಳನ್ನು ಬಳಸುತ್ತೇವೆ.

ಆದರೆ ಇದು ಚರ್ಮಕ್ಕೆ ಹಾನಿಯುಂಟು ಮಾಡುವುದು. ಇದಕ್ಕೆ ಬದಲಿಗೆ ನೀವು ಕೆಲವೊಂದು ನೈಸರ್ಗಿಕ ಮನೆಮದ್ದುಗಳನ್ನು ಬಳಸಿಕೊಂಡರೆ ಅದರಿಂದ ಯಾವುದೇ ಅಡ್ಡಪರಿಣಾಮಗಳು ಕಾಣಿಸದು. ಈ ಲೇಖನದಲ್ಲಿ ಎಲ್ಲಾ ರೀತಿಯ ಚರ್ಮಗಳಿಗೆ ಹೊಂದಿಕೊಳ್ಳುವ ವಯಸ್ಸಾಗುವ ಲಕ್ಷಣ ತಡೆಯುವ ಫೇಸ್ ಮಾಸ್ಕ್ ಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ನಿಮ್ಮ ಚರ್ಮಕ್ಕೆ ಅನುಗುಣವಾಗಿ ಇದನ್ನು ಬಳಸಿಕೊಳ್ಳಿ...

ಎಣ್ಣೆಯುಕ್ತ ಚರ್ಮಕ್ಕೆ

ಎಣ್ಣೆಯುಕ್ತ ಚರ್ಮಕ್ಕೆ

ಮೊಟ್ಟೆಯ ಬಿಳಿಲೋಳೆ ಮಾಸ್ಕ್

ಮೊಟ್ಟೆಯ ಬಿಳಿಯ ಲೋಳೆಯು ಚರ್ಮದಲ್ಲಿನ ರಂಧ್ರಗಳನ್ನು ಮುಚ್ಚಿ, ಬಿಗಿಗೊಳಿಸಲು ನೆರವಾಗುವುದು. ಎಣ್ಣೆಯುಕ್ತ ಚರ್ಮಕ್ಕೆ ಇದನ್ನು ಬಳಸಿಕೊಳ್ಳಬಹುದು.

ಬಳಸುವುದು ಹೇಗೆ?

ಮೊಟ್ಟೆಯಿಂದ ಬಿಳಿಯ ಲೋಳೆಯ ಬೇರ್ಪಡಿಸಿಕೊಳ್ಳಿ. ಇದು ಮೃಧುವಾಗುವ ತನಕ ಸರಿಯಾಗಿ ಕಲಸಿ. ಮುಖ ಸ್ವಚ್ಛಗೊಳಿಸಿ ಇದನ್ನು ಪದರದ ಹಾಗೆ ಹಚ್ಚಿಕೊಳ್ಳಿ. ಇದನ್ನು ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಇದು ಹಾಗೆ ಇರಲಿ ಮತ್ತು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

ಒಣ ಚರ್ಮಕ್ಕೆ

ಒಣ ಚರ್ಮಕ್ಕೆ

ಜೇನುತುಪ್ಪ, ಮೊಸರು ಮತ್ತು ಗುಲಾಬಿ ಮಾಸ್ಕ್

ಜೇನುತುಪ್ಪವು ಚರ್ಮಕ್ಕೆ ತೇವಾಂಶ ನೀಡಲು ನೆರವಾಗುವುದು ಮತ್ತು ಮೊಶ್ಚಿರೈಸರ್ ಆಗಿ ಉಳಿಯುವುದು. ಇದು ಒಣ ಹಾಗೂ ಚರ್ಮದ ಕಿತ್ತುಬರುವ ಸಮಸ್ಯೆ ನಿವಾರಿಸುವುದು. ಮೊಸರು ನಿಸ್ತೇಜ ಮತ್ತು ಚರ್ಮದ ವರ್ಣ ಕುಗ್ಗಿರುವುದನ್ನು ಸರಿಪಡಿಸುವುದು.

ತಯಾರಿ ಹೇಗೆ?

ಎರಡು ಚಮಚ ದಪ್ಪ ಮೊಸರು, ಒಂದು ಚಮಚ ಜೇನುತುಪ್ಪ ಮತ್ತು ಕೆಲವು ಗುಲಾಬಿ ದಳಗಳು. ಒಂದು ಪಿಂಗಾಣಿಯಲ್ಲಿ ಜೇನುತುಪ್ಪ ಮತ್ತು ಮೊಸರನ್ನು ಮಿಶ್ರಣ ಮಾಡಿಕೊಳ್ಳಿ. ಗುಲಾಬಿ ಎಸಲುಗಳನ್ನು ಜಜ್ಜಿಕೊಂಡು ಇದಕ್ಕೆ ಹಾಕಿ. ಇದನ್ನು ನಿಮ್ಮ ಮುಖದ ಮೇಲೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. ಇದು ಒಣಗುವ ತನಕ ಹಾಗೆ ಬಿಡಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ.

ಬಿಸಿಲಿಗೆ ಒಡ್ಡಿಕೊಂಡಿರುವ ಚರ್ಮ

ಬಿಸಿಲಿಗೆ ಒಡ್ಡಿಕೊಂಡಿರುವ ಚರ್ಮ

ಟೊಮೆಟೊ ಮತ್ತು ಅಲೋವೆರಾ ಮಾಸ್ಕ್

ಅಲೋವೆರಾದಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ಚರ್ಮವು ಮೊಶ್ಚಿರೈಸ್ ಮತ್ತು ತೇವಾಂಶದಿಂದ ಕೂಡಿರುವಂತೆ ಮಾಡುವುದು. ಅದೇ ಟೊಮೆಟೋ ಬಿಸಿಲಿನಿಂದ ಆದ ಕಲೆಗಳನ್ನು ತೆಗೆದುಹಾಕುವುದು.

ತಯಾರಿಸುವ ವಿಧಾನ

ಒಂದು ಟೊಮೆಟೋ ಮತ್ತು ಎರಡು ಚಮಚ ಅಲೋವೆರಾ ಜೆಲ್

ಮೊದಲಿಗೆ ಟೊಮೆಟೋ ಜಜ್ಜಿಕೊಂಡು ಪೇಸ್ಟ್ ಮಾಡಿ. ಇದಕ್ಕೆ ಅಲೋವೆರಾ ಜೆಲ್ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ತಾಜಾ ಅಲೋವೆರಾ ಎಲೆಗಳಿಂದ ಲೋಳೆ ತೆಗೆಯಿರಿ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಅಲೋವೆರಾ ಬಳಸಬಹುದು. ಇದನ್ನು ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಸಲ ಬಳಸಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪದ ಕೆಲವು ಹನಿಗಳನ್ನು ಎರಡೂ ಹಸ್ತಗಳ ಮೇಲೆ ಸುರಿದು ಉಜ್ಜಿಕೊಂಡು ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಹುಬ್ಬು, ಕಣ್ಣು ಮತ್ತು ಕೂದಲುಗಳಿಗೆ ಜೇನು ತಾಕದಂತೆ ಎಚ್ಚರವಹಿಸಿ. ಬಳಿಕ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ (ಜೇನು ಒಣಗುವವರೆಗೆ) ಹಾಗೇ ಬಿಟ್ಟು ಮೊತ್ತೊಮ್ಮೆ ಕೇವಲ ನೀರಿನಿಂದ ತೊಳೆದುಕೊಳ್ಳಿ (ಸೋಪು ಹಚ್ಚಬಾರದು). ಈ ವಿಧಾನದಿಂದ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ದೊರೆತು ತನ್ನ ಸಹಜ ಸೆಳೆತವನ್ನು ಪಡೆದುಕೊಳ್ಳುತ್ತದೆ ಹಾಗೂ ನೆರಿಗೆಗಳು ದೂರಾಗುತ್ತವೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಹೃದಯಕ್ಕೆ ಅತ್ಯುತ್ತಮವಾದ ಆಲಿವ್ ಎಣ್ಣೆ ಚರ್ಮದ ನೆರಿಗೆಗಳಿಗೂ ಸೂಕ್ತವಾಗಿದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಆಲಿವ್ ಎಣ್ಣೆಯ ಕೆಲವು ಹನಿಗಳನ್ನು ಕೈಗಳಿಗೆ ಹಚ್ಚಿಕೊಂಡು ಮುಖ ಮತ್ತು ಕೈಗಳಿಗೆ ಸವರಿಕೊಳ್ಳಿ. ಬೆಳಿಗ್ಗೆ ಎದ್ದ ಬಳಿಕ ಸ್ನಾನದ ನೀರಿನಲ್ಲಿಯೂ ಕೆಲವು ಹನಿ ಆಲಿವ್ ಎಣ್ಣೆಯ ಹನಿಗಳನ್ನು ಚೆಲ್ಲಿರಿ. ಈ ವಿಧಾನದಿಂದ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಮತ್ತು ಪೋಷಕಾಂಶಗಳು ದೊರೆತು ನೆರಿಗೆಗಳು ಮಾಯವಾಗುತ್ತವೆ. ಆಲಿವ್ ಎಣ್ಣೆ ಒಣಚರ್ಮದವರಿಗೆ ಅತ್ಯುತ್ತಮವಾಗಿದೆ.

ಹಾಲಿನ ಪುಡಿ ಮತ್ತು ಜೇನು ತುಪ್ಪ

ಹಾಲಿನ ಪುಡಿ ಮತ್ತು ಜೇನು ತುಪ್ಪ

ಹಾಲಿನ ಪುಡಿ ಮತ್ತು ಜೇನು ತುಪ್ಪ ಎರಡನ್ನು ಸೇರಿಸಿ ಒಂದು ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ ಹದಿನೈದು ನಿಮಿಷ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ ಹಾಗು ಮೃದುವಾದ ಬಟ್ಟೆಯಿಂದ ಒರೆಸಿಕೊಳ್ಳಿ. ಇದಕ್ಕೆ ಬದಲಿಯಾಗಿ ಹಾಲಿನ ಕೋಟ್ ಅನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊಳ್ಳಬಹುದು. ಇದರಲ್ಲಿರುವ ಕೆನೆಯು 15 ನಿಮಿಷ ನಿಮ್ಮ ಮುಖದ ಮೇಲೆ ಒಣಗುವಂತೆ ಇರಿಸಿಕೊಂಡಲ್ಲಿ, ತ್ವಚೆಗೆ ಉತ್ತಮ ಮೊಯಿಶ್ಚರೈಸರ್ ಜೊತೆಗೆ ಹೊಳಪನ್ನು ಸಹ ನೀಡುತ್ತದೆ. ನಂತರ ಇದನ್ನು ತೊಳೆಯಿರಿ.

 ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಮುಖ ವಯಸ್ಸಾದಂತೆ ಕಾಣುತ್ತಿದ್ದರೆ ಪಪ್ಪಾಯಿ ಹಣ್ಣಿನಿಂದಲೂ ಕೂಡ ಫೇಸ್ ಮಾಸ್ಕ್ ಮಾಡಿಕೊಳ್ಳಬೇಕು. ಪಪ್ಪಾಯಿಯನ್ನು ಚೆನ್ನಾಗಿ ಹಿಸುಕಿ ಜೇನು ಮತ್ತು ಅಕ್ಕಿ ಹಿಟ್ಟನ್ನು ಕಲೆಸಿ ಹಚ್ಚಿಕೊಂಡು 15-20 ನಿಮಿಷ ಬಿಡಬೇಕು. ಈ ರೀತಿ ವಾರಕ್ಕೆ ಮೂರು ಬಾರಿ ಮಾಡಿದರೆ ತ್ವಚೆ ಬಿಗಿಯಾಗುತ್ತದೆ.

ಎಳನೀರು

ಎಳನೀರು

ಎಳನೀರು ಈಗತಾನೇ ಚಿಪ್ಪಿನಿಂದ ಹೊರತೆಗೆದ ಎಳನೀರು ಚರ್ಮದ ಬಣ್ಣವನ್ನು ಬೆಳ್ಳಗಾಗಿಸಲು ನೆರವಾಗುತ್ತದೆ.ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಎಳನೀರನ್ನು ಅದ್ದಿ ಕೈಕಾಲಿಗೆ, ತ್ವಚೆಯ ಮೇಲೆ ಒರೆಸಿಕೊಂಡು ಒಣಗಿದ ಬಳಿಕ ಮತ್ತೆ ಒರೆಸಿ, ಇದನ್ನು ನಾಲ್ಕೈದು ಬಾರಿ ಪುನರಾವರ್ತಿಸಬೇಕು. ಸುಮಾರು ಒಂದು ಗಂಟೆ ಕಳೆದ ಬಳಿಕ ಸ್ವಚ್ಛನೀರಿನಿಂದ ತೊಳೆದುಕೊಳ್ಳಬೇಕು.

English summary

Try These Anti-ageing Face Masks For Different Skin Types

We have umpteen products available in the market that claim to be the best remedies for anti-ageing. But these can harm the skin in the long run as they have high amounts of chemicals involved. Therefore, it's always better to go for some natural remedies that can be used to fight signs of ageing. In this article, we'll specifically discuss a few anti-ageing masks that are suitable for different skin types. You can choose one according to your skin type and try to fight early signs of ageing.
X
Desktop Bottom Promotion