For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ತ್ವಚೆಯ ಆರೈಕೆಗೆ ನೈಸರ್ಗಿಕ ವಿಧಾನಗಳು

By Hemanth
|

ಸೌಂದರ್ಯದಲ್ಲಿ ಮಹಿಳೆಯರ ತ್ವಚೆಯು ಪ್ರಮುಖ ಪಾತ್ರ ನಿರ್ವಹಿಸುವುದರಿಂದ ಇದರ ಆರೈಕೆಗೆ ಮೊದಲ ಪ್ರಾಶಸ್ತ್ಯ ನೀಡುವರು. ಅದರಲ್ಲೂ 30 ದಾಟಿದ ಮಹಿಳೆಯರಲ್ಲಿ ಹೆಚ್ಚಾಗಿ ಮುಖವು ನಿಸ್ತೇಜವಾಗಲು ಆರಂಭವಾಗುವುದು. ಇಷ್ಟು ಮಾತ್ರವಲ್ಲದೆ ಮಹಿಳೆಯರಲ್ಲಿ ವಯಸ್ಸಾಗುವ ಲಕ್ಷಣಗಳು ಮತ್ತು ಬಿಸಿಲಿನಿಂದ ಆಗಿರುವ ಕಲೆಗಳು ಕೂಡ ಸೌಂದರ್ಯ ಕೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇಂತಹ ಮಹಿಳೆಯರು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಉತ್ಪನ್ನಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಿಕೊಳ್ಳುವರು.

ಆದರೆ ಇದು ಹೆಚ್ಚು ದಿನ ಕಾಲ ಬಾಳಿಕೆ ಬರದು. ಯಾಕೆಂದರೆ ಇದರಲ್ಲಿರುವಂತಹ ರಾಸಾಯನಿಕಗಳು ನಿಮ್ಮ ತ್ವಚೆಯನ್ನು ಮತ್ತಷ್ಟು ಕೆಡಿಸುವುದು. ಇದಕ್ಕಾಗಿ ಕೆಲವೊಂದು ನೈಸರ್ಗಿಕದತ್ತವಾದ ಮನೆಮದ್ದುಗಳನ್ನು ತ್ವಚೆಯ ಆರೈಕೆಗೆ ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಬಿಸಿಲಿಗೆ ಅತಿಯಾಗಿ ಮೈಯೊಡ್ಡಿದಾಗ ಚರ್ಮವು ವಯಸ್ಸಾಗಿರುವ ಲಕ್ಷಣಗಳನ್ನು ತೋರಿಸುವುದು. ಬಿಸಿಲಿನಲ್ಲಿರುವ ಹಾನಿಕಾರಕ ಯುವಿ ಕಿರಣಗಳು ತ್ವಚೆಗೆ ಹಾನಿಯುಂಟು ಮಾಡುವುದು. ಆದರೆ ಇದಕ್ಕೆ ನೀವು ಚಿಂತಿಸಬೇಕಿಲ್ಲ. ಯಾಕೆಂದರೆ ಬೋಲ್ಡ್ ಸ್ಕೈ ನಿಮಗಾಗಿ ಇಲ್ಲಿ ನೈಸರ್ಗಿಕವಾಗಿ ಸಿಗುವಂತಹ ಕೆಲವು ಮನೆಮದ್ದುಗಳನ್ನು ತಿಳಿಸಿಕೊಡಲಿದೆ. ಇದನ್ನು ನೀವು ಬಳಸಿಕೊಂಡು ಚರ್ಮದ ಆರೈಕೆ ಮಾಡಿಕೊಳ್ಳಿ.

beauty tips

ಬೇಕಾಗುವ ಸಾಮಗ್ರಿಗಳು
*1 ಚಮಚ ಮೊಸರು
*2 ಚಮಚ ಓಟ್ ಮೀಲ್
*1 ಚಮಚ ಲಿಂಬೆರಸ
*1 ಚಮಚ ಅರಿಶಿನ

ತಯಾರಿಸುವ ವಿಧಾನ

*ಗಾಜಿನ ಜಾರ್ ಅಥವಾ ಪಿಂಗಾಣಿಯಲ್ಲಿ ಮೊಸರು ಹಾಕಿ.
*ಓಟ್ ಮೀಲ್ ನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿಕೊಂಡು ಅದನ್ನು ಮೊಸರಿಗೆ ಬೆರೆಸಿ.
*ಕೆಲವು ಹನಿ ಲಿಂಬೆ ರಸ ಮತ್ತು ಚಿಟಿಕೆ ಅರಶಿನ ಇದಕ್ಕೆ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ.
*ಅರಿಶಿನ ಅತಿಯಾಗಿ ಬಳಸಿದರೆ ಮುಖದಲ್ಲಿ ಹಳದಿ ಬಣ್ಣ ಹಾಗೆ ಇರುವುದು.
*ಸೂಕ್ಷ್ಮ ಅಥವಾ ಒಣಚರ್ಮವಿದ್ದರೆ ಅಂತಹವರು ಲಿಂಬೆ ಬಳಸಬೇಡಿ. ಇದರಿಂದ ಚರ್ಮವು ಮತ್ತಷ್ಟು ಒಣಗುವುದು.
*ಇದನ್ನು ಗಾಜಿನ ಜಾರ್ ಗೆ ಹಾಕಿ ಇಟ್ಟುಕೊಂಡು ನೀವು ಬೇಕಾದಾಗ ಬಳಸಿ.

ಹಚ್ಚಿಕೊಳ್ಳುವುದು ಹೇಗೆ?

*ಮೊದಲು ಬಾಧಿತ ಜಾಗವನ್ನು ಸರಿಯಾಗಿ ಸ್ವಚ್ಚಗೊಳಿಸಿ.
*ಈ ಪೇಸ್ಟ್ ನ್ನು ಆ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.
*ಬೆರಳುಗಳನ್ನು ಬಳಸಿಕೊಂಡು ಕೆಲವು ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಮುಖದ ಮೇಲೆ ಸ್ಕ್ರಬ್ ಮಾಡಿ.
*30 ನಿಮಿಷ ಕಾಲ ಹಾಗೆ ಬಿಡಿ.
*30 ನಿಮಿಷ ಕಳೆದ ಬಳಿಕ ತಣ್ಣೀರಿನಿಂದ ತೊಳೆಯಿರಿ.
*ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಮೊಶ್ಚಿರೈಸರ್ ಹಚ್ಚಿಕೊಳ್ಳಿ.
*ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಮೊಸರಿನ ಲಾಭಗಳು

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ತ್ವಚೆಯ ಕೋಶಗಳಿಗೆ ಹೊಸ ಚೈತನ್ಯವನ್ನು ಉಂಟುಮಾಡುತ್ತದೆ. ರಂಧ್ರಗಳಲ್ಲಿ ಹುದುಗಿರುವ ಕೊಳೆಯನ್ನು ನಿವಾರಿಸುತ್ತದೆ. ನಿಮ್ಮ ತ್ವಚೆಯನ್ನು ಯುವತ್ವ ಮತ್ತು 24x7 ಸಮಯವೂ ತಾಜಾ ಆಗಿ ಇರಿಸುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರೊಟೀನ್, ವಿಟಮಿನ್ ಮತ್ತು ಮಿನರಲ್‌ಗಳು ನಿಮ್ಮ ತ್ವಚೆಯನ್ನು ತಾಜಾ ಆಗಿರಿಸುವಲ್ಲಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸಲಿದೆ. ನಿಮ್ಮ ಮುಖದಲ್ಲಿರುವ ಮೊಡವೆ, ಕಪ್ಪು ಕಲೆಗಳು, ಗುಳ್ಳೆಗಳು ಹೀಗೆ ಯಾವುದೇ ರೀತಿಯ ಸಮಸ್ಯೆಗಳನ್ನು ದೂರಮಾಡುತ್ತದೆ. ಇದರಲ್ಲಿರುವ ಶ್ರೀಮಂತ ಅಂಶಗಳು ನಿಮ್ಮ ಮುಖದ ಮಾಯಿಶ್ಚರೈಸರ್ ಅನ್ನು ಭದ್ರಪಡಿಸುತ್ತದೆ ಮತ್ತು ದೀರ್ಘ ಸಮಯದವರೆಗೆ ಹೈಡ್ರೇಟ್ ಆಗಿ ಇರಿಸುತ್ತದೆ. ಮೊಸರಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮದ ಕೋಶಗಳನ್ನು ತೆಗೆಯುವುದು ಮತ್ತು ಚರ್ಮಕ್ಕೆ ಕಾಂತಿ ಣೀಡುವುದು. ಸತ್ತ ಚರ್ಮದ ಕೋಶಗಳನ್ನು ತೆಗೆದ ಬಳಿಕ ಚರ್ಮವು ಹೊಳಪು ಪಡೆಯುವುದು ಮತ್ತು ಆರೋಗ್ಯಕರವಾಗಿರುವುದು. ಇದರಿಂದ ವಯಸ್ಸಾಗುವ ಲಕ್ಷಣಗಳು ದೂರವಾಗುವುದು.

ಓಟ್ ಮೀಲ್ ನ ಲಾಭಗಳು

ಬಿಳಿ ತೋಕೆ ಗೋಧಿಯಿಂದ ಮಾಡುವಂತಹ ಓಟ್ ಮೀಲ್ ಇಡೀ ಧಾನ್ಯವಾಗಿದ್ದು, ಇದರಲ್ಲಿ ಹೊಟ್ಟು ಹಾಗೂ ಮೊಳಕೆಯನ್ನು ಹಾಗೆ ಉಳಿಸಿಕೊಳ್ಳಲಾಗುತ್ತದೆ. ಈ ಕಾರಣದಿಂದಾಗಿ ಓಟ್ ಮೀಲ್ ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದೆ. ಓಟ್ ಮೀಲ್ ನಲ್ಲಿ ಹಲವಾರು ಆರೋಗ್ಯಕರ ಅನುಕೂಲಗಳಿದ್ದು, ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ, ಹೃದಯದ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ದೇಹದ ಚಟುವಟಿಕೆ ಮತ್ತು ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸುತ್ತದೆ. ಓಟ್ ಮೀಲ್ ಕೂಡ ಚರ್ಮಕ್ಕೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದು ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ನಿಸ್ತೇಜ ಚರ್ಮ ತಡೆಯುವುದು. ಇದರೊಂದಿಗೆ ಚರ್ಮವು ತುಂಬಾ ತೇವಾಂಶದಿಂದ ಇರುವಂತೆ ಮಾಡುವುದು ಮತ್ತು ಚರ್ಮಕ್ಕೆ ನೈಸರ್ಗಿಕ ಮೊಶ್ಚಿರೈಸರ್ ಆಗಿ ಕೆಲಸ ಮಾಡುವುದು.

ಲಿಂಬೆರಸದ ಲಾಭಗಳು

ನಮಗೆಲ್ಲರಿಗೂ ತಿಳಿದಿರುವಂತೆ ಲಿಂಬೆಯಲ್ಲಿ ಬ್ಲೀಚಿಂಗ್ ಗುಣಗಳು ಇವೆ. ಇದು ಚರ್ಮದ ಬಣ್ಣ ಸುಧಾರಿಸುವುದು. ಚರ್ಮದ ಮೇಲಿನ ಕಪ್ಪು ಕಲೆಗಳು ಮತ್ತು ಬಣ್ಣ ಕಳೆದುಕೊಂಡಿರುವುದನ್ನು ಇದು ತಡೆಯುವುದು. ಒಣಚರ್ಮವಾಗಿದ್ದರೆ ಈ ಪ್ಯಾಕ್ ನ್ನು ನೀವು ರಾತ್ರಿ ವೇಳೆ ಬಳಸಿಕೊಳ್ಳಿ. ಯಾಕೆಂದರೆ ಈ ಪ್ಯಾಕ್ ಹಚ್ಚಿಕೊಂಡ ತಕ್ಷಣ ಹೊರಗಡೆ ಹೋದರೆ ಆಗ ಬಿಸಿಲಿಗೆ ಚರ್ಮ ಸುಡುವ ಸಾಧ್ಯತೆಗಳು ಇವೆ.

ಅರಿಶಿನದ ಲಾಭಗಳು

ನಿಮಗೆ ಅರಿಶಿನದಿಂದ ದೊರೆಯುವ ಸೌಂದರ್ಯದ ಪ್ರಯೋಜನಗಳ ಕುರಿತು ಅರಿವಿದೆಯೇ? ಅರಿಶಿನ ಮತ್ತು ಹಳದಿ ಎಂದು ಕರೆಯಲ್ಪಡುವ ಈ ಮಸಾಲೆ ಪದಾರ್ಥವನ್ನು ಹಲವಾರು ಖಾದ್ಯಗಳಿಗೆ ಬಳಸುತ್ತಾರೆ. ಇದು ಪುಡಿಯ ರೂಪದಲ್ಲಿ ಸಹ ದೊರೆಯುತ್ತದೆ. ಕೆಲವೊಂದು ಭಾರತೀಯ ಖಾದ್ಯಗಳ ರುಚಿಯನ್ನು ಹೆಚ್ಚಿಸುವುದರಲ್ಲಿ ಇದರ ಕೈವಾಡವು ಸಹ ಹೆಚ್ಚಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಇದರಿಂದ ನಮಗೆ ಕೆಲವೊಂದು ಆರೋಗ್ಯಕಾರಿ ಪ್ರಯೋಜನಗಳು ಸಹ ಲಭ್ಯವಿವೆ. ಆದರೆ ಸೌಂದರ್ಯದ ಪ್ರಯೋಜನಗಳು! ಹೌದು ಇದನ್ನು ಬಳಸುವುದರಿಂದ ಸೌಂದರ್ಯವನ್ನು ಸಹ ಹೆಚ್ಚಿಸಿಕೊಳ್ಳಬಹುದು. ಇದರ ಅಲ್ಪ ಸ್ವಲ್ಪ ಪರಿಚಯ ನಿಮಗೂ ಸಹ ಇರಬಹುದು.

ಆದ್ದರಿಂದಲೇ ಶತ ಶತಮಾನಗಳಿಂದ ಭಾರತೀಯ ಹೆಂಗಸರು ಅರಿಶಿನವನ್ನು ಮುಖಕ್ಕೆ ಬಳಿದುಕೊಳ್ಳುತ್ತಿದ್ದರು. ಇದರಲ್ಲಿರುವ ಆಂಟಿಸೆಪ್ಟಿಕ್ ಗುಣಗಳಿಂದಾಗಿ ಇದನ್ನು ಆಂತರಿಕವಾಗಿ (ಅಡುಗೆಯಲ್ಲಿ) ಮತ್ತು ಬಾಹ್ಯವಾಗಿ (ತ್ವಚೆಗೆ) ನಾವು ಬಳಸುತ್ತಿದ್ದೇವೆ. ಸೂಕ್ಷ್ಮ ತ್ವಚೆ ಇರುವವರನ್ನು ಹೊರತುಪಡಿಸಿ ಯಾರು ಬೇಕಾದರು ಅರಿಶಿನವನ್ನು ಬಳಸಬಹುದು. ಪ್ರತಿಯೊಂದು ಸೌಂದರ್ಯವರ್ಧಕಗಳಲ್ಲೂ ಅರಶಿನವನ್ನು ಬಳಸಿಕೊಳ್ಳುವರು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಮತ್ತು ನಂಜುನಿರೋಧಕ ಗುಣದಿಂದಾಗಿ ಇದು ಹಲವಾರು ರೀತಿಯ ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ನಿಯಮಿತವಾಗಿ ಇದರ ಬಳಕೆ ಮಾಡಿದರೆ ಕಪ್ಪು ಕಲೆಗಳು ಮಾಯವಾಗಿ ಮುಖಕ್ಕೆ ಹೊಳಪು ಬರುವುದು.

English summary

This DIY Mask Will Remove Age Spots Effectively

Sun damage and age spots are common skin issues that most of the women face and has trouble finding a solution for. When it comes to the skin, natural remedies work much more effectively than any other ready-made products available in the market. Moreover, the money invested for such products might not give you the desired the result. Hence we are here with a permanent solution for you to treat age spots.
X
Desktop Bottom Promotion