For Quick Alerts
ALLOW NOTIFICATIONS  
For Daily Alerts

ಥಾಯ್ಲೆಂಡ್ ನ ಮಹಿಳೆಯರ ಸೌಂದರ್ಯ ರಹಸ್ಯ ಬಹಿರಂಗ!

By Hemanth
|

ಆಯಾಯ ದೇಶಕ್ಕೆ ಅನುಗುಣವಾಗಿ ಮಹಿಳೆಯರ ಸೌಂದರ್ಯದಲ್ಲೂ ವ್ಯತ್ಯಾಸವಾಗುತ್ತಾ ಹೋಗುವುದು ಎನ್ನುವುದನ್ನು ನಾವು ನೋಡಬಹುದಾಗಿದೆ. ಭಾರತೀಯರ ಸೌಂದರ್ಯ ಒಂದು ರೀತಿಯದ್ದಾದರೆ, ಬೇರೆ ದೇಶಗಳ ಮಹಿಳೆಯರ ಸೌಂದರ್ಯವು ಇದಕ್ಕಿಂತ ಭಿನ್ನವಾಗಿದೆ. ಅದರಲ್ಲೂ ಥಾಯ್ಲೆಂಡ್ ನ ಮಹಿಳೆಯರು ತಮ್ಮ ಕಾಂತಿಯುತವಾದ ತ್ವಚೆಯಿಂದ ಹೆಚ್ಚು ಗುರುತಿಸಲ್ಪಡುವರು. ಹಿಂದಿನಿಂದಲೂ ಥಾಯ್ಲೆಂಡ್ ನ ಮಹಿಳೆಯರು ಇದನ್ನು ಕಾಪಾಡಿಕೊಂಡು ಬಂದಿರುವರು.

Beauty Secrets Of Thai Women

ಇದಕ್ಕೆ ಮೊದಲ ಕಾರಣ ಜಿನ್. ಇನ್ನೊಂದು ಕಾರಣ ಥಾಯ್ಲೆಂಡ್ ನ ಮಹಿಳೆಯರು ಬಳಸಿಕೊಂಡು ಬರುತ್ತಿರುವಂತಹ ಸಾಂಪ್ರದಾಯಿಕವಾದ ಸೌಂದರ್ಯವರ್ಧಕಗಳು. ಥಾಯ್ಲೆಂಡ್ ನ ಮಹಿಳೆಯರ ಸಾಂಪ್ರದಾಯಿಕ ಸೌಂದರ್ಯವರ್ಧಕ ರಹಸ್ಯಗಳಲ್ಲಿ ಕೆಲವೊಂದು ರೀತಿಯ ಹಣ್ಣುಗಳು ಮತ್ತು ಮಸಾಲೆಗಳು ಒಳಗೊಂಡಿದೆ. ಈ ಸೌಂದರ್ಯವರ್ಧಕ ರಹಸ್ಯಗಳನ್ನು ನೀವು ಮನೆಯಲ್ಲೇ ಪಾಲಿಸಬಹುದು. ಥಾಯ್ಲೆಂಡ್ ನ ಮಹಿಳೆಯರು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಬಳಸುತ್ತಿದ್ದ ರಹಸ್ಯ ಸೌಂದರ್ಯವರ್ಧಕಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಂಡು, ಸೌಂದರ್ಯವರ್ಧಿಸಿ.

ಪಪ್ಪಾಯ

ಪಪ್ಪಾಯ

ಪಪ್ಪಾಯಿಯನ್ನು ನಿಯಮಿತವಾಗಿ ಬಳಸಿಕೊಂಡರೆ ಆಗ ಚರ್ಮವು ಬಿಳಿಯಾಗುವುದು. ಹಣ್ಣಾದ ಪಪ್ಪಾಯಿಯನ್ನು ನೀವು ಬಳಸಿಕೊಳ್ಳಬೇಕು. ಇದರ ಸಿಪ್ಪೆ ತೆಗೆದು, ಸಣ್ಣ ಸಣ್ಣ ತುಂಡು ಮಾಡಿಕೊಳ್ಳಿ. ಒಂದು ಚಮಚ ಬಳಸಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ. ಮುಖ ತೊಳೆದುಕೊಂಡು ಇದನ್ನು ಹಚ್ಚಿಕೊಳ್ಳಿ. 15-20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ಅರಿಶಿನ

ಅರಿಶಿನ

ಭಾರತೀಯರು ಅರಶಿನವನ್ನು ತಮ್ಮ ಸೌಂದರ್ಯವರ್ಧಕಗಳಲ್ಲಿ ಬಳಸಿಕೊಳ್ಳುವಂತೆ ಥಾಯ್ಲೆಂಡ್ ನ ಮಹಿಳೆಯರು ಕೂಡ ಇದನ್ನು ಬಳಸುವರು. ಇದನ್ನು ಮುಖದ ಕ್ಲೆನ್ಸರ್ ಆಗಿ ಬಳಸಲಾಗುವುದು. ಚರ್ಮದ ಹಲವಾರು ರೀತಿಯ ಉರಿಯೂತ ಅಥವಾ ಕಿರಿಕಿರಿ ತಪ್ಪಿಸುವುದು. ಕೆಲವು ಹನಿ ನೀರು ಮತ್ತು ಅರಿಶಿನ ಹುಡಿ ಹಾಕಿಕೊಂಡು ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು 5 ನಿಮಿಷ ಕಾಲ ಉಜ್ಜಿಕೊಳ್ಳಿ. ಬಳಿಕ ಸಾಮಾನ್ಯ ನೀರಿನಿಂದ ತೊಲೆಯಿರಿ. ಇದು ಚರ್ಮಕ್ಕೆ ತಾಜಾತನ ನೀಡುವುದು.

ದೇವತೆಗಳ ಹಣ್ಣು, 'ಪಪ್ಪಾಯ' ಹಣ್ಣನ್ನು ಎಷ್ಟು ಹೊಗಳಿದರೂ ಸಾಲದು!!

ತೆಂಗಿನೆಣ್ಣೆ

ತೆಂಗಿನೆಣ್ಣೆ

ಥಾಯ್ಲೆಂಡ್ ನ ಮಹಿಳೆಯರು ತೆಂಗಿನೆಣ್ಣೆಯನ್ನು ನಿಯಮಿತವಾಗಿ ಬಳಸಿಕೊಂಡು ಸೌಂದರ್ಯದ ಆರೈಕೆ ಮಾಡುವರು. ಆಹಾರದಲ್ಲಿ ನಾವು ಇದನ್ನು ಬಳಸಿಕೊಂಡು ಲಾಭ ಪಡೆದಂತೆ, ಚರ್ಮಕ್ಕೂ ಇದು ಲಾಭಕಾರಿಯಾಗಿರುವುದು. ಸ್ವಲ್ಪ ತೆಂಗಿನೆಣ್ಣೆ ಬಳಸಿಕೊಂಡು ಅದನ್ನು ಕೆಲವು ನಿಮಿಷ ಕಾಲ ನಿಧಾನವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದು ಚರ್ಮಕ್ಕೆ ತೇವಾಂಶ ನೀಡುವುದು ಮತ್ತು ಮೊಶ್ಚಿರೈಸ್ ಮಾಡುವುದು.

ಬ್ಯೂಟಿ ಟಿಪ್ಸ್: ಮೈಕಾಂತಿ ಹೆಚ್ಚಿಸುವ ಹಳ್ಳಿಗಾಡಿನ 'ತೆಂಗಿನೆಣ್ಣೆ'

ಲೆಮನ್ ಗ್ರಾಸ್

ಲೆಮನ್ ಗ್ರಾಸ್

ಲೆಮನ್ ಗ್ರಾಸ್ ನ್ನು ಹೆಚ್ಚಾಗಿ ಥಾಯ್ಲೆಂಡ್ ನ ಅಡುಗೆಯಲ್ಲಿ ಬಳಸಲಾಗುತ್ತದೆ. ಇದನ್ನು ಹೊರತುಪಡಿಸಿ ಲೆಮನ್ ಗ್ರಾಸ್ ನಿರ್ವಿಷಕಾರಿ ಮತ್ತು ಚರ್ಮದ ಸತ್ತ ಕೋಶವನ್ನು ಕಿತ್ತು ಹಾಕುವುದು. ಲೆಮನ್ ಗ್ರಾಸ್ ಹಬೆಯಿಂದ ನಿಮಗೆ ಕಾಂತಿ ಹಾಗೂ ಆರೋಗ್ಯಯುತ ತ್ವಚೆ ಸಿಗುವುದು. 40 ಗ್ರಾಂ ಲೆಮನ್ ಗ್ರಾಸ್ ನ್ನು ಒಂದು ಪಾತ್ರೆಗೆ ಹಾಕಿ ಸ್ಟೀಮ್ ಮಾಡಿ. ಇದನ್ನು ಸೋಸಿಕೊಂಡ ಬಳಿಕ ಲೆಮನ್ ಗ್ರಾಸ್ ನ ನೀರಿನ ಹಬೆ ಎಳೆದುಕೊಳ್ಳಿ. ಇದರಿಂದ ಚರ್ಮವು ಅದನ್ನು ಹೀರಿಕೊಳ್ಳುವುದು.

ಹುಣಸೆ ಹುಳಿ

ಹುಣಸೆ ಹುಳಿ

ಹುಣಸೆ ಹುಳಿಯು ಚರ್ಮವನ್ನು ಬಿಳಿಯಾಗಿಸುವ ಗುಣ ಹೊಂದಿದೆ. ಸತ್ತ ಚರ್ಮದ ಕೋಶವನ್ನು ಕಿತ್ತುಹಾಕಲು ನೀವು ಇದನ್ನು ಬಳಸಬಹುದು. ಸ್ವಲ್ಪ ಹುಣಸೆ ಹುಳಿಯನ್ನು ನೀರಿನಲ್ಲಿ ಹಾಕಿಡಿ ಮತ್ತು ಇದು ಸರಿಯಾಗಿ ನೆನೆಯಲಿ. ನೆನೆಸಿದ ಹುಣಸೆಹುಳಿಯನ್ನು ಹಿಚುಕಿಕೊಂಡು, ಅದಕ್ಕೆ ಸ್ವಲ್ಪ ಮೊಸರು ಹಾಕಿ ಪೇಸ್ಟ್ ಮಾಡಿ. ಇದನ್ನು ನೀವು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರದಲ್ಲಿ 2-3 ಸಲ ನೀವು ಇದನ್ನು ಬಳಸಿದರೆ ಆಗ ಆರೋಗ್ಯಕರ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.

ಹಣ್ಣಿನ ಜ್ಯೂಸ್

ಹಣ್ಣಿನ ಜ್ಯೂಸ್

ಕೇವಲ ತ್ವಚೆಯ ಮೇಲ್ಭಾಗದಲ್ಲಿ ಮಾತ್ರ ಹಚ್ಚಿಕೊಂಡರೆ ನಿಮಗೆ ಕಾಂತಿ ಹಾಗೂ ಆರೋಗ್ಯಯುತ ಚರ್ಮ ಸಿಗದು. ಚರ್ಮವು ಆರೋಗ್ಯವಾಗಿರಬೇಕಾದರೆ ಒಳಗಿನಿಂದಲೂ ನೀವು ಆರೈಕೆ ಮಾಡಬೇಕು. ಈ ವಿಚಾರದಲ್ಲಿ ಥಾಯ್ಲೆಂಡ್ ನ ಮಹಿಳೆಯರು ನಮಗೆ ಪಾಠ ಮಾಡುವರು. ಕಾಂತಿಯುತ ತ್ವಚೆ ಪಡೆಯಲು ಥಾಯ್ಲೆಂಡ್ ನ ಮಹಿಳೆಯರು ತಮ್ಮ ಆಹಾರ ಕ್ರಮದಲ್ಲಿ ಹಣ್ಣಿನ ಜ್ಯೂಸ್ ಬಳಸುವರು. ಹಣ್ಣಿನ ಜ್ಯೂಸ್ ನಲ್ಲಿ ಇರುವಂತಹ ಪ್ರಮುಖ ವಿಟಮಿನ್ ಗಳು ಮತ್ತು ಪೋಷಕಾಂಶಗಳು ಸುಂದರ ತ್ವಚೆ ನೀಡುವುದು.

English summary

Take A Look At These Secrets In The Thai Beauty Regime

Have you ever wondered how Thai women manage to maintain their flawless skin? Of course, most of us are awestruck when we see that perfect skin of Thai women. The first reason is that it is in their genes. But another secret to their skin is the Thai traditional beauty secrets that they follow. And their traditional beauty secret involves incorporating some tropical fruits and spices of Thailand in their daily beauty regime. Now you can also follow this beauty secret at your home. We in this article have included some of the most important beauty secrets of Thai women for maintaining a healthy skin. Let us tell you what they are.
X
Desktop Bottom Promotion