ಉಪ್ಪಿನಿಂದ ತಯಾರಿಸಿದ, ಕಡಿಮೆ ಖರ್ಚಿನ ತ್ವಚೆಯ ಸ್ಕ್ರಬ್‌ಗಳು!

Posted By: Hemanth
Subscribe to Boldsky

ಚರ್ಮದ ಆರೈಕೆ ಮಾಡಲು ಹಲವಾರು ವಿಧಾನಗಳಿದ್ದು, ಇದರಲ್ಲಿ ಸ್ಕ್ರಬ್ ಕೂಡ ಒಂದಾಗಿದೆ. ವಿವಿಧ ರೀತಿಯ ಸ್ಕ್ರಬ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದೇ ರೀತಿ ಮನೆಯಲ್ಲೂ ಕೆಲವೊಂದು ಸ್ಕ್ರಬ್‌ಗಳನ್ನು ತಯಾರಿಸಿಕೊಂಡು ಬಳಸಬಹುದು. ಇದರಲ್ಲಿ ಪ್ರಮುಖವಾಗಿ ಸಮುದ್ರದ ಉಪ್ಪು. ಸಮುದ್ರದ ಉಪ್ಪಿನಲ್ಲಿ ಚರ್ಮವನ್ನು ಸುಧಾರಿಸುವಂತಹ ಗುಣಗಳು ಇವೆ. ಇದನ್ನು ಹಿಂದಿನಿಂದಲೂ ಬಳಸಿಕೊಂಡು ಬರಲಾಗುತ್ತಿದ್ದು, ಸುಂದರ ಹಾಗೂ ಕಾಂತಿಯುತ ತ್ವಚೆ ಇದರಿಂದ ಪಡೆಯಬಹುದು.

ಚರ್ಮದ ರಕ್ಷಣೆ ಮಾಡುವ ಸಮುದ್ರದ ಉಪ್ಪುಚರ್ಮವನ್ನು ಶುದ್ಧವಾಗಿಡಲು ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಕಿತ್ತುಹಾಕುವಂತಹ ಗುಣಗಳು ಚರ್ಮದಲ್ಲಿರುವ ವಿಷಕಾರಿ ಅಂಶ ಮತ್ತು ಕಲ್ಮಷವನ್ನು ದೂರ ಮಾಡುವುದು. ಕಲ್ಮಶಗಳಿಂದಾಗಿ ಚರ್ಮವು ಸೋಂಕಿಗೆ ಒಳಗಾಗಿ ಹಲವಾರು ರೀತಿಯ ಸಮಸ್ಯೆ ಕಾಣಿಸಿಕೊಳ್ಳುವುದು. ಇಷ್ಟು ಮಾತ್ರವಲ್ಲದೆ ನೈಸರ್ಗಿಕ ಕಾಂತಿ ಕೂಡ ಕೆಡುವುದು.

ಚರ್ಮವು ಕಲ್ಮಶ ಹಾಗೂ ವಿಷಕಾರಿ ಅಂಶದಿಂದ ಹೊರಗಿಡಬೇಕಾದರೆ ಸಮುದ್ರದ ಉಪ್ಪನ್ನು ಬಳಸಿಕೊಳ್ಳಬಹುದು. ಇದನ್ನು ಕೆಲವು ಇತರ ಸಾಮಗ್ರಿಗಳ ಜತೆಗೆ ಬಳಸಿದರೆ ಅದ್ಭುತ ಫಲಿತಾಂಶ ಪಡೆಯಬಹುದು. ಮನೆಯಲ್ಲೇ ತಯಾರಿಸುವ ಈ ಸ್ಕ್ರಬ್ ಗಳನ್ನು ತಯಾರಿಸುವುದು ಹಾಗೂ ಬಳಸುವುದು ಸುಲಭ. ಚರ್ಮದ ಆರೈಕೆಗೆ ಬಳಸಬಹುದಾದ ಸಮುದ್ರದ ಉಪ್ಪಿನ ಕೆಲವೊಂದು ಸ್ಕ್ರಬ್ ಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಸೂಚನೆ: ಯಾವುದೇ ಸ್ಕ್ರಬ್ ಅನ್ನು ಸಂಪೂರ್ಣವಾಗಿ ಬಳಸುವ ಮೊದಲು ಅದನ್ನು ದೇಹದ ಯಾವುದಾದರೂ ಭಾಗಕ್ಕೆ ಸ್ವಲ್ಪ ಹಚ್ಚಿಕೊಂಡು ಪರೀಕ್ಷೆ ಮಾಡಿಕೊಳ್ಳಿ...

ಸಮುದ್ರ ಉಪ್ಪು ಮತ್ತು ತೆಂಗಿನೆಣ್ಣೆ

ಸಮುದ್ರ ಉಪ್ಪು ಮತ್ತು ತೆಂಗಿನೆಣ್ಣೆ

ಎರಡು ಚಮಚ ಸಮುದ್ರದ ಉಪ್ಪು ಮತ್ತು 3-4 ಚಮಚ ತೆಂಗಿನೆಣ್ಣೆ ಹಾಕಿಕೊಂಡು ಮಿಶ್ರಣ ಮಾಡಿ, ಇದನ್ನು ಮುಖಕ್ಕೆ ಹಚ್ಚಿಕೊಂಡು 5-10 ನಿಮಿಷ ಕಾಲ ಹಾಗೆ ಮಸಾಜ್ ಮಾಡಿ. ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಸಲ ಇದನ್ನು ಬಳಸಿಕೊಂಡರೆ ಅದರಿಂದ ಚರ್ಮದಲ್ಲಿ ಕಲ್ಮಶವು ದೂರವಾಗಿ ಚರ್ಮವು ಪರಿಶುದ್ಧವಾಗುವುದು.

ಸಮುದ್ರದ ಉಪ್ಪು ಮತ್ತು ಕಾಫಿ ಗ್ರೌಂಡ್ಸ್

ಸಮುದ್ರದ ಉಪ್ಪು ಮತ್ತು ಕಾಫಿ ಗ್ರೌಂಡ್ಸ್

ಒಂದು ಪಿಂಗಾಣಿಯಲ್ಲಿ 3 ಚಮಚ ಸಮುದ್ರದ ಉಪ್ಪು, ಎರಡು ಚಮಚ ಕಾಫಿ ಗ್ರೌಂಡ್ಸ್ ಮತ್ತು ಎರಡು ಚಮಚ ಡಿಸ್ಟಿಲ್ಡ್ ನೀರು ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ಕ್ರಬ್ ಮಾಡಿ ಮತ್ತು ನಿಧಾನವಾಗಿ ಉಜ್ಜಿಕೊಳ್ಳಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಈ ಸ್ಕ್ರಬ್ ಬಳಸಿಕೊಂಡರೆ ಸತ್ತ ಚರ್ಮವನ್ನು ತೆಗೆದುಹಾಕಬಹುದು.

ಸಮುದ್ರದ ಉಪ್ಪು ಮತ್ತು ಲಿಂಬೆರಸ

ಸಮುದ್ರದ ಉಪ್ಪು ಮತ್ತು ಲಿಂಬೆರಸ

ಮೂರು ಚಮಚ ಸಮುದ್ರದ ಉಪ್ಪು ಮತ್ತು 4 ಚಮಚ ಲಿಂಬೆರಸ ಹಾಕಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ನಿಧಾನವಾಗಿ ಸುಮಾರು 5-10 ನಿಮಿಷ ಕಾಲ ಸ್ಕ್ರಬ್ ಮಾಡಿ. ಇದರ ಬಳಿಕ ಸ್ವಲ್ಪ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ ಎರಡು ಸಲ ಈ ಸ್ಕ್ರಬ್ ಬಳಸಿದರೆ ಅದರಿಂದ ಚರ್ಮವು ಬಿಳಿಯಾಗುವುದು ಮತ್ತು ನಿಸ್ತೇಜವು ಕಡಿಮೆಯಾಗುವುದು.

ಸಮುದ್ರದ ಉಪ್ಪು, ಓಟ್ ಮೀಲ್ ಮತ್ತು ಆಲಿವ್ ತೈಲ

ಸಮುದ್ರದ ಉಪ್ಪು, ಓಟ್ ಮೀಲ್ ಮತ್ತು ಆಲಿವ್ ತೈಲ

ಒಂದು ಚಮಚ ಓಟ್ ಮೀಲ್ ಗೆ ಮೂರು ಚಮಚದಷ್ಟು ಸಮುದ್ರದ ಉಪ್ಪು ಹಾಕಿಕೊಳ್ಳಿ ಮತ್ತು 4 ಚಮಚ ಆಲಿವ್ ತೈಲ ಹಾಕಿ. ಇದನ್ನು ನಿಧಾನವಾಗಿ ಮುಖದ ಮೇಲೆ ಸ್ಕ್ರಬ್ ಮಾಡಿ. 10-15 ನಿಮಿಷ ಕಾಲ ಸ್ಕ್ರಬ್ ಮಾಡಿದ ಬಳಿಕ ಸಾಧಾರಣ ನೀರಿನಿಂದ ಮುಖ ತೊಳೆಯಿರಿ. ತಿಂಗಳಲ್ಲಿ ಎರಡು ಸಲ ಈ ಸ್ಕ್ರಬ್ ಬಳಸಿಕೊಳ್ಳಿ. ಇದರಿಂದ ಎಲ್ಲಾ ಸಮಯ ನಿಮ್ಮ ಚರ್ಮವು ತುಂಬಾ ಮೊಶ್ಚಿರೈಸ್ ಆಗಿರುವುದು.

ಸಮುದ್ರದ ಉಪ್ಪು, ಬ್ರೌನ್ ಶುಗರ್ ಮತ್ತು ರೋಸ್ ವಾಟರ್

ಸಮುದ್ರದ ಉಪ್ಪು, ಬ್ರೌನ್ ಶುಗರ್ ಮತ್ತು ರೋಸ್ ವಾಟರ್

ಚರ್ಮದ ಆರೈಕೆಗೆ ಮತ್ತೊಂದು ಸ್ಕ್ರಬ್ ತಯಾರಿಸಲು ಎರಡು ಚಮಚ ಸಮುದ್ರದ ಉಪ್ಪು, 3 ಚಮಚ ಬ್ರೌನ್ ಶುಗರ್ ಮತ್ತು 4 ಚಮಚ ರೋಸ್ ವಾಟರ್ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ತ್ವಚೆಗೆ ಹಚ್ಚಿಕೊಳ್ಳಿ. 10 ನಿಮಿಷ ಕಾಲ ನಿಧಾನವಾಗಿ ಸ್ಕ್ರಬ್ ಮಾಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ತಿಂಗಳಲ್ಲಿ ಒಂದು ಸಲ ಇದನ್ನು ಬಳಸಿಕೊಂಡರೆ ಒಳ್ಳೆಯದು.

ಸಮುದ್ರದ ಉಪ್ಪು ಮತ್ತು ಆ್ಯಪಲ್ ಸೀಡರ್ ವಿನೇಗರ್

ಸಮುದ್ರದ ಉಪ್ಪು ಮತ್ತು ಆ್ಯಪಲ್ ಸೀಡರ್ ವಿನೇಗರ್

3 ಚಮಚ ಸಮುದ್ರದ ಉಪ್ಪು, ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಮತ್ತು 1 ಚಮಚ ಡಿಸ್ಟಿಲ್ಡ್ ನೀರು ಬಳಸಿಕೊಂಡು ಈ ಸ್ಕ್ರಬ್ ತಯಾರಿಸಿ. ಇದನ್ನು ನಿಧಾನವಾಗಿ ಚರ್ಮಕ್ಕೆ ಸ್ಕ್ರಬ್ ಮಾಡಿ ಮತ್ತು 10 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ಸ್ನಾನ ಮಾಡಿ. ವಾರದಲ್ಲಿ ಎರಡು ಸಲ ಈ ಸ್ಕ್ರಬ್ ಬಳಸಿದರೆ ಸುಂದರ ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುವುದು.

ಸಮುದ್ರದ ಉಪ್ಪು, ಅಲೋವೆರಾ ಜೆಲ್

ಸಮುದ್ರದ ಉಪ್ಪು, ಅಲೋವೆರಾ ಜೆಲ್

3 ಚಮಚ ಅಲೋವೆರಾದ ಲೋಳೆಗೆ 4 ಚಮಚ ಸಮುದ್ರದ ಉಪ್ಪು ಮಿಶ್ರಣ ಮಾಡಿಕೊಳ್ಳಿ. ಇದು ತಯಾರಾದ ಬಳಿಕ ತ್ವಚೆಗೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ ಮತ್ತು ಐದು ನಿಮಿಷ ಕಾಲ ನಿಧಾನವಾಗಿ ಸ್ಕ್ರಬ್ ಮಾಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಸಲ ಈ ಸ್ಕ್ರಬ್ ಬಳಸಿದರೆ ಕಪ್ಪು ಕಲೆಗಳು ಮಾಯವಾಗುವುದು.

English summary

sea salt body scrubs for flawless skin

Sea salt can come to your skin’s rescue and help it become clean and clear. This famous component is loaded with powerful antioxidants and exfoliating agents that can eliminate toxins and impurities from your skin. More often than not, these impurities make your skin prone to infections and ruin its natural beauty. To ensure that your skin stays dirt-free, you should use sea salt to exfoliate your skin. And, the best way to do that would be by combining it with other natural ingredients that too possess exfoliating properties.