For Quick Alerts
ALLOW NOTIFICATIONS  
For Daily Alerts

ನೋಡಿ ಈ ಸಿಂಪಲ್ ಫೇಸ್ ಮಾಸ್ಕ್ ಪ್ರಯತ್ನಿಸಿ-ಮುಖ ಬೆಳ್ಳಗಾಗುವುದು!

By Arshad
|

ನಿಮಗೆ ಸಾಮಾನ್ಯವಾಗಿ ಎದುರಾಗುವ ತ್ವಚೆಯ ವಿವಿಧ ತೊಂದರೆಗಳಿಂದ ಮುಕ್ತಿ ಪಡೆಯಲು ಸಂಪೂರ್ಣ ಪರಿಹಾರವನ್ನು ಹುಡುಕುತ್ತಿರುವಿರಾ? ಹಾಗಾದರೆ ಈ ಲೇಖನ ನಿಮಗೆ ಅತಿ ಸೂಕ್ತವಾಗಿದ್ದು ನಿಮ್ಮ ಅಡುಗೆ ಮನೆಯಲ್ಲಿ ಲಭ್ಯವಿರುವ ಸುಲಭ ಸಾಮಾಗ್ರಿಗಳನ್ನು ಬಳಸಿ ತಯಾರಿಸುವ ಮುಖಲೇಪದ ಬಳಕೆಯಿಂದ ಬಹುತೇಕ ಎಲ್ಲಾ ತ್ವಚೆಯ ತೊಂದರೆಗಳನ್ನು ಪರಿಹರಿಸಿಕೊಳ್ಳಬಹುದು. ಕಪ್ಪುತಲೆ, ಎಣ್ಣೆಚರ್ಮ, ಮೊಡವೆ, ವಯಸ್ಸಿನ ಪ್ರಭಾವ ತೋರುವ ಸೂಕ್ಷ್ಮ ಗೆರೆಗಳು ಇತ್ಯಾದಿಗಳೆಲ್ಲವೂ ಈ ಮುಖಲೇಪದ ಬಳಕೆಯಿಂದ ಶೀಘ್ರವೇ ಪರಿಹಾರಗೊಳ್ಳಲಿವೆ.

ವಾತಾವರಣದ ಪ್ರದೂಷಣೆ, ಪ್ರಬಲ ಮತ್ತು ಹಾನಿಕರವಾದ ಸೂರ್ಯನ ಅತಿನೇರಳೆ ಕಿರಣಗಳು, ಅತಿಯಾದ ಧೂಮಪಾನ, ಮದ್ಯಪಾನ, ಆರಾಮದಾಯಕ ಜೀವನಶೈಲಿ ಮೊದಲಾದ ಹಲವಾರು ಅಂಶಗಳು ತ್ವಚೆ ಕಳೆಗುಂದಲು ಕಾರಣವಾಗುತ್ತವೆ.

skinglowing tips in kannada

ಇದರ ಪರಿಹಾರಕ್ಕಾಗಿ ಒಂದು ಸುಲಭ ಮುಖಲೇಪವನ್ನು ಇಂದು ಪ್ರಸ್ತುತಪಡಿಸಲಾಗುತ್ತಿದ್ದು ಇದಕ್ಕೆ ಕೇವಲ ಎರಡೇ ಸಾಮಾಗ್ರಿಗಳನ್ನು ಬಳಸಿದರೆ ಸಾಕು. ನೀವು ಸರಿಯಾಗಿಯೇ ಓದಿದಿರಿ, ಕೇವಲ ಎರಡೇ ಸಾಮಾಗ್ರಿಗಳು, ಅದೂ ಎಲ್ಲೆಡೆ ಸುಲಭವಾಗಿ ದೊರಕುವಂತಹದ್ದೇ ಆಗಿದ್ದು ಇದರ ಸರಿಯಾದ ಬಳಕೆಯಿಂದ ನಿಮ್ಮ ತ್ವಚೆಯ ತೊಂದರೆಗಳೆಲ್ಲವೂ ಇಲ್ಲವಾಗಿ ಕಾಂತಿಯುಕ್ತ ಮತ್ತು ಆರೋಗ್ಯಕರ ತ್ವಚೆಯನ್ನು ಪಡೆಯುವಿರಿ.
ಬನ್ನಿ, ಇವು ಯಾವುವು ಎಂಬುದನ್ನು ನೋಡೋಣ:

1. ಒಂದೇ ರಾತ್ರಿಯಲ್ಲಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು

ಟೊಮಾಟೋದಲ್ಲಿ ವಿಟಮಿನ್ ಎ, ಬಿ.ಮತ್ತು ಸಿ ವಿಫುಲವಾಗಿದೆ. ಇದರಲ್ಲಿ ವಿಟಮಿನ್ ಎ ತ್ವಚೆಯಲ್ಲಿರುವ ಕಲೆಗಳನ್ನು ನಿವಾರಿಸಲು ನೆರವಾಗುವ ಮೂಲಕ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಹಸಿ ತೆಂಗಿನ ಹಾಲು ತ್ವಚೆಯನ್ನು ಸೌಮ್ಯ ಮತ್ತು ನುಣುಪಾಗಿಸುತ್ತದೆ.

ಈ ಸಾಮಾಗ್ರಿಗಳ ಪ್ರಮಾಣ:
ಎರಡು ದೊಡ್ಡ ಚಮಚ ಹಸಿ ತೆಂಗಿನ ಹಾಲು (ತಾಜಾ ತೆಂಗಿನ ತುರಿಯನ್ನು ಕಡೆದು ಹಿಂಡಿ ತೆಗೆದ ಹಾಲು)
ಒಂದು ದೊಡ್ಡ ಚಮಚ ಟೊಮಾಟೋ ರಸ

ತಯಾರಿಕಾ ವಿಧಾನ:
ಒಂದು ಮಧ್ಯಮ ಗಾತ್ರದ ಚೆನ್ನಾಗಿ ಹಣ್ಣಾದ ಟೊಮಾಟೋ ಹಣ್ಣನ್ನು ಕತ್ತರಿಸಿ ಚಿಕ್ಕಚಿಕ್ಕ ತುಂಡುಗಳನ್ನಾಗಿಸಿ ಬ್ಲೆಂಡರಿನಲ್ಲಿ ನುಣ್ಣಗೆ ಅರೆಯಿರಿ.
ಬಳಿಕ ಸ್ವಚ್ಛ ಬೋಗುಣಿಯೊಂದರಲ್ಲಿ ಹಸಿ ತೆಂಗಿನ ಹಾಲಿನೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಲೇಪವನ್ನು ಈಗತಾನೇ ತೊಳೆದು ಒತ್ತಿ ಒರೆಸಿಕೊಂಡ ಮುಖ ಮತ್ತು ಕುತ್ತಿಗೆಯ ತ್ವಚೆಯ ಮೇಲೆ ದಪ್ಪನಾಗಿ, ಕಣ್ಣುಗಳನ್ನು ಮುಚ್ಚಿ ಕಣ್ಣುಗಳ ರೆಪ್ಪೆಗಳ ಮೇಲೆ ತೆಳುವಾಗಿ ಹಚ್ಚಿಕೊಂಡು ಹತ್ತು ನಿಮಿಷ ಕಣ್ಣು ಮುಚ್ಚಿ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

2. ಕಪ್ಪುತಲೆಗಳನ್ನು ನಿವಾರಿಸಲು:

ಮೊಟ್ಟೆಯ ಬಿಳಿಭಾಗ ತ್ವಚೆಯ ಅಡಿಯಲ್ಲಿ ಸಂಗ್ರಹವಾಗಿದ್ದ ಕೀವನ್ನು ನಿವಾರಿಸಿ ಸೂಕ್ಷ್ಮರಂಧ್ರಗಳನ್ನು ಸ್ವಚ್ಚಗೊಳಿಸಿ ತ್ವಚೆ ಉಸಿರಾಡಲು ನೆರವಾಗುತ್ತದೆ. ಪರಿಣಾಮವಾಗಿ ಕಪ್ಪುತಲೆಗಳು ತಾನಾಗಿಯೇ ಸಡಿಲಗೊಂಡು ಸುಲಭವಾಗಿ ನಿವಾರಣೆಯಾಗುತ್ತವೆ.

ಅಗತ್ಯವಿರುವ ಸಾಮಾಗ್ರಿಗಳು:
ಒಂದು ದೊಡ್ಡ ಚಮಚ ಮೊಟ್ಟೆಯ ಬಿಳಿಭಾಗ
ಒಂದು ಚಿಕ್ಕ ಚಮಚ ತಾಜಾ ಲಿಂಬೆಯ ರಸ

ತಯಾರಿಕಾ ವಿಧಾನ:
ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕಿಸಿ ಚೆನ್ನಾಗಿ ಗೊಟಾಯಿಸಿಕೊಳ್ಳಿ. ಇದಕ್ಕೆ ಲಿಂಬೆರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಲೇಪವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡು ಒತ್ತಿ ಒರೆಸಿಕೊಂಡ ಮುಖ ಮತ್ತು ಕುತ್ತಿಗೆಯ ತ್ವಚೆಗೆ ಹಚ್ಚಿಕೊಳ್ಳಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಕಳೆದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

3. ಎಣ್ಣೆಚರ್ಮದಿಂದ ಮುಕ್ತಿ ಪಡೆಯಲು

ಲೋಳೆಸರ ಹಲವು ವಿಧದಲ್ಲಿ ಆರೋಗ್ಯವನ್ನು ಉತ್ತಮಗೊಳಿಸುವ ನೈಸರ್ಗಿಕ ಸಸ್ಯವಾಗಿದ್ದು ತ್ವಚೆಗೂ ಹಲವು ರೀತಿಯಲ್ಲಿ ನೆರವಾಗುತ್ತದೆ. ಇದರ ರಸ ತ್ವಚೆಯ ಅಳಕ್ಕಿಳಿದು ಹೆಚ್ಚುವರಿ ಕೀವು ಮತ್ತು ಎಣ್ಣೆಯಂಶವನ್ನು ನಿವಾರಿಸುತ್ತದೆ. ಅರಿಶಿನದಲ್ಲಿಯೂ ಗುಣಪಡಿಸುವ ಹಲವಾರು ಗುಣಗಳಿದ್ದು ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:
ಎರಡು ದೊಡ್ಡ ಚಮಚ ಲೋಳೆಸರದ ತಿರುಳು
ಒಂದು ಚಿಕ್ಕ ಚಮಚ ಅರಿಶಿನ ಪುಡಿ

ತಯಾರಿಕಾ ವಿಧಾನ:
ಈಗ ತಾನೇ ಕೊಯ್ದ ಲೋಳೆಸರದ ಒಂದು ಕೋಡನ್ನು ಬಿಡಿಸಿ ಒಳಗಿನ ತಿರುಳನ್ನು ಚಮಚದಿಂದ ಪ್ರತ್ಯೇಕಿಸಿ. ಒಂದು ಬೋಗುಣಿಯಲ್ಲಿ ಅರಿಶಿನ ಪುಡಿಯೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗತಾನೇ ತಣ್ಣೀರಿನಿಂದ ತೊಳೆದುಕೊಂಡು ಒತ್ತಿ ಒರೆಸಿಕೊಂಡ ಮುಖ ಮತ್ತು ಕುತ್ತಿಗೆಯ ತ್ವಚೆಗೆ ಹಚ್ಚಿಕೊಂಡು ಸುಮಾರು ಇಪ್ಪತ್ತು ನಿಮಿಷ ಒಣಗಲುಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

4. ಅರೋಗ್ಯಕರ ತ್ವಚೆಗೆ:

ತೆಂಗಿನ ಹಾಲಿನಲ್ಲಿರುವ ಹಿತಕರ ಭಾವನೆ ನೀಡುವ ಗುಣ ವಿಶೇಷವಾಗಿ ಒಣಚರ್ಮಕ್ಕೆ ಹೆಚ್ಚಿನ ಆರೈಕೆ ನೀಡುತ್ತದೆ ಹಾಗೂ ಆರೋಗ್ಯಕರ ಮತ್ತು ಕಾಂತಿಯುಕ್ತ ತ್ವಚೆ ಪಡೆಯಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:
ಒಂದು ದೊಡ್ಡ ಚಮಚ ತಾಜಾ ತೆಂಗಿನ ಹಾಲು
ಒಂದು ಚಿಕ್ಕ ಚಮಚ ಅರಿಶಿನ ಪುಡಿ

ತಯಾರಿಕಾ ವಿಧಾನ:
ಸ್ವಚ್ಛವಾದ ಬೋಗುಣಿಯೊಂದರಲ್ಲಿ ಎರಡೂ ಸಾಮಾಗ್ರಿಗಳನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗತಾನೇ ತಣ್ಣೀರಿನಿಂದ ತೊಳೆದು ಒತ್ತಿ ಒರೆಸಿಕೊಂಡ ಮುಖ ಮತ್ತು ಕುತ್ತಿಗೆಯ ಮೇಲೆ ತೆಳುವಾಗಿ ಹಚ್ಚಿ ವೃತ್ತಾಕಾರದಲ್ಲಿ ಬೆರಳುಗಳ ತುದಿಯಿಂದ ಮಸಾಜ್ ಮಾಡಿ. ಸುಮಾರು ಹದಿನೈದು ನಿಮಿಷಗಳ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

5. ತ್ವಚೆಯ ಸೆಳೆತ ಹೆಚ್ಚಿಸಲು:

ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟ್, ಗುಣಪಡಿಸುವ ಹಾಗೂ ನೆರಿಗೆಯನ್ನು ನಿವಾರಿಸುವ ಗುಣ ತ್ವಚೆಯ ಸೆಳೆತವನ್ನು ಹೆಚ್ಚಿಸಲು ನೆರವಾಗುತ್ತದೆ. ಕಾಫಿಪುಡಿಯಲ್ಲಿರುವ ಕೆಫೀನ್ ತ್ವಚೆಯ ಅಡಿಯ ಪದರದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಿ ಚರ್ಮದ ಸೆಳೆತ ಹೆಚ್ಚಿಸಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು
ಎರಡು ದೊಡ್ಡ ಚಮಚ ಜೇನು
ಎರಡು ದೊಡ್ಡ ಚಮಚ ಕಾಫಿ ಪುಡಿ (ಹುರಿದು ಪುಡಿ ಮಾಡಿದ ಚಿಕ್ಕಮಗಳೂರು ಕಾಫಿ ಪುಡಿ, ಇನ್ಸ್ಟಂಟ್ ಕಾಫಿಪುಡಿ ಅಷ್ಟು ಪರಿಣಾಮಕಾರಿಯಲ್ಲ)

ತಯಾರಿಕಾ ವಿಧಾನ:
ಎರಡೂ ಸಾಮಾಗ್ರಿಗಳನ್ನು ಚೆನ್ನಾಗಿ ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ತ್ವಚೆಯ ಮೇಲೆ ಹಚ್ಚಿ. ಹಚ್ಚಿಕೊಳ್ಳಲು ಮೃದು ರೋಮಗಳಿರುವ ಬ್ರಶ್ ಬಳಸಬಹುದು. ಬಳಿಕ ಸುಮಾರು ಹತ್ತರಿಂದ ಹದಿನೈದು ನಿಮಿಷ ಒಣಗಲು ಬಿಡಿ. ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

6. ಕಾಂತಿಯುಕ್ತ ತ್ವಚೆ ಪಡೆಯಲು:

ಲಿಂಬೆರಸ ಮತ್ತು ಮೊಸರು ಎರಡೂ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಉತ್ತಮವಾಗಿವೆ ಹಾಗೂ ತ್ವಚೆಯಲ್ಲಿರುವ ಕಪ್ಪು ಕಲೆಗಳು ಮತ್ತು ಸೂಕ್ಷ್ಮಗೀರುಗಳನ್ನು ನಿವಾರಿಸಿ ಆರೋಗ್ಯಕರ ಹಾಗೂ ಕಲೆಯಿಲ್ಲದ ಕಾಂತಿಯುಕ್ತ ತ್ವಚೆ ಪಡೆಯಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:
ಎರಡು ಚಿಕ್ಕ ಚಮಚ ತಾಜಾ ಲಿಂಬೆಯ ರಸ
ಎರಡು ದೊಡ್ಡ ಚಮಚ ಮೊಸರು

ತಯಾರಿಕಾ ವಿಧಾನ:
ಒಂದು ಬೋಗುಣಿಯಲ್ಲಿ ಎರಡೂ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗತಾನೇ ತಣ್ಣೀರಿನಲ್ಲಿ ತೊಳೆದು ಒತ್ತಿ ಒರೆಸಿಕೊಂಡ ಮುಖ ಮತ್ತು ಕುತ್ತಿಗೆಯ ತ್ವಚೆಯ ಈ ಲೇಪನವನ್ನು ತೆಳುವಾಗಿ ಹಚ್ಚಿ ಸುಮಾರು ಅರ್ಧ ಘಂಟೆ ಹಾಗೇ ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

7. ಮೊಡವೆಗಳನ್ನು ನಿವಾರಿಸಲು:

ಜೇನು ಮತ್ತು ದಾಲ್ಚಿನ್ನಿಪುಡಿಯ ಜೋಡಿಯಲ್ಲಿರುವ ಪ್ರತಿಜೀವಕ ಮತ್ತು ಸೂಕ್ಷ್ಮಜೀವಿ ನಿವಾರಕ ಗುಣಗಳು ಮೊಡವೆಯನ್ನು ನಿವಾರಿಸಲು ನೆರವಾಗುವ ಮೂಲಕ ಸಹಜ ಸೌಂದರ್ಯವನ್ನು ಪಡೆಯಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:
¼ ಚಿಕ್ಕ ಚಮಚ ದಾಲ್ಚಿನ್ನಿ ಪುಡಿ
ಎರಡು ದೊಡ್ಡ ಚಮಚ ಜೇನು

ತಯಾರಿಕಾ ವಿಧಾನ:
ಎರಡೂ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ಹಚ್ಚಿ ಐದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಎಚ್ಚರಿಕೆ:ಒಂದು ವೇಳೆ ನಿಮ್ಮ ತ್ವಚೆ ಸೂಕ್ಷ್ಮಸಂವೇದಿಯಾಗಿದ್ದರೆ ದಾಲ್ಚಿನ್ನಿ ಪುಡಿ ನಿಮಗೆ ಅಲರ್ಜಿ ತರಿಸಬಹುದು. ಹಾಗಾಗಿ ಈ ವಿಧಾನವನ್ನು ಅನುಸರಿಸುವ ಮುನ್ನ ಇದು ನಿಮ್ಮ ತ್ವಚೆಗೆ ಅಲರ್ಜಿಕಾರಕವಲ್ಲ ಎಂಬುದನ್ನು ಖಚಿತಪಡಿಸಲು ಪ್ಯಾಚ್ ಟೆಸ್ಟ್ ಅಥವಾ ಮೊಣಕೈ ಭಾಗಕ್ಕೆ ಕೊಂಚ ಪ್ರಮಾಣವನ್ನು ಹಚ್ಚಿ ಒಂದು ಘಂಟೆಯವರೆಗಾದರೂ ಬಿಟ್ಟು ಬಳಿಕ ಈ ಭಾಗದಲ್ಲಿ ಯಾವುದೇ ಚಿಕ್ಕ ಗುಳ್ಳೆಗಳು ಅಥವಾ ಉರಿ ಕಾಣಿಸಿಕೊಳ್ಳಲಿಲ್ಲ ಎಂದು ಖಾತ್ರಿ ಪಡಿಸಿಕೊಳ್ಳಿ.

8. ವಯಸ್ಸಿನ ಪ್ರಭಾವವನ್ನು ನಿಧಾನವಾಗಿಸಲು:

ಲೋಳೆಸರ ಮತ್ತು ಮೊಟ್ಟೆಯ ಬಿಳಿಭಾಗ ಎರಡೂ ಚರ್ಮದಲ್ಲಿ ಕೊಲ್ಯಾಜೆನ್ ಪ್ರಮಾಣವನ್ನು ಹೆಚ್ಚಿಸುವ ಗುಣವಿದೆ ಹಾಗೂ ಚರ್ಮದ ಸೆಳೆತದ ಗುಣವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ತ್ವಚೆಯಲ್ಲಿ ಮೂಡಿರುವ ನೆರಿಗೆಗಳು ಇಲ್ಲವಾಗಿ ವೃದ್ದಾಪ್ಯದ ಪ್ರಭಾವ ನಿಧಾನವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು
ಎರಡು ದೊಡ್ಡ ಚಮಚ ಲೋಳೆಸರ
ಒಂದು ದೊಡ್ಡ ಚಮಚ ಮೊಟ್ಟೆಯ ಬಿಳಿಭಾಗ

ಯಾರಿಕಾ ವಿಧಾನ:
ಎರಡೂ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

English summary

Say Goodbye To All Skin Problems With These ingredients

Are you looking for a complete solution for some of your common skin problems? Then you are at the right place. This article will guide you on how to use some of our natural kitchen ingredients as a mask for combating common skin issues like blackheads, oily skin, acne, ageing etc.Our skin is prone to the above issues due to factors like pollution, harmful UV rays of the sun, excess smoking and drinking, lifestyle etc.
X
Desktop Bottom Promotion