For Quick Alerts
ALLOW NOTIFICATIONS  
For Daily Alerts

ಮುಖದ ಅಂದವನ್ನು ಹೆಚ್ಚಿಸಲು 'ಕುಂಬಳಕಾಯಿ ಫೇಶಿಯಲ್'! ಪ್ರಯತ್ನಿಸಿ ನೋಡಿ

|

ಮಾನವ ಸೌಂದರ್ಯಕ್ಕೆ ಕೊಡುವಷ್ಟು ಮಹತ್ವ ಬೇರೆ ಯಾವುದಕ್ಕೂ ಕೊಡಲ್ಲ. ಕೆಲವೊಂದು ಕಡೆಗಳಲ್ಲಿ ಸೌಂದರ್ಯವೇ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಮಹಿಳೆಯರು ತಮ್ಮ ಸೌಂದರ್ಯ ಕಾಪಾಡಲು ಹೆಚ್ಚು ಕಾಳಜಿ ವಹಿಸುವರು. ಇದಕ್ಕಾಗಿ ವಾರಕ್ಕೊಮ್ಮೆ ಬ್ಯೂಟಿಪಾರ್ಲರ್ ಹೋಗಿ ಫೇಶಿಯಲ್ ಮಾಡಿಕೊಂಡು ಬರುವರು. ಆದರ ಇದಕ್ಕೆ ದುಬಾರಿ ಹಣ ತೆರಬೇಕಾಗುತ್ತದೆ. ಇದರ ಬದಲು ಮನೆಯಲ್ಲೇ ತಯಾರಿಸಿದ ಕೆಲವೊಂದು ಫೇಸ್ ಪ್ಯಾಕ್ ಗಳಿಂದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ತ್ವಚೆಯ ಸೌಂದರ್ಯ ವೃದ್ಧಿಸಬಹುದು.

ನೀವು ಹಣ್ಣುಗಳು ಹಾಗೂ ತರಕಾರಿಗಳಿಂದ ಮಾಡಿದ ಫೇಶಿಯಲ್ ನ್ನು ಬ್ಯೂಟಿಪಾರ್ಲರ್ ಗಳಲ್ಲಿ ಬಳಸಿರಬಹುದು. ಆದರೆ ಇದರಲ್ಲಿ ರಾಸಾಯನಿಕಗಳು ಹೆಚ್ಚು. ಇದರ ಬಳಿಕ ನೈಸರ್ಗಿದತ್ತವಾದ ಹಣ್ಣು ಹಾಗೂ ತರಕಾರಿಗಳನ್ನು ಬಳಸಿಕೊಂಡು ಫೇಶಿಯಲ್ ಮಾಡಿಕೊಳ್ಳಿ. ಕುಂಬಳಕಾಯಿ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಇದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ. ತ್ವಚೆಗೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಕುಂಬಳಕಾಯಿಯಲ್ಲಿ ವಿಟಮಿನ್ ಎ, ಸಿ ಮತ್ತು ಇ ಮಾತ್ರವಲ್ಲದೆ ಆ್ಯಂಟಿಆಕ್ಸಿಡೆಂಟ್ ಕೂಡ ಇದೆ. ಕುಂಬಳಕಾಯಿ ಫೇಶಿಯಲ್ ಬಗ್ಗೆ ತಿಳಿಯಲು ಮುಂದಕ್ಕೆ ಓದಿಕೊಳ್ಳಿ.

ಸ್ಕ್ರಬ್

ಸ್ಕ್ರಬ್

ಬೇಕಾಗುವ ಸಾಮಗ್ರಿಗಳು

*¼ ಕಪ್ ಕುಂಬಳಕಾಯಿ

*2 ಚಮಚ ಸಕ್ಕರೆ

*2 ಚಮಚ ಕಾಫಿ ಹುಡಿ

*1 ಚಮಚ ಶುಂಠಿ

ಕುಂಬಳಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದಕ್ಕೆ ಸಕ್ಕರೆ ಹಾಗೂ ಕಾಫಿ ಹುಡಿ ಬೆರೆಸಿದಾಗ ಇದು ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು. ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ನಿಸ್ತೇಜ ಚರ್ಮಕ್ಕೆ ಇದು ಸರಿಪಡಿಸುವುದು.

ವಿಧಾನ

ವಿಧಾನ

ಕುಂಬಳಕಾಯಿ ತಿರುಳನ್ನು ರುಬ್ಬಿ ಪೇಸ್ಟ್ ಮಾಡಿ. ಇದಕ್ಕೆ ಸಕ್ಕರೆ ಮತ್ತು ಕಾಫಿ ಹುಡಿ ಹಾಕಿ. ತಾಜಾ ಶುಂಠಿ ತುರಿದುಕೊಳ್ಳಿ ಮತ್ತು ಇದನ್ನು ಕೂಡ ಬೆರೆಸಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ನಿಮ್ಮ ಬೆರಳುಗಳಿಗೆ ತೆಗೆದು ಸ್ವಚ್ಛಗೊಳಿಸಿದ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಇದರ ಬಳಿಕ ನಿಧಾನವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಕೆಲವು ನಿಮಿಷ ಮಸಾಜ್ ಮಾಡಿದ ಬಳಿಕ ಅಂತಿಮವಾಗಿ ಉಗುರುಬೆಚ್ಚಗಿನ ನೀರಿನಿಂದ ತೊಳೆದು ಒರೆಸಿಕೊಳ್ಳಿ.

2. ಸ್ಕ್ರಬ್

2. ಸ್ಕ್ರಬ್

*2 ಚಮಚ ಕುಂಬಳಕಾಯಿ ರಸ

*2 ಚಮಚ ಅಕ್ರೋಟ ಹುಡಿ

*1 ಚಮಚ ಜೇನುತುಪ್ಪ

*1 ಚಮಚ ಮೊಸರು

ಕುಂಬಳಕಾಯಿ ರಸ, ಅಕ್ರೋಟ ಹುಡಿ, ಜೇನುತುಪ್ಪ ಮತ್ತು ಮೊಸರನ್ನು ಜತೆಯಾಗಿ ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕುವುದು. ಜೇನುತುಪ್ಪವು ಚರ್ಮದಲ್ಲಿ ಮೊಶ್ಚಿರೈಸರ್ ಉಳಿಸಿ, ಚರ್ಮವು ತೇವಾಂಶದಿಂದ ಇರುವಂತೆ ಮಾಡುವುದು.

ವಿಧಾನ

ವಿಧಾನ

ಕುಂಬಳಕಾಯಿ ರಸ, ಅಕ್ರೋಟ ಹುಡಿ, ಜೇನುತುಪ್ಪ ಮತ್ತು ಮೊಸರನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಕೆಲವು ನಿಮಿಷ ಕಾಲ ಸ್ಕ್ರಬ್ ಮಾಡಿ. 15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

ಎರಡನೇ ಹಂತ: ಮಾಸ್ಕ್

ಎರಡನೇ ಹಂತ: ಮಾಸ್ಕ್

*ಒಣಚರ್ಮಕ್ಕೆ

*ಬೇಕಾಗುವ ಸಾಮಗ್ರಿಗಳು

*½ ಕಪ್ ಕುಂಬಳಕಾಯಿ

*½ ಕಪ್ ಮೊಸರು

*1 ಚಮಚ ಜೇನುತುಪ್ಪ

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲದ ಕಿತ್ತುಹಾಕುವ ಗುಣ ಮತ್ತು ಜೇನುತುಪ್ಪದ ತೇವಾಂಶ ನೀಡುವ ಗುಣವು ಒಣಚರ್ಮದ ಚಿಕಿತ್ಸೆಗೆ ಒಳ್ಳೆಯದು ಮತ್ತು ಇದು ಮೊಶ್ಚಿರೈಸ್ ಮಾಡುವುದು.

ವಿಧಾನ

ವಿಧಾನ

ಕುಂಬಳಕಾಯಿ ರುಬ್ಬಿಕೊಂಡು ಅದಕ್ಕೆ ಮೊಸರು ಹಾಕಿ. ಇದಕ್ಕೆ ಜೇನುತುಪ್ಪ ಹಾಕಿಕೊಂಡು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕಣ್ಣಿನ ಜಾಗ ಬಿಟ್ಟು ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆದು ಮುಖ ಒರೆಸಿಕೊಳ್ಳಿ.

 ಚರ್ಮ ಬಿಳಿಯಾಗಲು

ಚರ್ಮ ಬಿಳಿಯಾಗಲು

ಬೇಕಾಗುವ ಸಾಮಗ್ರಿಗಳು

*2 ಚಮಚ ಕುಂಬಳಕಾಯಿ ರಸ

*¼ ಜಾಯಿಕಾಯಿ

*1 ಚಮಚ ಜೇನುತುಪ್ಪ

*1 ಚಮಚ ಆ್ಯಪಲ್ ಸೀಡರ್ ವಿನೇಗರ್

*ಕುಂಬಳಕಾಯಿಯಲ್ಲಿ ಕಿಣ್ವಗಳು ಮತ್ತು ಆಲ್ಫಾ ಹೈಡ್ರಾಕ್ಸಿ ಆಮ್ಲಗಳಿದ್ದು, ಇದು ಕೋಶಗಳ ಪರಿವರ್ತನೆಗೆ ನೆರವಾಗಿ, ನಯವಾದ ಚರ್ಮ ನೀಡುವುದು. ಜಾಯಿಕಾಯಿ ಮತ್ತು ಜೇನುತುಪ್ಪವು ಚರ್ಮ ಬಿಳಿಗೊಳಿಸುವ ಗುಣ ಹೊಂದಿದೆ.

ತಯಾರಿಸುವುದು ಹೇಗೆ

ಒಂದು ಸ್ವಚ್ಛ ಪಿಂಗಾಣಿ ತೆಗೆದುಕೊಳ್ಳಿ. ಇದಕ್ಕೆ ಕುಂಬಳಕಾಯಿ ರಸ ಮತ್ತು ಜೇನುತುಪ್ಪ ಹಾಕಿ. ಜಾಯಿಕಾಯಿ ಹುಡಿ ಮತ್ತು ಆ್ಯಪಲ್ ಸೀಡರ್ ವಿನೇಗರ್ ಸೇರಿಸಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದನ್ನು ಸ್ವಚ್ಛಗೊಳಿಸಿದ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು ಕೆಲವು ನಿಮಿಷ ಕಾಲ ನಿಧಾನವಾಗಿ ಮಸಾಜ್ ಮಾಡಿ. 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

ಮುಖದಲ್ಲಿ ಮೊಡವೆಯ ಸಮಸ್ಯೆ ಇದ್ದರೆ

ಮುಖದಲ್ಲಿ ಮೊಡವೆಯ ಸಮಸ್ಯೆ ಇದ್ದರೆ

ಒಂದು ಟೀ ಚಮಚ ಕುಂಬಳಕಾಯಿಯ ಪ್ಯೂರಿಗೆ ಒಂದು ಟೀ ಚಮಚ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಇದನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಬೇಕು. ನಂತರ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದರ ಪ್ರಯೋಗದಿಂದ ಗಣನೀಯ ಬದಲಾವಣೆಯನ್ನು ಗಮನಿಸಬಹುದಾಗಿದೆ.

ಜಿಡ್ಡಿನ ತ್ವಚೆಯ ಸಮಸ್ಯೆಗೆ

ಜಿಡ್ಡಿನ ತ್ವಚೆಯ ಸಮಸ್ಯೆಗೆ

ಕುಂಬಳಕಾಯಿಯ ರಸ (ಪ್ಯುರಿ) ಒಂದು ಟೇಬಲ್ ಚಮಚ ಇದಕ್ಕೆ ಒಂದು ಟೀ ಚಮಚ ಸೇಬಿನ ಹಣ್ಣಿನ ಪರಿಮಳವಿರುವ ವಿನೇಗರ್ ಅಥವಾ ನಿಂಬೆ ಹಣ್ಣಿನ ರಸ. ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ಇದನ್ನು ಮುಖದ ಮೇಲೆ ಹಚ್ಚಬೇಕು. ನಿಂಬೆ ರಸವು ಟೋನರ್ ನಂತೆ ಕಾರ್ಯ ನಿರ್ವಹಿಸುತ್ತದೆ ಇದು ಚರ್ಮದ ಪರಿಚಲನ ಕ್ರಿಯೆಗಳನ್ನು ಉತ್ತೇಜಿಸುತ್ತದೆ ಮತ್ತು ಚರ್ಮದ ಪಿಎಚ್ ಮಟ್ಟವನ್ನು ಹೆಚ್ಚಿಸುತ್ತದೆ.

ಮುಖದ ಕಾಂತಿಯನ್ನು ಹೆಚ್ಚಿಸಲು

ಮುಖದ ಕಾಂತಿಯನ್ನು ಹೆಚ್ಚಿಸಲು

ಎರಡು ಚಮಚ ಕುಂಬಳಕಾಯಿ ದ್ರವ್ಯವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಅದಕ್ಕೆ ಎರಡು ಚಮಚ ಮಲಾಯಿ ಕ್ರೀಮ್ ಮತ್ತು ಸ್ವಲ್ಪ ಜೇನನ್ನು ಬೆರೆಸಿ. ಮಲಾಯಿ ಕ್ರೀಮ್ ನಲ್ಲಿ ಹೆಚ್ಚು ಸತ್ವಯುಕ್ತ ಆಲ್ಫಾ-ಹೈಡ್ರಾಕ್ಸಿ ಆಮ್ಲವು ಹೇರಳವಾಗಿದ್ದು, ಚರ್ಮಕ್ಕೆ ಒಳಗಿನಿಂದಲೇ ತೇವಾಂಶ ನೀಡಿ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಮೇಲಿನ ಮಿಶ್ರಣಕ್ಕೆ 4 ಚಮಚ ಸಕ್ಕರೆಯನ್ನು ಬೆರೆಸಿ. ಸಕ್ಕರೆಯಲ್ಲಿರುವ ವಿಶಿಷ್ಟ ಗುಣವು ಚರ್ಮದ ಮೇಲಿರುವ ಸತ್ತ ಜೀವ ಕೋಶಗಳನ್ನು ಹೊರ ಹಾಕುತ್ತದೆ. ಈ ಮಿಶ್ರಣವನ್ನು ಪೇಸ್ಟ್ ಆಗುವವರೆಗೆ ಚೆನ್ನಾಗಿ ಕಲಸಿ ಮುಖಕ್ಕೆ ನಯವಾಗಿ ಹಚ್ಚಿ. ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.

English summary

Pumpkin Facial Can Get You Glowing Skin at Home

The time and the money involved in getting a facial done at the salon can be huge. And nothing can beat a facial done with natural ingredients at home! In this article, we'll guide you on how to do a facial at home with pumpkin. Pumpkin is not only a vegetable that has numerous health benefits, but also works effectively on the skin when applied topically. Along with antioxidants pumpkins also contain Vitamin A, C and E that benefits the skin in several ways.Now let us see how we can do a pumpkin facial at home in just two steps. Read on!
Story first published: Sunday, August 26, 2018, 7:55 [IST]
X
Desktop Bottom Promotion