For Quick Alerts
ALLOW NOTIFICATIONS  
For Daily Alerts

ಪಪ್ಪಾಯಿ ಫೇಸ್‌ಪ್ಯಾಕ್ ಬಳಸಿ ಹೊಳೆಯುವ ತ್ವಚೆ ನಿಮ್ಮದಾಗಿಸಿ

|

ನಮ್ಮಲ್ಲಿ ಹಲವರು ಪಪ್ಪಾಯಿಯನ್ನು ಇಷ್ಟಪಡುತ್ತಾರೆ ಮತ್ತು ಕೆಲವರು ಇಷ್ಟಪಡುವುದಿಲ್ಲ, ಆದರೆ ನಮ್ಮ ಚರ್ಮವು ಪಪ್ಪಾಯವನ್ನು ಪ್ರೀತಿಸುತ್ತಿದೆ. ಏಕೆಂದರೆ ಮುಖ್ಯವಾಗಿ ಇದು ಜೈವಿಕ ಯೋಗವಾಹಕವನ್ನು(ಎನ್ ಝೈಮ್) ಮತ್ತು ಫೈಟೊ ಕೆಮಿಕಲ್ ಗಳನ್ನು ಒಳಗೊಂಡಿರುತ್ತದೆ.

ಚರ್ಮದ ಮೇಲೆ ಮೂಡಿರುವ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಕಡಿಮೆಗೊಳಿಸುತ್ತದೆ. ಆದುದರಿಂದ ಪಪ್ಪಾಯಿಯು ಜನಪ್ರಿಯವಾಗಿ 'ದೇವದೂತರ ಹಣ್ಣು' ಎಂದು ಕರೆಯಲ್ಪಡುತ್ತದೆ.

ಪಪ್ಪಾಯಿಯಿಂದ ಪಡೆಯಿರಿ ಕಾಂತಿಯುತ ತ್ವಚೆ

ಪಪ್ಪಾಯವು ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ, ಅದು ದೇಹ ವ್ಯವಸ್ಥೆಯನ್ನು ಸೂಕ್ತವಾಗಿ ಇರಿಸಿಕೊಳ್ಳುತ್ತದೆ ಹಾಗೂ ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿದೆ, ಪಪ್ಪಾಯವನ್ನು ಫೇಸ್ ಪ್ಯಾಕ್ ರೂಪದಲ್ಲಿ ಬಳಸಿದಾಗ ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಪಪ್ಪಾಯವು ಪೇಪೈನ್ ಎಂಬ ಪ್ರಮುಖ ಜೈವಿಕ ಯೋಗವಾಹಕವನ್ನು(ಎನ್ ಝೈಮ್) ಹೊಂದಿದೆ. ಇದು ಎಫ್ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸಿ ಹಾನಿಗೊಳಗಾದ ಚರ್ಮವನ್ನು ಹೊಳಪು ಮಾಡಲು ಸಹಾಯ ಮಾಡುತ್ತದೆ. ಚರ್ಮದ ಮೇಲಿನ ರಂಧ್ರಗಳಲ್ಲಿ ತುಂಬಿದ ಕೊಳೆ ಮತ್ತು ಚರ್ಮವು ಎಣ್ಣೆಯುಕ್ತವಾಗಲು ಕಾರಣವಾಗುವ ಮೇದೋಗ್ರಂಥಿಗಳ ಸ್ರಾವವನ್ನು ತೆಗೆದುಹಾಕುತ್ತದೆ.

ಹಣ್ಣುಗಳು ನಿಮ್ಮ ಚರ್ಮದ ಆರೋಗ್ಯಕ್ಕೆ ಉತ್ತಮವಾದ ಪ್ರಮುಖ ಜೀವಸತ್ವಗಳನ್ನು ಹೊಂದಿರುತ್ತದೆ, ನೀವು ಇದನ್ನು ಇತರ ನೈಸರ್ಗಿಕ ಉತ್ಪನ್ನಗಳೊಂದಿಗೆ ಸಂಯೋಜಿಸಿದರೆ ನಿಮ್ಮ ಚರ್ಮಕ್ಕೆ ಎಷ್ಟು ಒಳ್ಳೆಯದು ಮತ್ತು ನಿಮ್ಮ ಚರ್ಮವು ಎಷ್ಟು ಸಂತೋಷಗೊಳ್ಳಬಹುದು ಎಂದು ತಿಳಿದಿದ್ದೀರಾ?

ಇಲ್ಲವಾದರೆ, ಇಂದು ನಿಮ್ಮ ಚರ್ಮಕ್ಕೆ ಉತ್ತಮವಾದ ಐದು ಪರಿಣಾಮಕಾರಿ ಪಪ್ಪಾಯಿ ಆಧಾರಿತ ಫೇಸ್ ಪ್ಯಾಕ್ ಗಳ ಬಗ್ಗೆ ನಾವು ತಿಳಿಸುತ್ತೇವೆ. ಇದನ್ನು ಪ್ರಯತ್ನಿಸಿ, ಖಂಡಿತವಾಗಿ ನೀವು ವ್ಯತ್ಯಾಸವನ್ನು ನೋಡುತ್ತೀರಿ. ನಿಮಗಾಗಿ ಐದು ಪರಿಣಾಮಕಾರಿ ಪಪ್ಪಾಯಿ ಫೇಸ್ ಪ್ಯಾಕ್ ಗಳು ​​ಇಲ್ಲಿವೆ.

 1. ಕಾಂತಿಯುಕ್ತ ಚರ್ಮಕ್ಕಾಗಿ ಶ್ರೀಗಂಧ ಮತ್ತು ಪಪ್ಪಾಯ:

1. ಕಾಂತಿಯುಕ್ತ ಚರ್ಮಕ್ಕಾಗಿ ಶ್ರೀಗಂಧ ಮತ್ತು ಪಪ್ಪಾಯ:

ಶ್ರೀಗಂಧವು ಚರ್ಮವನ್ನು ಬಿಳಿಮಾಡುವ ಗುಣಗಳನ್ನು ಹೊಂದಿದೆ. ಇದು ಚರ್ಮದಿಂದ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಕಲೆಮುಕ್ತವಾಗಿಸುತ್ತದೆ. ಶ್ರೀಗಂಧದ ಆಂಟಿ ಬ್ಯಾಕ್ಟೀರಿಯ ಮತ್ತು ಆಂಟಿಸ್ಸೆಪ್ಟಿಕ್ ಗುಣಲಕ್ಷಣಗಳು ಮೊಡವೆ ಮತ್ತು ಮೊಡವೆಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮವನ್ನು ಹೊಳಪು ಮಾಡುತ್ತದೆ. ಎಣ್ಣೆಯುಕ್ತ ಚರ್ಮ ಹೊಂದಿದವರು ಈ ಪ್ಯಾಕ್ ಅನ್ನು ಬಳಸಬಹುದು.

ಪದಾರ್ಥಗಳು:

• 1 ಚಮಚ ಶ್ರೀಗಂಧದ ಪುಡಿ / ಪೇಸ್ಟ್.

* ಹಿಸುಕಿದ ಪಪ್ಪಾಯ 3 ಟೇಬಲ್ ಚಮಚ

ಬಳಸುವುದು ಹೇಗೆ:

• ಬಟ್ಟಲಿನಲ್ಲಿ, 1 ಚಮಚ ಶ್ರೀಗಂಧದ ಪುಡಿ / ಪೇಸ್ಟ್ ಮತ್ತು 3 ಟೇಬಲ್ ಚಮಚ ಹಿಸುಕಿದ ಪಪ್ಪಾಯಿ ಸೇರಿಸಿ. ಮೃದು ಮಿಶ್ರಣವಾಗುವವರೆಗೆ ಕಲಸಿಕೊಳ್ಳಿ

• ನಿಮ್ಮ ಮುಖ ಮತ್ತು ಕತ್ತಿನ ಮೇಲೆ ಈ ಮಿಶ್ರಣವನ್ನು ಸರಿಯಾಗಿ ಹಚ್ಚಿಕೊಳ್ಳಿ.

• ನಿಮ್ಮ ಮುಖದ ಮೇಲೆ ಪ್ಯಾಕ್ ಅನ್ನು 20 ನಿಮಿಷಗಳ ಕಾಲ ಬಿಡಿ.

• ತಣ್ಣನೆಯ ನೀರಿನಿಂದ ತೊಳೆಯಿರಿ.

• ಕಾಂತಿಯುಕ್ತ ಚರ್ಮವನ್ನು ಪಡೆಯಲು ನಿಯಮಿತವಾಗಿ ಇದನ್ನು ಬಳಸಿರಿ

 2 . ಶುಷ್ಕ ತ್ವಚೆಗಾಗಿ ಜೇನು,ಹಾಲು ಮತ್ತು ಪಪ್ಪಾಯ:

2 . ಶುಷ್ಕ ತ್ವಚೆಗಾಗಿ ಜೇನು,ಹಾಲು ಮತ್ತು ಪಪ್ಪಾಯ:

ಜೇನು ನೈಸರ್ಗಿಕ ಹ್ಯೂಮಕ್ಟಂಟ್ (ತೇವಾಂಶವನ್ನು ಹಿಡಿದಿಡುವ ಗುಣ ) ಎಂದು ಕರೆಯಲ್ಪಡುತ್ತದೆ, ಅಂದರೆ ಇದು ಗಾಳಿಯಿಂದ ತೇವಾಂಶವನ್ನು ಸೆಳೆದು, ಜಲಸಂಚಯನಕ್ಕೆ ಅಗತ್ಯವಿರುವ ಪದರಗಳಿಗೆ ತೇವಾಂಶವನ್ನು ನೀಡುತ್ತದೆ. ಜೇನು ಆಂಟಿ ಬ್ಯಾಕ್ಟೀರಿಯ ಮತ್ತು ಆಂಟಿ ಓಕ್ಸಿಡಂಟ್ ಲಕ್ಷಣಗಳನ್ನು ಹೊಂದಿದೆ. ಇದು ಮೊಡವೆ ನಿಯಂತ್ರಿಸಲು ಮತ್ತು ವಯಸ್ಸಾದಂತೆ ಕಾಣುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಜೇನು ಮಾಯಿಶ್ಚರೈಸರ್ ಎಂದು ಪರಿಗಣಿಸಲ್ಪಡುತ್ತದೆ. ಹಾಲು, ಚರ್ಮವನ್ನು ಪ್ರಕಾಶಮಾನವಾಗಿ ಮಾಡಲು ಸಹಾಯ ಮಾಡುವ ಗುಣಗಳನ್ನು ಹೊಂದಿರುತ್ತದೆ ಮತ್ತು ಇದು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.

ಪದಾರ್ಥಗಳು:

• ½ ಕಪ್ ಹಿಸುಕಿದ ಪಪ್ಪಾಯಿ.

• ಜೇನುತುಪ್ಪದ 1 ಚಮಚ.

• ಹಾಲು 2 ಚಮಚಗಳು.

ಬಳಸುವುದು ಹೇಗೆ:

• ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಬಟ್ಟಲಿನಲ್ಲಿ ಮಿಶ್ರಮಾಡಿ

• ನಿಮ್ಮ ಮುಖ ಮತ್ತು ಕತ್ತಿನ ಮೇಲೆ ಈ ಮಿಶ್ರಣವನ್ನು ಹಚ್ಚಿ

• ನಿಮ್ಮ ಮುಖದ ಮೇಲೆ ಪ್ಯಾಕ್ ಅನ್ನು 20 ನಿಮಿಷಗಳ ಕಾಲ ಬಿಡಿ.

• ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ.

• ಮೃದು ಚರ್ಮವನ್ನು ಪಡೆಯಲು ವಾರದಲ್ಲಿ ಒಂದರಿಂದ ಎರಡು ಬಾರಿ ಈ ಪ್ಯಾಕನ್ನು ಬಳಸಿ

3. ಮೊಡವೆಗಳಿಗೆ ಜೇನು, ನಿಂಬೆ, ಮತ್ತು ಪಪ್ಪಾಯ:

3. ಮೊಡವೆಗಳಿಗೆ ಜೇನು, ನಿಂಬೆ, ಮತ್ತು ಪಪ್ಪಾಯ:

ನಿಂಬೆಹಣ್ಣುಗಳು ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲದಿಂದ ಕೂಡಿವೆ, ಇದು ಚರ್ಮದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿನ ಆಂಟಿ ಬ್ಯಾಕ್ಟೀರಿಯ ಗುಣಲಕ್ಷಣಗಳು ಮೊಡವೆ ಮತ್ತು ಕಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಪಪ್ಪಾಯಿ ಮತ್ತು ನಿಂಬೆ, ಚರ್ಮದಲ್ಲಿನ ರಂಧ್ರಗಳಲ್ಲಿ ಕೂಡಿಕೊಂಡ ಕೊಳಕನ್ನು ಹೊರಹಾಕುತ್ತದೆ ಮತ್ತು ಚರ್ಮದ ಪಿ ಹೆಚ್ ಮಟ್ಟವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

ಪದಾರ್ಥಗಳು:

• ½ ಕಪ್ ಹಿಸುಕಿದ ಪಪ್ಪಾಯಿ.

• 1 ಚಮಚ ಜೇನುತುಪ್ಪ.

• 1 ಟೀ ಚಮಚ ನಿಂಬೆ ರಸ.

ಬಳಸುವುದು ಹೇಗೆ:

• ಎಲ್ಲಾ ಪದಾರ್ಥಗಳನ್ನು ಶುದ್ಧ ಬಟ್ಟಲಿನಲ್ಲಿ ತೆಗೆದುಕೊಂಡು ಮೃದುವಾದ ಮಿಶ್ರಣ ಮಾಡಿಕೊಳ್ಳಿ

• ಈಗ, ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ 15-20 ನಿಮಿಷಗಳ ಕಾಲ ಬಿಡಿ.

• ತಣ್ಣನೆಯ ನೀರಿನಿಂದ ಅದನ್ನು ತೊಳೆದುಕೊಳ್ಳಿ.

• ಕಲೆರಹಿತ ಚರ್ಮಕ್ಕಾಗಿ 3 ರಿಂದ 4 ದಿನಗಳ ಅಂತರದಲ್ಲಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

 4.ತ್ವಚೆಯ ರಂಧ್ರಗಳನ್ನು ಬಿಗಿಗೊಳಿಸಲು ಎಗ್ ವೈಟ್ ಮತ್ತು ಪಪ್ಪಾಯ:

4.ತ್ವಚೆಯ ರಂಧ್ರಗಳನ್ನು ಬಿಗಿಗೊಳಿಸಲು ಎಗ್ ವೈಟ್ ಮತ್ತು ಪಪ್ಪಾಯ:

ಮೊಟ್ಟೆಯ ಬಿಳಿಭಾಗವು ನೈಸರ್ಗಿಕ ಸಂಕೋಚಕ ಗುಣಗಳನ್ನು ಹೊಂದಿರುತ್ತದೆ, ಅದು ರಂಧ್ರಗಳನ್ನು ಕುಗ್ಗಿಸಿ ಅವುಗಳು ಕಾಣುವುದನ್ನು ಕಡಿಮೆ ಮಾಡುತ್ತದೆ.

ಇದು ಮುಖದ ಮೇಲೆ ಮೂಡುವ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಬಿಗಿಯಾಗಿ ಮಾಡುತ್ತದೆ.

ಪದಾರ್ಥಗಳು:

• ½ ಕಪ್ ಹಿಸುಕಿದ ಪಪ್ಪಾಯಿ.

• 1 ಮೊಟ್ಟೆಯ ಬಿಳಿ ಭಾಗ.

ಬಳಸುವುದು ಹೇಗೆ:

• ಬಟ್ಟಲಿನಲ್ಲಿ, ಮೊಟ್ಟೆಯ ಬಿಳಿ ಭಾಗವನ್ನು ಚೆನ್ನಾಗಿ ನೊರೆಯಾಗುವ ತನಕ ಕಲಸಿಕೊಳ್ಳಿ. ತದನಂತರ ಹಿಸುಕಿದ ಪಪ್ಪಾಯಿಯನ್ನು ಅದರೊಂದಿಗೆ ಸೇರಿಸಿ.

• ಸರಿಯಾಗಿ ಮಿಶ್ರಮಾಡಿ, ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕತ್ತಿನ ಮೇಲೆ ಹಚ್ಚಿರಿ

• 15-20 ನಿಮಿಷಗಳ ಕಾಲ ಮಿಶ್ರಣವನ್ನು ಬಿಡಿ.

• ತಣ್ಣನೆಯ ನೀರಿನಿಂದ ಅದನ್ನು ತೊಳೆಯಿರಿ.

• ಒಂದು ವಾರದ ನಂತರ ಪುನರಾವರ್ತಿಸಿ.

 5. ಎಣ್ಣೆಯುಕ್ತ ಚರ್ಮಕ್ಕಾಗಿ ಕಿತ್ತಳೆ ಮತ್ತು ಪಪ್ಪಾಯ:

5. ಎಣ್ಣೆಯುಕ್ತ ಚರ್ಮಕ್ಕಾಗಿ ಕಿತ್ತಳೆ ಮತ್ತು ಪಪ್ಪಾಯ:

ಕಿತ್ತಳೆ ಒಂದು ನೈಸರ್ಗಿಕ ಸಂಕೋಚಕವಾಗಿದ್ದು ಅದು ಮುಖದ ಮೇಲೆ ಇರುವ ಎಣ್ಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಹೊಳಪಾಗಿಸುತ್ತದೆ. ಕಿತ್ತಳೆಯಲ್ಲಿ ಕಂಡುಬರುವ ನೈಸರ್ಗಿಕ ಲಕ್ಷಣಗಳು, ಕಲೆಗಳನ್ನು ತೊಡೆದುಹಾಕಿ ಚರ್ಮವನ್ನು ಪ್ರಕಾಶಮಾನವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಪದಾರ್ಥಗಳು:

• ½ ಕಪ್ ಹಿಸುಕಿದ ಪಪ್ಪಾಯಿ.

• 5-6 ಕಿತ್ತಳೆ ಎಸಳು.

ಬಳಸುವುದು ಹೇಗೆ:

• ಕಿತ್ತಳೆಯಿಂದ ರಸವನ್ನು ಹಿಸುಕಿಕೊಳ್ಳಿ ಮತ್ತು ಹಿಸುಕಿದ ಪಪ್ಪಾಯಿ ಹೊಂದಿರುವ ಬಟ್ಟಲಿಗೆ ಸೇರಿಸಿ. ಚೆನ್ನಾಗಿ ಮಿಶ್ರಮಾಡಿ.

• ನಿಮ್ಮ ಮುಖ ಮತ್ತು ಕತ್ತಿನ ಮೇಲೆ ಮಿಶ್ರಣವನ್ನು ಅನ್ವಯಿಸಿ 15 ನಿಮಿಷಗಳ ಕಾಲ ಅದನ್ನು ಬಿಡಿ.

• ತಣ್ಣನೆಯ ನೀರಿನಿಂದ ಅದನ್ನು ತೊಳೆಯಿರಿ.

ಪ್ರಕಾಶಮಾನವಾದ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ವಾರದಲ್ಲಿ ಎರಡು ಬಾರಿ ಪುನರಾವರ್ತಿಸಿ.

ಫಲಿತಾಂಶವನ್ನು ನೀವು ಖಂಡಿತಾ ಇಷ್ಟಪಡುವಿರಿ. ನೀವು ಪಪ್ಪಾಯ ಇಷ್ಟಪಡದಿದ್ದರೆ ನಿಮ್ಮ ತಾಯಿ ನಿಮ್ಮನ್ನು ತಿನ್ನಲು ಒತ್ತಾಯಿಸುತ್ತಾರೆ, ಇದನ್ನು ಮುಖದ ಪ್ಯಾಕ್ ಆಗಿ ಮಾಡಿಕೊಂಡು ಅದನ್ನು ನಿಮ್ಮ ಚರ್ಮಕ್ಕೆ ಆಹಾರವಾಗಿ ಕೊಡಿ, ಈ ರೀತಿ ನಿಮ್ಮ ತಾಯಿ ಮತ್ತು ನಿಮ್ಮ ಚರ್ಮ ಇಬ್ಬರೂ ಸಂತೋಷಪಡಬಹುದು .

Read more about: papaya facepack skin care
English summary

ಪಪ್ಪಾಯಿ ಫೇಸ್‌ಪ್ಯಾಕ್ ಬಳಸಿ ಹೊಳೆಯುವ ತ್ವಚೆ ನಿಮ್ಮದಾಗಿಸಿ

When it comes to taking care of skin, natural products are the best. There are different fruits that help you get that glow on your face, but today we will be talking about the benefits of papaya and how you can use it as a face pack.
X
Desktop Bottom Promotion