For Quick Alerts
ALLOW NOTIFICATIONS  
For Daily Alerts

ಹೊಳೆಯುವ ಕಾಂತಿಯುಕ್ತ ತ್ವಚೆಗಾಗಿ ಅಲೋವೆರಾ ಫೇಸ್ ಮಾಸ್ಕ್

|

ಲೋಳೆಸರ ಒಂದು ಬಹುಪಯೋಗಿ ಸಸ್ಯವಾಗಿದ್ದು, ಇದು ಭಾರತದಲ್ಲಿ ಮಾತ್ರವಲ್ಲದೇ, ಪ್ರಪಂಚದಾದ್ಯಂತ ಒಂದು ಅತ್ಯುತ್ತಮ ಮನೆ ಔಷಧಿಯ ಮೂಲವೆಂದು ಅನುಮೋದಿಸಲ್ಪಟ್ಟಿದೆ. ಈ ಸಸ್ಯದ ಔಷಧೀಯ ಚಿಕಿತ್ಸಾತ್ಮಕ ಗುಣಗಳು ಶರೀರದ ಒಳಗೂ ಮತ್ತು ಹೊರಗೂ ಉಪಯುಕ್ತವಾಗಿದ್ದು, ಈ ಕಾರಣದಿಂದಾಗಿ ಇದು ಅನೇಕ ಸಾವಯವ ದ್ರಾವಣಗಳ ತಯಾರಕರ ಪಾಲಿಗೆ ಒಂದು ವರದಾನದಂತಿದೆ.

ಆರೋಗ್ಯಕ್ಕೆ ಸಂಬಂಧಿಸಿದಂತೆ ಲೋಳೆಸರದ ನಾನಾ ಬಗೆಯ ಉಪಯೋಗಗಳನ್ನು ಪಟ್ಟಿ ಮಾಡಿದ್ದು, ಇವು ನಿಮಗೆ ಖಂಡಿತವಾಗಿಯೂ ಕುತೂಹಲಕಾರಿಯಾಗಿರುತ್ತದೆ. ಕೈಂಗಟಿಕೊಳ್ಳುವಂತಹ ಲೋಳೆ ಇರುವಂತಹ ಹಸಿರು ಬಣ್ಣದ ಎಲೆ ಅಲೊವೇರಾದ ಅದು ಕಂಡುಬರುವುದಕ್ಕಿಂತ ಹೆಚ್ಚಿನ ಗುಣಗಳನ್ನು ಹೊಂದಿದೆ. ಅಲೊವೇರಾವನ್ನು ಗಾಯ, ಸುಟ್ಟುಗಾಯ ಮತ್ತು ಚರ್ಮದ ಸೋಂಕಿಗೆ ಬಳಸಲಾಗುತ್ತದೆ. ಅಲೊವೇರಾ ಜ್ಯೂಸ್ ನಲ್ಲಿ ದೇಹಕ್ಕೆ ಅಗತ್ಯವಿರುವ ಅಗಾಧ ಪ್ರಮಾಣದ ಪೌಷ್ಠಿಕಾಂಶ, ಮಿನರಲ್ ಮತ್ತು ವಿಟಮಿನ್ ಗಳಿವೆ.

ಅಲೋ ಜ್ಯೂಸ್ ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗಿದ್ದು, ಇದನ್ನು ದಿನದಲ್ಲಿ ಒಂದು ಸಲ ಕುಡಿಯಬೇಕು. ಅಲೊವೇರಾದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಜ್ಯೂಸ್ ನಲ್ಲಿ ಒಳ್ಳೆಯ ಪ್ರಮಾಣದ ಅಮಿನೋ ಆ್ಯಸಿಡ್ ಮತ್ತು ಫ್ಯಾಟಿ ಆ್ಯಸಿಡ್ ಒಳಗೊಂಡಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದು. ಇಂದಿನ ಲೇಖನದಲ್ಲಿ ಅಲೊವೇರಾ ಬಳಸಿಕೊಂಡು ಮಾಡಿಕೊಳ್ಳಬಹುದಾದ ಸೌಂದರ್ಯ ರೆಸಿಪಿಗಳನ್ನು ತಿಳಿದುಕೊಳ್ಳೋಣ....

ಹೊಳೆಯುವ ಕಾಂತಿಯುಕ್ತ ತ್ವಚೆಗಾಗಿ ಅಲೋವೆರಾ ಫೇಸ್ ಮಾಸ್ಕ್

ಸ್ಕ್ರಬ್‌

ಸ್ಕ್ರಬ್‌

ನಿಮ್ಮ ಮೃತಕೋಶವನ್ನು ಹೊರಹಾಕಿ ಹೊಸ ತ್ವಚೆಯನ್ನು ಸುಧಾರಿಸುವಲ್ಲಿ ಸ್ಕ್ರಬ್ ಸಹಕಾರಿಯಾಗಿದೆ. ಈ ಸ್ಕ್ರಬ್ ಎಲ್ಲಾ ತ್ಚಚೆಗೆ ಅತ್ಯುತ್ತಮವಾಗಿದೆ. ಅಲೊವೇರಾ ಜೆಲ್, ಮೊಸರು ಮತ್ತು ಬ್ರೌನ್ ಅಥವಾ ಬಿಳಿ ಸಕ್ಕರೆಯನ್ನು ತೆಗೆದುಕೊಳ್ಳಿ. ನಿಮ್ಮ ಮುಖಕ್ಕೆ ಹಚ್ಚಿಕೊಂಡು ಸಂಪೂರ್ಣವಾಗಿ ಮಸಾಜ್ ಮಾಡಿಕೊಳ್ಳಿ. ಈ ರೀತಿಯಾಗಿ ಮಸಾಜ್ ಮಾಡುವುದು ಮೃತಕೋಶವನ್ನು ನಿವಾರಿಸುತ್ತದೆ. ತ್ವಚೆಯನ್ನು ಮೃದುಗೊಳಿಸುವಲ್ಲಿ ಅಲೊವೇರಾ ಜೆಲ್ ಸಹಾಯ ಮಾಡುತ್ತದೆ. ಮೊಸರು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ ಅಂತೆಯೇ ಸಕ್ಕರೆಯು ಮೃತಕೋಶವನ್ನು ನಿವಾರಿಸುತ್ತದೆ. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ.

ಮೊಡವೆ ನಿವಾರಣೆಗೆ

ಮೊಡವೆ ನಿವಾರಣೆಗೆ

ಮೊಡವೆಯು ಹೆಚ್ಚು ನೋವುದಾಯಕವಾಗಿದ್ದು ಇದು ಮುಖದ ಸೌಂದರ್ಯವನ್ನು ಕಳೆಗುಂದಿಸುತ್ತದೆ. ಈ ಮಾಸ್ಕ್ ಅನ್ನು ತಯರಿಸಲು ಅಲೊವೇರಾ ಜೆಲ್, ಕೆಲವು ನಟ್‌ಮಗ್ ಪೌಡರ್ ಮತ್ತು ಲಿಂಬೆರಸ ಸಾಕು. ಈ ಎಲ್ಲವನ್ನೂ ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ಹತ್ತು ನಿಮಿಷ ಹಾಗೆಯೇ ಇಟ್ಟು ನಂತರ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಅಲೊವೇರಾ ತ್ವಚೆಯನ್ನು ತಣ್ಣಗಾಗಿಸುತ್ತದೆ ಮತ್ತು ಬ್ಯಾಕ್ಟಿರಿಯಾ ನಿವಾರಣೆಯನ್ನು ಮಾಡುತ್ತದೆ. ಈ ಮಿಶ್ರಣವನ್ನು ತ್ವಚೆಗೆ ಹಚ್ಚಿಕೊಂಡು ಹತ್ತು ನಿಮಿಷ ಹಾಗೆಯೇ ಬಿಡಿ. ನಟ್‌ಮಗ್ ಪೌಡರ್ ಉತ್ಕರ್ಷಣ ನಿರೋಧಿ ಅಂಶಗಳನ್ನು ಹೊಂದಿದೆ. ಇನ್ನು ಲಿಂಬೆ ಬ್ಲೀಚಿಂಗ್ ಅಂಶವನ್ನು ಒಳಗೊಂಡಿದೆ. ಇದು ಕಲೆಯನ್ನು ನಿವಾರಿಸುತ್ತದೆ.

ಒಣ ತ್ವಚೆಗಾಗಿ

ಒಣ ತ್ವಚೆಗಾಗಿ

ನೀವು ನಕ್ಕಾಗ ಅಥವಾ ಮಾತನಾಡುವಾಗ ಒಣತ್ವಚೆಯು ವಿಪರೀತ ನೋವನ್ನುಂಟು ಮಾಡುತ್ತದೆ. ಅಲೊವೇರಾ ಡ್ರೈ ಅಥವಾ ಒಣ ತ್ವಚೆಗೆ ಸೂಕ್ತ ಮದ್ದಾಗಿದೆ. ಅಲೊವೇರಾ ಜೆಲ್ ಅನ್ನು ಆಲೀವ್ ಆಯಿಲ್, ಜೇನು ಮತ್ತು ಸಿಹಿ ಬಾದಾಮಿ ಎಣ್ಣೆಯೊಂದಿಗೆ ಮಿಶ್ರ ಮಾಡಿ. ಇದೆಲ್ಲವನ್ನೂ ಮಿಶ್ರ ಮಾಡಿಕೊಂಡು ತ್ವಚೆಗೆ ಹಚ್ಚಿಕೊಳ್ಳಿ. ಹಾಗೆಯೇ ಮೂವತ್ತು ನಿಮಿಷ ಬಿಡಿ. ನಿಮ್ಮ ತ್ವಚೆಯ ಒಣತ್ವವನ್ನು ತೆಗೆದುಹಾಕಿ ಕೆಲವೇ ನಿಮಿಷಗಳಲ್ಲಿ ತ್ವಚೆಯನ್ನು ಮೃದು ಮತ್ತು ಕಾಂತಿಯುಕ್ತವಾಗಿ ಅಲೊವೇರಾ ಮಾಡುತ್ತದೆ.

ಜಿಡ್ಡಿನ ತ್ವಚೆಗಾಗಿ

ಜಿಡ್ಡಿನ ತ್ವಚೆಗಾಗಿ

ಟೊಮೇಟೊ ರಸ ಮತ್ತು ಮೊಸರು ಹಾಗೂ ಅಲೊವೇರಾ ಜೆಲ್ ಬಳಸಿ ಜಿಡ್ಡಿನ ತ್ವಚೆಯ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಟೊಮೇಟೊ ರಸ ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಕೊಳೆಯನ್ನು ನಿವಾರಿಸುತ್ತದೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಸಿಡ್ ಇದ್ದು ತ್ವಚೆಯನ್ನು ನಯವಾಗಿಸುತ್ತದೆ. ಮೊಡವೆಗಳಿಂದು ಉಂಟಾದ ಕಲೆಯನ್ನು ನಿವಾರಿಸುವಲ್ಲಿ ಈ ಫೇಸ್ ಪ್ಯಾಕ್ ಅತ್ಯುತ್ತಮವಾಗಿದೆ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಂಡು ಮೂವತ್ತು ನಿಮಿಷ ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಸೂಕ್ಷ್ಮ ತ್ವಚೆಗೆ

ಸೂಕ್ಷ್ಮ ತ್ವಚೆಗೆ

ಸೂಕ್ಷ್ಮ ತ್ವಚೆಯಿಂದ ಬಿರುಕು, ಬೇಗ ವಯಸ್ಸಾಗುವುದು, ಹಾಗೆಯೇ ನೆರಿಗೆಗಳು ಉಂಟಾಗಬಹುದು. ಅಲೊವೇರಾ ಮತ್ತು ಪಪ್ಪಾಯವನ್ನು ಬಳಸಿಕೊಂಡು ಈ ಮಾಸ್ಕ್ ತಯಾರಿಸಿ ಸೂಕ್ಷ್ಮ ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಪಪ್ಪಾಯವನ್ನು ಚೆನ್ನಾಗಿ ಕಲಸಿ. ಇದಕ್ಕೆ ಅಲೊವೇರಾ ಜೆಲ್ ಸೇರಿಸಿ. ಇದು ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಮೊಡವೆಯನ್ನು ನಿವಾರಿಸುತ್ತದೆ. ಒಂದು ರೀತಿಯಲ್ಲಿ ಇದು ಬಹುಪಯೋಗಿ ಫೇಸ್ ಮಾಸ್ಕ್ ಆಗಿದೆ.

ಟ್ಯಾನ್ ತ್ವಚೆಯನ್ನು ರಿಪೇರಿ ಮಾಡಲು

ಟ್ಯಾನ್ ತ್ವಚೆಯನ್ನು ರಿಪೇರಿ ಮಾಡಲು

ತ್ವಚೆಯ ಟ್ಯಾನಿಂಗ್ ಹೆಚ್ಚು ಅಪಾಯಕಾರಿಯಾದುದು. ನಿಮ್ಮ ತ್ವಚೆಯ ಟ್ಯಾನಿಂಗ್‌ನಿಂದ ನೀವು ಬೇಗನೇ ವಯಸ್ಸಾದಂತೆ ಕಾಣಿಸಿಕೊಳ್ಳುವಿರಿ. ಟ್ಯಾನಿಂಗ್ ನಿವಾರಣೆಗೆ ನೀವು ಅಲೊವೇರಾ ಜೆಲ್, ಮೊಸರು ಮತ್ತು ಲಿಂಬೆ ರಸವನ್ನು ಬಳಸಿಕೊಳ್ಳಬಹುದು. ಅಲೊವೇರಾ ತ್ವಚೆಗೆ ಮಾಲೀಶ್ ಮಾಡುತ್ತದೆ. ಮೊಸರು ಮತ್ತು ಲಿಂಬೆ ತ್ವಚೆಗೆ ಕಾಂತಿಯನ್ನು ನೀಡುತ್ತದೆ. ಅಂತೆಯೇ ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ. ಲಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್ ಟ್ಯಾನ್ ನಿವಾರಣೆ ಮಾಡಿ ತ್ವಚೆಗೆ ಕಾಂತಿಯನ್ನು ತರುತ್ತದೆ. ನಿಮ್ಮ ತ್ವಚೆಯು ಟ್ಯಾನ್‌ಗೆ ಒಳಗಾದಾಗ ಇದು ಉತ್ತಮ ಪರಿಹಾರವಾಗಿದೆ.

English summary

Overnight Aloe Vera face mask for glowing skin ...

Aloe vera is one of the best ingredients for the skin. You must have heard of this gel being used in many lotions for the face and the body that are available in the markets. You can also use the gel extracted from aloe leaves topically, without mixing it in anything. Pure aloe vera gel has amazing healing properties. It can be used on things like acne, to soothe inflamed skin and to reduce the size of the bumps it forms. Acne can be really painful and it can get really tempting to burst them. Aloe vera gel actually helps remove this urge by cooling down the area.
X
Desktop Bottom Promotion