For Quick Alerts
ALLOW NOTIFICATIONS  
For Daily Alerts

ಸುಂದರವಾಗಿ ಕಾಣಬೇಕೇ? ಸೀಬೆ ಎಲೆಗಳ ಪೇಸ್ಟ್ ದಿನಾ ಹಚ್ಚಿ!

By Hemanth
|

ಬಾಲ್ಯದಲ್ಲಿ ಆಡಿದ ಆಟಗಳು, ಮಾಡಿದ ತಮಾಷೆ, ಕದ್ದು ತಿಂದ ಹಣ್ಣುಗಳು ಎಲ್ಲವೂ ನೆನಪಿರಲೇಬೇಕು. ಇದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳು ತೋಟಗಳಿಗೆ ನುಗ್ಗಿ ಅಲ್ಲಿರುವ ಪೇರಳೆ ಅಥವಾ ಸೀಬೆ ಹಣ್ಣು ಇತ್ಯಾದಿಗಳನ್ನು ಕದಿಯುವುದು ಸಾಮಾನ್ಯ. ಅದರಲ್ಲೂ ಬೇಸಿಗೆ ರಜಾ ಸಮಯದಲ್ಲಿ ಇದು ಹೆಚ್ಚು. ಪೇರಳೆ ಹಣ್ಣು ಕದ್ದು ಅದಕ್ಕೆ ಉಪ್ಪು ಮತ್ತು ಖಾರದಪುಡಿ ಹಾಕಿ ತಿಂದರೆ ಅದರ ರುಚಿಯೇ ಬೇರೆ. ಪೇರಳೆ ಹಣ್ಣು ಹೆಚ್ಚಾಗಿ ಎಲ್ಲಾ ಋತುಗಳಲ್ಲಿಯೂ ಸಿಗುವಂತದ್ದಾಗಿದೆ. ಪೇರಳೆ ಹಣ್ಣು ಆರೋಗ್ಯಕ್ಕೆ ತುಂಬಾ ಆರೋಗ್ಯಕಾರಿ ಎಂದು ನಿಮಗೆ ತಿಳಿದಿದೆಯಾ?

skin care tips in kannada

ಹೌದು, ಪೇರಳೆ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ ಮತ್ತು ಇದು ಚರ್ಮಕ್ಕೆ ಅದ್ಭುತ ಲಾಭ ನೀಡುವುದು. ಪೇರಳೆ ಹಣ್ಣು ಮಾತ್ರವಲ್ಲದೆ, ಅದರ ಎಲೆಗಳು ಕೂಡ ಚರ್ಮದ ಆರೈಕೆಗೆ ತುಂಬಾ ಪರಿಣಾಮಕಾರಿ ಎಂದು ನಿಮಗೆ ತಿಳಿದಿದೆಯಾ? ಪೇರಳೆ ಹಣ್ಣಿನ ಎಲೆಗಳಲ್ಲಿ ಆ್ಯಂಟಿಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಪೇರಳೆ ಹಣ್ಣಿನಲ್ಲಿ ಇರುವಂತಹ ಔಷಧೀಯ ಗುಣಗಳು ಹಲವಾರು ರೀತಿಯ ಕಾಯಿಲೆಗಳನ್ನು ನಿವಾರಣೆ ಮಾಡುವುದು ಮತ್ತು ಚರ್ಮದ ಸಮಸ್ಯೆಗಳಿಗೆ ಇದು ಪರಿಣಾಮಕಾರಿ. ಕಾಂತಿಯುತ ಚರ್ಮ ಪಡೆಯಲು ನಾವು ನೈಸರ್ಗಿಕವಾಗಿ ಇದನ್ನು ಹೇಗೆ ಬಳಸಿಕೊಳ್ಳಬಹುದು ಎಂದು ನೋಡುವ.

ಕಪ್ಪುಕಲೆಗಳಿಗೆ ಚಿಕಿತ್ಸೆ

ಕಪ್ಪುಕಲೆಗಳಿಗೆ ಚಿಕಿತ್ಸೆ

ಕಪ್ಪು ಕಲೆಗಳ ನಿವಾರಣೆ ಮಾಡಲು ಪೇರಳೆ ಹಣ್ಣಿನ ಎಲೆಗಳು ತುಂಬಾ ಪರಿಣಾಮಕಾರಿಯಾಗಿದೆ. ಕಪ್ಪು ಕಲೆಗಳ ನಿವಾರಣೆ ಮಾಡಲು ಪೇರಳೆ ಎಲೆಗಳ ಬಳಕೆ ಹೇಗೆ ಮಾಡುವುದು ಎಂದು ನೀವು ತಿಳಿದುಕೊಳ್ಳಿ.

ವಿಧಾನ

ಸ್ವಲ್ಪ ಸೀಬೆ ಎಲೆಗಳನ್ನು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿ.

ಈ ಪೇಸ್ಟ್ ಗೆ ಸ್ವಲ್ಪ ರೋಸ್ ವಾಟರ್ ಹಾಕಿ.

ಇದನ್ನು ಕಪ್ಪುಕಲೆಗಳ ಮೇಲೆ ಸ್ಕ್ರಬ್ ಮಾಡಿ.

ವಾರದಲ್ಲಿ ಎರಡು ದಿನ ಹೀಗೆ ಮಾಡಿದರೆ ನಿಮಗೆ ಪರಿಣಾಮಕಾರಿ ಹಾಗೂ ವೇಗದ ಫಲಿತಾಂಶ ಸಿಗುವುದು.

ಮೊಡವೆ ಮತ್ತು ಅದರ ಕಲೆ ನಿವಾರಣೆ

ಮೊಡವೆ ಮತ್ತು ಅದರ ಕಲೆ ನಿವಾರಣೆ

ಸಲೂನ್ ಗೆ ಹೋಗಿ ತುಂಬಾ ದುಬಾರಿಯಾಗಿರುವಂತಹ ಚಿಕಿತ್ಸೆ ಮಾಡುವ ಬದಲು ನೀವು ತುಂಬಾ ನೈಸರ್ಗಿಕವಾಗಿ ಮೊಡವೆ ಹಾಗೂ ಅದರಿಂದ ಆಗಿರುವ ಕಲೆಗಳನ್ನು ನಿವಾರಿಸಬಹುದು. ಮೊಡವೆಗೆ ಪೇರಳೆ ಎಲೆಗಳ ಬಳಕೆ ಹೇಗೆ ಎಂದು ತಿಳಿಯಿರಿ.

ವಿಧಾನ

ಸ್ವಲ್ಪ ಪೇರಳೆ ಎಲೆಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ.

ಇದನ್ನು ಮೊಡವೆ ಹಾಗೂ ಕಲೆಗಳು ಇರುವ ಜಾಗಕ್ಕೆ ನಯವಾಗಿ ಹಚ್ಚಿಕೊಳ್ಳಿ.

10-12 ನಿಮಿಷ ಕಾಲ ಇದನ್ನು ಹಾಗೆ ಬಿಡಿ.

ತಣ್ಣೀರಿನಿಂದ ಮುಖ ತೊಳೆದು ಒರೆಸಿಕೊಳ್ಳಿ.

ಪೇರಳೆ ಎಲೆಗಳಲ್ಲಿ ಇರುವಂತಹ ನಂಜುನಿರೋಧಕ ಗುಣವು ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ಕೊಂದು ಹಾಕುವುದು. ಇದರಿಂದ ವಾರದಲ್ಲಿ ಎರಡು ದಿನ ಬಳಸಿ ಫಲಿತಾಂಶ ಪಡೆಯಿರಿ.

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ಪೇರಳೆ ಹಣ್ಣಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣಗಳು ಫ್ರೀ ರ್ಯಾಡಿಕಲ್ ನ್ನು ಕೊಂದು ಹಾಕುವುದು. ಇದರಿಂದ ಚರ್ಮಕ್ಕೆ ವಯಸ್ಸಾಗುವ ಲಕ್ಷಣ ತಡೆಯುವುದು. ಚರ್ಮವನ್ನು ಶುದ್ಧ ಹಾಗೂ ಸುಂದರವಾಗಿಟ್ಟು ವಯಸ್ಸಾಗುವಾಗುವ ಕಾಣಿಸುವ ಗುರುತುಗಳನ್ನು ದೂರ ಮಾಡುವುದು.

ವಿಧಾನ

ಮಿಕ್ಸಿಗೆ ಹಾಕಿ ಸ್ವಲ್ಪ ಪೇರಳೆ ಎಲೆಗಳನ್ನು ರುಬ್ಬಿ ಮತ್ತು ಇದಕ್ಕೆ ಎರಡು ಚಮಚ ಮೊಸರು ಹಾಕಿ.

ಇದನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ.

ಮುಖಕ್ಕೆ ಈ ಪೇಸ್ಟ್ ನ್ನು ಹಚ್ಚಿ ಮತ್ತು 15-17 ನಿಮಿಷ ಕಾಲ ಹಾಗೆ ಬಿಡಿ.

ತಣ್ಣೀರಿನಿಂದ ಮುಖ ತೊಲೆಯಿರಿ ಮತ್ತು ಒಣ ಟವೆಲ್ ನಿಂದ ಒರೆಸಿ.

ಕ್ರೀಮ್ ಹಾಕಿಕೊಂಡು ಮುಖಕ್ಕೆ ಮೊಶ್ಚಿರೈಸ್ ನೀಡಿ.

ಜಿಡ್ಡಿನಂಶವಿರುವ ತ್ವಚೆಗೆ

ಜಿಡ್ಡಿನಂಶವಿರುವ ತ್ವಚೆಗೆ

ಆ್ಯಂಟಿಆಕ್ಸಿಡೆಂಟ್ ಗುಣ ಹೊಂದಿರುವ ಪೇರಳೆ ಎಲೆಗಳು ಜಿಡ್ಡಿನಾಂಶವಿರುವ ಚರ್ಮಕ್ಕೂ ನೆರವಾಗುವುದು. ಎಣ್ಣೆಯಂಶವಿರುವ ಮುಖಕ್ಕೆ ಈ ಕೆಳಗಿನ ಫೇಸ್ ಪ್ಯಾಕ್ ಬಳಸಿಕೊಳ್ಳಿ.

ವಿಧಾನ

ಸ್ವಲ್ಪ ಪೇರಳೆ ಎಲೆಗಳನ್ನು ಸರಿಯಾಗಿ ರುಬ್ಬಿಕೊಳ್ಳಿ.

ಇದಕ್ಕೆ ಕೆಲವು ಹನಿ ರೋಸ್ ವಾಟರ್ ಮತ್ತು ಲಿಂಬೆರಸ ಹಾಕಿ ಮಿಶ್ರಣ ಮಾಡಿ.

ದಪ್ಪಗಿನ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.

20-30 ನಿಮಿಷ ಕಾಲ ಹಾಗೆ ಇರಲಿ.

ಇದು ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಈ ಪ್ಯಾಕ್ ನ್ನು ನಿಯಮಿತವಾಗಿ ಬಳಸಿಕೊಂಡರೆ ಬದಲಾವಣೆಯು ಕಂಡುಬರುವುದು ಮತ್ತು ಜಿಡ್ಡಿನಾಂಶವಿರುವ ಚರ್ಮದಿಂದ ಮುಕ್ತಿ ಸಿಗುವುದು.

ಹೊಳಪು ತರುವುದು

ಹೊಳಪು ತರುವುದು

ಪೇರಳೆ ಎಲೆಗಳು ಮುಖದ ಮೇಲಿನ ಕಂದುವೃತ್ತಗಳನ್ನು ನಿವಾರಣೆ ಮಾಡಿ ಕಾಂತಿ ನೀಡುವುದು. ಪೇರಳೆ ಎಲೆಗಳಲ್ಲಿ ಇರುವಂತಹ ಕ್ಲೋರೊಫಿಲ್ ಚರ್ಮವು ಸರಿಯಾಗಿ ಉಸಿರಾಡಲು ನೆರವಾಗುವುದು ಮತ್ತು ತಾಜಾವಾಗಿ ಕಾಣುವಂತೆ ಮಾಡುವುದು.

ವಿಧಾನ

ಕೆಲವು ಪೇರಳೆ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ರುಬ್ಬಿ.

ಈ ಪೇಸ್ಟ್ ಗೆ ಕೆಲವು ಹನಿ ರೋಸ್ ವಾಟರ್ ಹಾಕಿ.

ಈ ಪ್ಯಾಕ್ ನ್ನು ಚರ್ಮಕ್ಕೆ ಹಚ್ಚಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ.

ತಣ್ಣೀರಿನಿಂದ ತೊಳೆಯಿರಿ ಮತ್ತು ಟವೆಲ್ ನಿಂದ ಒರೆಸಿಕೊಳ್ಳಿ.

ಇದನ್ನು ವಾರದಲ್ಲಿ ಎರಡು ಅಥವಾ ಮೂರು ಸಲ ಬಳಸಿ.

ಇದು ಚರ್ಮಕ್ಕೆ ಹೊಳಪು ನೀಡುವುದು.

ಸೋಂಕು ನಿವಾರಣೆ

ಸೋಂಕು ನಿವಾರಣೆ

ಪೇರಳೆ ಎಲೆಗಳಲ್ಲಿ ಇರುವಂತಹ ಔಷಧೀಯ ಗುಣಗಳು ಕೇವಲ ಆ್ಯಂಟಿಆಕ್ಸಿಡೆಂಟ್ ಒದಗಿಸುವುದು ಮಾತ್ರವಲ್ಲದೆ ತಲೆಬುರುಡೆ ಸೋಂಕಿನ ಸಹಿತ ಹಲವಾರು ಸೋಂಕುಗಳನ್ನು ನಿವಾರಣೆ ಮಾಡುವುದು. ಸೋಂಕು ನಿವಾರಣೆಗೆ ನೀವು ಈ ರೀತಿಯಾಗಿ ಪೇರಳೆ ಎಲೆಗಳನ್ನು ಬಳಸಿಕೊಳ್ಳಬಹುದು.

ವಿಧಾನ

ಪೇರಳೆ ಎಲೆಗಳನ್ನು ತೆಗೆದುಕೊಂಡು ನೀರು ಹಾಕಿ ಕುದಿಸಿ.

ಇದರಿಂದ ನೀವು ಸ್ನಾನ ಮಾಡಿದರೆ ಆಗ ದೇಹದಲ್ಲಿನ ಸೋಂಕು ನಿವಾರಣೆಯಾಗುವುದು.

ತಲೆಬುರುಡೆಯನ್ನು ಇದರಿಂದ ತೊಳೆದರೆ ತಲೆಹೊಟ್ಟು ಕಡಿಮೆ ಮಾಡಬಹುದು.

ಕೂದಲಿನ ಆರೈಕೆಗೆ

ಕೂದಲಿನ ಆರೈಕೆಗೆ

ಸೀಬೆಯ ಎಲೆಗಳಲ್ಲಿರುವ ಪೋಷಕಾಂಶಗಳು ನಮ್ಮ ದೇಹದ ಬೇರೆ ಬೇರೆ ಅಂಗಗಳ ಮೇಲೆ ಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ವಿಟಮಿನ್ ಬಿಯನ್ನು ಯಥೇಚ್ಛವಾಗಿ ಈ ಹಣ್ಣಿನ ಎಲೆಗಳು ಹೊಂದಿರುವುದರಿಂದ ಕೂದಲಿನ ಅಭಿವೃದ್ಧಿ ಇದರಿಂದ ಉಂಟಾಗುತ್ತದೆ. ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳ ಪೂರೈಕೆಯಾದಲ್ಲಿ ಆರೋಗ್ಯಕರ ಕೂದಲು ನಿಮ್ಮದಾಗುವುದರಲ್ಲಿ ಸಂಶಯವೇ ಬೇಡ. ಅದರಲ್ಲೂ ಸೀಬೆಯ ಹಣ್ಣಿಗಿಂತಲೂ ಎಲೆಗಳು ನಿಮ್ಮ ಕೂದಲಿಗೆ ಹೆಚ್ಚು ಪ್ರಯೋಜವನ್ನುಂಟು ಮಾಡುತ್ತವೆ. ತಜ್ಞರ ಪ್ರಕಾರ, ನಿತ್ಯವೂ ಸೀಬೆ ಎಲೆಗಳನ್ನು ಕೂದಲಿನ ಆರೈಕೆಯಲ್ಲಿ ಬಳಸಿದಾಗ ಕೂದಲುದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

ಎಲೆಗಳ ಬಳಕೆ ಹೇಗೆ‎

ಒಂದು ಲೀಟರ್ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ಮುಷ್ಟಿಯಷ್ಟು ಸೀಬೆಯ ಎಲೆಗಳನ್ನು ಕುದಿಸಿಕೊಳ್ಳಿ. ಚೆನ್ನಾಗಿ ಕುದಿದ ನಂತರ, ತಣ್ಣಗಾಗಲು ಬಿಡಿ. ನೀರನ್ನು ಬಸಿದು ಅದನ್ನು ಕೂದಲ ಬುಡದಿಂದ ತುದಿಯವರೆಗೆ ತಕ್ಷಣವೇ ಹಚ್ಚಿಕೊಳ್ಳಿ. ಸೀಬೆ ಎಲೆಯೊಂದಿಗೆ ಕುದಿಸಿರುವ ನೀರನ್ನು ಕೂದಲಿಗೆ ಬಳಸಿಕೊಳ್ಳುವುದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

ನೆರಿಗೆ ನಿವಾರಣೆ

ನೆರಿಗೆ ನಿವಾರಣೆ

ಸೀಬೆ ಎಲೆಗಳಲ್ಲಿ ಇರುವಂತಹ ಗುಣಗಳು ನೆರಿಗೆ ನಿವಾರಣೆ ಮಾಡುವಂತಹ ಶಕ್ತಿ ಹೊಂದಿದೆ. ಇದು ಮುಖದಲ್ಲಿನ ಫ್ರೀ ರ್ಯಾಡಿಕಲ್ ತೆಗೆಯುವುದು ಮತ್ತು ಮುಖದಲ್ಲಿ ವಯಸ್ಸಾಗುವ ಲಕ್ಷಣಗಳು ಮೂಡದಂತೆ ತಡೆಯುವುದು. ಸ್ವಲ್ಪ ಸೀಬೆ ಎಲೆಗಳನ್ನು ನೀರಿಗೆ ಹಾಕಿ ಸರಿಯಾಗಿ ಕುದಿಸಿ. ಇದರ ಸಾರವನ್ನು ಪಡೆದುಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಚರ್ಮವು ಬಿಳಿಯಾಗುವುದು ಮತ್ತು ಚರ್ಮದ ಕಾಂತಿ ಹೆಚ್ಚುವುದು.

ತುರಿಕೆ ಕಡಿಮೆ ಮಾಡುವುದು

ತುರಿಕೆ ಕಡಿಮೆ ಮಾಡುವುದು

ಸೀಬೆ ಎಲೆಗಳಲ್ಲಿ ಇರುವ ಗುಣವು ಉರಿಯೂತ ಕಡಿಮೆ ಮಾಡುವುದು. ಇದರಿಂದ ತುರಿಕೆ ಕಡಿಮೆಯಾಗುವುದು. ಸುಡುವ ಚರ್ಮ ಮತ್ತು ಇತರ ಚರ್ಮದ ಅಲರ್ಜಿಗೆ ಇದು ತುಂಬಾ ಪರಿಣಾಮಕಾರಿ. ಯಾಕೆಂದರೆ ಇದು ಅಲರ್ಜಿ ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುವುದು. ಪೇರಳೆ ಎಲೆಗಳನ್ನು ರುಬ್ಬಿಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿದರೆ ಇದು ಒಳ್ಳೆಯ ಪರಿಹಾರ ನೀಡುವುದು.

ತಲೆಬುರುಡೆ ಸೋಂಕು ನಿವಾರಿಸುವುದು

ತಲೆಬುರುಡೆ ಸೋಂಕು ನಿವಾರಿಸುವುದು

ಸೀಬೆ ಎಲೆಗಳನ್ನು ತಲೆಬುರುಡೆಯ ಸೋಂಕು ನಿವಾರಣೆಗೂ ಬಳಸಿಕೊಳ್ಳಲಾಗುತ್ತದೆ. ಬೇಯಿಸಿದ ಸೀಬೆ ಎಲೆಗಳನ್ನು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿ. 25 ನಿಮಿಷ ಕಾಲ ಹಾಗೆ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. ಪೇರಳೆ ಎಲೆಗಳು ಕಂಡೀಷನರ್ ಹಾಗೆ ಕೆಲಸ ಮಾಡುವುದು. ವೇಗವಾಗಿ ಫಲಿತಾಂಶ ಬೇಕೆಂದರೆ ವಾರದಲ್ಲಿ ಎರಡು ಸಲ ಇದನ್ನು ಬಳಸಿ.

English summary

Natural Ways To Use Guava Leaves For A Flawless Skin

Guava leaves come with the antioxidants, anti bacterials and anti inflammatory agents and beneficial tannins. The medicinal qualities of the guava leaves help in curing a lot of diseases and specially skin problems. Let's see what are the natural ways by which we can use guava leaves to get a flawless skin
X
Desktop Bottom Promotion