For Quick Alerts
ALLOW NOTIFICATIONS  
For Daily Alerts

ಒಂದೆರಡು ದಿನಗಳಲ್ಲಿಯೇ 'ಮೊಡವೆ ಕಲೆ' ಮಾಯ ಮಾಡುವ ಪವರ್ ಫುಲ್ ಮನೆಮದ್ದು

By Hemanth
|

ಮುಖದ ಮೇಲೆ ಮೊಡವೆಗಳಿಂದ ಆಗಿರುವ ಕಲೆಗಳ ನಿವಾರಣೆ ಮತ್ತು ಅದು ಮಾಡುವಂತಹ ಕಿರಿಕಿರಿ ತುಂಬಾ ಸಮಸ್ಯೆಯನ್ನು ಉಂಟು ಮಾಡುವುದು. ಇದಕ್ಕಾಗಿ ಹಲವಾರು ರೀತಿಯ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಒಂದು ಹಂತದಲ್ಲಿ ಮೊಡವೆಗಳ ಕಲೆಗಳನ್ನು ನಿವಾರಿಸಿದಂತೆ ಕಂಡುಬಂದರೂ ಇದರಲ್ಲಿರುವ ರಾಸಾಯನಿಕಗಳು ದೀರ್ಘಕಾಲದ ತನಕ ಚರ್ಮದ ಮೇಲೆ ಪರಿಣಾಮ ಬೀರುವುದು. ಇದಕ್ಕೆ ಯಾವುದಾದರೂ ಪರ್ಯಾಯವಿದೆಯಾ ಎಂದು ನೀವು ಕೇಳುವುದು ಸಹಜ.

ಹೌದು, ಮನೆಯಲ್ಲೇ ತಯಾರಿಸಿರುವಂತಹ ಕೆಲವೊಂದು ಸೌಂದರ್ಯವರ್ಧಕಗಳನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ. ಮೊಡವೆ ಹಾಗೂ ಕಲೆಗಳ ನಿವಾರಣೆಗೆ ಮನೆಯಲ್ಲೇ ತಯಾರಿಸಿರುವ ಕೆಲವು ಮನೆಮದ್ದುಗಳು ಯಾವುದು ಎಂದು ಈ ಲೇಖನ ಓದುತ್ತಾ ತಿಳಿಯಿರಿ. ಮೊಡವೆಗಳಿಂದ ಉಂಟಾಗಿರುವ ಕಲೆಯನ್ನು ಯಾವೆಲ್ಲಾ ಸಾಮಗ್ರಿಗಳು ಮತ್ತು ಅವುಗಳನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

how to get rid of acne spots

ಮೊಡವೆ ಕಲೆ ನಿವಾರಣೆಗೆ, ಸರಳ ಟಿಪ್ಸ್-ತ್ವರಿತ ಪರಿಹಾರ

ಬೇಕಾಗುವ ಸಾಮಗ್ರಿಗಳು

*1/2ಚಮಚ ಅರಿಶಿನ ಹುಡಿ
*1ಚಮಚ ದಾಲ್ಚಿನ್ನಿ ಹುಡಿ
*1 ಚಮಚ ಜೇನುತುಪ್ಪ
*ಕೆಲವು ಹನಿ ಲಿಂಬೆರಸ

ಇದನ್ನು ತಯಾರಿಸುವುದು ಹೇಗೆ?

*ಒಂದು ಶುದ್ಧವಾಗಿರುವ ಪಿಂಗಾಣಿಯಲ್ಲಿ ಅರಿಶಿನ ಹುಡಿ ಹಾಕಿ. ಅತಿಯಾಗಿ ಅರಶಿನ ಹುಡಿ ಹಾಕಬೇಡಿ. ಇದರಿಂದ ಮುಖವು ಹಳದಿಯಾಗಿ ಕಾಣುವುದು.
*ಇದರ ಬಳಿಕ ಪಿಂಗಾಣಿಗೆ ದಾಲ್ಚಿನಿ ಹುಡಿ ಹಾಕಿ.
*ಈ ಮಿಶ್ರಣಕ್ಕೆ ಜೇನುತುಪ್ಪ ಹಾಕಿಕೊಂಡು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ.
*ಈ ಮಿಶ್ರಣಕ್ಕೆ ಲಿಂಬೆರಸ ಹಾಕಿ ಮತ್ತು ಅಂತಿವಾಗಿ ಎಲ್ಲವನ್ನು ಮಿಶ್ರಣ ಮಾಡಿಕೊಂಡರೆ ನಿಮಗೆ ಪ್ಯಾಕ್ ತಯಾರಾಗಿದೆ.
*ಇದನ್ನು ಡಬ್ಬದಲ್ಲಿ ಹಾಕಿಟ್ಟುಕೊಂಡು ಬಳಸಬಹುದು.

ಹಚ್ಚಿಕೊಳ್ಳುವುದು ಹೇಗೆ?

*ಈ ಮಿಶ್ರಣವನ್ನು ತೆಗೆದುಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿ ಮತ್ತು ಸಂಪೂರ್ಣ ಮುಖಕ್ಕೂ ಹಚ್ಚಿಕೊಳ್ಳಿ.
*15-20 ನಿಮಿಷ ಕಾಲ ಹಾಗೆ ಬಿಡಿ.
*ಇದರ ಬಳಿಕ ಸಾಮಾನ್ಯ ನೀರಿನಿಂದ ಇದನ್ನು ತೊಳೆದು ಒಣಗಲು ಬಿಡಿ.
*ಇದರಲ್ಲಿ ಲಿಂಬೆಯು ಇರುವ ಕಾರಣದಿಂದಾಗಿ ಚರ್ಮವು ಒಣಗುವುದು. ಇದರಿಂದ ಮೊಶ್ಚಿರೈಸರ್ ಹಚ್ಚಿಕೊಳ್ಳಿ.
*ವೇಗ ಮತ್ತು ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ ಒಂದು ಸಲ ಇದನ್ನು ಬಳಸಿ.
ಸೂಚನೆ: ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಇದು ಒಳ್ಳೆಯದಲ್ಲ. ಯಾಕೆಂದರೆ ಇದು ಕಿರಿಕಿರಿ ಉಂಟು ಮಾಡಬಹುದು. ಇದನ್ನು ಹಚ್ಚಿಕೊಂಡು ದೀರ್ಘಕಾಲ ಬಿಡಬೇಡಿ. ಇದನ್ನು ನೀವು ಪ್ರಯತ್ನಿಸಿದ ಬಳಿಕ ಮನಗೆ ಕಮೆಂಟ್ ಬಾಕ್ಸ್ ನಲ್ಲಿ ಇದರ ಬಗ್ಗೆ ತಿಳಿಸಿ.

ಅರಿಶಿನದ ಲಾಭಗಳು

ಅರಿಶಿನವನ್ನು ಶತಮಾನಗಳಿಂದಲೂ ವಿವಿಧ ರೀತಿಯ ಸಮಸ್ಯೆಗಳಿಗೆ ಬಳಸಿಕೊಂಡು ಬರಲಾಗುತ್ತಾ ಇದೆ. ಅರಿಶಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ, ನಂಜುನಿರೋಧಕ, ಉರಿಯೂತ ಶಮನಕಾರಿ ಗುಣಗಳು ಇದ್ದು, ಮುಖದ ಮೇಲಿನ ಕಲೆಗಳು, ಮೊಡವೆಗಳು ಇತ್ಯಾದಿಗಳನ್ನು ನಿವಾರಣೆ ಮಾಡುವುದು ಮತ್ತು ನೈಸರ್ಗಿಕವಾಗಿ ತ್ವಚೆಯನ್ನು ಬಿಳಿಯಾಗಿಸುವುದು. ಅನಾದಿ ಕಾಲದಿಂದಲೂ ಭಾರತದಲ್ಲಿ ಸೌಂದರ್ಯದ ವೃದ್ಧಿಗಾಗಿ ಹೊಳೆಯುವ ತ್ವಚೆಗಾಗಿ ಅರಿಶಿನವನ್ನು ಬಳಸುತ್ತಿದ್ದಾರೆ. ಇನ್ನು ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಇದು ಚರ್ಮದ ಸೋಂಕಿನ ವಿರುದ್ಧ ಹೋರಾಡುವುದು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಇರುವ ಕಾರಣದಿಂದ ಕಲೆಗಳನ್ನು ತೆಗೆದು ಚರ್ಮದ ಕಾಂತಿ ವೃದ್ಧಿಸುವುದು. ಇದು ಚರ್ಮದಲ್ಲಿ ಮೆಲನಿನ್ ಉತ್ಪತ್ತಿಯನ್ನು ಕಡಿಮೆ ಮಾಡುವುದು. ಅರಿಶಿನವನ್ನು ಬಳಸಿದರೆ ಅದರಿಂದ ಕಲೆಗಳನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದು.

ದಾಲ್ಚಿನ್ನಿ ಹುಡಿಯ ಲಾಭಗಳು

ನಂಜುನಿರೋಧಕ, ಶಿಲೀಂಧ್ರ ವಿರೋಧಿ ಮತ್ತು ಸಂಕೋಚನ ಗುಣ ಹೊಂದಿರುವಂತಹ ದಾಲ್ಚಿನಿಯು ಚರ್ಮದಲ್ಲಿ ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಇದರಲ್ಲಿ ಕಿತ್ತುಹಾಕುವ ಗುಣವು ಇದೆ. ಇದರಿಂದಾಗಿ ಚರ್ಮವು ಆಳವಾಗಿ ಪೋಷಣೆ ಪಡೆಯುವುದು ಮತ್ತು ಚರ್ಮದ ಮೇಲಿನ ಕಲೆಗಳನ್ನು ನಿವಾರಿಸುವುದು. ಅಷ್ಟೇ ಅಲ್ಲದೆ, ಇದರಲ್ಲಿರುವ ಮೆಗ್ನೀಷಿಯಂ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಹಾಗೂ ಚರ್ಮದ ಕೋಶಗಳನ್ನು ಪುನರ್ ಉತ್ಪಾದಿಸುವ ಗುಣವನ್ನು ಒಳಗೊಂಡಿದೆ. ಇದು ಎಲ್ಲಾ ಚರ್ಮದವರಿಗೂ ಆಗುವುದಿಲ್ಲ ಎನ್ನಲಾಗುತ್ತದೆ. ಹಾಗಾಗಿ ಇದನ್ನು ಪರೀಕ್ಷಿಸಿದ ಬಳಿಕ ತ್ವಚೆಗೆ ಅನ್ವಯಿಸಿಕೊಳ್ಳುವುದು ಸೂಕ್ತ.

ಲಿಂಬೆರಸದ ಲಾಭಗಳು

ಸಿಟ್ರಿಕ್ ಹಣ್ಣಾಗಿರುವ ಲಿಂಬೆಯಲ್ಲಿ ವಿಟಮಿನ್ ಸಿ ಇದ್ದು, ಇದು ಚರ್ಮದ ಬಣ್ಣ ಸುಧಾರಿಸುವುದು ಮತ್ತು ಸತ್ತಚರ್ಮದ ಕೋಶಗಳನ್ನು ತೆಗೆದುಹಾಕುವುದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಮೊಡವೆಗಳು ಒಣಗುವಂತೆ ಮಾಡುವುದು.

ಜೇನುತುಪ್ಪದ ಲಾಭಗಳು

ನೈಸರ್ಗಿಕದತ್ತವಾಗಿ ಸಿಗುವಂತಹ ಪ್ರತಿಯೊಂದು ನಮ್ಮ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿರುತ್ತದೆ. ಅದರಲ್ಲೂ ಜೇನುತುಪ್ಪದಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಜೇನುತುಪ್ಪ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯವನ್ನು ಅದರಿಂದ ವೃದ್ಧಿಸಬಹುದು. ಇನ್ನು ಜೇನುತುಪ್ಪದಲ್ಲಿ ಶಮನಕಾರಿ ಗುಣಗಳು ಇವೆ ಮತ್ತು ಮೊಡವೆಗಳಿಂದಾಗಿರುವ ಕಲೆಗಳ ನಿವಾರಣೆ ಮಾಡುವುದು. ಮುಚ್ಚಿರುವ ಚರ್ಮದ ರಂಧ್ರಗಳನ್ನು ತೆರೆಯುವುದು ಮತ್ತು ಚರ್ಮಕ್ಕೆ ತೇವಾಂಶ ನೀಡುವುದು. ಮೊಡವೆಯಿಂದ ನೋವಾಗುತ್ತಲಿದ್ದರೆ ಜೇನುತುಪ್ಪ ಇದನ್ನು ಶಮನ ಮಾಡುವುದು.

ತ್ವರಿತವಾಗಿ 'ಮೊಡವೆ ಕಲೆ' ಮಾಯ ಮಾಡೋ ಆಯುರ್ವೇದಿಕ್‌ ಔಷಧಿಗಳು

English summary

Natural Home Remedy To Get Rid of Acne Scars Fast

What is more frightening and irritating than pimple/acne spots? Though we have numerous chemicals to treat these we also know the damage that all these cause. So now, what is the alternative? Do not worry, as we have the solution for these stubborn spots right in your kitchen. You can easily make a mask using ingredients like turmeric, honey, etc.
Story first published: Saturday, August 25, 2018, 10:36 [IST]
X
Desktop Bottom Promotion