For Quick Alerts
ALLOW NOTIFICATIONS  
For Daily Alerts

ಅಡುಗೆಮನೆಯ 'ಅಡುಗೆ ಸೋಡಾ' ಮೊಡವೆಗೆ ಪರ್ಫೆಕ್ಟ್ ಮನೆಮದ್ದು

By Jaya Subramanya
|

ಹೆಣ್ಣಿಗೆ ಸೌಂದರ್ಯವೆಂಬುದು ಕಲಶಪ್ರಾಯವಿದ್ದಂತೆ. ಹೆಣ್ಣು ಸೌಂದರ್ಯಕ್ಕೆ ಇನ್ನೊಂದು ಹೆಸರು ಎಂದು ಹೇಳುತ್ತಾರೆ. ಮುಖದಲ್ಲಿ ಸಣ್ಣ ಕಲೆಯಿದ್ದರೂ ಅದು ಹೆಣ್ಣಿನ ಸೌಂದರ್ಯಕ್ಕೆ ಧಕ್ಕೆಯುಂಟುಮಾಡಿದಂತೆ. ಹಿಂದಿನಿಂದಲೂ ಶಾಸ್ತ್ರ ಪುರಾಣಗಳಲ್ಲಿ ಸೌಂದರ್ಯದ ವಿಷಯ ಬಂದರೆ ಮೊದಲು ಬರುವ ಮಾತೇ ಹೆಣ್ಣಿನ ಸೌಂದರ್ಯವಾಗಿದೆ. ಆದರೆ ಇಂದಿನ ಕಲುಷಿತ ವಾತಾವರಣ ಮತ್ತು ನೈಸರ್ಗಿಕ ಹಾನಿಗಳಿಂದ ಹೆಣ್ಣಿನ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತಿದೆ.

ಹಿಂದೆ ಇದ್ದ ನೈಸರ್ಗಿಕ ವಸ್ತುಗಳನ್ನು ಇಂದು ಸೌಂದರ್ಯದ ವಿಷಯದಲ್ಲಿ ಬಳಸಲಾಗುತ್ತಿಲ್ಲ. ಮೊದಲೆಲ್ಲಾ ಚಿಕ್ಕ ಪುಟ್ಟ ಅಂತೆಯೇ ದೊಡ್ಡ ದೊಡ್ಡ ಸೌಂದರ್ಯ ಸಮಸ್ಯೆಗಳಿಗೂ ಮನೆಮದ್ದುಗಳನ್ನೇ ಬಳಸುತ್ತಿದ್ದರು. ಆದರೆ ಇಂದು ಅಂತವ ವಸ್ತುಗಳೂ ದೊರಕುತ್ತಿಲ್ಲ ಮತ್ತು ಅದನ್ನೆಲ್ಲಾ ಮಾಡುವುದಕ್ಕೂ ಇಂದು ಸಮಯ ಇಲ್ಲದಂತಾಗಿದೆ. ಅದಾಗ್ಯೂ ನಿಮ್ಮ ಮುಖದಲ್ಲಿನ ಮೊಡವೆ, ಕಲೆಗಳನ್ನು ನೀವು ನಿವಾರಿಸಬೇಕು ಎಂದಾದಲ್ಲಿ ಮನೆಮದ್ದುಗಳನ್ನೇ ನೀವು ಅನುಸರಿಸಬೇಕು.

How To Use Baking Soda To Treat Acne

ಇಂದಿನ ಲೇಖನದಲ್ಲಿ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಸೋಡಾದಂತಹ ಮನೆಮದ್ದನ್ನು ಸರಳವಾಗಿ ಬಳಸಿಕೊಂಡು ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಅಡುಗೆ ಮತ್ತು ಸ್ವಚ್ಛತೆಗಾಗಿ ನಾವು ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾವನ್ನು ಬಳಸುತ್ತೇವೆ ಇದರ ಜೊತೆಗೆ ನಿಮ್ಮ ಸೌಂದರ್ಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಕೂಡ ಅಡುಗೆ ಸೋಡಾವನ್ನು ಬಳಸಬಹುದಾಗಿದೆ.

ಆ್ಯಂಟಿ ಇನ್‌ಫ್ಲಾಮೇಟರಿ ಅಂಶಗಳನ್ನು ಬೇಕಿಂಗ್ ಸೋಡಾ ಒಳಗೊಂಡಿದ್ದು ಮೊಡವೆ, ಕಲೆಗಳು, ದದ್ದುಗಳನ್ನು ಇದು ಹೋಗಲಾಡಿಸುತ್ತದೆ. ನೈಸರ್ಗಿಕ ಎಕ್ಸ್‌ಫೋಲಿಯೇಂಟ್‌ನಂತೆ ಇದು ಕೆಲಸ ಮಾಡುತ್ತದೆ ಮತ್ತು ಮೃತಕೋಶಗಳನ್ನು ನಿವಾರಿಸುತ್ತದೆ. ಹಾಗೂ ಆರೋಗ್ಯಪೂರ್ಣ ತ್ವಚೆಯನ್ನು ನಿಮಗೆ ದಯಪಾಲಿಸುತ್ತದೆ. ತ್ವಚೆಯಿಂದ ಹೆಚ್ಚುವರಿ ಎಣ್ಣೆಯಿಂದ ಇದು ಹೀರಿಕೊಳ್ಳುತ್ತದೆ ಮತ್ತು ಮೊಡವೆ ಹಾಗೂ ಗಾಯಗಳ ಗುರುತುಗಳನ್ನು ನಿವಾರಿಸುತ್ತದೆ. ಬೇಕಿಂಗ್ ಸೋಡಾ ಬಳಸಿಕೊಂಡು ಮೊಡವೆ ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ ಮತ್ತು ಲಿಂಬೆ ರಸ

ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ ಮತ್ತು ಲಿಂಬೆ ರಸ

ತ್ವಚೆಯನ್ನು ಸಂಕುಚಿಸಲು ಲಿಂಬೆ ಸಹಾಯ ಮಾಡುತ್ತದೆ ಹಾಗೂ ಜಿಡ್ಡಿನ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಮತ್ತು ತ್ವಚೆಯ ಇನ್‌ಫ್ಲಾಮೇಶನ್‌ಗೆ ಕಾರಣವಾಗಿರುವ ಅಂಶಗಳನ್ನು ದೂರ ಮಾಡುತ್ತದೆ.

ಸಾಮಾಗ್ರಿಗಳು

* ಬೇಕಿಂಗ್ ಸೋಡಾ

* 1 ಚಮಚ ಲಿಂಬೆ ರಸ

* 2 ಚಮಚ ನೀರು

ಮಾಡುವುದು ಹೇಗೆ

1. ಬೇಕಿಂಗ್ ಸೋಡಾ ಮತ್ತು ಲಿಂಬೆ ರಸವನ್ನು ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ.

2. ನಿಮ್ಮ ಸ್ವಚ್ಛ ಮುಖಕ್ಕೆ ಈ ಲೇಯರ್ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ.

3. ನಂತರ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

4. ಕೊನೆಗೆ, ನಿಮ್ಮ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ ಮತ್ತು ಮಸಾಜ್ ಮಾಡಿ.

5. ವಾರದಲ್ಲಿ 2-3 ಬಾರಿ ಇದನ್ನು ಪುನರಾವರ್ತನೆ ಮಾಡಿ.

Most Read: ನಿಮ್ಮ ಜೀವನದ ಎಲ್ಲಾ ಸೀಕ್ರೆಟ್ಸ್ ಬಿಚ್ಚಿಡುವ ಅಂಗೈಯಲ್ಲಿರುವ ಅದೃಷ್ಟದ ಚಿಹ್ನೆಗಳು!

ಬೇಕಿಂಗ್ ಸೋಡಾ ಮತ್ತು ಜೇನು

ಬೇಕಿಂಗ್ ಸೋಡಾ ಮತ್ತು ಜೇನು

ಜೇನು ನೈಸರ್ಗಿಕ ಮಾಯಿಶ್ಚರೈಸರ್ ಎಂದೆನಿಸಿದ್ದು ಇದು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ. ಜೇನಿನಲ್ಲಿರುವ ಬ್ಲೀಚಿಂಗ್ ಅಂಶಗಳು ಮೊಡವೆಯಿಂದ ಉಂಟಾದ ಕಲೆಯನ್ನು ನಿವಾರಿಸುತ್ತದೆ.

ಸಾಮಾಗ್ರಿಗಳು

* 1 ಚಮಚ ಬೇಕಿಂಗ್ ಸೋಡಾ

* 1 ಚಮಚ ಜೇನು

* ಬಟ್ಟೆ

ಮಾಡುವುದು ಹೇಗೆ

* ಜೇನು ಮತ್ತು ಬೇಕಿಂಗ್ ಸೋಡಾವನ್ನು ಪೇಸ್ಟ್‌ನಂತೆ ಮಾಡಿ.

* ನಿಮ್ಮ ಮುಖವನ್ನು ತೊಳೆದುಕೊಳ್ಳಿ ಮತ್ತು ಕಲೆಯಿರುವ ಜಾಗದಲ್ಲಿ ಇದನ್ನು ಹಚ್ಚಿ

* ಬಟ್ಟೆಯನ್ನು ತೆಗೆದುಕೊಂಡು ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿ.

* ಪೇಸ್ಟ್ ಹಚ್ಚಿರುವಲ್ಲಿ ಈ ಬಟ್ಟೆಯನ್ನು ಇಡಿ.

* 5 ನಿಮಿಷ ಹಾಗೆಯೇ ಬಿಡಿ ಮತ್ತು ಪೇಸ್ಟ್ ತೆಗೆಯಲು ಈ ಬಟ್ಟೆಯನ್ನು ಬಳಸಿ.

* ಕೊನೆಗೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

ಬೇಕಿಂಗ್ ಸೋಡಾ ಮತ್ತು ಆ್ಯಪಲ್ ಸೀಡರ್ ವಿನೇಗರ್

ಬೇಕಿಂಗ್ ಸೋಡಾ ಮತ್ತು ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ತ್ವಚೆಯ ಪಿಎಚ್ ಬ್ಯಾಲೆನ್ಸ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಇದು ತ್ವಚೆಯನ್ನು ಬಿಗಿಗೊಳಿಸುತ್ತದೆ.

ಸಾಮಾಗ್ರಿಗಳು

* 1 ಚಮಚ ಆ್ಯಪಲ್ ಸೀಡರ್ ವಿನೇಗರ್

* 1 ಚಮಚ ಬೇಕಿಂಗ್ ಸೋಡಾ

ಮಾಡುವುದು ಹೇಗೆ

*ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿ

*ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ

*ನೀರಿನಿಂದ ಮುಖ ತೊಳೆದುಕೊಳ್ಳಿ

*ಆ್ಯಪಲ್ ಸೀಡರ್ ವಿನೇರ್‌ ಮತ್ತು ನೀರನ್ನು ಮಿಶ್ರ ಮಾಡಿ ಹಾಗೂ ಮರುದಿನ ಬೆಳಗ್ಗೆ ಇದನ್ನು ಮುಖಕ್ಕೆ ಹಚ್ಚಿ.

*ನಿಮ್ಮ ಮುಖಕ್ಕೆ ಬಟ್ಟೆಯಿಂದ ಮಸಾಜ್ ನೀಡಿ

*ಬಟ್ಟೆಯು ಮುಖದಲ್ಲಿ 15-20 ನಿಮಿಷ ಹಾಗೆಯೇ ಇರಲಿ. ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ.

ಬೇಕಿಂಗ್ ಸೋಡಾ ಮತ್ತು ಆಲೀವ್ ಆಯಿಲ್

ಬೇಕಿಂಗ್ ಸೋಡಾ ಮತ್ತು ಆಲೀವ್ ಆಯಿಲ್

ಯಾವುದೇ ರೀತಿಯ ಅಲರ್ಜಿಯಿಂದ ತ್ವಚೆಯನ್ನು ಸಂರಕ್ಷಿಸಲು ಆಲೀವ್ ಆಯಿಲ್ ಸಹಕಾರಿ ಇದು ತ್ವಚೆಯನ್ನು ಮೃದುವಾಗಿಸುತ್ತದೆ.

Most Read: ಈ ಮೂರು ರಾಶಿಯವರು ಜೀವನದಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿರುವವರು!

ಸಾಮಾಗ್ರಿಗಳು

* 1 ಚಮಚ ಬೇಕಿಂಗ್ ಸೋಡಾ

* 1 ಚಮಚ ಆಲೀವ್ ಆಯಿಲ್

ಮಾಡುವುದು ಹೇಗೆ

*ಬೇಕಿಂಗ್ ಸೋಡಾ ಮತ್ತು ಆಲೀವ್ ಆಯಿಲ್ ಅನ್ನು ಮಿಶ್ರ ಮಾಡಿ ಪೇಸ್ಟ್ ಮಾಡಿಕೊಳ್ಳಿ

*ಕಲೆ ಇರುವ ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ

*15 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ

* ಪ್ರತೀ ದಿನ ನೀವು ಇದನ್ನು ಪುನರಾವರ್ತಿಸಬಹುದು.

ಬೇಕಿಂಗ್ ಸೋಡಾ ಮತ್ತು ಓಟ್‌ಮೀಲ್

ಬೇಕಿಂಗ್ ಸೋಡಾ ಮತ್ತು ಓಟ್‌ಮೀಲ್

ಓಟ್‌ಮೀಲ್ ತ್ವಚೆಯಿಂದ ಉತ್ಪಾದನೆಯಾಗುವ ಹೆಚ್ಚುವರಿ ಜಿಡ್ಡನ್ನು ಇದು ನಿಯಂತ್ರಿಸುತ್ತದೆ ಮತ್ತು ತ್ವಚೆಯನ್ನು ಮೊಡವೆ ಮುಕ್ತಗೊಳಿಸುತ್ತದೆ.

ಸಾಮಾಗ್ರಿಗಳು

*1 ಚಮಚ ಓಟ್‌ಮೀಲ್

* 1 ಚಮಚ ಬೇಕಿಂಗ್ ಸೋಡಾ

Most Read: ಪೈಲ್ಸ್‌ಗೆ ಮನೆಯಲ್ಲಿಯೇ ಚಿಕಿತ್ಸೆ- ಒಂದೆರಡು ದಿನಗಳಲ್ಲಿಯೇ ಗುಣಮುಖವಾಗುವಿರಿ

ತಯಾರಿಸುವ ವಿಧಾನ

* ಓಟ್‌ಮೀಲ್, ಬೇಕಿಂಗ್ ಸೋಡಾ ಮತ್ತು ನೀರನ್ನು ಜೊತೆಯಾಗಿ ಮಿಶ್ರ ಮಾಡಿಕೊಳ್ಳಿ.

* ಮೊಡವೆ, ಕಲೆ ಇರುವ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ.

* 15 ನಿಮಿಷಗಳ ನಂತರ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ

* ಕೊನೆಗೆ ನಿಮ್ಮ ಮುಖವನ್ನು ಮಾಯಿಶ್ಚರೈಸರ್‌ನಿಂದ ಮಸಾಜ್ ಮಾಡಿಕೊಳ್ಳಿ.

English summary

How To Use Baking Soda To Treat Acne?

Acne is a common skin issue that is faced by many of us at some point in our life. Acne can be of two types - normal and chronic. Getting pimples once in a while or around the time of your periods is considered normal. You are said to have chronic acne when you get breakouts on a regular basis that eventually causes skin irritation and infection. Natural remedies are the best to treat such issues.
X
Desktop Bottom Promotion