For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ತಾಜಾ ಹಾಲಿನ ಫೇಶಿಯಲ್-ಮನೆಯಲ್ಲೇ ಮಾಡಿ ನೋಡಿ

|

ತ್ವಚೆಯ ಹಲವಾರು ತೊಂದರೆಗಳಿಗೆ ತ್ವಚೆಯ ಆರೈಕೆಯ ಕೊರತೆಯೇ ಆಗಿದೆ. ಕಲೆಗಳು, ಮೊಡವೆ, ಕಪ್ಪುತಲೆ, ಬಿಳಿತಲೆ, ಬಣ್ಣ ಬಿಳಿಚಿರುವುದು ಮೊದಲಾದವು ಈ ನಿರ್ಲಕ್ಷ್ಯದಿಂದ ಎದುರಾಗಬಹುದು. ಹಾಗಾಗಿ ತ್ವಚೆಯ ಆರೋಗ್ಯವನ್ನು ಕಾಪಾಡಲು ಕೆಲವಾರು ಆರೈಕೆಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಹಾಗೂ ಇದರಲ್ಲಿ ಫೇಶಿಯಲ್ ಅಥವಾ ಮುಖದ ಚರ್ಮದ ಆರೈಕೆ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಸೂಕ್ತ

ಫೇಶಿಯಲ್ ನಿಂದ ಆರೋಗ್ಯಕರ ಮತ್ತು ಕಾಂತಿಯುತ ತ್ವಚೆಯನ್ನು ಪಡೆಯಬಹುದು. ಸಾಮಾನ್ಯವಾಗಿ ಫೇಶಿಯಲ್ ಸೇವೆಯನ್ನು ಸೌಂದರ್ಯ ಮಳಿಗೆಗಳಲ್ಲಿ ಒದಗಿಸಲಾಗುತ್ತದೆ ಹಾಗೂ ಇವು ವಿವಿಧ ರೂಪದಲ್ಲಿ ಗ್ರಾಹಕರನ್ನು ಸೆಳೆಯುತ್ತವೆ ಹಾಗೂ ಸಾಕಷ್ಟು ದುಬಾರಿಯೂ ಆಗಿವೆ. ಆದರೆ ಇಷ್ಟೇ ಉತ್ತಮ ಫೇಶಿಯಲ್ ಸೇವೆಯನ್ನು ನೀವು ಮನೆಯಲ್ಲಿಯೇ, ನಿಮ್ಮ ಅಡುಗೆಮನೆಯಲ್ಲಿರುವ ಸಾಮಾನ್ಯ ಸಾಮಾಗ್ರಿಗಳನ್ನೇ ಉಪಯೋಗಿಸಿ ಪಡೆಯಬಹುದೆಂದು ನಿಮಗೆ ಎಂದಾದರೂ ಅನ್ನಿಸಿದ್ದೆದೆಯೇ?

ಹೌದು, ಇದು ಸಾಧ್ಯ. ಅಲ್ಲದೇ ಈ ನೈಸರ್ಗಿಕ ಸಾಮಾಗ್ರಿಗಳು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲವಾದ್ದರಿಂದ ಪ್ರಯತ್ನಿಸುವುದರಲ್ಲೇನೂ ತಪ್ಪಿಲ್ಲ. ಹಾಲಿನ ಪ್ರಯೋಜನಗಳ ಬಗ್ಗೆ ನಾವೆಲ್ಲಾ ಅರಿತೇ ಇದ್ದೇವೆ. ಸೇವನೆಯ ಮೂಲಕ ಆರೋಗ್ಯಕ್ಕೆ ಎಷ್ಟು ಉಪಯುಕ್ತವೋ, ಇದರ ಉಪಯೋಗದಿಂದ ತ್ವಚೆಯೂ ಕಂಗೊಳಿಸುತ್ತದೆ. ಹಾಲಿನಲ್ಲಿ ವಿಟಮಿನ್ನುಗಳು ಮತ್ತು ಪ್ರೋಟೀನುಗಳು ಸಮೃದ್ಧವಾಗಿದ್ದು ತ್ವಚೆಯ ಜೀವಕೋಶಗಳಿಗೆ ಚೈತನ್ಯ ನೀಡುತ್ತದೆ. ಅಲ್ಲದೇ ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ತ್ವಚೆಯ ಹೊರಭಾಗದಲ್ಲಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸಲೂ ನೆರವಾಗುತ್ತದೆ. ಇಂದಿನ ಲೇಖನದಲ್ಲಿ ಫೇಶಿಯಲ್ ಎಂಬ ಸೌಂದರ್ಯವರ್ಧಕ ಕ್ರಮವನ್ನು ಮನೆಯಲ್ಲಿಯೇ ಹೇಗೆ ನಿರ್ವಹಿಸಬಹುದು ಎಂಬುದನ್ನು ಕ್ರಮವಾಗಿ ಅರಿಯೋಣ...

ಹಂತ 1: ಸ್ವಚ್ಛಗೊಳಿಸುವುದು (Cleansing)

ಹಂತ 1: ಸ್ವಚ್ಛಗೊಳಿಸುವುದು (Cleansing)

ಅಗತ್ಯವಿರುವ ಸಾಮಾಗ್ರಿಗಳು

*1 ದೊಡ್ಡ ಚಮಚ ಹಸಿ ಹಾಲು

*1 ದೊಡ್ಡ ಚಮಚ ಲಿಂಬೆರಸ

Most Read: ಮಳೆಗಾಲದಲ್ಲಿ ಕಾಡುವ ಕೆಮ್ಮಿಗೆ ಪವರ್ ಫುಲ್ ಮನೆಮದ್ದುಗಳು

ಅನುಸರಿಸಬೇಕಾದ ವಿಧಾನ

ಅನುಸರಿಸಬೇಕಾದ ವಿಧಾನ

*ಮೊದಲಿಗೆ ತ್ವಚೆಯ ಹೊರಭಾಗವನ್ನು ಕಲ್ಮಶಗಳಿಲ್ಲದಂತೆ ಸ್ವಚ್ಛಗೊಳಿಸಬೇಕಾಗುತ್ತದೆ. ಈ ಮೂಲಕ ತ್ವಚೆಯಲ್ಲಿ ಎದುರಾಗಿದ್ದ ಕೆಲಗಳು, ಕಪ್ಪು ವರ್ತುಲಗಳು ಮೊದಲಾದವುಗಳನ್ನು ನಿವಾರಿಸುವುದು ಸುಲಭಸಾಧ್ಯವಾಗುತ್ತದೆ.

*ಹಾಲು ಮತ್ತು ಈಗತಾನೇ ಹಿಂಡಿದ ಲಿಂಬೆರಸವನ್ನು ಬೆರೆಸಿ ತಕ್ಷಣವೇ ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ಹಚ್ಚಿಕೊಳ್ಳಿ ಹಾಗೂ ವೃತ್ತಾಕಾರದಲ್ಲಿ ಬೆರಳುಗಳ ತುದಿಯಿಂದ ಸುಮಾರು ಎರಡರಿಂದ ಮೂರು ನಿಮಿಷ ಕಾಲ ನಯವಾಗಿ ಮಸಾಜ್ ಮಾಡಿ.

*ಬಳಿಕ ಕಣ್ಣುಗಳನ್ನು ಮುಚ್ಚಿಕೊಂಡು ಸುಮಾರು ಹತ್ತು ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

Most Read: 'ಎ' ಅಕ್ಷರದಿಂದ ಆರಂಭವಾಗುವ ಹೆಸರಿನವರ ನಡವಳಿಕೆ ಹೀಗಿರುತ್ತದೆ ನೋಡಿ...

ಹಂತ : ಸತ್ತ ಜೀವಕೋಶ ನಿವಾರಣೆ (Scrubbing)

ಹಂತ : ಸತ್ತ ಜೀವಕೋಶ ನಿವಾರಣೆ (Scrubbing)

ಅಗತ್ಯವಿರುವ ಸಾಮಾಗ್ರಿಗಳು

*2 ದೊಡ್ಡ ಚಮಚ ಹಸಿ ಹಾಲು

*1 ದೊಡ್ಡ ಚಮಚ ಕೆಂಪು ಬೇಳೆಯ ಪುಡಿ (red lentil powder)

ಅನುಸರಿಸಬೇಕಾದ ವಿಧಾನ:

*ಈ ವಿಧಾನದಿಂದ ತ್ವಚೆಯ ಹೊರಪದರದಲ್ಲಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳು ಸಡಿಲಗೊಂಡು ಸುಲಭವಾಗಿ ಕಳಚಿಕೊಳ್ಳುತ್ತವೆ. ಈ ಜೀವಕೋಶಗಳ ಇರುವಿಕೆಯಿಂದ ತ್ವಚೆ ಕಳಾಹೀನವಾಗಿ ಕಾಣಿಸಿವುದು ಮಾತ್ರವಲ್ಲ ಸೂಕ್ಷ್ಮರಂಧ್ರಗಳನ್ನೂ ಇವು ಮುಚ್ಚಿಬಿಡುವುದರಿಂದ ತ್ವಚೆ ಉಸಿರಾಡಲೂ ಸಾಧ್ಯವಾಗುವುದಿಲ್ಲ. ಹಾಗಾಗಿ ನಿಯಮಿತವಾಗಿ ಈ ಪದರವನ್ನು ನಿವಾರಿಸುತ್ತಾ ಇರುವ ಮೂಲಕ ಆರೋಗ್ಯಕರ ಮತ್ತು ಕಾಂತಿಯುಕ್ತ ತ್ವಚೆಯನ್ನು ಪಡೆಯಬಹುದು.

*ಎರಡೂ ಸಾಮಾಗ್ರಿಗಳನ್ನು ಚೆನ್ನಾಗಿ ಬೆರೆಸಿ ನುಣ್ಣನೆಯ ಲೇಪನ ತಯಾರಿಸಿ. ಈ ಲೇಪನವನ್ನು ತ್ವಚೆಯ ಮೇಲೆ, ವಿಶೇಷವಾಗಿ ಹಣೆಯ ನಡುವಿನಿಂದ ಗದ್ದದ ಎರಡೂ ಅಂಚುಗಳವರೆಗಿನ ('T' zone) ಭಾಗದಲ್ಲಿ ಕೊಂಚವೇ ಒತ್ತಡದಿಂದ ಬೆರಳುಗಳ ತುದಿಗಳನ್ನು ಬಳಸಿ ಮಸಾಜ್ ಮಾಡಿ. ಬಳಿಕ ಸುಮಾರು ಐದು ನಿಮಿಷ ಹಾಗೇ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

Most Read: ಅಂಗೈಯಲ್ಲಿ ತ್ರಿಕೋನವಿದ್ದರೆ ಅವರ ಅದೃಷ್ಟವೇ ಬದಲಾಗಲಿದೆ!

ಹಂತ 3: ಮುಖಲೇಪ (Face Pack)

ಹಂತ 3: ಮುಖಲೇಪ (Face Pack)

ಅಗತ್ಯವಿರುವ ಸಾಮಾಗ್ರಿಗಳು:

*1 ಚಿಕ್ಕಚಮಚ ಹಸಿ ಹಾಲು

*ಚಿಟಿಕೆಯಷ್ಟು ಅರಿಶಿನ ಪುಡಿ

ಅನುಸರಿಸಬೇಕಾದ ವಿಧಾನ

*ಈ ಹಂತದಲ್ಲಿ ತ್ವಚೆ ಅಗತ್ಯ ಪೋಷಕಾಂಶಗಳನ್ನು ಪಡೆದು ತಾಜಾತನದಿಂದ ಕಂಗೊಳಿಸುತ್ತದೆ ಹಾಗೂ ನೈಸರ್ಗಿಕ ಕಾಂತಿಯ ಮೂಲಕ ಸಹಜವರ್ಣ ಕಂಗೊಳಿಸುತ್ತದೆ. ಇದಕ್ಕಾಗಿ ಎರಡೂ ಸಾಮಾಗ್ರಿಗಳನ್ನು ಚೆನ್ನಾಗಿ ಬೆರೆಸಿ

*ಹತ್ತಿಯುಂಡೆಯನ್ನು ಬಳೈ ಮುಖದ ಮೇಲೆ ಹಚ್ಚಿಕೊಳ್ಳಬೇಕು ಹಾಗೂ ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಅರಿಶಿನ ಚಿಟಿಕೆಗಿಂತ ಹೆಚ್ಚಾಗದಿರಲಿ. ಏಕೆಂದರೆ ಅರಿಶಿನ ಹೆಚ್ಚಾದರೆ ಚರ್ಮದ ಮೇಲೆ ಹಳದಿ ಬಣ್ಣದ ಲೇಪನ ಮೂಡುತ್ತದೆ ಹಾಗೂ ಇದನ್ನು ನಿವಾರಿಸುವುದು ಕಷ್ಟಕರ.

ಹಂತ 4: ಟೋನಿಂಗ್ ಮತ್ತು ತೇವಕಾರಕ (Toning And Moisturising)

ಹಂತ 4: ಟೋನಿಂಗ್ ಮತ್ತು ತೇವಕಾರಕ (Toning And Moisturising)

ಅಗತ್ಯವಿರುವ ಸಾಮಾಗ್ರಿಗಳು

1 ದೊಡ್ಡ ಚಮಚ ಹಸಿ ಹಾಲು

1 ದೊಡ್ಡ ಚಮಚ ಅಪ್ಪಟ ಜೇನು

ಅನುಸರಿಸಬೇಕಾದ ವಿಧಾನ:

*ಒಂದು ಬೋಗುಣಿಯಲ್ಲಿ ಹಾಲು ಮತ್ತು ಜೇನನ್ನು ಬೆರೆಸಿ ಲೇಪಯ ತಯಾರಿಸಿ. ಈ ಲೇಪನವನ್ನು ಮುಖದ ತ್ವಚೆಯ ಮೇಲೆ ತೆಳುವಾಗಿ ಹಚ್ಚಿ ಬೆರಳುಗಳ ತುದಿಯಿಂದ ನಯವಾಗಿ ಮಸಾಜ್ ಮಾಡಿ.

*ಈ ಮೂಲಕ ತ್ವಚೆಗೆ ಅಗತ್ಯವಿರುವ ಆರ್ದ್ರತೆ ದೊರಕುತ್ತದೆ ಹಾಗೂ ತ್ವಚೆಯನ್ನು ಮೃದು ಮತ್ತು ನಯವಾಗಿಸಲು ಸಾಧ್ಯವಾಗುತ್ತದೆ.

*ಅತ್ಯಂತ ಸುರಕ್ಷಿತ ಹಾಗೂ ಸರಳವಾದ ಈ ವಿಧಾನವನ್ನು ವಾರಕ್ಕೊಮ್ಮೆ ಅನುಸರಿಸುವ ಮೂಲಕ ಆರೋಗ್ಯಕರ, ಮೊಡವೆರಹಿತ, ಕಲೆರಹಿತ ಹಾಗೂ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಸಾಧ್ಯವಾಗುತ್ತದೆ.

English summary

How To Do Milk Facial At Home?

We all know the health benefits of milk. Just like how it benefits health, it also helps in enhancing beauty especially when it comes to skin. Being a rich source of vitamins and proteins, it helps in improving the health of skin tissues. Also the lactic acid in milk aids removing dead skin cells, resulting in a bright skin. In this article, we'll discuss the step-by-step process on how to do a facial with raw milk at home.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more