For Quick Alerts
ALLOW NOTIFICATIONS  
For Daily Alerts

ಕಾಫಿ ಪೌಡರ್‌ನಿಂದ ಮುಖದ ಕಾಂತಿ ಹೆಚ್ಚಿಸುವುದು ಹೇಗೆ?

By Hemanth
|

ಚಾ, ಕಾಫಿ ಕುಡಿಯದೆ ಇರುವಂತವರು ತುಂಬಾ ಕಡಿಮೆ. ಹೀಗೀಗ ಕೆಲವೊಂದು ಗಾಳಿಸುದ್ದಿಗಳಿಂದಾಗಿ ಕಾಫಿ ಸೇವನೆ ಮಾಡುವಂತಹ ಜನರಲ್ಲೂ ಭೀತಿ ಮೂಡಿಸಲಾಗುತ್ತಿದೆ. ಆದರೆ ಹಿತಮಿತವಾಗಿ ಕಾಫಿ ಸೇವಿಸಿದರೆ ಅದು ದೇಹಕ್ಕೆ ಒಳ್ಳೆಯದು. ಅದೇ ರೀತಿ ಕಾಫಿಯನ್ನು ಚರ್ಮದ ಆರೈಕೆಗೂ ಬಳಸಬಹುದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಯಾಕೆಂದರೆ ಕಾಫಿಯಲ್ಲಿ ಇರುವಂತಹ ಕೆಫಿನ್ ಚರ್ಮದ ವಿನ್ಯಾಸ ಉತ್ತಮಪಡಿಸಿ, ಆರೋಗ್ಯವಾಗಿಡುವುದು. ಇದರಿಂದ ಚರ್ಮದಲ್ಲಿನ ಕಪ್ಪು ಕಲೆ, ಮೊಡವೆ, ಬಿಸಿಲಿನಿಂದ ಆಗಿರುವ ಕಲೆಗಳು ನಿವಾರಣೆಯಾಗುವುದು.

ಬ್ಯೂಟಿ ಟಿಪ್ಸ್: ಚರ್ಮದ ಕಾಂತಿಗೆ ಕಾಫಿಪುಡಿಯ ಸ್ಕ್ರಬ್

ಇದರಿಂದ ಚರ್ಮವು ಕಾಂತಿಯುತವಾಗಿ ಕಾಣುವುದು. ಕಾಫಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮವನ್ನು ಬಿಗಿಗೊಳಿಸುವುದು ಮಾತ್ರವಲ್ಲದೆ ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುವುದು. ಕಾಫಿಯು ಸತ್ತ ಚರ್ಮವನ್ನು ಕಿತ್ತೊಗೆಯಲು ನೆರವಾಗುವುದು. ಇದರಿಂದ ಚರ್ಮವು ಬಿಳಿಯಾಗುವುದು. ಇದು ಕಾಫಿಯಿಂದ ಸಿಗುವ ಹಲವಾರು ಲಾಭಗಳು. ಕಾಫಿಯಿಂದ ಮನೆಯಲ್ಲೇ ಚರ್ಮದ ಆರೈಕೆ ಮಾಡಿದರೆ ನಿಮ್ಮ ಹಣ ಹಾಗೂ ಸಮಯ ಎರಡೂ ಉಳಿತಾಯವಾಗಿ, ಕಾಂತಿಯುತ ತ್ವಚೆಯು ನಿಮ್ಮದಾಗುವುದು. ಕಾಫಿಯನ್ನು ತ್ವಚೆಗೆ ಬಳಸಿಕೊಳ್ಳುವುದು ಹೇಗೆ ಎಂದು ಈ ಲೇಖನದ ಮೂಲಕ ತಿಳಿಯಿರಿ....

ಮೊದಲ ಹಂತ: ಸ್ವಚ್ಛಗೊಳಿಸುವುದು

ಮೊದಲ ಹಂತ: ಸ್ವಚ್ಛಗೊಳಿಸುವುದು

ಫೇಶಿಯಲ್ ಮಾಡುವ ಮೊದಲು ತ್ವಚೆಯನ್ನು ಸ್ವಚ್ಛಗೊಳಿಸುವುದು ಮೊದಲ ಕ್ರಮ. ಇದರಿಂದ ಚರ್ಮದಲ್ಲಿನ ಕೊಳೆ, ಅತಿಯಾದ ಎಣ್ಣೆ ಮತ್ತು ಇತರ ಕಲ್ಮಶಗಳು ದೂರವಾಗುವುದು. ಇದರಿಂದ ಚರ್ಮ ಸ್ವಚ್ಛವಾಗುವುದು.

ಇದು ಮಾಡುವ ವಿಧಾನ:

ಇದು ಮಾಡುವ ವಿಧಾನ:

ಈ ಸರಳ ವಿಧಾನಕ್ಕೆ ಬೇಕಾಗಿರುವುದು ಕಾಫಿ ಹುಡಿ ಮತ್ತು ಅಲೋವೆರಾ ಲೋಳೆ. ಒಂದು ಚಮಚ ಹುಡಿ ಮಾಡಿದ ಕಾಫಿ ತೆಗೆದುಕೊಳ್ಳಿ ಮತ್ತು ಇದಕ್ಕೆ ಎರಡು ಚಮಚ ಅಲೋವೆರಾ ಲೋಳೆ ಹಾಕಿ. ಇವೆರಡನ್ನು ಪಿಂಗಾಣಿಗೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಎರಡು ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. ಎರಡು ನಿಮಿಷ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಈಗ ನೀವು ಮೊದಲ ಹಂತ ದಾಟಿದ್ದೀರಿ.

ಎರಡನೇ ಹಂತ: ಸ್ಕ್ರಬ್ ಮಾಡುವುದು

ಎರಡನೇ ಹಂತ: ಸ್ಕ್ರಬ್ ಮಾಡುವುದು

ತ್ವಚೆಯನ್ನು ಸ್ವಚ್ಛಗೊಳಿಸಿದ ಬಳಿಕ ಇರುವ ಎರಡನೇ ಹಂತವೆಂದರೆ ಅದು ಸ್ಕ್ರಬ್ ಮಾಡುವುದು. ಇದರಿಂದ ಚರ್ಮದ ಸತ್ತ ಕೋಶಗಳು ಹೋಗಿ ತ್ವಚೆಗೆ ಕಾಂತಿ ಬರುವುದು ಮತ್ತು ಸತ್ತ ಚರ್ಮವನ್ನು ಕಿತ್ತೊಗೆಯುವುದು.

ಹೇಗೆ ಮಾಡುವುದು?

ಒಂದು ಪಿಂಗಾಣಿಗೆ ಒಂದು ಚಮಚ ಸಕ್ಕರೆ, ಒಂದು ಚಮಚ ಕಾಫಿ ಮತ್ತು ಎರಡು ಚಮಚ ತೆಂಗಿನೆಣ್ಣೆ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ವೃತ್ತಾಕಾರದಲ್ಲಿ ಮುಖದ ಮೇಲೆ 5-6 ನಿಮಿಷ ಕಾಲ ಸ್ಕ್ರಬ್ ಮಾಡಿ. ಇದು ಚರ್ಮದಲ್ಲಿರುವ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು, ಚರ್ಮವು ಇದರಿಂದ ಕಾಂತಿ ಹಾಗೂ ನಯವಾಗುವುದು. ಐದು ನಿಮಿಷ ಬಳಿಕ ನೀರಿನಿಂದ ತೊಳೆಯಿರಿ.

ಮೂರನೇ ಹಂತ: ಫೇಸ್ ಮಾಸ್ಕ್

ಮೂರನೇ ಹಂತ: ಫೇಸ್ ಮಾಸ್ಕ್

ಕಾಂತಿಯುತ ಹಾಗೂ ನಯವಾದ ತ್ವಚೆ ಪಡೆಯುವುದರಿಂದ ನೀವು ಒಂದು ಹೆಜ್ಜೆ ಹಿಂದಿದ್ದೀರಿ. ಫೇಶಿಯಲ್ ಮಾಡುವಾಗ ಫೇಸ್ ಮಾಸ್ಕ್ ತುಂಬಾ ಮಹತ್ವದ ಹಂತವಾಗಿದೆ. ಫೇಸ್ ಮಾಸ್ಕ್ ನಿಂದ ಚರ್ಮವು ತೇವಾಂಶ ಪಡೆದುಕೊಳ್ಳುವುದು ಮಾತ್ರವಲ್ಲದೆ ಸಂಪೂರ್ಣ ವಿನ್ಯಾಸ ಉತ್ತಮಪಡಿಸುವುದು. ಕಾಫಿಯಿಂದ ಮಾಡಬಹುದಾದ ಕೆಲವು ಫೇಸ್ ಮಾಸ್ಕ್ ಗಳು ಇಲ್ಲಿವೆ.

ಕಾಫಿ ಮತ್ತು ಜೇನುತುಪ್ಪದ ಫೇಸ್ ಮಾಸ್ಕ್

ಮಾಡುವ ವಿಧಾನ

ಪಿಂಗಾಣಿಗೆ ಒಂದು ಚಮಚ ಕಾಫಿ ಹುಡಿ, ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿ. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. 15 ನಿಮಿಷ ಕಾಲ ಇದು ಹಾಗೆ ಒಣಗಲಿ ಮತ್ತು ಬಳಿಕ ತೊಳೆಯಿರಿ. ಜೇನುತುಪ್ಪದಲ್ಲಿ ಮಾಯಿಶ್ಚರೈಸ್ ನೀಡುವಂತಹ ಗುಣಗಳು ಇವೆ. ಇದನ್ನು ಕಾಫಿ ಜತೆ ಸೇರಿಸಿಕೊಂಡಾಗ ಅದು ತ್ವಚೆಗೆ ಮಾಯಿಶ್ಚರೈಸ್ ಮತ್ತು ಕಾಂತಿ ನೀಡುವುದು.

ಕಾಫಿ ಮತ್ತು ಲಿಂಬೆಯ ಫೇಸ್ ಮಾಸ್ಕ್

ಕಾಫಿ ಮತ್ತು ಲಿಂಬೆಯ ಫೇಸ್ ಮಾಸ್ಕ್

ಮಾಡುವ ವಿಧಾನ

ಒಂದು ಚಮಚ ಕಾಫಿ ಹುಡಿ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಲಿಂಬೆರಸ ಹಿಡಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 30 ನಿಮಿಷ ಮುಖದಲ್ಲಿ ಹಾಗೆ ಬಿಟ್ಟ ಬಳಿಕ ತೊಳೆಯಿರಿ. ಲಿಂಬೆಯಲ್ಲಿ ವಿಟಮಿನ್ ಸಿ ಇದ್ದು, ಇದು ಮುಖದಲ್ಲಿರುವ ಹೆಚ್ಚುವರಿ ಕೊಳೆ ತೆಗೆದುಹಾಕಿ ಚರ್ಮವು ಸ್ವಚ್ಛ ಹಾಗೂ ಆರೋಗ್ಯವಾಗುವಂತೆ ಮಾಡುವುದು.

ಕಾಫಿ ಮತ್ತು ಹಾಲಿನ ಫೇಸ್ ಮಾಸ್ಕ್

ಕಾಫಿ ಮತ್ತು ಹಾಲಿನ ಫೇಸ್ ಮಾಸ್ಕ್

ಮಾಡುವ ವಿಧಾನ

ಒಂದು ಚಮಚ ಕಾಫಿ ಹುಡಿಗೆ ಒಂದು ಚಮಚ ಹಾಲು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಳಿಕ ವೃತ್ತಾಕಾರದಲ್ಲಿ ಉಜ್ಜುತ್ತಾ ಮುಖ ತೊಳೆಯಿರಿ. ಹಾಲಿನಲ್ಲಿರುವ ಅಂಶಗಳು ಮುಖದ ಕಾಂತಿ ಹೆಚ್ಚಿಸುವುದು.ಕಾಫಿಯ ಈ ಫೇಶಿಯಲ್ ನಿಮ್ಮ ತ್ವಚೆಗೆ ಅದ್ಭುತವನ್ನು ಮಾಡಲಿದೆ. ವಾರದಲ್ಲಿ ಒಂದು ಸಲ ಎರಡು ತಿಂಗಳ ಕಾಲ ಇದನ್ನು ಮುಂದುವರಿಸಿ ಮತ್ತು ವ್ಯತ್ಯಾಸ ನಿಮಗೆ ಕಂಡುಬರುವುದು.

English summary

How Can Coffee Help In Enhancing Beauty?

Coffee is best known as an antioxidant that helps tighten the skin and protects the skin from free radicals. Coffee also helps in exfoliating the skin, thus making it look brighter. It is one solution for many skin problems. Now, it is more exciting when you can get flawless skin right at the comfort of your home, isn't it? Here is a complete DIY step-by-step coffee facial guide to get that brighter and healthier-looking skin.
X
Desktop Bottom Promotion