For Quick Alerts
ALLOW NOTIFICATIONS  
For Daily Alerts

ರಾತ್ರಿ ಬೆಳಗಾಗುವುದರೊಳಗೆ ತ್ವಚೆಯ ಸೌಂದರ್ಯ ಹೆಚ್ಚಿಸುವ ಮಾಸ್ಕ್‌ಗಳು

|

ಸುಂದರ ಹಾಗೂ ಕಾಂತಿಯುತ ತ್ವಚೆಯೊಂದಿಗೆ ಪ್ರತಿನಿತ್ಯ ಬೆಳಗ್ಗೆ ಎದ್ದೇಳಬೇಕೆಂದು ಹೆಚ್ಚಿನವರು ಕನಸು ಕಾಣುವರು. ಆದರೆ ಇಂತಹ ತ್ವಚೆ ಪಡೆಯುವ ಅದೃಷ್ಟವು ಪ್ರತಿಯೊಬ್ಬರಿಗೂ ಇರುವುದಿಲ್ಲ. ಇಂತಹ ತ್ವಚೆ ಪಡೆಯಬೇಕಾದರೆ ನೀವು ಪ್ರತಿನಿತ್ಯ ತ್ವಚೆಯ ಆರೈಕೆ ಮಾಡಿಕೊಂಡು ಅದನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ತ್ವಚೆ ಬಗ್ಗೆ ಕೇವಲ ನೀವು ಆಲೋಚನೆ ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಾಗದು.

ಇದಕ್ಕಾಗಿ ನೀವು ಸ್ವಲ್ಪ ಸಮಯ ವ್ಯಯಿಸಬೇಕು. ಈ ಲೇಖನದಲ್ಲಿ ನಿಮಗೆ ಕೆಲವೊಂದು ಮಾಸ್ಕ್ ಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ರಾತ್ರಿ ವೇಳೆ ಬಳಸಿಕೊಂಡರೆ ಬೆಳಗ್ಗೆ ಸುಂದರ ಹಾಗೂ ನಯವಾದ ತ್ವಚೆ ನಿಮ್ಮದಾಗುವುದು. ಕೆಲಸದ ಒತ್ತಡದಿಂದಾಗಿ ದಿನವಿಡಿ ನಿಮಗೆ ತ್ವಚೆಯ ಆರೈಕೆ ಮಾಡಲು ಸಮಯ ಸಿಗದೆ ಇದ್ದರೆ, ಆಗ ನೀವು ರಾತ್ರಿ ವೇಳೆ ಈ ಮಾಸ್ಕ್ ನ್ನು ಖಂಡಿತವಾಗಿಯೂ ಬಳಸಿನೋಡಿ. ಎಲ್ಲಾ ರೀತಿಯ ಚರ್ಮಗಳಿಗೆ ನೆರವಾಗುವ ಇದು ನೈಸರ್ಗಿಕದತ್ತ ಮಾಸ್ಕ್ ಗಳು. ವೇಗದ ಫಲಿತಾಂಶ ಪಡೆಯಲು ನೀವು ಇದನ್ನು ದಿನನಿತ್ಯ ಬಳಸಿ.

 ಅರಿಶಿನ ಮತ್ತು ಮೊಟ್ಟೆ

ಅರಿಶಿನ ಮತ್ತು ಮೊಟ್ಟೆ

ಮಾಸ್ಕ್ ಗೆ ಬೇಕಾಗುವ ಸಾಮಗ್ರಿಗಳು

*1-2 ಚಮಚ ಅರಿಶಿನ ಹುಡಿ

*2-3 ಚಮಚ ಹಾಲು

ತಯಾರಿಸುವ ವಿಧಾನ

ಹಾಲು ಮತ್ತು ಅರಿಶಿನ ಹುಡಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿ. ಇದನ್ನು ಬ್ರಷ್ ಬಳಸಿಕೊಂಡು ಮುಖಕ್ಕೆ ಹಚ್ಚಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ತಣ್ಣೀರಿನಿಂದ ತೊಳೆಯಿರಿ ಮತ್ತು ಒಣಗಲು ಬಿಡಿ. ಇದರ ಬಳಿಕ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಇದನ್ನು ವಾರದಲ್ಲಿ 3-4 ಸಲ ಮಾಡಿ.

ಇನ್ನೊಂದು ವಿಧಾನ ಸ್ವಲ್ಪ- ಅಕ್ಕಿಪುಡಿಯ ಜೊತೆಗೆ ಒಂದು ಚಮಚ ಅರಿಶಿನ ಪುಡಿಯನ್ನು ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಟೊಮೇಟೊ ರಸ ಹಾಗು ಒಂದು ಚಮಚ ಹಾಲನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖದಲ್ಲಿರುವ ಸುಕ್ಕುಗಳ ಮೇಲೆ ಲೇಪಿಸಿ. ನಂತರ ಇದನ್ನು 20 ನಿಮಿಷಗಳ ಕಾಲ ಬಿಟ್ಟು, ಬಿಸಿ ನೀರಿನಿಂದ ತೊಳೆಯಿರಿ.

ಮೊಟ್ಟೆಯ ಬಿಳಿ ಲೋಳೆಯ ಮಾಸ್ಕ್

ಮೊಟ್ಟೆಯ ಬಿಳಿ ಲೋಳೆಯ ಮಾಸ್ಕ್

ಬೇಕಾಗುವ ಸಾಮಗ್ರಿಗಳು

1 ಮೊಟ್ಟೆ

ತಯಾರಿಸುವ ವಿಧಾನ

ಮೊಟ್ಟೆಯಿಂದ ಅದರ ಬಿಳಿಭಾಗ ಬೇರ್ಪಡಿಸಿ ಮತ್ತು ಅದನ್ನು ಸರಿಯಾಗಿ ಕಲಸಿಕೊಂಡು ನಯವಾಗಿಸಿಕೊಳ್ಳಿ. ಬ್ರಷ್ ಬಳಸಿಕೊಂಡು ಇದರ ಪದರವನ್ನು ಮುಖಕ್ಕೆ ಹಚ್ಚಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ. ಬಿಸಿ ನೀರನ್ನು ಬಳಸಬೇಡಿ. ಯಾಕೆಂದರೆ ಮೊಟ್ಟೆ ಅಲ್ಲೇ ಬೇಯಬಹುದು. ವಾರದಲ್ಲಿ 2-3 ಸಲ ಇದರ ಬಳಕೆ ಮಾಡಿದರೆ ಉತ್ತಮ ಫಲಿತಾಂಶ ಖಚಿತ.

ಅಲೋವೆರಾ ಮತ್ತು ವಿಟಮಿನ್ ಇ ಮಾಸ್ಕ್

ಅಲೋವೆರಾ ಮತ್ತು ವಿಟಮಿನ್ ಇ ಮಾಸ್ಕ್

ಸಾಮಗ್ರಿಗಳು

*1 ಚಮಚ ಅಲೋವೆರಾ ಲೋಳೆ

*2 ವಿಟಮಿನ್ ಇ ಕ್ಯಾಪ್ಸೂಲ್ಸ್

ತಯಾರಿಸುವ ವಿಧಾನ

ತಾಜಾ ಅಲೋವೆರಾ ಎಲೆ ಕತ್ತರಿಸಿಕೊಂಡು ಅದರ ಲೋಳೆ ತೆಗೆಯಿರಿ. ವಿಟಮಿನ್ ಇ ಕ್ಯಾಪ್ಸೂಲ್ ನಿಂದ ಎಣ್ಣೆ ತೆಗೆಯಿರಿ ಮತ್ತು ಅದನ್ನು ಅಲೋವೆರಾ ಲೋಳೆಗೆ ಹಾಕಿ. ಎರಡು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 2-3 ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರದಲ್ಲಿ 2-3 ಸಲ ಹೀಗೆ ಮಾಡಿ. ಇನ್ನೊಂದು ವಿಧಾನ ಇದೆ- ನಿಮ್ಮ ರೆಫ್ರಿಜರೇಟರ್ ನ ಐಸ್ ಟ್ರೆ ಯನ್ನು ಚೆನ್ನಾಗಿ ತೊಳೆದು ಅದರಲ್ಲಿ ಅರ್ಧ ಭಾಗಕ್ಕೆ ಶುದ್ಧವಾದ ನೀರನ್ನು ತುಂಬಿ. ಇನ್ನೂ ಅರ್ಧಕ್ಕೆ ಅಲೊವೆರ ರಸವನ್ನು ಹಾಗೆಯೇ ಮೇಲೆ ಹಾಕಿ ಫ್ರೀಜ಼ರ್ ನಲ್ಲಿ ಇಡಿ. ಇದು ಗಡ್ಡೆ ಕಟ್ಟಿಕೊಂಡ ನಂತರ ಚೆನ್ನಾಗಿ ಮುಖ ತೊಳೆದು ಈ ಮಂಜುಗಡ್ಡೆ ಇಂದ ಹಾನಿಗೊಳಗಾದ ಚರ್ಮದ ಮೇಲೆ ಮೆತ್ತಗೆ ಉಜ್ಜಿ. ಇದರಿಂದ ಚರ್ಮಕ್ಕೆ ತಣ್ಣಗೆ ಹಾಯ್ ಎನಿಸುವುದೇ ಅಲ್ಲದೆ ಹಾಗೆಯೇ ಚರ್ಮದ ದುರಸ್ತಿಯು ಆಗಲಿದೆ.

ತೆಂಗಿನೆಣ್ಣೆ ಮತ್ತು ಟೀ ಟ್ರೀ ಎಣ್ಣೆಯ ಮಾಸ್ಕ್

ತೆಂಗಿನೆಣ್ಣೆ ಮತ್ತು ಟೀ ಟ್ರೀ ಎಣ್ಣೆಯ ಮಾಸ್ಕ್

ಬೇಕಾಗುವ ಸಾಮಗ್ರಿಗಳು

ತೆಂಗಿನೆಣ್ಣೆ

ಕೆಲವು ಹನಿ ಟೀ ಟ್ರೀ ತೈಲ

ತಯಾರಿಸುವ ವಿಧಾನ

ತೆಂಗಿನೆಣ್ಣೆ ಮತ್ತು ಚಹಾ ಮರದ ಎಣ್ಣೆಯನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ನಿಧಾನವಾಗಿ ಮಸಾಜ್ ಮಾಡಿ ರಾತ್ರಿಯಿಡಿ ಹಾಗೆ ಬಿಡಿ. ಚರ್ಮವು ಸಂಪುರ್ಣವಾಗಿ ತೈಲವನ್ನು ಹೀರಿಕೊಳ್ಳಲಿ. ಮರುದಿನ ಬೆಳಗ್ಗೆ ಮುಖ ತೊಳೆಯಿರಿ. ವೇಗ ಮತ್ತು ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 3-4 ಸಲ ಹೀಗೆ ಮಾಡಿ.

ಟೊಮೆಟೊ ಮತ್ತು ಜೇನುತುಪ್ಪದ ಮಾಸ್ಕ್

ಟೊಮೆಟೊ ಮತ್ತು ಜೇನುತುಪ್ಪದ ಮಾಸ್ಕ್

ಬೇಕಾಗುವ ಸಾಮಗ್ರಿಗಳು

3 ಚಮಚ ಟೊಮೆಟೊ ರಸ

1 ಚಮಚ ಜೇನುತುಪ್ಪ

ತಯಾರಿಸುವ ವಿಧಾನ

ಟೊಮೆಟೊವನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು, ಅದನ್ನು ಜಜ್ಜಿಕೊಂಡು ರಸ ತೆಗೆಯಿರಿ. ಇದಕ್ಕೆ ಜೇನುತುಪ್ಪ ಹಾಕಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರದಲ್ಲಿ 2-3 ಸಲ ಹೀಗೆ ಮಾಡಿ.

ಇನ್ನೊಂದು ವಿಧಾನವಿದೆ ನೋಡಿ- ಸಮಪ್ರಮಾಣದಲ್ಲಿ ಟೊಮೆಟೊ ಹಣ್ಣಿನ ತಿರುಳು ಮತ್ತು ಮೊಸರನ್ನು ಬೆರೆಸಿ. ಮಿಶ್ರಣ ತೆಳುವಾಯಿತು ಅನ್ನಿಸಿದರೆ ಮೊಸರಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಈ ಮಿಶ್ರಣವನ್ನು ದಪ್ಪನಾಗಿ ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ಹಚ್ಚಿ. ಒಂದು ಗಂಟೆಯ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನ ಅನುಸರಿಸಿ. ಈ ವಿಧಾನವು ಒಡೆದ ಮೊಡವೆಗಳು, ಇನ್ನೇನು ಒಡೆಯಲಿರುವ ಅಥವಾ ಕೀವು ತುಂಬಿ ನೋವು ಇರುವ ಮೊಡವೆಗಳಿಗೆ ಸೂಕ್ತವಾಗಿದೆ. ಬರೆಯ ಮೊಡವೆ ಮಾತ್ರವಲ್ಲ, ಬಿಸಿಲಿಗೆ ಬಾಡಿದ ಮತ್ತು ಬಣ್ಣಗೆಟ್ಟಿದ್ದ ಚರ್ಮಕ್ಕೂ ಸೂಕ್ತ ಆರೈಕೆ ದೊರಕುತ್ತದೆ.

ಲಿಂಬೆ ಮತ್ತು ಜೇನುತುಪ್ಪದ ಮಾಸ್ಕ್

ಲಿಂಬೆ ಮತ್ತು ಜೇನುತುಪ್ಪದ ಮಾಸ್ಕ್

ಬೇಕಾಗುವ ಸಾಮಗ್ರಿಗಳು

2 ಚಮಚ ಲಿಂಬೆರಸ

1 ಚಮಚ ಜೇನುತುಪ್ಪ

ತಯಾರಿಸುವ ವಿಧಾನ

ಲಿಂಬೆರಸ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು, ರಾತ್ರಿಯಿಡಿ ಹಾಗೆ ಬಿಡಿ. ಹತ್ತಿ ಉಂಡೆ ಬಳಸಿಕೊಂಡು ಈ ಮಿಶ್ರಣ ಹಚ್ಚಿಕೊಳ್ಳಿ. ಮರುದಿನ ಬೆಳಗ್ಗೆ ಬಿಸಿ ನೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ 3-4 ಸಲ ಹೀಗೆ ಮಾಡಿದರೆ ಫಲಿತಾಂಶ ಖಚಿತ.


English summary

Homemade Overnight Masks To Rejuvenate The Skin

We would all love to wake up to soft and supple skin that we all dream of, isn't it? But you cannot achieve it just by thinking about it. It's time to give a treat to your skin on a daily basis. And this means it won't take your time from the day. You can make overnight rejuvenating masks with ingredients like lemon juice, honey, etc.
X
Desktop Bottom Promotion