For Quick Alerts
ALLOW NOTIFICATIONS  
For Daily Alerts

ಮುಖದ ಅಂದಕ್ಕೆ ತಯಾರಿಸಿ ಬೀಟ್ ರೂಟ್ - ಮೊಸರಿನ ಫೇಸ್ ಮಾಸ್ಕ್

By Sushma Charhra
|

ಆರೋಗ್ಯಕ್ಕೆ ಬೀಟ್‌ರೂಟ್ ನಿಂದಾಗಿ ಬಹಳ ಪ್ರಯೋಜನಗಳಿವೆ. ಇದನ್ನು ಪ್ರಮುಖ ತರಕಾರಿ ಎಂದು ಪರಿಗಣಿಸಲಾಗಿದ್ದು, ಇದನ್ನು ಬಳಕೆ ಮಾಡುವುದರಿಂದಾಗಿ ನಿಮ್ಮ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳ ಲಾಭ ದೊರೆಯಲಿದೆ. ಕೇವಲ ಇದನ್ನು ಸೇವಿಸುವುದರಿಂದ ಮಾತ್ರವಲ್ಲ, ಇದನ್ನು ಫೇಸ್ ಪ್ಯಾಕ್ ಆಗಿ ಬಳಕೆ ಮಾಡುವುದರಿಂದಲೂ ಕೂಡ ಹಲವಾರು ರೀತಿಯ ಲಾಭಗಳು ದೊರೆಯಲಿದ್ದು, ಚರ್ಮದ ಕಾಂತಿ ಮತ್ತು ಚರ್ಮದಲ್ಲಿನ ಕೆಲವು ಸಮಸ್ಯೆಗಳ ನಿವಾರಣೆಗೆ ಇದು ನೆರವು ನೀಡಲಿದೆ.

ಕೆಲವೊಂದು ವೈಜ್ಞಾನಿಕ ಸಂಶೋಧನೆಗಳ ಅನುಸಾರವಾಗಿ ಹೇಳುವುದಾದರೆ, ಹಸಿಯಾಗಿರುವ ಬೀಟ್ ರೂಟ್ ಗಳನ್ನು ಸೇವಿಸುವುದರಿಂದಾಗಿ ಬುದ್ಧಿಮಾಂಧ್ಯತೆಯನ್ನು ನಿವಾರಿಸುವ ತಾಕತ್ತು ಇದಕ್ಕಿದೆಯಂತೆ. ಹಸಿ ಬೀಟ್ ರೂಟ್ ಸೇವಿಸುವುದರಿಂದಾಗಿ, ಹೈಪರ್ ಟೆಕ್ಷನ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವುದರಲ್ಲಿಯೂ ಕೂಡ ಇದು ಸಹಕಾರಿಯಾಗಿರುವ ತರಕಾರಿಯಾಗಿದೆ.ಅಷ್ಟೇ ಅಲ್ಲ ಇದು ರಕ್ತದ ಸಕ್ಕರೆಯ ಮಟ್ಟವನ್ನು ಸರಿಯಾದ ಪ್ರಮಾಣದಲ್ಲಿ ಇಡಲು ಕೂಡ ನೆರವು ನೀಡುತ್ತದೆ.

beetroot for skin in kannada

ಕಚ್ಚಾ ಬೀಟ್‌ರೂಟ್ ಗಳ ಸೇವನೆಯು ವ್ಯಾಯಾಮ ಪೂರಕದಂತೆ ವರ್ತಿಸುತ್ತದೆ. ಅಂದರೆ, ಮಾಂಸಖಂಡಗಳ ಆಕ್ಸಿಜನೇಷನ್ ಪ್ರಕ್ರಿಯೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.ಕಚ್ಚಾ ಬೀಟ್ರೂಟ್ಗಳು ಹೆಚ್ಚಿನ ತೀವ್ರತೆಯ ವ್ಯಾಯಾಮವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಬೀಟ್ ರೂಟ್ ನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿದೆ ಮತ್ತು ಆಂಟಿ ಇನ್ಫ್ಲಮೇಟರಿ ಗುಣಗಳೂ ಕೂಡ ಇದೆ. ಅಷ್ಟೇ ಅಲ್ಲ, ಶಿಲೀಂಧ್ರನಾಶಕ ಗುಣಗಳನ್ನು ಕೂಡ ಬೀಟ್ ರೂಟ್ ಹೊಂದಿದೆ.

ಬೀಟ್ ರೂಟ್ ನ್ನು ಮೂತ್ರಕೋಶಗಳ ಟ್ರೀಟ್ ಮೆಂಟ್ ಗೆ ಬಳಸಲಾಗುತ್ತೆ.. ಬೀಟ್ ರೂಟ್ ನಲ್ಲಿ ಹೋಮೋಸಿಸ್ಟೈಲ್ ಎಂಬ ಧಾತುವು ಇರುತ್ತದೆ. ಇದು ಹೊಟ್ಟೆಯಲ್ಲಿನ ಆಸಿಡ್ ಗಳ ರೀಜನರೇಷನ್ ಅನ್ನು ವರ್ಧಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ. ಬೀಟ್ ರೂಟ್ ಗಳನ್ನು ಹಲವಾರು ವರ್ಷಗಳಿಂದ ಕೂದಲು ಮತ್ತು ಚರ್ಮದ ಆರೋಗ್ಯಕ್ಕಾಗಿ ಬಳಸಲಾಗುತ್ತಿದೆ. ಬೀಟ್ ರೂಟ್ ಅನ್ನು ಫೇಸ್ ಪ್ಯಾಕ್ ರೂಪದಲ್ಲಿ ಬಳಸುವ ಪದ್ಧತಿಯು ವಿಶ್ವದಾದ್ಯಂತ ಚಾಲ್ತಿಯಲ್ಲಿದೆ. ಮನೆಯಲ್ಲೇ ತಯಾರಿಸುವ ಫೇಸ್ ಪ್ಯಾಕ್ ಗಳಲ್ಲಿ ಬೀಟ್ ರೂಟ್ ಪ್ರಮುಖ ಪದಾರ್ಥವಾಗಿದ್ದು, ಎಲ್ಲಾ ಸಂಪ್ರದಾಯ ಪದ್ಧತಿಯಲ್ಲೂ ಕೂಡ ಬೀಟ್ ರೂಟ್ ನ್ನು ಚರ್ಮದ ಅಂದವನ್ನು ಹೆಚ್ಚಿಸುವ ಸಲುವಾಗಿ ಬಳಕೆ ಮಾಡುವ ರೂಢಿ ಇದೆ.

ನಿಜ ಹೇಳಬೇಕು ಎಂದರೆ, ಕಪ್ಪು ತ್ವಚೆ ಇರುವವರಿಗಿಂತ ಹೆಚ್ಚಾಗಿ ಬಿಳಿಯ ತ್ವಚೆಯನ್ನು ಹೊಂದಿರುವವರು ಬೀಟ್ ರೂಟ್ ನ್ನು ತಮ್ಮ ಚರ್ಮದ ಕಾಂತಿ ಹೆಚ್ಚಿಸುವ ಸಲುವಾಗಿ ಬಳಕೆ ಮಾಡುತ್ತಾರೆ. ಆದರೆ ನಿಮ್ಮ ಚರ್ಮದ ಬಣ್ಣವನ್ನು ಪರಿಗಣನೆ ತೆಗೆದುಕೊಳ್ಳದೆ ನೀವು ನಿಮ್ಮ ಚರ್ಮಕ್ಕೆ ಬೀಟ್ ರೂಟ್ ಬಳಕೆ ಮಾಡಿದರೆ, ಖಂಡಿತವಾಗಿಯೂ ಉತ್ತಮ ಫಲಿತಾಂಶವನ್ನು ಪ್ರತಿಯೊಬ್ಬರೂ ಕೂಡ ಪಡೆಯಲು ಸಾಧ್ಯವಿದೆ ಮತ್ತು ನಿಮ್ಮ ಚರ್ಮ ಕಾಂತಿಯುತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಚರ್ಮದಲ್ಲಿರುವ ರಂಧ್ರಗಳನ್ನು ಕಡಿಮೆ ಮಾಡುವುದು ಮತ್ತು ಡಾರ್ಕ್ ಸ್ಪಾಟ್ ಗಳನ್ನು ನಿವಾರಿಸುವ ಕೆಲಸವನ್ನು ಬೀಟ್ ರೂಟ್ ಮಾಡುತ್ತದೆ. ಹಾಗಾದ್ರೆ ಬೀಟ್ ರೂಟ್ ನ ಫೇಸ್ ಮಾಸ್ಕ್ ತಯಾರಿಸುವುದು ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳಲು ಲೇಖನದ ಮುಂದಿನ ಭಾಗವನ್ನು ಓದಿ.

ಬೀಟ್ ರೂಟ್ ನ್ನು ನಿಮ್ಮ ಚರ್ಮದ ಆರೋಗ್ಯ ಹೆಚ್ಚಿಸಲು ಇರುವ ಅದ್ಭುತ ವಸ್ತು ಎಂದು ಯಾಕೆ ಪರಿಗಣಿಸಲಾಗುತ್ತೆ?
*ಬೀಟ್ ರೂಟ್ ಅನ್ನು ಅದೆಷ್ಟೋ ಶತಮಾನಗಳಿಂದ ಚರ್ಮದ ಲಾಭಕ್ಕಾಗಿ ಬಳಕೆ ಮಾಡಲಾಗುತ್ತೆ. ಚರ್ಮಕ್ಕೆ ಕಾಂತಿ ನೀಡಲು, ಚರ್ಮದ ರಂಧ್ರಗಳನ್ನು ಕುಗ್ಗಿಸಲು , ಕಪ್ಪಾಗಿರುವ ಚರ್ಮವನ್ನು ತಿಳಿಗೊಳಿಸಲು ಹೀಗೆ ಇತ್ಯಾದಿ ಕಾರಣಗಳಿಂದಾಗಿ ಬೀಟ್ ರೂಟ್ ಪ್ರಸಿದ್ಧಿ ಪಡೆದಿದೆ.
*ಬೀಟ್ ರೂಟ್ ನಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು, ಚರ್ಮದ ಕೋಲಾಜಿನ್ ಮಟ್ಟವನ್ನು ಅಧಿಕಗೊಳಿಸುತ್ತದೆ. ಇದರ ಫಲಿತಾಂಶವಾಗಿ ಚರ್ಮದ ಸ್ಥಿತಿಸ್ಥಾಪಕತ್ವ ಗುಣವು ಹೆಚ್ಚಾಗುತ್ತದೆ ಮತ್ತು ಚರ್ಮವು ಮೃದುಗೊಂಡು ಅಂದವಾಗುತ್ತದೆ.
*ಬೀಟ್ ರೂಟ್ ನಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಚರ್ಮದ ಉರಿಯೂತದಂತ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಇದು ಬ್ಯಾಕ್ಟೀರಿಯಾವನ್ನು ಸಾಯಿಸುತ್ತದೆ ಮತ್ತು ಚರ್ಮದ ಸೋಂಕನ್ನು ತಡೆಯಲು ನೆರವಾಗುತ್ತದೆ. ಬೀಟ್ ರೂಟ್ ನ ಈ ಗುಣದಿಂದಾಗಿ ಕಳೆಗುಂದಿದ ಚರ್ಮವು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತದೆ.

*ಬೀಟ್ ರೂಟ್ ನಲ್ಲಿ ಹೇರಳವಾಗಿ ವಿಟಮಿನ್ ಸಿ ಅಂಶವಿದೆ. ಇದು ಸ್ವತಂತ್ರ್ಯ ರ್ಯಾಡಿಕಲ್ಸ್ ಗಳನ್ನು ತಟಸ್ಥಗೊಳಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಯಿಂದಾಗಿ ಚರ್ಮದಲ್ಲಿರುವ ಪಿಗ್ಮೆಂಟೇಷನ್ ತಿಳಿಗೊಳ್ಳುತ್ತದೆ. ಚರ್ಮದ ಸತ್ತ ಜೀವಕೋಶಗಳು ಹೊರ ತೆಗೆಯಲ್ಪಟ್ಟು ಚರ್ಮವು ಸ್ವಚ್ಛವಾಗುತ್ತದೆ ಮತ್ತು ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

ಬೀಟ್ ರೂಟ್ ನಿಂದಾಗಿ ಕಣ್ಣಿನ ಕಪ್ಪು ವರ್ತುಲ ಸಮಸ್ಯೆಗೆ ಪರಿಹಾರ ನೀಡುತ್ತೆ

ಈಗಿನ ಜಂಜಾಟದ ಜೀವನದಲ್ಲಿ, ಕಣ್ಣಿನ ಸುತ್ತ ಕಪ್ಪು ವರ್ತುಲವಾಗುವುದು ಸರ್ವೇಸಾಮಾನ್ಯ.ಆದರೆ ಬೀಟ್ ರೂಟ್ ಫೇಸ್ ಪ್ಯಾಕ್ ಬಳಕೆ ಮಾಡುವುದರಿಂದಾಗಿ ಕಣ್ಣಿನ ಸುತ್ತ ಇದು ಹಿತವನ್ನು ನೀಡುತ್ತೆ ಮತ್ತು ಬೀಟ್ ರೂಟ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳಿಂದಾಗಿ ಚರ್ಮವನ್ನು ಪುನರುಜ್ಜೀವಗೊಳಿಸುವ ಕೆಲಸವನ್ನು ಇದು ಮಾಡುತ್ತದೆ. ಒತ್ತಡವನ್ನು ನಿವಾರಿಸುವ ವಸ್ತುವಾಗಿರುವ ಬೀಟ್ ರೂಟ್ ನ್ನು ಕಣ್ಣಿನ ಸುತ್ತ ಕಪ್ಪುವರ್ತುಲಕ್ಕೆ ಹಚ್ಚಿಕೊಳ್ಳುವುದರಿಂದಾಗಿ, ಕಣ್ಣಿನ ಸುತ್ತ ಇಟ್ಟುಕೊಳ್ಳಬೇಕಾದ ಯಾವ್ಯಾವುದೋ ಕೆಮಿಕಲ್ ಬ್ಯಾಗ್ ಗಳಿಂದ ಇದು ಮುಕ್ತಿ ನೀಡುತ್ತದೆ.
ಬೀಟ್ ರೂಟ್ ಫೇಸ್ ಪ್ಯಾಕ್ ಜೊತೆ ನಿಂಬೆ ರಸ ಮತ್ತು ಮೊಸರು:
ಬೇಕಾಗುವ ವಸ್ತುಗಳು
• ಎರಡು ಟೀ ಸ್ಪೂನ್ ಬೀಟ್ ರೂಟ್ ರಸ
• ಒಂದು ಟೀ ಸ್ಪೂನ್ ಮೊಸರು
• ಒಂದು ಟೀ ಸ್ಪೂನ್ ನಿಂಬೆ ರಸ
• ಕಡಲೆ ಹಿಟ್ಟು
ಮಾಡುವ ವಿಧಾನ:
• ಮೊದಲು ಬೀಟ್ ರೂಟ್ ನ್ನು ಅರೆಯಿರಿ , ಅದನ್ನು ಹಿಂಡಿ ಬೀಟ್ ರೂಟ್ ಜ್ಯೂಸ್ ನ್ನು ತೆಗೆದುಕೊಳ್ಳಿ. ಒಂದು ಬೌಲ್ ನಲ್ಲಿ ಅದನ್ನು ಸಂಗ್ರಹಿಸಿ.
• ಈ ಬೀಟ್ ರೂಟ್ ಜ್ಯೂಸ್ ಗೆ ಎರಡು ಟೇಬಲ್ ಸ್ಪೂನ್ ಕಡಲೆ ಹಿಟ್ಟನ್ನು ಸೇರಿಸಿ ಮತ್ತು ಅದಕ್ಕೆ ಮೊಸರು ಮತ್ತು ನಿಂಬೆ ರಸವನ್ನು ಸೇರಿಸಿ.
• ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೌಲ್ ನಲ್ಲಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ
• ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 15 ನಿಮಿಷ ಹಾಗೆಯೇ ಬಿಡಿ. ನೀವು ನಿಮ್ಮ ಬೆರಳುಗಳಿಂದಲೇ ಇದನ್ನು ಹಚ್ಚಿಕೊಳ್ಳಬಹುದು ಅಥವಾ ಬ್ರಷ್ ಬಳಸಿ ಕೂಡ ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಬಹುದು.
• ಒಮ್ಮೆ ನಿಮ್ಮ ಫೇಸ್ ಪ್ಯಾಕ್ ಒಣಗಿದ ನಂತರ, ಅದನ್ನು ತೊಳೆಯಿರಿ. ಫೇಸ್ ಮಾಸ್ಕ್ ನ್ನು ತೊಳೆಯಲು ಸ್ವಲ್ಪ ಹದವಾಗಿ ಬೆಚ್ಚಗಿರುವ ನೀರನ್ನು ಬಳಕೆ ಮಾಡಿ.
• ನಂತರ ನಿಮ್ಮ ಮುಖ ಒಣಗಲು ಬಿಡಿ

ನಿಮ್ಮ ಫಲಿತಾಂಶವು ಈ ಫೇಸ್ ಪ್ಯಾಕ್ ನ್ನು ತೆಗೆದ ಕೂಡಲೇ ತಿಳಿಯುತ್ತದೆ. ತೆಗೆದ ಕೂಡಲೇ ಗುಲಾಬಿ ಬಣ್ಣದ ಹೊಳಪನ್ನು ನೀವು ನಿಮ್ಮ ತ್ವಚೆಯಲ್ಲಿ ಗಮನಿಸಬಹುದಾಗಿದೆ. ಅಷ್ಟೇ ಅಲ್ಲ ನಿಮ್ಮ ಚರ್ಮವನ್ನು ಸಾಕಷ್ಟು ರೇಡಿಯಂಟ್ ಆಗಿರುತ್ತದೆ. ಬೀಟ್ ರೂಟೇ ಇದರಲ್ಲಿ ಇಷ್ಟೆಲ್ಲ ಕಾರ್ಯ ನಿರ್ವಹಿಸುವ ಪ್ರಮುಖ ಪದಾರ್ಥವಾಗಿದ್ದು, ಯಾವುದೇ ರೀತಿಯ ಗ್ರೀಸಿ ಫೀಲ್ ಬರಲು ಇದು ಕಾರಣವಾಗಿದೆ. ಬೀಟ್ ರೂಟ್ ಕಬ್ಬಿಣ ಮತ್ತು ಕಾರಟನಾಯ್ಡ್ಸ್ ನಿಂದ ಶ್ರೀಮಂತವಾಗಿದೆ.

ಈ ನ್ಯೂಟ್ರಿಯಂಟ್ ಗಳು ಮಾಯಿಶ್ಚರೈಸ್ ಅನ್ನು ನಿಮ್ಮ ತ್ವಚೆಯಲ್ಲಿ ಕಾಪಾಡಲು ನೆರವಾಗುತ್ತದೆ ಮತ್ತು ರಂಧ್ರಗಳ ಮೂಲಕ ಚರ್ಮದ ಒಳಗಿನ ಪದರವನ್ನು ತಲುಪಲು ನೆರವು ನೀಡುತ್ತದೆ. ಈ ಚರ್ಮದಲ್ಲಿ ಮ್ಯಾಜಿಕ್ ಮಾಡುವಂತ ತಾಕತ್ತಿರುವ ತರಕಾರಿಯು ಉತ್ತಮ ಫೇಸ್ ಪ್ಯಾಕನ್ನು ನೀಡುತ್ತದೆ ಮತ್ತು ಅದರಿಂದ ಚರ್ಮದ ಶುಷ್ಕತೆ ಮತ್ತು ಪ್ಯಾಚ್ ಗಳೂ ಕೂಡ ನಿವಾರಣೆಯಾಗುತ್ತದೆ.

ಅಕಾಲಿಕವಾಗಿ ಚರ್ಮದಲ್ಲಿ ಮುಪ್ಪು ಕಾಣಿಸಿಕೊಳ್ಳುವುದನ್ನು ತಡೆಯಲೂ ಕೂಡ ಬೀಟ್ ರೂಟ್ ನೆರವಾಗುತ್ತದೆ. ಅಂದರೆ ನೆರಿಗೆಗಳು ಕಾಣಿಸಿಕೊಂಡಲ್ಲಿ ಅದನ್ನು ತೆಗೆಯುವ ಸಾಮರ್ಥ್ಯವೂ ಕೂಡ ಬೀಟ್ ರೂಟ್ ಗಿದೆ. ಹಾಗಾಗಿ ನೀವು ಈ ಫೇಸ್ ಪ್ಯಾಕನ್ನು ಆಗಾಗ ಬಳಸುತ್ತಲೇ ಇರುವುದು ನಿಮ್ಮ ಚರ್ಮದ ಹಿತದೃಷ್ಟಿಯಿಂದ ಬಹಳ ಒಳ್ಳೆಯದು. ಪ್ರತಿ ದಿನ ಬಳಕೆ ಮಾಡುವುದೂ ಕೂಡ ಹಿತವೆಂದೇ ಹೇಳಲಾಗುತ್ತೆ. ನೀವು ಯಾವಾಗಲೂ ಬಯಸುವ ಕಾಂತಿಯುತ ತ್ವಚೆ ನೀಡಲು ಇದು ನಿಮ್ಮ ನೆರವಿಗೆ ಬರುತ್ತದೆ. ಇಷ್ಟೆಲ್ಲ ಲಾಭಗಳನ್ನು ನೀಡುವ ಬೀಟ್ ರೂಟ್ ನ್ನು ಖಂಡಿತವಾಗಿಯೂ ಕೂಡ ನೀವೂ ನಿಮ್ಮ ದಿನನಿತ್ಯದ ಪರಿಕ್ರಮದಲ್ಲಿ ಬಳಕೆ ಮಾಡುತ್ತೀರಿ ಎಂಬ ವಿಶ್ವಾಸ ನಮ್ಮದು. ಉತ್ತಮ ಆರೋಗ್ಯ ಮತ್ತು ಚರ್ಮ ನಿಮ್ಮದಾಗಲಿ ಎಂದು ನಾವೂ ಕೂಡ ಆಶಿಸುತ್ತೇವೆ.

English summary

Homemade Beetroot & Yogurt Face Mask For Glowing Skin

Beetroots are a storehouse of powerful antioxidants and also show anti-inflammatory and fungicidal qualities. Being one of the popular ingredients for a homemade face mask, beetroots have been widely used across all cultures to achieve a beautiful skin. Beetroots when applied to the face have the capability of reducing pores and dark spots.
X
Desktop Bottom Promotion